ಗಂಡ ಕಪ್ಪು ಎಂದು ಹಸಮಣೆಯಲ್ಲಿ ಮದ್ವೆ ಬೇಡ ಎಂದ ವಧು

Published : Jul 10, 2022, 04:19 PM IST
ಗಂಡ ಕಪ್ಪು ಎಂದು ಹಸಮಣೆಯಲ್ಲಿ ಮದ್ವೆ ಬೇಡ ಎಂದ ವಧು

ಸಾರಾಂಶ

ಭಾರತದಲ್ಲಿ ಪ್ರಸ್ತುತ ನಡೆಯುವ ಮದುವೆಗಳು ಯಾವ ಕಾರಣಕ್ಕೆ ಕೊನೆ ಕ್ಷಣದಲ್ಲಿ ನಿಲ್ಲುತ್ತವೆ ಎಂದು ಹೇಳಲಾಗದು. ಇತ್ತೀಚೆಗೆ ಬಹುತೇಕ ವಧುಗಳು ಮದುವೆಗೆ ಎಲ್ಲ ಸಿದ್ಧತೆಗಳು ನಡೆದು ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಬೇಡ ಎಂದು ಹೇಳಲು ಶುರು ಮಾಡಿದ್ದಾರೆ.

ಇಟಾವಾ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ. ಭೂಮಿ ಮೇಲೆ ನಡೆಯುತ್ತದೆ ಎಂಬ ಮಾತಿದೆ. ಕೆಲವೊಂದು ಮದುವೆ ಕತೆಗಳನ್ನು ಕೇಳಿದರೆ ಅದು ನಿಜ ಎನಿಸುತ್ತಿದೆ. ಭಾರತದಲ್ಲಿ  ಪ್ರಸ್ತುತ ನಡೆಯುವ ಮದುವೆಗಳು ಯಾವ ಕಾರಣಕ್ಕೆ ಕೊನೆ ಕ್ಷಣದಲ್ಲಿ ನಿಲ್ಲುತ್ತವೆ ಎಂದು ಹೇಳಲಾಗುತ್ತಿಲ್ಲ. ಇತ್ತೀಚೆಗೆ ಬಹುತೇಕ ವಧುಗಳು ಮದುವೆಗೆ ಎಲ್ಲ ಸಿದ್ಧತೆಗಳು ನಡೆದು ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಬೇಡ ಎಂದು ಹೇಳಲು ಶುರು ಮಾಡಿದ್ದಾರೆ. ಇತ್ತೀಚೆಗೆ ಇಂತಹ ಹತ್ತಾರು ಪ್ರಕರಣಗಳು ನಮ್ಮ ದೇಶದಲ್ಲಿ ನಡೆದಿವೆ. ಸಣ್ಣಪುಟ್ಟ ಕಾರಣಗಳಿಗೆ ಕೊನೆ ಕ್ಷಣದಲ್ಲಿ ಮದುವೆಗಳು ನಿಲ್ಲುತ್ತವೆ. 

ಈಗ ಅಂತಹದ್ದೇ ಘಟನೆಯೊಂದು ಉತ್ತರಪ್ರದೇಶದ (Uttar Pradesh) ಇಟಾವಾದಲ್ಲಿ (Etawah) ನಡೆದಿದೆ. ಸಪ್ತಪದಿ ತುಳಿಯುತ್ತಿರುವ ವೇಳೆ ವಧು ವರನಿಗೆ ಶಾಕ್‌ ನೀಡಿದ್ದಾರೆ. ಏಳು ಹೆಜ್ಜೆಯಲ್ಲಿ ಎರಡು ಹೆಜ್ಜೆ ಇಡುವ ವೇಳೆ ವಧು ತನಗೆ ಈ ಗಂಡ (Husband) ಬೇಡ ಆತ ಕಪ್ಪು ಎಂದು ಹೇಳಿದ್ದಾಳೆ. ವಧು ನೀತಾ ಯಾದವ್ ಎಂಬಾಕೆಯೇ ಹೀಗೆ ಕೊನೆ ಕ್ಷಣದಲ್ಲಿ ಮದುವೆ ಬೇಡ ಎಂದ ವಧು, ನೀತಾ ಯಾದವ್‌ (Neeta Yadav) ಮದುವೆ ವರ ರವಿ ಯಾದವ್‌ ಜೊತೆ ನಿಶ್ಚಯವಾಗಿತ್ತು. ವರನ ಕಡೆಯವರು ದಿಬ್ಬಣ ಮೂಲಕ ವಧುವಿನ ನಿವಾಸಕ್ಕೆ ಬಂದ ನಂತರ ಪರಿಸ್ಥಿತಿ ಎಲ್ಲವೂ ಬದಲಾಗಿದೆ. 

ಫೋನ್‌ ಮಾಡಿ ಪ್ರೇಮಿಯ ಕರೆದಿದ್ದ ಹುಡುಗಿ : ವಧುವಿಗೆ ಸಿಂಧೂರವಿಟ್ಟವ ಆಸ್ಪತ್ರೆ ಸೇರಿದ

ಮದುವೆ (wedding) ಆರಂಭವಾಗುತ್ತಿದ್ದಂತೆ ವಧು ವರರು ಹೂ ಹಾರವನ್ನು (garlands) ಬದಲಾಯಿಸಿಕೊಂಡಿದ್ದಾರೆ. ಇದಾದ ನಂತರ ಸಪ್ತಪದಿ ತುಳಿಯುವ ವೇಳೆ ವರಸೆ ಬದಲಿಸಿದ ನೀತಾ ತನಗೆ ಮದುವೆ ಬೇಡ ಎಂದು ಹೇಳಿದ್ದಾಳೆ. ಆಕೆಯ ಪ್ರಕಾರ ಆಕೆಗೆ ತೋರಿಸಿದ ಹುಡುಗನೇ ಬೇರೆ ಈಗ ಮದುವೆಗೆ ವರನಾಗಿ ಬಂದಿರುವ ಹುಡುಗನೇ ಬೇರೆ ಎಂದು ವಧು ಆರೋಪಿಸಿದ್ದಾಳೆ. ಅಲ್ಲದೇ ಆತನ ಬಣ್ಣ ನನಗೆ ಇಷ್ಟವಾಗಲಿಲ್ಲ ಎಂದು ಆಕೆ ಹೇಳಿದ್ದಾಳೆ.

ಅಷ್ಟಕ್ಕೂ ಹೆಣ್ಣಿಗೇಕೆ ಮದುವೆಯಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತೆ!?

ಈ ವೇಳೆ ಆಕೆಯ ಪೋಷಕರು ಆಕೆಗೆ ವಾಪಸ್‌ ಮಂಟಪಕ್ಕೆ ಮರಳುವಂತೆ ಕರೆದರು ಆಕೆ ಮದುವೆಯಿಂದ ಹೊರನಡೆದಿದ್ದಾಳೆ. ಆದಾಗ್ಯೂ ಸುಮಾರು ಆರು ಗಂಟೆಗಳವರೆಗೆ ಆಕೆಯ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾದ ಹಿನ್ನೆಲೆ ಕೊನೆಗೆ ವರನ ಕಡೆಯವರು ಬಂದ ದಾರಿ ಸುಂಕ ಇಲ್ಲವೆಂದು ಬರಿಗೈಯಲ್ಲಿ ವಾಪಸ್‌ ಹೊರಟಿದ್ದಾರೆ. ಇದಾದ ಬಳಿ ವರನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಾವು ವಧುವಿಗೆ ಉಡುಗೊರೆಯಾಗಿ ನೀಡಿದ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು (Gold) ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.  

ಕೆಲ ದಿನಗಳ ಹಿಂದೆ ಮಹಾರಾಷ್ಟ್ರವೊಂದರಲ್ಲಿ ನಡೆದ ಘಟನೆಯಲ್ಲಿ ವರ ಮದುವೆ ಮೂಹೂರ್ತಕ್ಕೆ ವಿಳಂಬವಾಗಿ ಬಂದ ಎಂದು ವಧುವಿನ ಕಡೆಯವರು ವಧುವಿಗೆ ಬೇರೆಯವರೊಂದಿಗೆ ವಿವಾಹ ಮಾಡಿದ್ದರು. ಮದುವೆಯ ಖುಷಿಯಲ್ಲಿ ತನ್ನ ಗೆಳೆಯರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ ಯುವಕ ಮೂಹೂರ್ತ ದಾಟಿ ಎಷ್ಟೋ ಸಮಯ ಕಳೆದರು ಮದುವೆ ಮಂಟಪಕ್ಕ ಬಂದಿರಲಿಲ್ಲ. ಈತನ ಬೇಜವಾಬ್ದಾರಿ ನೋಡಿದ ವಧು. ಈತ ಈಗಲೇ ಹೀಗೆ ಇನ್ನು ಈತನನ್ನು ಮದುವೆಯಾದರೆ ಹೇಗೋ ಎಂದು ಭಾವಿಸಿದ್ದಾಳೆ. ಅದಕ್ಕೆ ತಕ್ಕಂತೆ ಆಕೆಯ ಪೋಷಕರು ಕೂಡ ಈ ರೀತಿ ಜವಾಬ್ದಾರಿ ಇಲ್ಲದ ಯುವಕ ನಮ್ಮ ಮಗಳನ್ನು ಜೀವನ ಪೂರ್ತಿ ಹೇಗೆ ಸಲಹುತ್ತಾನೆ ಎಂದು ಯೋಚಿಸಿದ್ದು ಮಗಳನ್ನು ಅದೇ ಮಂಟಪದಲ್ಲಿ ಸಂಬಂಧಿ ಯುವಕನೋರ್ವನಿಗೆ ಕೊಟ್ಟು ಮದುವೆ ಮಾಡಿದ್ದಾರೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌