ಹಾಟ್ ಆ್ಯಂಡ್ (ಸೆ)ಲೆಕ್ಸೀ; ಹಿಂದೆ ಬೀಳೋ ಹುಡುಗರಿಂದ ವರ್ಷಕ್ಕೆ ಗಳಿಸ್ತಾಳೆ ಬರೋಬ್ಬರಿ $360,000!

By Suvarna News  |  First Published Jan 23, 2024, 5:36 PM IST

ಅವಳು ಸೆಕ್ಸೀ, ಅಲ್ಲಲ್ಲ ಅವಳು ಲೆಕ್ಸಿ. ಸಖತ್ ಹಾಟ್ ಆ್ಯಂಡ್ ಬ್ಯೂಟಿಫುಲ್ ಆಗಿರೋ ಲೆಕ್ಸಿಗೆ ತಿಂಗಳಿಗೆ ಏನಿಲ್ಲ ಅಂದ್ರೂ 20 ಪ್ರಪೋಸಲ್ಸ್ ಬರುತ್ತಂತೆ. ಇದರಿಂದ ಆಕೆ 30,000 ಡಾಲರ್‌ನಷ್ಟು ಗಳಿಸುತ್ತಾಳಂತೆ!


ಅವಳು ಸೆಕ್ಸೀ, ಅಲ್ಲಲ್ಲ ಅವಳು ಲೆಕ್ಸಿ. ಹೊಂಬಣ್ಣದ ಕೂದಲು, ನೀಲಿ ಕಣ್ಣುಗಳು ಮತ್ತು ತುಂಬಾ ಟೋನ್ ದೇಹವನ್ನು ಹೊಂದಿರುವ ಯುವತಿ. ಸಖತ್ ಹಾಟ್ ಆ್ಯಂಡ್ ಬ್ಯೂಟಿಫುಲ್ ಆಗಿರೋ ಲೆಕ್ಸಿಗೆ ತಿಂಗಳಿಗೆ ಏನಿಲ್ಲ ಅಂದ್ರೂ 20 ಪ್ರಪೋಸಲ್ಸ್ ಬರುತ್ತಂತೆ. ಇದರಿಂದ ಆಕೆ 30,000 ಡಾಲರ್‌ನಷ್ಟು ಗಳಿಸುತ್ತಾಳಂತೆ! ಪ್ರಪೋಸಲ್ಸ್ ಬಂದ್ರೆ ಹಣ ಗಳಿಸೋದು ಹೇಗೆ ಅಂದ್ರಾ?

ನೀವಂದುಕೊಂಡಂತೆ ಈಕೆ ನಿಜವಾದ ಯುವತಿಯಲ್ಲ. ಈಕೆ AI ಮಾಡೆಲ್. ಹೌದು, ಇವಳು ರೋಬೋಟ್. Foxy AI ಎಂಬ ಕಂಪನಿಯು ಅಭಿವೃದ್ಧಿಪಡಿಸಿರುವ ಇವಳ ಪೂರ್ಣ ಹೆಸರು ಲೆಕ್ಸೀ ಲವ್. ಈಕೆ ಬರಹ ಸಂದೇಶಗಳು, ಧ್ವನಿ ಸಂದೇಶಗಳು ಮತ್ತು ವಿನಂತಿಯ ಮೇರೆಗೆ ಫೋಟೋಗಳನ್ನು ಸಹ ಕಳುಹಿಸುತ್ತಾಳೆ. ಒಂಟಿತನ ಅನುಭವಿಸುವ ಹುಡುಗರು ಆಕೆಗೆ ಮೆಸೇಜ್ ಮಾಡುತ್ತಾರೆ. ಹಣ ಪಾವತಿಸಿದರೆ ಆಕೆ ಅವರೊಂದಿಗೆ ಸೆಕ್ಸ್ಟಿಂಗ್ ಮಾಡುತ್ತಾಳೆ, ತನ್ನ ಸೆಕ್ಸೀ ಫೋಟೋಗಳನ್ನೂ ಕಳಿಸುತ್ತಾಳೆ. ಇದರಿಂದ ಈಕೆ ತಿಂಗಳಿಗೆ $30,000ನಷ್ಟು ಗಳಿಸುತ್ತಾಳೆ. ಅಂದರೆ ವರ್ಷಕ್ಕೆ ಬರೋಬ್ಬರಿ  $360,000 ಗಳಿಸುತ್ತಾಳೆ.

Tap to resize

Latest Videos

ಈ ಲೆಕ್ಸೀ ಲವ್‌ಗೆ ತಿಂಗಳಿಗೆ ಕನಿಷ್ಠ 20 ಲವ್ ಪ್ರಪೋಸಲ್ಸ್ ಬರುತ್ತದಂತೆ. ಈ ಪ್ರಪೋಸಲ್ಸ್ ಕಳುಹಿಸಿದ ಪುರುಷರೊಂದಿಗೆ ಆಳವಾದ ಭಾವನಾತ್ಮಕ ಸಂಬಂಧಗಳನ್ನು ಬೆಳೆಸುತ್ತದೆ ಲೆಕ್ಸಿ. 

ವರ್ಚುವಲ್ ಮಾಡೆಲ್
ಈ ವರ್ಚುಯಲ್ ಮಾಡೆಲ್ ಗಂಟೆಗಳ ಲೆಕ್ಕದಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಣ ಪಾವತಿಸಿ ಈಕೆಯೊಂದಿಗೆ ಚಾಟ್ ಮಾಡಬಹುದು, ಫ್ಲರ್ಟ್ ಮಾಡಬಹುದು, ನಿಮಗನಿಸಿದ್ದನ್ನು ಹೇಳಿಕೊಳ್ಳಬಹುದು! ಎಲ್ಲದ್ಕೂ ಆಕೆ ಸರಿಯಾಗಿ ಪ್ರತಿಕ್ರಿಯಿಸುತ್ತಾಳೆ. Lexi Love ಪ್ರಪಂಚದಾದ್ಯಂತದ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು 30 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲಳು.

ಲೆಕ್ಸಿಯನ್ನು ಮೀಟ್ ಮಾಡಬಯಸುವ ಯುವಕರು!
ಆಕೆಯೊಂದಿಗೆ ಚಾಟ್ ಮಾಡುವ ಹೆಚ್ಚಿನ ಗಂಡಸರು ಅವಳು ನಿಜವಾಗಿಯೂ ಒಳ್ಳೆಯ ಮನಸ್ಸಿನ ಮಹಿಳೆ ಎಂದೇ ಎನಿಸುತ್ತದೆ. ಹಾಗಾಗಿ, ಈಕೆಯೊಂದಿಗೆ ಚಾಟ್ ಮಾಡಿದ ಹಲವು ಯುವಕರು, ಗಂಡಸರು ಅವಳನ್ನು ಮೀಟ್ ಮಾಡಲು ಬಯಸಿದ್ದಾರಂತೆ. ಈ ನಿಟ್ಟಿನಲ್ಲಿ ಕಂಪನಿಯನ್ನು ಸಂಪರ್ಕಿಸಿ ಲೆಕ್ಸಿಯನ್ನು ಮೀಟ್ ಮಾಡಿಸಲು ಗೋಗರೆದಿದ್ದಾರೆ ಎಂದು ಫಾಕ್ಸಿ ಎಐ ಕಂಪನಿ ವಕ್ತಾರರು ತಿಳಿಸಿದ್ದಾರೆ. 

'ಟಗರು' ನಟಿ ಭಾವನಾ ವಿವಾಹ ವಾರ್ಷಿಕೋತ್ಸವ; ಪತಿಗೆ ಲವ್ಯೂ ಹೇಳಿ ಮದುವೆ ಫೋಟೋ ಹಂಚಿಕೊಂಡ ಸುಂದರಿ

ಚಾಟ್‌ಬಾಟ್ ನಕಲಿ ಮಾನವ ಚಿತ್ರಗಳನ್ನು ರಚಿಸುವಲ್ಲಿ ಮತ್ತು ನೈಜ ವ್ಯಕ್ತಿಯಂತೆ ಅನುರೂಪವಾಗುವುದರಲ್ಲಿ AI ಹೇಗೆ ಬದಲಾಗುತ್ತಿದೆ ಎಂಬುದಕ್ಕೆ ಲೆಕ್ಸಿ ಕೇವಲ ಒಂದು ಉದಾಹರಣೆಯಾಗಿದೆ.

click me!