Bigg Boss ಇತಿಹಾಸದಲ್ಲೇ ಮೊದಲು! ದೊಡ್ಮನೆಯಲ್ಲಿಯೇ ಸ್ಪರ್ಧಿಗಳ ಎಂಗೇಜ್​ಮೆಂಟ್​ - ಜೋಡಿಗಳ ಮಿಲನ

Published : Nov 14, 2026, 12:09 PM IST
Bigg BossTelugu

ಸಾರಾಂಶ

ತೆಲುಗು ಬಿಗ್​ಬಾಸ್​ನಲ್ಲಿ ಫ್ಯಾಮಿಲಿ ವೀಕ್ ಸಂದರ್ಭದಲ್ಲಿ ಸ್ಪರ್ಧಿ ಶಿವಕುಮಾರ್​ ಮತ್ತು ಮಾಜಿ ಸ್ಪರ್ಧಿ ಪ್ರಿಯಾಂಕಾ ಜೈಸ್ವಾಲ್ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಇದು ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲ ಬಾರಿಗೆ ಮನೆಯೊಳಗೆ ನಡೆದ ನಿಶ್ಚಿತಾರ್ಥವಾಗಿದ್ದು, ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಬಿಗ್​ಬಾಸ್​ ಎಂದರೆ ಅಲ್ಲಿ ಕಿತ್ತಾಟ, ಜಗಳದ ಜೊತೆಗೆ ಲವ್​ ಮಾಡುವುದು ಕೂಡ ಮಾಮೂಲು. ಕೆಲವೊಮ್ಮೆ ಇದನ್ನು ಸ್ಕ್ರಿಪ್ಟೆಡ್​ ಎನ್ನುವುದು ಉಂಟು. ಕೆಲವು ಭಾಷೆಗಳಲ್ಲಿ ಎಲ್ಲೆಯನ್ನು ಮೀರಿ ಈ ಲವ್​ ಅಫೇರ್​ ಪ್ರಸಾರ ಮಾಡುವುದೂ ಉಂಟು. ಅದೇ ರೀತಿ ಕೆಲವೊಮ್ಮೆ ನಿಜವಾದ ಪ್ರೀತಿಯೂ ಮನೆಯೊಳಗೆ ಹುಟ್ಟುವುದು ಇದೆ. ಈ ಹಿಂದೆ ಬಿಗ್​ಬಾಸ್​ ಮನೆಯಲ್ಲಿ ಅರಳಿದ ಪ್ರೀತಿ, ಹೊರಗಡೆ ಬಂದು ಮದುವೆಯಾಗಿ ಕೊನೆಗೆ ಡಿವೋರ್ಸ್ ಆಗಿರುವುದೂ ಇದೆ. ಅದೇನೇ ಇದ್ದರೂ, ಈಗ ಮತ್ತೊಮ್ಮೆ ಬಿಗ್​ಬಾಸ್​ ಮನೆಯಲ್ಲಿ ಲವ್​ ವಿಷ್ಯ ಸಕತ್​ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ಬಿಗ್​ಬಾಸ್​ ಸ್ಪರ್ಧಿಗಳಿಬ್ಬರು ಮನೆಯಲ್ಲಿಯೇ ಎಂಗೇಜ್​ಮೆಂಟ್​ ಮಾಡಿಕೊಂಡಿರುವುದು! ಇದು ಬಿಗ್​ಬಾಸ್​ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಅಂದಹಾಗೆ, ಈ ರೀತಿ ಪ್ರೀತಿಯಲ್ಲಿ ಬಿದ್ದು ಎಂಗೇಜ್​ಮೆಂಟ್​ ಆಗಿರುವ ಘಟನೆ ನಡೆದಿರುವುದು ತೆಲುಗು ಬಿಗ್​ಬಾಸ್​​ (Bigg Boss Telugu)ನಲ್ಲಿ. ತೆಲುಗು ಬಿಗ್​ಬಾಸ್​ 10ನೇ ವಾರಕ್ಕೆ ಕಾಲಿಟ್ಟಿದ್ದು, ಫ್ಯಾಮಿಲಿ ವೀಕ್ (Family Week) ಸಂಭ್ರಮ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಎಲ್ಲಾ ಭಾಷೆಗಳ ಬಿಗ್​ಬಾಸ್​​ನಂತೆ ಇಲ್ಲಿಯೂ ಸ್ಪರ್ಧಿಗಳ ಕುಟುಂಬಸ್ಥರು ಮತ್ತು ಆಪ್ತರು ಬಿಗ್​ಬಾಸ್​​ ಮನೆಯೊಳಕ್ಕೆ ಬಂದಿದ್ದು, ಎಲ್ಲರೂ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿಯೇ ಹಾಲಿ ಸ್ಪರ್ಧಿ ಶಿವಕುಮಾರ್​ ಮತ್ತು ಬಿಗ್​ಬಾಸ್​ ಮಾಜಿ ಸ್ಪರ್ಧಿ ನಟಿ ಪ್ರಿಯಾಂಕಾ ಜೈಸ್ವಾಲ್ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ.

ಜೋಡಿಯ ಲವ್​ಸ್ಟೋರಿ

ಈ ಜೋಡಿಯ ವಿಷ್ಯಕ್ಕೆ ಬರುವುದಾದರೆ, ಇವರಿಬ್ಬರೂ ಬಿಗ್​ಬಾಸ್​ನಲ್ಲಿ ಒಟ್ಟಿಗೇ ಬಂದು, ಬಿಗ್​ಬಾಸ್​ ಮನೆಯಲ್ಲಿ ಲವ್​ ಆಗಿದ್ದಲ್ಲ. ಬದಲಿಗೆ, ಶಿವಕುಮಾರ್​ ಮತ್ತು ಪ್ರಿಯಾಂಕಾ ಹಲವಾರು ವರ್ಷಗಳಿಂದ ಒಟ್ಟಿಗೆ ಇದ್ದು, ಪ್ರೇಮಿಗಳಾಗಿದ್ದಾರೆ. ಈ ಹಿಂದೆ ಈ ಜೋಡಿ ಮ್ಯಾಡ್ ಫಾರ್ ಈಚ್ ಅದರ್ (Mad for each other) ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿತ್ತು. ಡೇಟಿಂಗ್ ಹಂತದಲ್ಲಿ ಹೆಚ್ಚಾಗಿ ಉಳಿದಿದ್ದ ಅವರ ಸಂಬಂಧವು ಬಿಗ್ ಬಾಸ್ ಮನೆಯೊಳಗೆ ನಿಶ್ಚಿತಾರ್ಥದ ಆಚರಣೆಯೊಂದಿಗೆ ಹೊಸ ತಿರುವು ಪಡೆದುಕೊಂಡಿತು. ಬಿಗ್ ಬಾಸ್ ಮನೆಯನ್ನು ನಿಶ್ಚಿತಾರ್ಥದ ಸ್ಥಳವನ್ನಾಗಿ ಪರಿವರ್ತಿಸಲಾಯಿತು. ಈ ಸಂದರ್ಭದಲ್ಲಿ ಜೋಡಿ ಸ್ವಲ್ಪ ಸಮಯ ಒಟ್ಟಿಗೆ ಕಳೆದರು ಮತ್ತು ಅವರ ಸಂಬಂಧದ ಬಗ್ಗೆ ಮಾತನಾಡಿದರು. ಪ್ರಿಯಾಂಕಾ ಅನಗತ್ಯ ತ್ಯಾಗಗಳನ್ನು ಮಾಡುವುದನ್ನು ನಿಲ್ಲಿಸಿ ಸ್ವಂತ ಆಟದ ಮೇಲೆ ಹೆಚ್ಚು ಗಮನಹರಿಸುವಂತೆ ಶಿವನಿಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಶಿವ ತನ್ನ ತಾಯಿ ಮತ್ತು ಪ್ರಿಯಾಂಕಾ ತನ್ನ ಜೀವನದಲ್ಲಿ ಇಬ್ಬರು ದೊಡ್ಡ ಆದ್ಯತೆಗಳು ಎಂದು ಹೇಳಿದರು.

ಪ್ರಿಯಾಂಕಾ ಫ್ಯಾಮಿಲಿ ವೀಕ್‌ನ ಭಾಗವಾಗಿ ಶಿವ್‌ಗಾಗಿ ಮನೆಗೆ ಬಂದಿದ್ದರು. ಎಂಗೇಜ್​ಮೆಂಟ್​ ಮಾಡಿಕೊಳ್ಳಲು ಪ್ರಿಯಾಂಕಾ ಹೊಸ ಬಟ್ಟೆಗಳನ್ನು ಸಹ ತಂದಿದ್ದರು. ನಂತರ ಶೋನಲ್ಲಿ ಇಬ್ಬರೂ ಉಂಗುರಗಳನ್ನು ಸಹ ಬದಲಾಯಿಸಿಕೊಂಡು ಎಂಗೇಜ್‌ಮೆಂಟ್ ಮಾಡಿಕೊಂಡರು. ಹೊಸದಾಗಿ ಮದುವೆಯಾದ ಹೆಣ್ಣು ಹಾಗೂ ಗಂಡು ಮನೆಗೆ ಕಾಲಿಡುವ ಸನ್ನಿವೇಶವನ್ನು ಇಲ್ಲಿ ಮರುಸೃಷ್ಟಿಸಲಾಗಿದ್ದು ವಿಶೇಷ. ಶಿವನು ಒಂದು ಮೊಣಕಾಲಿಗೆ ಬಿದ್ದು ಪ್ರಿಯಾಂಕಾಗೆ ಪ್ರಪೋಸ್ ಮಾಡಿದಾಗ ಅದು ಹೈಲೈಟ್ ಆಯಿತು. ಅವರು ಮಂಡಿಯೂರಿ ಶಿವಕುಮಾರ್​ ಅವರ ಪ್ರಪೋಸ್ ಅನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿವಕುಮಾರ್​ ಅವರ ತಾಯಿ ಕೂಡ ವೀಡಿಯೊ ಸಂದೇಶದ ಮೂಲಕ ಈ ಸಂದರ್ಭದಲ್ಲಿ ಸೇರಿಕೊಂಡರು ಮತ್ತು ನಿಶ್ಚಿತಾರ್ಥಕ್ಕೆ ಅಭಿನಂದನೆ ಸಲ್ಲಿಸಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

LOVE-BREAKUP- ಇದು ಏಳೇಳು ಜನುಮದ ಲವ್? ಪಾರ್ಟಿಯಲ್ಲಿ ಪರಿಚಯ, ಬ್ರೇಕಪ್.. ಮತ್ತೆ ಲವ್, ಮದುವೆ ಆಗಿದ್ದು ಹೇಗೆ?
ಬೆಂಗಳೂರಿಗೆ ಬಂದ ಮೋದಿ ತೋರಿಸಲು, ಮಗಳ ಚಪ್ಪಲಿ ಕಾಲನ್ನೇ ತಲೆ ಮೇಲೆ ಹೊತ್ತುಕೊಂಡು ನಿಂತ ಅಪ್ಪ!