ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಸಿಂಪಲ್‌ ಆಗಿ ಮದುವೆಯಾದ ನಟಿ ಅಮೃತಾ ರಾವ್‌ ಸಹೋದರಿ ಪ್ರೀತಿಕಾ ರಾವ್‌, ಪತಿಯ ಮುಖ ಮರೆಮಾಚಿದ್ದೇಕೆ?

Published : Nov 13, 2026, 05:32 PM IST
Preetika Rao wedding

ಸಾರಾಂಶ

ಜನಪ್ರಿಯ ಕಿರುತೆರೆ ನಟಿ ಪ್ರೀತಿಕಾ ರಾವ್ ಅವರು ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್' ಆಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪತಿಯ ಮುಖವನ್ನು ಮರೆಮಾಚಿ ವಿವಾಹದ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ.

ಬೆಂಗಳೂರು (ನ.13): ಬಾಲಿವುಡ್ ಖ್ಯಾತ ನಟಿ ಅಮೃತಾ ರಾವ್ ಅವರ ಸಹೋದರಿ ಹಾಗೂ ಕಿರುತೆರೆಯ ಜನಪ್ರಿಯ ನಟಿ ಪ್ರೀತಿಕಾ ರಾವ್ (Preetika Rao) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ: ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್' (Art of Living) ಆಶ್ರಮದ ಆವರಣದಲ್ಲಿ ನಡೆದ ತಮ್ಮ ವಿವಾಹದ ಆಯ್ದ ಫೋಟೋಗಳನ್ನು ನಟಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಎಲ್ಲಾ ಫೋಟೋಗಳಲ್ಲೂ ತಮ್ಮ ಪತಿಯ ಮುಖವನ್ನು ಮರೆಮಾಚುವ ಮೂಲಕ ಕುತೂಹಲ ಮೂಡಿಸಿದ್ದಾರೆ. ತಮ್ಮ ಮದುವೆ ಯಾವಾಗ ನಡೆಯಿತು ಎಂಬ ನಿಖರ ದಿನಾಂಕವನ್ನು ಬಹಿರಂಗಪಡಿಸದ ಪ್ರೀತಿಕಾ ರಾವ್, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಖುದ್ದಾಗಿ ವಿವಾಹಕ್ಕೆ ಆಗಮಿಸಿ ಆಶೀರ್ವದಿಸಿದ್ದಾರೆ ಎಂದು ತಿಳಿಸಿದ್ದಾರೆ. ಪತಿಯ ಮುಖವನ್ನು ಮರೆಮಾಚಿರುವುದರಿಂದ ಅವರ ವರ ಯಾರು ಎಂಬುದು ಇನ್ನೂ ಸಾರ್ವಜನಿಕವಾಗಿ ತಿಳಿದುಬಂದಿಲ್ಲ.

ನಮ್ಮ ಮಂಗಳೂರು ಮೂಲದ ಸಂಸ್ಕೃತಿಯಂತೆಯೇ ಇದೆ: ನಟಿ ಭಾವುಕ ನುಡಿ

ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ 'ಬೇಇಂತೇಹಾ' (Beintehaa) ಧಾರಾವಾಹಿ ಖ್ಯಾತಿಯ ಪ್ರೀತಿಕಾ, 'ನನ್ನ ಗುರುದೇವ್ ಶ್ರೀ ಶ್ರೀ ರವಿಶಂಕರ್ ಜೀ, ನನ್ನ ಪ್ರೀತಿಯ ಪೋಷಕರು, ಸಹೋದರಿ ಅಮೃತಾ, ಬಂಧು-ಮಿತ್ರರ ಆಶೀರ್ವಾದದೊಂದಿಗೆ ಬೆಂಗಳೂರಿನ ಸುಂದರ ಮತ್ತು ಪ್ರಶಾಂತವಾದ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ನಾನು ವಿವಾಹವಾದೆ... ಗುರುದೇವ್ ಅವರು ಖುದ್ದಾಗಿ ನನ್ನ ಮದುವೆಗೆ ಆಗಮಿಸಿ ಆಶೀರ್ವಾದದ ಮಾಡಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣ. ನಾನೀಗ ಸಾಂಪ್ರದಾಯಿಕ ತಮಿಳು ಬ್ರಾಹ್ಮಣ (Tam-Brahm) ಕುಟುಂಬದ ಸೊಸೆಯಾಗಿದ್ದೇನೆ. ಇಲ್ಲಿನ ಸಂಸ್ಕೃತಿಯು ಕರ್ನಾಟಕದ ನನ್ನ ಮಂಗಳೂರು ಮೂಲದ ಸಂಸ್ಕೃತಿಯಂತೆಯೇ ಅತ್ಯಂತ ಪ್ರಾಚೀನ ಮತ್ತು ಅಮೂಲ್ಯವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಫೋಟೋಗಳಲ್ಲಿ ಪತಿಯ ಮುಖ ಮರೆಮಾಚಿದ್ದೇಕೆ?

ಈ ವಿವಾಹ ಸಮಾರಂಭವು ತಮಗೆ ಅತ್ಯಂತ ವೈಯಕ್ತಿಕ ಹಾಗೂ ಪವಿತ್ರವಾದ ಕ್ಷಣವಾಗಿರುವುದರಿಂದ, ಇಡೀ ಜಗತ್ತಿನೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಲು ಬಯಸದೆ ಕೇವಲ ಆಯ್ದ ಫೋಟೋಗಳನ್ನು ಮಾತ್ರ ಪೋಸ್ಟ್ ಮಾಡಿರುವುದಾಗಿ ಪ್ರೀತಿಕಾ ಸ್ಪಷ್ಟಪಡಿಸಿದ್ದಾರೆ. ಮೂರು ವರ್ಷಗಳ ಹಿಂದೆ ಶ್ರೀ ಶ್ರೀ ರವಿಶಂಕರ್ ಅವರೊಂದಿಗೆ ತಾವು ಆಧ್ಯಾತ್ಮಿಕ ಪಾಡ್‌ಕಾಸ್ಟ್‌ಗಳನ್ನು (Spiritual Podcasts) ಆರಂಭಿಸಿದ್ದಾಗಿ ನೆನಪಿಸಿಕೊಂಡಿರುವ ನಟಿ, ಇತ್ತೀಚೆಗಷ್ಟೇ ಕೇಂದ್ರ ಸಂಸ್ಕೃತಿ ಸಚಿವಾಲಯವು (Ministry of Culture) ತಮ್ಮ ಜನಪ್ರಿಯ 'ಟ್ರೆಂಡಿಂಗ್ ವೇದಿಕ್ ಅಸ್ಟ್ರಾಲಜಿ ಪಾಡ್‌ಕಾಸ್ಟ್‌ಗಳಿಗಾಗಿ' (Trending Vedic Astrology Podcasts) 'ಪ್ರಶಂಸಾ ಪತ್ರ' (Letter of Appreciation) ನೀಡಿ ಗೌರವಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಈ ಗೌರವ ಮತ್ತು ವಿವಾಹವನ್ನು ಈ ವರ್ಷದ ತಮ್ಮ ಜೀವನದ ಎರಡು ಪ್ರಮುಖ ಮೈಲಿಗಲ್ಲುಗಳು ಎಂದು ಕರೆದಿರುವ ಪ್ರೀತಿಕಾ, "ನನ್ನ ಎಲ್ಲಾ ಬೆಂಬಲಿಗರಿಗೆ, ಹಿತೈಷಿಗಳಿಗೆ ಹಾಗೂ ನನ್ನ ಸಂತೋಷದಲ್ಲಿ ನಿಜವಾಗಿಯೂ ಭಾಗಿಯಾಗುವ ಪ್ರತಿಯೊಬ್ಬರಿಗೂ ದೊಡ್ಡ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ಹೀಗೆಯೇ ಇರಲಿ" ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರೀತಿಕಾ ರಾವ್ ಅವರ ವಿವಾಹ ಸುದ್ದಿ ತಿಳಿದ ಅಭಿಮಾನಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಶುಭಾಶಯಗಳ ಮಳೆಗರೆಯುತ್ತಿದ್ದಾರೆ. ನಟ ಹರ್ಷದ್ ಅರೋರಾ ಅವರಿಗೆ ಜೋಡಿಯಾಗಿ ನಟಿಸಿದ ತಮ್ಮ ಮೊದಲ ಹಿಂದಿ ಧಾರಾವಾಹಿ 'ಬೇಇಂತೇಹಾ' ಮೂಲಕ ಪ್ರೀತಿಕಾ ಮನೆಮಾತಾಗಿದ್ದರು. ನಂತರ 'ಲವ್ ಕಾ ಹೈ ಇಂತೇಜಾರ್' (Love Ka Hai Intezaar) ಧಾರಾವಾಹಿಯಲ್ಲೂ ಅವರು ನಟಿಸಿ ಮೆಚ್ಚುಗೆ ಗಳಿಸಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಿಮ್ಮ ಮಗನ ಮದುವೆ ಯಾವಾಗ?' ಕೇಳಿದ ಆಂಟಿಗೆ ತಾಯಿ ಕೊಟ್ಟ ಒಂದೇ ಒಂದು ಉತ್ತರಕ್ಕೆ ಸಂಬಂಧಿಕೆ ಸುಸ್ತು, ಸೈಲೆಂಟ್ ಆಗಿ ಎಸ್ಕೇಪ್
ಪುರೋಹಿತರಿಲ್ಲ, ಸಂಪ್ರದಾಯದ ಆಡಂಬರವಿಲ್ಲ: ಗ್ರೀಸ್‌ನಲ್ಲಿ ಸ್ವಯಂ ಗೌರವ ವಿವಾಹ ಆದ ಅನಿರುದ್ಧ್-ಕಾವ್ಯಾ, ಏನಿದು ವಿಶೇಷ ಮದುವೆ ಪದ್ಧತಿ?