ಮಗಳಿಗೆ ಮೋದಿ ತೋರಿಸಲು, ತಲೆ ಮೇಲೆ ನಿಲ್ಲಿಸಿಕೊಂಡ ಅಪ್ಪ! ಈ ದಿನದ ಬೆಂಗಳೂರಿನ ಬೆಸ್ಟ್ ವಿಡಿಯೋ!

Published : Nov 13, 2026, 10:49 PM IST
bengaluru father carries daughter on head to see pm narendra modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಬೇಕೆಂಬ ಪುಟ್ಟ ಮಗಳ ಆಸೆಯನ್ನು ಈಡೇರಿಸಲು ತಂದೆಯೊಬ್ಬರು ಚಪ್ಪಲಿ ಧರಿಸಿದ್ದ ಮಗಳನ್ನು ತಮ್ಮ ತಲೆಯ ಮೇಲೆ ನಿಲ್ಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ಮನಕಲಕುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

ಬೆಂಗಳೂರು (ನ.13): 'ಅಪ್ಪ ಎಂದರೆ ಆಕಾಶ' ಎಂದು ಕಥೆ, ಕವಿತೆಗಳಲ್ಲಿ ಬಣ್ಣಿಸುವುದನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ತಂದೆ ಆಕಾಶ ಮಾತ್ರವಲ್ಲ, ತನ್ನ ಮಗಳ ಪುಟ್ಟ ಆಸೆಯನ್ನು ಹೊತ್ತು ನಿಲ್ಲಲು ಭೂಮಿಯಾಗಿ ನಿಂತಿದ್ದಾನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನೋಡಬೇಕೆಂಬ ಮುಗ್ಧ ಮಗಳ ಹಂಬಲವನ್ನು ಈಡೇರಿಸಲು, ಚಪ್ಪಲಿ ಧರಿಸಿದ್ದ ಮಗಳನ್ನೇ ತನ್ನ ತಲೆಯ ಮೇಲೆ ನಿಲ್ಲಿಸಿಕೊಂಡ ತಂದೆಯೊಬ್ಬರ ಅಪರೂಪದ ಪ್ರೀತಿಯ ವಿಡಿಯೋ ಈಗ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

ತಾವರೆಕೆರೆ ರಸ್ತೆಯಲ್ಲಿ ನಡೆದ ಅಪರೂಪದ ಘಟನೆ:

ನಮ್ಮ ಮೆಟ್ರೋದ ನೂತನ 'ಗುಲಾಬಿ ಮಾರ್ಗ'ದ (Pink Line) ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮೋದಿ ಅವರು, ರಸ್ತೆ ಮಾರ್ಗವಾಗಿ ಕಾರಿನಲ್ಲಿ ತಾವರೆಕೆರೆ ಮೆಟ್ರೋ ನಿಲ್ದಾಣದತ್ತ ತೆರಳುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಹಸ್ರಾರು ಸಾರ್ವಜನಿಕರು ಹಾಗೂ ಕಾರ್ಯಕರ್ತರತ್ತ ಪ್ರಧಾನಿಗಳು ಕಾರಿನಿಂದ ಕೈಬೀಸುತ್ತಾ ಸಾಗುತ್ತಿದ್ದರು.

ಇದೇ ಸಮಯದಲ್ಲಿ ಶಾಲೆಯಿಂದ ಸುಮಾರು 3 ಅಥವಾ 4ನೇ ತರಗತಿಯಲ್ಲಿ ಓದುತ್ತಿರುವ ತನ್ನ ಮುದ್ದಿನ ಮಗಳನ್ನು ಮನೆಗೆ ಕರೆದೊಯ್ಯುತ್ತಿದ್ದ ತಂದೆಯೊಬ್ಬರಿಗೆ ಮಗಳು ಪುಟ್ಟದೊಂದು ಬೇಡಿಕೆ ಇಟ್ಟಿದ್ದಾಳೆ— "ಅಪ್ಪ, ನಾನೂ ಟಿವಿಯಲ್ಲಿ ನೋಡೋ ಮೋದಿಯವರನ್ನ ನೋಡಬೇಕು!"

ಮಗಳ ಆಸೆಗಾಗಿ ಚಪ್ಪಲಿ ಕಾಲನ್ನೇ ತಲೆ ಮೇಲಿಟ್ಟುಕೊಂಡ ತಂದೆ!

ರಸ್ತೆಯಲ್ಲಿ ಜನರ ದಂಡೇ ಸೇರಿತ್ತು. ಜೊತೆಗೆ ರಸ್ತೆಯ ಪಕ್ಕದಲ್ಲಿದ್ದ ಎತ್ತರದ ಕಾಂಪೌಂಡ್ ಗೋಡೆ ಪುಟ್ಟ ಮಗುವಿನ ದೃಷ್ಟಿಗೆ ಅಡ್ಡಲಾಗಿ ನಿಂತಿತ್ತು. ಮಗಳನ್ನು ಗೋಡೆ ಹತ್ತಿಸಿ ಕೂರಿಸಲೂ ಆಗದಷ್ಟು ಎತ್ತರ. ಇತ್ತ ಪ್ರಧಾನಿ ಮೋದಿಯವರ ಬೆಂಗಾವಲು ವಾಹನವೂ ವೇಗವಾಗಿ ಸಾಗಿಬರುತ್ತಿತ್ತು. ಮಗಳಿಗೆ ಮೋದಿಯನ್ನು ತೋರಿಸಲೇಬೇಕೆಂದು ಪಣತೊಟ್ಟ ಆ ತಂದೆ, ಮಗಳು ಕಾಲಿನಲ್ಲಿ ಚಪ್ಪಲಿ ಧರಿಸಿದ್ದಾಳೆ ಎಂಬುದನ್ನೂ ಲೆಕ್ಕಿಸದೆ, ಆ ಚಪ್ಪಲಿ ಸಮೇತ ಮಗಳ ಎರಡೂ ಕಾಲುಗಳನ್ನು ತನ್ನ ತಲೆಯ ಮೇಲೆ ಗಟ್ಟಿಯಾಗಿ ನಿಲ್ಲಿಸಿಕೊಂಡು ಕಾಂಪೌಂಡ್‌ಗಿಂತ ಎತ್ತರಕ್ಕೆ ಹೊತ್ತು ನಿಂತರು. ಮಗಳೂ ಸಹ ತನ್ನ ಅಪ್ಪನ ಬೆಂಬಲವನ್ನು ನಂಬಿ, ಯಾವುದೇ ಅಳುಕಿಲ್ಲದೆ ಧೈರ್ಯದಿಂದ ಅಪ್ಪನ ತಲೆಯ ಮೇಲೆ ನಿಂತು ಕಾಂಪೌಂಡ್ ಆಚೆಯಿಂದ ಸಾಗುತ್ತಿದ್ದ ಪ್ರಧಾನಿ ಮೋದಿಯವರನ್ನು ಕಣ್ತುಂಬಿಕೊಂಡು ಸಂಭ್ರಮಿಸಿದಳು.

ಮಗಳ ಮೊಗದ ನಗುವಿನಲ್ಲಿ ಜಗತ್ತನ್ನೇ ಗೆದ್ದ ಅಪ್ಪ:

ತನ್ನ ತಲೆಯ ಮೇಲೆ ನಿಂತ ಮಗಳು ಪ್ರಧಾನಿ ಮೋದಿಯನ್ನು ನೋಡಿ ಮುಖದಲ್ಲಿ ನಗು ಬೀರಿದ ಆ ಕ್ಷಣ, ಆ ತಂದೆಯ ಮೊಗದಲ್ಲಿದ್ದ ನೆಮ್ಮದಿ ಹಾಗೂ ಸಾಧನೆಯ ಭಾವನೆ ನೋಡುಗರ ಎದೆಯನ್ನು ಕಲಕುವಂತಿತ್ತು. ಮಗಳ ಆಸೆ ಈಡೇರಿಸಲು ತಂದೆಯೊಬ್ಬ ಎಂಥ ತ್ಯಾಗಕ್ಕೂ ಸಿದ್ಧ ಎಂಬುದಕ್ಕೆ ಈ ದೃಶ್ಯ ಜೀವಂತ ಸಾಕ್ಷಿಯಾಯಿತು.

ಈ ದಿನದ ಬೆಂಗಳೂರಿನ ಬೆಸ್ಟ್ ವಿಡಿಯೋ:

ಈ ಅದ್ಭುತ ಕ್ಷಣವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾಗೆ ಹಂಚಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಂದು ಪ್ರಧಾನಿ ಮೋದಿ ಅವರು ಮೆಟ್ರೋ ಉದ್ಘಾಟನೆ ಮಾಡಿದ್ದು, ಭಾಷಣ ಮಾಡಿದ್ದು, ದೊಡ್ಡ ದೊಡ್ಡ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದು, ಮೋದಿ ಬೆಂಬಲಿಗರು ಘೋಷಣೆ ಕೂಗಿದ್ದು ಯಾವುದೂ ಮುಖ್ಯ ಎನ್ನಿಸಲಿಲ್ಲ. ಈ ಎಲ್ಲ ಘಟನೆಗಳಿಗಿಂದ 'ಮೋದಿಯನ್ನು ತೋರಿಸಲು ಅಪ್ಪ ಮಗಳನ್ನು ತಲೆ ಮೇಲೆ ನಿಲ್ಲಿಸಿಕೊಂಡ' ದೃಶ್ಯವೇ 'ಈ ದಿನದ ಬೆಂಗಳೂರಿನ ಬೆಸ್ಟ್ ವಿಡಿಯೋ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಮುಖದಲ್ಲಿ ನಗು ತರಲು ಅಪ್ಪ ಏನು ಬೇಕಾದರೂ ಮಾಡುತ್ತಾನೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಸಿಂಪಲ್‌ ಆಗಿ ಮದುವೆಯಾದ ನಟಿ ಅಮೃತಾ ರಾವ್‌ ಸಹೋದರಿ ಪ್ರೀತಿಕಾ ರಾವ್‌, ಪತಿಯ ಮುಖ ಮರೆಮಾಚಿದ್ದೇಕೆ?
'ನಿಮ್ಮ ಮಗನ ಮದುವೆ ಯಾವಾಗ?' ಕೇಳಿದ ಆಂಟಿಗೆ ತಾಯಿ ಕೊಟ್ಟ ಒಂದೇ ಒಂದು ಉತ್ತರಕ್ಕೆ ಸಂಬಂಧಿಕೆ ಸುಸ್ತು, ಸೈಲೆಂಟ್ ಆಗಿ ಎಸ್ಕೇಪ್