Being Single Benefits: ಸಿಂಗಲ್ ಆಗಿರೋದು ಒಳ್ಳೇದು

By Suvarna NewsFirst Published Mar 3, 2022, 6:38 PM IST
Highlights

ಸಿಂಗಲ್ (Single) ಆಗಿರೋದು ಸಿಕ್ಕಾಪಟ್ಟೆ ಬೋರಿಂಗ್ ಅಂತೀರಾ. ಒಂಟಿಯಾಗಿದ್ರೆ ಲೈಫ್‌ (Life)ನಲ್ಲಿ ಎಂಜಾಯ್ ಮಾಡೋಕೆ ಆಗಲ್ಲ ಅನ್ನೋ ಬೇಜಾರಾ. ಆದ್ರೆ ತಿಳ್ಕೊಳ್ಳಿ ಸಿಂಗಲ್ ಆಗಿರೋದ್ರಿಂದ ಬೇಜಾನ್ ಉಪಯೋಗ (Benefits) ಇದೆ.

ಇವತ್ತಿನ ದಿನದಲ್ಲಿ ಗರ್ಲ್‌ಫ್ರೆಂಡ್‌ (Girlfriend), ಬಾಯ್ ಫ್ರೆಂಡ್ (Boyfriend) ಇಲ್ಲದವರು ಕಡಿಮೆ. ಅಗತ್ಯ ಇದೆಯೋ, ಇಲ್ವೋ ಎಲ್ಲರೂ ರಿಲೇಷನ್ ಶಿಪ್‌ (Relationship)ನಲ್ಲಿ ಇರುತ್ತಾರೆ. ಪಾರ್ಕ್, ಸಿನಿಮಾ ಎಂದು ಸುತ್ತಾಡುತ್ತಾರೆ. ಪಾರ್ಟಿ, ಪಬ್ ಎಂದು ಎಂಜಾಯ್ ಮಾಡುತ್ತಾರೆ. ಹೀಗಿದ್ದಾಗ ಒಂಟಿಯಾಗಿರುವುದು ಬೋರೋ ಬೋರು ಎನ್ನುವವರು ಹಲವರು. ಸಿಂಗಲ್ ಲೈಫ್‌ನಲ್ಲಿ ಏನೇನೂ ಎಂಜಾಯ್ ಇಲ್ಲಪ್ಪ ಅನ್ನೋ ಬೇಜಾರು. ಆದ್ರೆ ನಿಮ್ಗೆ ಗೊತ್ತಾ ? ಸಿಂಗಲ್ (Single) ಲೈಫ್‌ನಿಂದ ಎಷ್ಟೊಂದು ಪ್ರಯೋಜನವಿದೆ ಅಂತ.

ಸಿಂಗಲ್ ಆಗಿರುವುದರ ಪ್ರಯೋಜನಗಳು
ಒಂಟಿಯಾಗಿರುವುದು ದೊಡ್ಡ ಬೇಸರ ಎಂದು ಭಾವಿಸುವವರು ಇಷ್ಟಪಡುವ ಹುಡುಗಿ ಮತ್ತು ಹುಡುಗನ ಹುಡುಕಾಟದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಆದರೆ ಈಗ ಟ್ರೆಂಡ್ (Trend) ಬದಲಾಗಿದೆ. ಜನರು ಹೆಚ್ಚಾಗಿ ಸಂಬಂಧಗಳಿಂದ ದೂರ ಉಳಿಯಲು ಮತ್ತು ಏಕಾಂಗಿ ಜೀವನವನ್ನು ನಡೆಸಲು ಉತ್ಸುಕರಾಗಿದ್ದಾರೆ. ಹಾಗಿದ್ರೆ ಒಂಟಿಯಾಗಿರುವುದರಿಂದ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ.

Girls Secret: ಬಾಯ್ ಫ್ರೆಂಡ್ ನೆನಪು ಬರ್ತಿದ್ದಂತೆ ಹುಡುಗಿಯರು ಏನು ಮಾಡ್ತಾರೆ ಗೊತ್ತಾ?

ಒಂಟಿಯಾಗಿರುವವರು ಬಲಶಾಲಿಗಳಾಗಿರುತ್ತಾರೆ
ರಿಲೇಷನ್ ಶಿಪ್‌ನಲ್ಲಿ ಇರುವವರಿಗಿಂತ ಒಂಟಿಯಾಗಿರುವವರು ಬಲಶಾಲಿಗಳಾಗಿರುತ್ತಾರೆ. ನಿರ್ದಿಷ್ಟವಾಗಿ, ಅವರು ಸ್ವತಂತ್ರವಾಗಿರುತ್ತಾರೆ. ಯಾವುದೇ ನಿರ್ಧಾರವನ್ನು ಮತ್ತೊಬ್ಬರ ಅಭಿಪ್ರಾಯದ ಒತ್ತಾಯದಿಂದ ತೆಗೆದುಕೊಳ್ಳಬೇಕಾಗಿಲ್ಲ. ಸ್ವಂತವಾಗಿ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ. ಹೀಗಾಗಿಯೇ ಒಂಟಿಯಾಗಿರುವವರು ಜೀವನದಲ್ಲಿ ಎಲ್ಲಾ ರೀತಿಯ ಕಷ್ಟಗಳನ್ನು ಸಮರ್ಥವಾಗಿ ಎದುರಿಸುತ್ತಾರೆ.

ಸೋಲೋ ಟ್ರಾವೆಲ್ ಮಾಡಬಹುದು
ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವುದಕ್ಕಿಂತ ಒಂಟಿಯಾಗಿ ಹೋಗುವಾಗ ತೊಂದರೆ ಕಡಿಮೆ. ಸೋಲೋ ಟ್ರಾವೆಲ್ಸ್‌ (Solo Travels)ನಲ್ಲಿ ನೀವು ಯಾರಿಗಾಗಿಯೂ ಕಾಯಬೇಕಾಗಿಲ್ಲ. ಯಾರ ಜವಾಬ್ದಾರಿಯನ್ನು ಹೊರಬೇಕಾಗಿಲ್ಲ. ನಿಮ್ಮ ಸಮಯವನ್ನು ಕೇವಲ ನಿಮ್ಮೊಂದಿಗೆ ಖುಷಿಯಿಂದ ಆಸ್ವಾದಿಸಬಹುದು.

ಹೆಚ್ಚು ಬಿಡುವಿನ ಸಮಯ ದೊರಕುತ್ತದೆ
ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಇದ್ದವರು ಹೆಚ್ಚಾಗಿ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮಾತನಾಡುವುದು, ಚಾಟ್‌ನಲ್ಲೇ ಸಮಯ ಕಳೆದುಬಿಡುತ್ತಾರೆ. ಅದೇ ಸಿಂಗಲ್ ಆಗಿದ್ದರೆ ಫೋನ್ ಕಾಲ್, ವೀಡಿಯೋ ಕಾಲ್, ಚಾಟಿಂಗ್ ಯಾವುದೂ ಇಲ್ಲ. ಹೀಗಾಗಿ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು, ಇತರ ಕೆಲಸಗಳನ್ನು ಮಾಡಿಕೊಳ್ಳಲು ಹೆಚ್ಚು ಸಮಯ ದೊರಕುತ್ತದೆ.

Relationship Tips : ಮದುವೆಗೂ ಮುನ್ನ ಈ ವಿಷ್ಯ ತಿಳಿದಿದ್ದರೆ ಸಮಸ್ಯೆ ಬರ್ತಿರಲಿಲ್ಲ…!

ಭಯವಿಲ್ಲದೆ ಫ್ಲರ್ಟ್ ಮಾಡಬಹುದು
ಎಲ್ಲರೂ ಒಂಟಿಯಾಗಿರಲಿ ಇಲ್ಲದಿರಲಿ ಕೆಲವೊಮ್ಮೆ ಫ್ಲರ್ಟ್ ಮಾಡುತ್ತಾರೆ. ಈ ಫ್ಲರ್ಟಿಂಗ್ ಸಾಮಾನ್ಯವಾಗಿ ಸ್ವಭಾವತಃ ಮುಗ್ಧವಾಗಿರುತ್ತದೆ. ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಯನ್ನುಂಟು ಮಾಡುವುದಿಲ್ಲ. ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಇದು ನೆರವಾಗುತ್ತದೆ. ಆದರೆ ಈಗಾಗಲೇ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಹೊಂದಿರುವುದು ನಮ್ಮ ಭಾವನೆಯನ್ನು ನಾವು ಬಲವಂತವಾಗಿ ತಡೆಯುವಂತೆ ಮಾಡುತ್ತದೆ. ಇದರಿಂದ ತೊಂದರೆಗಳಾಗುವ ಸಾಧ್ಯತೆಯೇ ಹೆಚ್ಚು.

ಹೆಚ್ಚು ಸ್ವಾವಲಂಬಿಗಳಾಗಬಹುದು
ನಮ್ಮವರು ಯಾರೂ ಇದ್ದಾರೆ ಎಂಬ ಭಾವನೆ ಬಂದಾಗ ನಾವು ಎಲ್ಲದಕ್ಕೂ ಅವರನ್ನು ಅವಲಂಬಿಸಲು ತೊಡಗುತ್ತೇವೆ. ಆದರೆ ಸಿಂಗಲ್ ಆಗಿದ್ದಾಗ ಒಂಟಿಯಾಗಿಯೇ ಹೊರಗಡೆ ಹೋಗಲು, ಹೊಸ ವಿಷಯವನ್ನು ಕಲಿತುಕೊಳ್ಳಲು ಯತ್ನಿಸುತ್ತೇವೆ. ಯಾವುದೇ ವಸ್ತುವಿನ ಖರೀದಿಗೂ ಮತ್ತೊಬ್ಬರನ್ನು ಅವಲಂಬಿಸದೆ ಸ್ವಾವಲಂಬಿಗಳಾಗಿ ಬದುಕಬಹುದು.

ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಬಹುದು
ಯಾವಾಗ್ಲೂ ಟಚ್‌ನಲ್ಲಿರುತ್ತೇನೆ ಎಂದವರೆಲ್ಲರೂ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಸಿಕ್ಕಾಗ ಆ ಮಾತನ್ನು ಮರೆತುಬಿಡುತ್ತಾರೆ. ಬಾಯ್ ಫ್ರೆಂಡ್, ಗರ್ಲ್‌ಫ್ರೆಂಡ್, ಸಂಗಾತಿ ಮತ್ತು ಮಗುವನ್ನು ಹೊಂದಿರುವಾಗ ಹೆಚ್ಚಿನದನ್ನು ಮಾಡಲು ಸಮಯವನ್ನು ಹೊಂದಿಸುವುದು ಕಷ್ಟ. ಅಂಥಾ ಬದ್ಧತೆಗೆ ನೀವು ಸಿದ್ಧವಾಗಿಲ್ಲದಿದ್ದರೆ, ಏಕಾಂಗಿತನವು ನಿಮಗಾಗಿ ಇರಬಹುದು.

ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಬಹುದು
ಚಿಕ್ಕ ವಯಸ್ಸಿನಲ್ಲಿ ಒಂಟಿಯಾಗಿರುವುದರಿಂದ ಅನೇಕ ಪ್ರಯೋಜನಗಳಿವೆ. ಈ ಸಮಯದಲ್ಲಿ ಒಂಟಿಯಾಗಿರುವವರು ತಮ್ಮ ಸಂಗಾತಿಯನ್ನು ಹುಡುಕಲು ಹೆಚ್ಚಿನ ಸಮಯವನ್ನು ಹೊಂದಿರುತ್ತಾರೆ. ಈ ವಯಸ್ಸಿನಲ್ಲಿ ಅವರು ತಮ್ಮ ಆಯ್ಕೆಯ ಹುಡುಗಿ ಅಥವಾ ಹುಡುಗನನ್ನು ಹಿಡಿಯಲು ಯಾವುದೇ ಅಡೆತಡೆಗಳನ್ನು ಎದುರಿಸುವುದಿಲ್ಲ. ಸೋ, ಇನ್ಯಾಕೆ ತಡ, ನೀವು ಸಿಂಗಲ್ ಆಗಿದ್ರೆ ಖುಷಿ ಪಡೋ ಸಮಯ ಇದು.

click me!