ಮಕ್ಳು (Children) ಹಾಗೆಯೇ ಕೈಗೆ ಏನ್ ಸಿಕ್ರೂ ಥಟ್ಟಂತ ತೆಗ್ದು ಬಾಯಿಗೆ ಹಾಕಿ ಬಿಡ್ತಾರೆ.. ಕಸ ಕಡ್ಡಿ ಅಂತ ನೋಡೋದಿಲ್ಲ. ಹಾಗೆಯೇ ಇಲ್ಲೊಂದು ಮಗು ಹಲ್ಲಿ (Lizard)ಯನ್ನು ನೋಡಿದ ತಕ್ಷಣವೇ ಏನನ್ನೂ ಯೋಚಿಸದೆ ಬಾಯಿಯೊಳಗೆ ಹಾಕಲು ಮುಂದಾಗುತ್ತದೆ. ಮುಂದೆ ಆಗಿದ್ದೇನು ?
ಪುಟ್ಟ ಮಕ್ಕಳು (Children) ಅಂದ್ರೆ ಹಾಗೇ ಅವರಿಗೆ ಯಾವುದು ತಪ್ಪು, ಯಾವುದು ಸರಿ ಗೊತ್ತಿರುವುದಿಲ್ಲ. ಹಾಗಾಗಿಯೇ ಬಿಸಿನೀರಿಗೆ, ಬೆಂಕಿಗೆ ಮೊದಲಾದವುಗಳಿಗೆ ಕೈ ಹಾಕುವುದನ್ನು ಮಾಡುತ್ತಾರೆ. ಅಪಾಯಕಾರಿ ವಸ್ತುಗಳ ಬಗ್ಗೆಯೂ ಅರಿವಿರುವುದಿಲ್ಲ. ಹೀಗಾಗಿಯೇ ಅವರಿಗೆ ಪ್ರಾಣಿಗಳನ್ನು ಕಂಡಾಗ ಭಯವಾಗುವುದಿಲ್ಲ. ಹಿಂಜರಿಕೆಯಿಲ್ಲದೆ ಬಳಿಗೆ ಹೋಗಿ ಆಟವಾಡಲು ತೊಡಗುತ್ತಾರೆ. ಹಾಗೆಯೇ ಇಲ್ಲೊಂದು ಮಗು ಜೀವಂತ ಹಲ್ಲಿ (Lizard)ಯನ್ನು ಕುತೂಹಲದಿಂದ ನೋಡಿ ತಕ್ಷಣ ಅದನ್ನು ಬಾಯಿಗೆ ಹಾಕಿಕೊಳ್ಳಲು ಮುಂದಾಗಿದೆ. ಮುಂದೆ ಆಗಿದ್ದೇನು ?
ಸಾಮಾಜಿಕ ಜಾಲತಾಣ (Social Media)ಗಳು ಬಂದ ಮೇಲೆ ಒಳ್ಳೆಯದ್ದೋ, ಕೆಟ್ಟದ್ದೋ ವಿಷಯಗಳು ಅತಿ ಬೇಗನೇ ವೈರಲ್ (Viral) ಆಗಿ ಬಿಡುತ್ತವೆ. ಚಿತ್ರ-ವಿಚಿತ್ರ ಫೋಟೋ, ವೀಡಿಯೋಗಳಂತೂ ಇಲ್ಲಿ ಬೇಗನೇ ಸ್ಪ್ರೆಡ್ ಆಗಿ ಬಿಡುತ್ತವೆ. ಹಾಗೆಯೇ ಪುಟ್ಟ ಮಗುವೊಂದು ಹಲ್ಲಿಯನ್ನು ತಿನ್ನಲು ಹೊರಟಿರುವ ವೀಡಿಯೋ ಸದ್ಯ ಸಾಕಷ್ಟು ವೈರಲ್ ಆಗ್ತಿದೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಒಬ್ಬ ವ್ಯಕ್ತಿಯ ಶರ್ಟ್ ಮೇಲೆ ಹಲ್ಲಿಯೊಂದು ಓಡಾಡುತ್ತಿರುತ್ತದೆ. ಅದನ್ನು ತಾಯಿ ಮಗುವಿಗೆ ತೋರಿಸುತ್ತಾಳೆ. ಮಗು ಆಶ್ಚರ್ಯದಿಂದ ಹಲ್ಲಿಯನ್ನು ನೋಡುತ್ತದೆ. ಮತ್ತೆ ಒಮ್ಮೆಗೇ ಜೀವಂತ ಹಲ್ಲಿಯನ್ನು ಕೈಯಲ್ಲಿಡ್ಡಿದು ಬಾಯಿಗೆ ಹಾಕಲು ಮುಂದಾಗುತ್ತದೆ. ಇನ್ನೇನು ಹಲ್ಲಿ ಮಗುವಿನ ಬಾಯಿಯೊಳಗೆ ಹೋಯಿತೇನೋ ಎಂಬಷ್ಟರಲ್ಲಿ ತಾಯಿ ಕಿಟಾರನೆ ಕಿರುಚುತ್ತಾಳೆ.
ವ್ಯಕ್ತಿ ಬೈದಿದ್ದನ್ನೇ ಹಾಡಾಗಿಸಿದ ಯೂಟ್ಯೂಬರ್... ವಿಡಿಯೋ ಸಖತ್ ವೈರಲ್
ಇನ್‌ಸ್ಟಾಗ್ರಾಂನ ದಿ ಸೀನರಿ ಪ್ಲೇಸ್ ಎಂಬ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಮಗು ಹಲ್ಲಿ ತಿನ್ನಲು ಮುಂದಾಗುವ ಈ ವೀಡಿಯೋಗೆ ಸಾವಿರಾರು ಲೈಕ್ಸ್ ಬಂದಿದ್ದು, ಜನರು ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ.
ಹಲ್ಲಿಯನ್ನು ನೋಡಿದ ತಕ್ಷಣವೇ ಏನನ್ನೂ ಯೋಚಿಸದೆ ಬಾಯಿಯೊಳಗೆ ಹಾಕಲು ಮುಂದಾಗುತ್ತದೆ. ಅದನ್ನು ತಡೆಯುವುದು 1 ಸೆಕೆಂಡ್ ತಡವಾದರೂ ಹಲ್ಲಿ ಮಗುವಿನ ಬಾಯಿಯೊಳಗೆ ಇರುತ್ತಿತ್ತು. ವಿಷಕಾರಿಯಾದ ಹಲ್ಲಿ ಅಪ್ಪಿ ತಪ್ಪಿ ಮಗುವಿನ ಬಾಯಿಯೊಳಗೆ ಹೋಗಿದ್ದರೆ ಜೀವಕ್ಕೇ ಹಾನಿಯಾಗುತ್ತಿತ್ತು. ಆದರೆ ಸುತ್ತಮುತ್ತಲಿದ್ದವರು ಮಗುವಿನ ಚಟುವಟಿಕೆಯನ್ನು ಕುತೂಹಲದಿಂದ ಗಮನಿಸುತ್ತಿದ್ದು, ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಪೋಷಕರು ಯಾವಾಗಲೂ ಮಕ್ಕಳಿಗೆ ಹೊಸ ಹೊಸತನ್ನು ಪರಿಚಯ ಮಾಡಿಕೊಡಲು ಯತ್ನಿಸುತ್ತಾರೆ. ಹೊಸ ವಸ್ತು, ಹೂವು, ತರಕಾರಿ, ಹಣ್ಣು, ಪ್ರಾಣಿಗಳನ್ನು ಪರಿಚಯ ಮಾಡಿಕೊಡುತ್ತಾರೆ. ಅದೇ ರೀತಿ ಇಲ್ಲಿ ತಾಯಿ ಮಗುವಿಗೆ ಹಲ್ಲಿಯನ್ನು ಪರಿಚಯ ಮಾಡಿಕೊಡಲು ಮುಂದಾಗಿದ್ದಾರೆ. ಆದರೆ ಮಗು ಮಾತ್ರ ಇದೇನೋ ತಿನ್ನುವ ಆಹಾರ ಎಂದುಕೊಂಡು ನೋಡಿದ ತಕ್ಷಣವೇ ಹಲ್ಲಿಯನ್ನು ಬಾಯಿಯೊಳಗೆ ಹಾಕಿಕೊಳ್ಳೋಕೆ ಮುಂದಾಗಿದೆ. ಅಷ್ಟು ಹೊತ್ತು ಖುಷಿಯಿಂದ ನಗುತ್ತಾ ಮಗುವಿಗೆ ಹಲ್ಲಿಯನ್ನು ತೋರಿಸುತ್ತಿದ್ದ ತಾಯಿಯ ಮುಖದಲ್ಲಿ ಒಮ್ಮೆಗೇ ಭೀತಿ ಆವರಿಸಿದೆ. ಆದ್ರೆ ಅದೃಷ್ಟವಶಾತ್ ಮಗು ಹಲ್ಲಿಯನ್ನು ಬಾಯಿಯೊಳಗೆ ಹಾಕಿಲ್ಲವಾದ ಕಾರಣ ಅದೃಷ್ಟವಶಾತ್ ಅನಾಹುತ ತಪ್ಪಿದಂತಾಗಿದೆ.
Kim Kardashian: ಮೈ ತುಂಬಾ ಟೇಪ್ ಸುತ್ತಿ ಫೋಸ್, ಏನಮ್ಮಾ ನಿನ್ ಅವತಾರ ಅಂತಿದ್ದಾರೆ ನೆಟ್ಟಿಗರು !
ಹಲ್ಲಿಗಳು ವಿಷಕಾರಿಯೇ ? ಹಲ್ಲಿಗಳನ್ನು ತಿಂದ್ರೆ ಏನಾಗುತ್ತೆ ?
ಜೀವಿಗಳು, ಕೀಟಗಳು, ಹಲ್ಲಿಗಳು ಮೊದಲಾದವುಗಳು ಸಾಮಾನ್ಯವಾಗಿ ವಿಷಕಾರಿಯಾಗಿರುತ್ತವೆ. ಚೇಳು, ಕೆಲವೊಂದು ಜಾತಿಯ ನೊಣಗಳ ಕಡಿತ ಜೀವಕ್ಕೇ ಅಪಾಯವನ್ನುಂಟು ಮಾಡಬಹುದು. ಹಾಗೆಯೇ ಹಲ್ಲಿ ಬಿದ್ದ ಆಹಾರ, ನೀರನ್ನು ಸೇವಿಸಿ ಮೃತಪಟ್ಟ ಅದೆಷ್ಟೋ ನಿದರ್ಶನಗಳಿವೆ. ಹೀಗಾಗಿ ಹಲ್ಲಿಯನ್ನು ತಿನ್ನುವುದು ಸಹ ಜೀವಕ್ಕೆ ಅಪಾಯಕಾರಿಯಾಗಿದೆ.
ಹೆಚ್ಚಿನ ಮನೆಗಳಲ್ಲಿ ಕಂಡುಬರುವ ಗೋಡೆ ಹಲ್ಲಿ ಅಥವಾ ಗೆಕ್ಕೊ ವಿಷಕಾರಿಯಲ್ಲ. ಪ್ರಪಂಚದ ಏಕೈಕ ವಿಷಕಾರಿ ಹಲ್ಲಿ ಹೆಲೋಡರ್ಮಾ, ಇದನ್ನು ಗಿಲಾ ದೈತ್ಯಾಕಾರದ ಮತ್ತು ಮಣಿಗಳ ಹಲ್ಲಿ ಎಂದೂ ಕರೆಯುತ್ತಾರೆ. ಇದು ನೈಋತ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗಿಲಾ ನದಿಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತದೆ.