Sudeep ಮಡಿಲಿನಲ್ಲಿ ಮಗುವಾಗಿ ಅಮ್ಮ: ಅದ್ಭುತ ಕಲೆಗೆ ಕಿಚ್ಚ ಭಾವುಕ- ಚಪ್ಪಲಿ ಬಿಟ್ಟು ಕೃತಿ ಸ್ವೀಕಾರ...

Published : Sep 23, 2025, 06:36 PM IST
Sudeep and Mohters Art

ಸಾರಾಂಶ

ಕಲಾವಿದ ಭರತ್ ಭೂಪತಿ ಅವರು, ನಟ ಸುದೀಪ್ ಅವರ ನಿಧನರಾದ ತಾಯಿ ಸರೋಜಾ ಅವರ ಚಿತ್ರವನ್ನು ರಚಿಸಿದ್ದಾರೆ. ಈ ಚಿತ್ರದಲ್ಲಿ ತಾಯಿ ಮಗನ ಮಡಿಲಲ್ಲಿ ಮಲಗಿದ್ದು, ಇದನ್ನು ಸ್ವೀಕರಿಸಿದ ಸುದೀಪ್ ಅರೆಕ್ಷಣ ಭಾವುಕರಾದರು. ತಮ್ಮ ತಾಯಿಯ ಬಗ್ಗೆ ಸುದೀಪ್ ಹೊಂದಿದ್ದ ಪ್ರೀತಿ ಈ ಲೇಖನ ವಿವರಿಸುತ್ತದೆ.

ಅಮ್ಮ... ಈ ಒಂದು ಶಬ್ದ ಕೇಳಿದರೆ ಹಲವರ ಮೈಮನ ರೋಮಾಂಚನಗೊಳ್ಳುವುದು ಇದೆ. ಈಗಿನ ಕಾಲದಲ್ಲಿ ವೃದ್ಧ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ, ನಿಷ್ಕರುಣಿಯಾಗಿ ರಸ್ತೆ ಮೇಲೆ ಬಿಟ್ಟು ಬರುವ ಮಕ್ಕಳಿಗೂ ಏನೂ ಕೊರತೆಯಿಲ್ಲ. ಇಂಥ ಕಟು ಹೃದಯದವರ ನಡುವೆಯೂ ಅಮ್ಮ ಎಂದರೆ ಅದೆಷ್ಟೋ ಮಂದಿಗೆ ಶಬ್ದಗಳಲ್ಲಿ ವರ್ಣಿಸಲಾರದಷ್ಟು ಪ್ರೀತಿ. ಅದೇ ರೀತಿ ಸುದೀಪ್​ (Kiccha Sudeep) ಅವರು ಕೂಡ ಅಮ್ಮನ ಮೇಲೆ ಅಷ್ಟೇ ಅಭಿಮಾನ, ಅಕ್ಕರೆ, ಪ್ರೀತಿ ಹೊಂದಿದವರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ಸರೋಜಾ ಕಳೆದ ಅಕ್ಟೋಬರ್​ನಲ್ಲಿ ನಿಧನರಾದರು.

ಅಮ್ಮ-ಮಗನ ಅದ್ಭುತ ಕ್ಷಣ..

ಇದೀಗ ಕಲಾವಿದ ಭರತ್​ ಭೂಪತಿ (Bharath Bhupathi) ಅವರು, ತಮ್ಮ ಅದ್ಭುತ ಕಲೆಯಿಂದ ಸುದೀಪ್​ ಅವರ ಮಡಿಲಲ್ಲಿ ಅಮ್ಮ ಮಲಗಿರುವ ಹಾಗೆ ಚಿತ್ರ ಬಿಡಿಸಿದ್ದಾರೆ. ಒಂದು ಚಿತ್ರ ಸಾವಿರಾರು ಮಾತನಾಡುತ್ತದೆ ಎನ್ನುವ ಮಾತಿದೆ. ಅದರಂತೆಯೇ, ಈ ಚಿತ್ರದಲ್ಲಿ, ಎಂಥವರನ್ನೂ ಅರೆಕ್ಷಣ ಭಾವುಕರನ್ನಾಗಿಸುವ ಮಾತಿದೆ. ಅದರಲ್ಲಿಯೂ ಮಗುವಾಗಿದ್ದಾಗ ಅಮ್ಮನ ಮಡಿಲಿನ ಮೇಲೆ ಮಕ್ಕಳು ಮಲಗಿದರೆ, ವೃದ್ಧಾಪ್ಯದಲ್ಲಿ ಮಕ್ಕಳೇ ಅಪ್ಪ-ಅಮ್ಮನಿಗೆ ಆಸರೆಯಾಗಬೇಕು. ಆಗ ಅಮ್ಮನೊಬ್ಬಳು ತನ್ನ ಮಕ್ಕಳ ಮಡಿಲಲ್ಲಿ ಮಲಗಿದರೆ ಅದರ ಆನಂದವೇ ಬೇರೆ. ಅಂಥದ್ದೊಂದು ಕಲ್ಪನೆಗೆ ಕಲಾ ಸ್ವರೂಪ ನೀಡಿದ್ದಾರೆ ಈ ಕಲಾವಿದ.

ಚಪ್ಪಲಿ ಬಿಟ್ಟು ಸ್ವೀಕಾರ

ಈ ಚಿತ್ರವನ್ನು ರಚಿಸುವ ವಿಡಿಯೋ ಹಾಗೂ ಅದನ್ನು ಸುದೀಪ್​ ಅವರಿಗೆ ನೀಡುವ ವಿಡಿಯೋ ಅನ್ನು ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ಸುದೀಪ್​ ಅವರು ಚಪ್ಪಲಿ ಬದಿಗಿಟ್ಟು ಸ್ವೀಕಾರ ಮಾಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಚಿತ್ರ ನೋಡಿದ ಸುದೀಪ್​ ಅವರು ಅರೆಕ್ಷಣ ಭಾವುಕರಾಗಿದ್ದಾರೆ. ಅವರು ಆ ಚಿತ್ರದ ಒಳಗೇ ಹೋಗಿರುವುದನ್ನು ನೋಡಬಹುದಾಗಿದೆ. ಕೊನೆಗೆ ಕಲಾವಿದನಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಹಿಂದು ಸುದೀಪ್​ ಅವರು ತಮ್ಮ ಅಮ್ಮನ ಬಗ್ಗೆ ಮಾತನಾಡಿದ್ದರು. ಯಾವಾಗಲೂ ಪ್ರೀತಿಯ ಧಾರೆ ಹರಿಸುತ್ತಾ, ರಕ್ಷಣೆ ನೀಡುತ್ತಾ, ಕ್ಷಮಿಸುತ್ತಾ , ಪೂರ್ವಾಗ್ರಹ ಪೀಡಿತ ಯೋಚನೆಗಳನ್ನು ಹೊಂದಿರದ ನನ್ನಮ್ಮ ಈಗ ಇಲ್ಲ. ಅವರ ಜೊತೆಗಿದ್ದ ಜೀವನ ಚೆನ್ನಾಗಿತ್ತು, ಸಂಭ್ರಮಿಸಿದ್ದೆ, ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದೆ. ಮಾನವ ರೂಪದಲ್ಲಿದ್ದ ದೇವರು ನನ್ನ ತಾಯಿ. ನನ್ನ ತಾಯಿಯೇ ನನಗೆ ಹಬ್ಬ, ಟೀಚರ್ ಆಗಿದ್ದರು, ಹಿತೈಷಿಯೂ ಹೌದು. ಅಷ್ಟೇ ಅಲ್ಲದೆ ನನ್ನ ಮೊದಲ ಅಭಿಮಾನಿಯೂ ಹೌದು ಎಂದಿದ್ದರು.

ನೋವು ತೋಡಿಕೊಂಡಿದ್ದ ಸುದೀಪ್​

'ನನ್ನ ಮನದಾಳದಲ್ಲಿನ ನೋವನ್ನು ದುಃಖವನ್ನು ಹೊರಹಾಕಲು ನನಗೆ ಪದಗಳಿಲ್ಲ. ಏನಾಗಿದೆಯೋ ಅದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿದೆ. ನಿತ್ಯವೂ ನನಗೆ ಬೆಳಗ್ಗೆ 5.30ಗೆ ಗುಡ್ ಮಾರ್ನಿಂಗ್ ಕಂದ ಎಂಬ ಸಂದೇಶ ಬರುತ್ತಿತ್ತು. ನನಗೆ ಕಳೆದ ಅಕ್ಟೋಬರ್ 18ಕ್ಕೆ ಕೊನೆಯದಾಗಿ ಮೆಸೇಜ್ ಬಂದಿತ್ತು. ಬಿಗ್ ಬಾಸ್ ಮನೆಯಲ್ಲಿದ್ದ ಸಮಯದಲ್ಲಿ ನಾನು ಎದ್ದಾಗ ನನಗೆ ಮತ್ತೆ ಮೆಸೇಜ್ ಬರಲೇ ಇಲ್ಲ. ಅಂದು ಎಲ್ಲವೂ ಸರಿ ಇದೆಯಾ ಎಂದು ಕೇಳಲು ನನಗೆ ಆಗಿಯೇ ಇರಲಿಲ್ಲ. . ನಾನು ವೇದಿಕೆ ಮೇಲೆ ಹೋದಾಗ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಯ್ತು ಅಂತ ಗೊತ್ತಾಯ್ತು. ಆಗ ನಾನು ಸಹೋದರಿಗೆ ಫೋನ್ ಮಾಡಿ ಡಾಕ್ಟರ್ ಜೊತೆಯೂ ಮಾತನಾಡಿದೆ. ಆಮೇಲೆ ಸ್ವಲ್ಪ ಹೊತ್ತಾದ ಬಳಿಕ ಮತ್ತೆ ನಾನು ವೇದಿಕೆಗೆ ಹೋದಾಗ ತಾಯಿ ಪರಿಸ್ಥಿತಿ ಕಷ್ಟ ಇದೆ ಅಂತ ಸಂದೇಶ ಬಂತು. ಆಮೇಲೆ ಆದದ್ದೆಲ್ಲಾ ದುರಂತ' ಎಂದು ಸುದೀಪ್​ ತಮ್ಮ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು. ಇದನ್ನೆಲ್ಲ ಹೇಗೆ ಸರಿ ಮಾಡೋದು ಅಂತ ನನಗೆ ಅರ್ಥ ಆಗ್ತಿಲ್ಲ. ಈ ವಾಸ್ತವವನ್ನು ಹೇಗೆ ಒಪ್ಪಿಕೊಳ್ಳಬೇಕು ಅಂತ ನನಗೆ ಅರ್ಥ ಆಗ್ತಿಲ್ಲ ಎಂದು ನೊಂದುಕೊಂಡಿದ್ದರು.

 

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು