ತನ್ನ ಹೊಟ್ಟೆಯಲ್ಲಿ ಸ್ವರ್ಗ ತೋರಿಸಿದ ದೇವತೆ ಅವಳು. ಅವಳಿಗೆ ಆ ಕರುಳ ಕುಡಿಯೇ ಜಗತ್ತು. ಆ ತ್ಯಾಗ, ಮಡಿಲು ನೀಡೋ ಮಮತೆಯಲ್ಲೇ ಅಮ್ಮ ಎಂಬ ಪದಕ್ಕೆ ಅರ್ಥ ನೀಡುವವಳು.
ಹುಟ್ಟಿಸಿದ ನಿನಗೆ ನನ್ನ ಬರುವಿಕೆಯ ಸಂಭ್ರಮವಾದರೆ, ನನಗೆ ಸುತ್ತಲ ಜಗತ್ತು ನೋಡೋ ತವಕ. ಕಾಲ ಚಲಿಸಿತು.ನನ್ನ ಜೀವನ ಶಾಲೆ ಮುಖವ ನೋಡಿತು. ಮತ್ತೇನಾಯ್ತು, ಅಮ್ಮಾ ಎಂದು ಕರೆಯಲು ಕಲಿತ ಅದೇ ಕಾಲದಲ್ಲಿ ಬಿಟ್ಟು ಹೋದೆಯಲ್ಲ. ಮನ ನೊಂದಿತು. ಮನೆಯ ದೀಪ ನಂದಿತು. ಮನೆ ಮನವು ಸ್ಮಶಾನದಂತಿರಲು ನೀನಿಲ್ಲದ ಜೀವನ ತುಂಬಾ ಕಷ್ಟವಾಯಿತು ಅಮ್ಮಾ. ನಿಜ ಹೇಳಬೇಕೆಂದರೆ ಈ ಸಮಾಜದ ಬಗ್ಗೆ ನಾ ತುಂಬಾ ಚೆನ್ನಾಗಿ ಅರಿತಿರುವೆ. ನಿನ್ನಷ್ಟುಅದ್ಯಾವ ಜೀವವೂ ನನ್ನನ್ನು ಪ್ರೀತಿಸಲಾರದು ಎಮಬ ಸತ್ಯವು ತಿಳಿದಿದೆ.
ಕದ್ದು ಕರ್ಜಿಕಾಯಿ ತಿನ್ನುವಾಗ ಅಮ್ಮನ ಕೈಲಿ ಸಿಕ್ಕಿಬಿದ್ದ ರೋರಿಂಗ್ ಸ್ಟಾರ್!
undefined
ಯೌವನದ ಅಮಲು ಈ ಪ್ರೀತಿಯ ಮರೆಸುತ್ತೆ. ಪ್ರಿಯತಮನ ಪ್ರೀತಿಯೇ ಅಪಾರವಾಗುತ್ತೆ ಅಂತಾರೆ. ಆದರೆ ಪ್ರೇಮಕ್ಕೆ ಕೆಲವರ ಪಾಡು ಹೀಗಿರಬಹುದು. ಆದರೆ ಕತ್ತಲೆಯಲ್ಲಿ ಕಾಣುವ ಚಂದಿರನ ಮುಖದಲ್ಲಿ ನಾನಿಂದಿಗೂ ನಿನ್ನ ಕಾಣುವೆ. ಸಂವಾದದಲ್ಲಿ ತೊಡಗುವೆ. ಬಣ್ಣದ ಬದುಕಲ್ಲಿ ವರ್ಣಗಳ ಮುಖಗಳ ಪರಿಚಯಿಸಿಕೊಳ್ಳುವುದೇ ಕಷ್ಟವಾಗಿದೆ ಅಮ್ಮ. ಹಾಗೆಯೇ ಸಿಗೋ ಪ್ರಶಂಸೆಗೂ ನಾನಿಂದು ನಿನ್ನ ನೆನೆದು ಕಣ್ಣೀರಿಡಬೇಕಾದ ಪರಿಸ್ಥಿತಿ ಎದುರಾಗಿದೆ ಅಮ್ಮ. ಬದುಕಿನ ಅನುಭವವು ಪಾಠ ಕಲಿಸಲು ಏಕಾಂಗಿತನ ಒಮ್ಮೊಮ್ಮೆ ಸಾಯಿಸುತ್ತೆ. ನೀನಿಲ್ಲದೇ ನಾನು ಇಷ್ಟೆಲ್ಲಾ ಮಾಡಿದೆಯಲ್ಲ ಎಂಬ ಅಹಂ ಕೆಲವೊಮ್ಮೆ ತರಿಸುತ್ತೆ.
ನಿಜವಾಯ್ತು ಮಕ್ಕಳ ಸ್ಟೋರಿ: ಅತ್ತೆಗಾಗಿ ತಲೆ ಬೋಳಿಸಿಕೊಂಡ ಬೆಂಗಳೂರಿನ ಸೊಸೆ
ಬದುಕು ಬದಲಾಗಿದೆ. ಬದಲಾವಣೆ ಬದಲಾಬೇಕಿದೆ. ಜೀವನ ಇನ್ನೂ ವಿಶಾಲವಾಗಿದೆ. ಸಾಧಿಸುವ ಛಲವಿದೆ. ನಿನ್ನ ಹೆಸರ ಹೂವು ಸುಗಂಧ ಬೀರುವಂತೆ ನನ್ನ ಬದುಕು ಇನ್ನೊಬ್ಬರಿಗೆ ಮಾದರಿಯಾಗುವಂತೆ ಬಾಳುತ್ತೇನೆ. ಸಾಧಿಸೋ ಚಪಲದಲ್ಲಿಗರಿ ಮುಟ್ಟೋ ತವಕದಲ್ಲಿ ನಿನ್ನ ಆರ್ಶಿವಾದ ಸದಾ ನನ್ನೊಂದಿಗೆ ಇರಬಹುದೆಂಬ ನಂಬುಗೆಯಲ್ಲಿ ಬಾಳ ಪಯಣದಲ್ಲಿ ಹೊಸ ನಡಿಗೆ ಇಟ್ಟಿರುವೆನು ಅಮ್ಮಾ. ಮುಂದೊಂದು ಜನುಮವಿರುವುದಾದರೆ ನಿನ್ನದೇ ಮಡಿಲ ತೊಟ್ಟಿಲೊಳು ಮತ್ತೆ ಮಗುವಾಗುವೆ.
ಇಂತಿ ನಿನ್ನ ಮಗಳು ಅಪ್ಪಿ
ಅರ್ಪಿತಾ ಕುಂದರ್
ವಿವೇಕಾನಂದ ಕಾಲೇಜು, ಪುತ್ತೂರು.