ಹಣದಾಸೆಗೆ 91 ವರ್ಷದ ದೊಡ್ಡಮ್ಮನನ್ನು ಮದುವೆಯಾದ 23ರ ಯುವಕ!

By Santosh Naik  |  First Published Nov 2, 2023, 6:41 PM IST

23 year old boy married 91 year old aunty: ಅರ್ಜೆಂಟೀನಾದ ಸಾಲ್ಟಾ ನಗರದ 23 ವರ್ಷದ ಹುಡುಗ ತನ್ನ 91 ವರ್ಷದ ದೊಡ್ಡಮ್ಮನ ಪಿಂಚಣಿ ಹಣ ತನಗೇ ಬರಬೇಕು ಎನ್ನುವ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾನೆ. ನಾನು ದೊಡ್ಡಮ್ಮನನ್ನು ಮದುವೆಯಾಗಿದ್ದೇನೆ. ಹಾಗಾಗಿ ಇದರ ಹಣ ನನಗೆ ಸೇರಬೇಕು ಎಂದು ವಾದ ಮಾಡಿದ್ದಾರೆ.


ನವದೆಹಲಿ (ನ.2): ಸಾಮಾನ್ಯವಾಗಿ ಜನರು ತಮಗಿಂತ ಎರಡರಿಂದ ಮೂರು ವರ್ಷ ಅಥವಾ ಗರಿಷ್ಠ 5 ವರ್ಷ ಕಿರಿಯ ಅಥವಾ ಹಿರಿಯ ವ್ಯಕ್ತಿಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ತಮಗಿಂತ ದುಪ್ಪಟ್ಟು ಅಥವಾ ಮೂರು ಪಟ್ಟು ವಯಸ್ಸಿನ ಅಂತರವಿರುವ ದಂಪತಿಗಳ ಸುದ್ದಿಯನ್ನು ಸಾಕಷ್ಟು ಕೇಳುತ್ತಿದ್ದೇವೆ. ಲಿವ್‌ ಇನ್‌ ರಿಲೇಷನ್‌ಷಿಪ್‌, ಮದುವೆಯಂಥ ಬಂಧಗಳೂ ಇವರ ನಡುವೆ ಏರ್ಪಟ್ಟಿದ್ದನ್ನು ಕಂಡಿದ್ದೇವೆ.  ಸಂಗಾತಿಗಳ ನಡುವೆ ದುಪ್ಪಟ್ಟು ಅಥವಾ ಮೂರು ಪಟ್ಟು ಅಂತರವಿರುವ ಜೋಡಿಗಳನ್ನು ಕೇಳಿ ನೋಡಿ ಅವರದು ಒಂದೇ ಉತ್ತರ. ತಮ್ಮದು ನಿಜವಾದ ಪ್ರೀತಿ. ನಿಜವಾದ ಪ್ರೀತಿಯಲ್ಲಿ ಸಂಗಾತಿಯ ವಯಸ್ಸು ಅನ್ನೋದು ಎಂದಿಗೂ ಮುಖ್ಯವಾಗೋದಿಲ್ಲ ಎಂದೇ ಹೇಳುತ್ತಾರೆ. ಆದರೆ, ಕೆಲವೊಮ್ಮೆ ಇಂಥ ಮದುವೆಗಳು ಸತ್ಯಗಳು ಬೇರೆಯದೇ ಆಗಿರುತ್ತದೆ. ಇದೇ ರೀತಿಯ ಅನುಮಾನಾಸ್ಪದ ವಿವಾಹದ ಪ್ರಕರಣ ಅರ್ಜೆಂಟೀನಾದಿಂದ ಬೆಳಕಿಗೆ ಬಂದಿದೆ.

ವೃತ್ತಿಯಲ್ಲಿ ವಕೀಲನಾಗಿರುವ  ಅರ್ಜೆಂಟೀನಾದ ಸಾಲ್ಟಾ ನಗರದ 23 ವರ್ಷದ ಯುವಕ ಮೌರಿಸಿಯೊ ಈಗಾಗಲೇ ಮೃತರಾಗಿರುವ ತಮ್ಮ 91 ವರ್ಷದ ದೊಡ್ಡಮ್ಮ ಯೋಲಾಂಡಾ ಟೋರಿಸ್‌  ಅವರ ಪಿಂಚಣಿ ಹಣಕ್ಕಾಗಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಮೌರಿಸಿಯೊ ಹೇಳುವ ಪ್ರಕಾರ, ತಾನು ತನ್ನ 91 ವರ್ಷದ ದೊಡ್ಡಮ್ಮ ಯೋಲಾಂಡಾ ಟೋರಿಸ್‌ ಅವರ ಪತಿ ಅದಕ್ಕಾಗಿ ಪಿಂಚಣಿಗೆ ಅರ್ಹನಾಗಿದ್ದೇನೆ ಎಂದು ವಾದ ಮಂಡಿಸಿದ್ದಾರೆ. 2015ರಲ್ಲಿ ಸಂಬಂಧದಲ್ಲಿ ತಮ್ಮ ಹಿರಿಯ ದೊಡ್ಡಮ್ಮನಾಗಿರುವ ಯೋಲಾಂಡಾ ಅವರನ್ನು ವಿವಾಹವಾಗಿದ್ದೇನೆ. 2016ರ ಏಪ್ರಿಲ್‌ನಲ್ಲಿ ನನ್ನ ಪತ್ನಿಯೂ ಆಗಿದ್ದ ಇವರು ನಿಧನರಾದರು. ಇಂಥ ಸ್ಥಿತಿಯಲ್ಲಿ ಇವರ ಪಿಂಚಣಿ ಹಣಕ್ಕೆ ನಾನು ಅರ್ಹನಾಗಿದ್ದೇನೆ ಎಂದು ಮೌರಿಸಿಯೊ ಹೇಳಿದ್ದಾರೆ. ಆದರೆ, ಸಾಕಷ್ಟು ತನಿಖೆಯ ಬಳಿಕ ಈತನ ಮನೆಯ ನೆರೆಹೊರೆಯವರು ಈ ಮದುವೆಯನ್ನು ನಕಲಿ ಎಂದು ಘೋಷಣೆ ಮಾಡಿದಾಗ ಮೌರಿಸಿಯೊ ಅವರ ಅರ್ಜಿ ತಿರಸ್ಕೃತವಾಗಿದೆ.

ವಾಯುವ್ಯ ಅರ್ಜೆಂಟೀನಾದ ಸಾಲ್ಟಾ ನಗರದ ಮೌರಿಸಿಯೊ, 2009 ರಲ್ಲಿ ಅವರ ಪೋಷಕರು ಬೇರ್ಪಟ್ಟ ನಂತರ ಅವರ ತಾಯಿ, ಸಹೋದರಿ, ಅಜ್ಜಿ ಮತ್ತು ಹಿರಿಯ ದೊಡ್ಡಮ್ಮನೊಂದಿಗೆ ವಾಸಿಸುತ್ತಿದ್ದರು. 2016 ರಲ್ಲಿ ಯೋಲಾಂಡಾ ಅವರ ಮರಣದ ನಂತರ, ಅವರು ತಮ್ಮ ದೊಡ್ಡಮ್ಮನ ಪಿಂಚಣಿಗಾಗಿ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಮಾರಿಸಿಯೊ ಅವರ ಹೇಳಿಕೆಯ ಮೇಲೆ ಅರ್ಜೆಂಟೀನಾ ಸರ್ಕಾತ ತನಿಖೆಯನ್ನು ಪ್ರಾರಂಭಿಸಲಾಯಿತು, ಇದರಲ್ಲಿ ಕುಟುಂಬದವರು ಮತ್ತು ನೆರೆಹೊರೆಯವರು ಭಾಗಿಯಾಗಿದ್ದಾರೆಂದು ತಿಳಿದಿರುವ ಜನರೊಂದಿಗೆ ಅಧಿಕಾರಿಗಳು ಮಾತನಾಡಿದರು. ನೆರೆಹೊರೆಯವರು ಮದುವೆಯ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದು ಹೇಳಿದರು. ಇದರ ಪರಿಣಾಮವಾಗಿ ಮಾರಿಸಿಯೊ ಅವರ ಹಕ್ಕು ತಿರಸ್ಕರಿಸಲ್ಪಟ್ಟಿತು. ಆದರೆ ಈಗ ಇದನ್ನು ಸಾಬೀತುಪಡಿಸಲು ದೇಶದ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ ಮತ್ತು ಪಿಂಚಣಿಯನ್ನು ಖಂಡಿತವಾಗಿ ಪಡೆಯುತ್ತೇನೆ ಎಂದ ಮೌರಿಸಿಯೊ ಹೇಳಿದ್ದಾರೆ.

Tap to resize

Latest Videos

ಈ ಬಗ್ಗೆ ಸ್ಥಳೀಯ ಪತ್ರಿಕೆ ಎಲ್ ಟ್ರಿಬುನೊ ಡಿ ಸಾಲ್ಟಾಗೆ ಮಾತನಾಡಿರುವ ಮೌರಿಸಿಯೊ, 'ನನ್ನ ಜೀವನಕ್ಕೆ ಯೋಲಾಂಡಾ ದೊಡ್ಡ ಬೆಂಬಲ ನೀಡಿದ್ದರು. ನನ್ನ ಮದುವೆಯಾಗುವುದು ಆಕೆಯ ಕೊನೆಯ ಆಸೆಯಾಗಿತ್ತು. ನಾನು ಯೋಲಾಂಡಾರನ್ನು ನನ್ನ ಹೃದಯದಿಂದ ಪ್ರೀತಿಸಿದೆ. ಅವರ ಸಾವಿನಿಂದ ನನ್ನ ಜೀವನದುದ್ದಕ್ಕೂ ದುಃಖಿಸುತ್ತೇನೆ' ಎಂದು ಹೇಳಿದ್ದಾರೆ.

ಮುದ್ದಾಗಿ ಬೆಳೆಸಿದ ಮಗನನ್ನೇ ಮದುವೆಯಾದ 53 ವರ್ಷದ ತಾಯಿ!

ನಾನು ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿದಾಗ, ನಾನು ಎಲ್ಲಾ ಅಗತ್ಯ ದಾಖಲೆಗಳನ್ನು ತೋರಿಸಿದ್ದೇನೆ, ಆದರೆ, ಇನ್ನೂ ಪಿಂಚಣಿ ಪಡೆಯುವಲ್ಲಿ ಸಮಸ್ಯೆ ಆಗುತ್ತಿದೆ. ಯೋಲಾಂಡಾ 90 ವರ್ಷಕ್ಕಿಂತ ಮೇಲ್ಪಟ್ಟಿರಬಹುದು ಆದರೆ ಆಕೆ ಹೃದಯದಲ್ಲಿ ಚಿಕ್ಕವಳಾಗಿದ್ದಳು. ನಮ್ಮ ಮದುವೆಯಲ್ಲಿ ಯಾವುದೇ ಕಾನೂನು ಸಮಸ್ಯೆ ಬರಬಾರದು ಎಂದು ಬಯಸಿದ್ದಳು. ನನ್ನ ಕಾನೂನು ಅಧ್ಯಯನಕ್ಕೆ ಹಣ ಪಾವತಿಸಲು ಸಹಾಯ ಮಾಡಲು ಕೇಳಿದಾಗ ನಾನು ಹಾಗೂ ಯೊಲಾಂಡಾ ಮದುವೆಯಾಗಲು ನಿರ್ಧರಿಸಿದೆವು ಎಂದು ಮಾರಿಸಿಯೊ ಹೇಳಿದ್ದರು. ನನ್ನ ಪಾಲಕರು ಬೇರ್ಪಟ್ಟ ಬಳಿಕ, ನಾನು ಅಧ್ಯಯನವನ್ನು ಬಿಡಲು ಬಯಸಿದ್ದೆ ಈ ವೇಳೆ ಯೋಲಾಂಡಾ ಸಹಾಯ ಮಾಡಿದ್ದರು ಎಂದಿದ್ದಾರೆ.

ಪತ್ನಿ ಸಾರಾಗೆ ವಿಚ್ಛೇದನ ನೀಡಿರುವ ಸಚಿನ್‌ ಪೈಲಟ್‌, ನಾಮಪತ್ರದಿಂದ ಬಯಲಾಯ್ತು ರಹಸ್ಯ!

click me!