
ನೀವು ಒಬ್ಬ ವ್ಯಕ್ತಿಯೊಂದಿಗೆ ಸಂಬಂಧ (Relationship) ಇಟ್ಟುಕೊಂಡಿದ್ದೀರ ಎಂದಾದರೆ ಅವರ ಮೇಲೆ ಸಂಪೂರ್ಣ ನಂಬಿಕೆ ಇರಿಸಿರುತ್ತೀರಿ. ನಿಮ್ಮ ಪ್ರತಿ ಸುಖ-ದುಃಖಗಳಲ್ಲಿ ಅವರಿಗೆ ಮೊದಲ ಆದ್ಯತೆ ನೀಡುತ್ತೀರಿ. ಹಾಗೂ ಅವರಿಗೂ ಕೂಡ ನೀವು ಮೊದಲ ಆದ್ಯತೆ ಎಂದು ಭಾವಿಸಿರುತ್ತೀರಿ. ಆದರೆ ಆದ್ಯತೆ (Preference) ಹಾಗೂ ಆಯ್ಕೆ (Option) ಇವೆರಡರ ನಡುವೆ ವ್ಯತ್ಯಾಸವಿದೆ. ಬೇರೊಬ್ಬರ ಜೀವನದಲ್ಲಿ ನೀವು ಆದ್ಯತೆಯಾಗಿರಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ, ಅವರು ನಿಮ್ಮನ್ನು ಯಾವ ರೀತಿಯಲ್ಲಿ ಪರಿಗಣಿಸಿದ್ದಾರೆ ನೀವು ಅವರಿಗೆ ಬರಿಯ ಆಯ್ಕೆ ಮಾತ್ರವೇ ಅಥವಾ ಮೊದಲ ಆದ್ಯತೆಯೇ ಎಂಬ ವಿಷಯವನ್ನು ಸರಿಯಾಗಿ ತಿಳಿದುಕೊಳ್ಳಿ. ಈ ಕೆಲವು ಅಂಶಗಳನ್ನು ಪರಿಗಣಿಸಿದರೆ ನೀವು ಅವರ ಆಯ್ಕೆಯಾ ಅಥವಾ ಆದ್ಯತೆಯೇ ಎಂಬುದರ ಕುರಿತು ನಿಮಗೆ ಅರಿವಾಗುತ್ತದೆ.
ನಿಮ್ಮ ಕಡೆಯಿಂದ ಮಾತ್ರ ಪ್ರಯತ್ನವಿದೆ (Effort)
ನಿಮ್ಮ ಕಡೆಯಿಂದ ಮಾತ್ರ ಈ ಸಂಬಂಧವನ್ನು ಉಳಿಸುವ ಕಡೆಗೆ ಹೆಚ್ಚಿನ ಪ್ರಯತ್ನವಿದೆ. ಅಂದರೆ, ಪ್ರತಿ ಬಾರಿಯು ನೀವೇ ಕರೆ ಮಾಡಿ ಮಾತನಾಡುತ್ತಿದ್ದೀರಿ, ಪ್ರತಿ ದಿನ ನೀವೇ ಮೊದಲ ಸಂದೇಶ (Message) ಕಳುಹಿಸುತ್ತಿದ್ದೀರಿ, ಯಾವಾಗಲೂ ನೀವೇ ಅವರನ್ನು ಭೇಟಿ ಮಾಡಲು ದಿನಾಂಕವನ್ನು ಗುರುತಿಸಿ ಸಿದ್ಧತೆ ನಡೆಸುತ್ತಿದ್ದೀರಿ ಹೀಗೆ ಎಲ್ಲಾ ರೀತಿಯಲ್ಲಿಯೂ ನೀವೇ ಅವರನ್ನು ಮಾತಿಗೆ ಕರೆಯುತ್ತಿದ್ದೀರಿ. ಅವರು ನಿಮ್ಮನ್ನು ಮಾತನಾಡಿಸುವ ಅಥವಾ ಭೇಟಿ ಮಾಡುವ ಪ್ರಯತ್ನ ಮಾಡುತ್ತಿಲ್ಲ ಎಂದಾದರೆ ನೀವು ಅವರ ಮೊದಲ ಆದ್ಯತೆ ಅಲ್ಲ ಎಂಬುದು ಖಚಿತ. ನೀವೇ ಅವರನ್ನು ಸಂಭಾಷಣೆಗೆ (Conversation) ಕರೆಯದೇ ಹೋದರೆ ಅವರು ನಿಮ್ಮನ್ನು ಮಾತನಾಡಿಸುವ ಸಾಧ್ಯತೆ ಇಲ್ಲ. ಈ ವಿಷಯವನ್ನು ನೀವು ಆದಷ್ಟು ಬೇಗ ಅರ್ಥ ಮಾಡಿಕೊಂಡರೆ ಒಳಿತು.
Relationship Tips: 40 ವರ್ಷದ ನಂತರ ಮಹಿಳೆ ಪುರುಷನಿಂದ ಬಯಸುವುದು ಇದನ್ನೇ !
ನಿಮ್ಮನ್ನು ಗಮನಿಸಿದೆ (Recognize) ಇದ್ದಾಗ
ನೀವು ನಿಮ್ಮ ಸಂಗಾತಿಗಾಗಿ ಬಹಳ ಹಾತೊರೆಯುತ್ತಿರುತ್ತೀರಿ ಆದರೆ, ಅವರು ನಿಮ್ಮ ಬಗ್ಗೆ ಗಮನ ನೀಡದೆ ಇರಬಹುದು. ನಿಮ್ಮ ಕಾಳಜಿ, ನೀವು ಅವರೊಂದಿಗೆ ಮಾತನಾಡಲು ಹಂಬಲಿಸುವುದು, ಅವರ ಸಂತೋಷಕ್ಕಾಗಿ ನೀವು ಪ್ರಯತ್ನಿಸುವುದು ಇದು ಯಾವುದೇ ವಿಷಯದ ಕಡೆಗೆ ಅವರು ಗಮನ ನೀಡದೇ ಹೋದಾಗ ನಿಮ್ಮ ಬಗ್ಗೆ ಅವರು ಎಷ್ಟು ಆದ್ಯತೆ ನೀಡುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಿ. ಅವರು ನಿಮಗೆ ಗೌರವ (Respect) ನೀಡದೆ ಇರಬಹುದು. ನಿಮ್ಮ ಆಸೆ, ಅಭಿಲಾಷೆ ಯಾವುದೇ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದಾದರೆ ನೀವು ಅವರಿಗೆ ಮುಖ್ಯವಲ್ಲ ಎಂದರ್ಥ.
ನಿಮ್ಮಿಬ್ಬರ ನಡುವೆ ಭೌತಿಕ (Physical) ಸಂಬಂಧ ಮಾತ್ರವಿದೆ
ಇಬ್ಬರು ಪ್ರೇಮಿಗಳ ನಡುವೆ ದೈಹಿಕ ಸಂಬಂಧ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ಮಾನಸಿಕ ಸಂಬಂಧ ಚೆನ್ನಾಗಿರಬೇಕು. ಆದರೆ, ನಿಮ್ಮಿಬ್ಬರ ನಡುವೆ ದೈಹಿಕ ಸಂಬಂಧ ಮಾತ್ರವಿದೆ ಎಂದಾದರೆ ಅವರು ನಿಮ್ಮನ್ನು ಪ್ರೀತಿಸುತ್ತಿಲ್ಲ, ಬದಲಿಗೆ ನಿಮ್ಮೊಂದಿಗಿನ ಭೌತಿಕ ಸಂಬಂಧ ಮಾತ್ರ ಬಯಸಿದ್ದಾರೆ ಎಂದರ್ಥ. ಅವರ ಜೀವನದಲ್ಲಿ ನಿಮಗೆ ಯಾವುದೇ ಆದ್ಯತೆ ಇಲ್ಲ. ಈ ವಿಷಯವನ್ನು ನೀವು ಬಹು ಬೇಗ ಅರ್ಥಮಾಡಿಕೊಳ್ಳಬೇಕು ಅಷ್ಟೆ.
Scorpions ಸಂಬಂಧದಲ್ಲಿ ಈ ತಪ್ಪು ಮಾಡುತ್ತಾರೆ!
ನೀವು ಯಾವಾಗಲೂ ಅತೃಪ್ತಿಯನ್ನು (Dissatisfied) ಅನುಭವಿಸುತ್ತಿರುವುದು
ನಿಮ್ಮ ಸಂಗಾತಿಯ ಬಗ್ಗೆ ನೀವು ಯಾವುದೇ ನಿರೀಕ್ಷೆಗಳು (Expectations) ಇಟ್ಟುಕೊಂಡರು ಪ್ರತಿಬಾರಿಯೂ ನಿಮಗೆ ಅತೃಪ್ತಿ ಉಂಟಾಗಬಹುದು. ಅಂದರೆ ಅವರು ನಿಮ್ಮ ಎಲ್ಲಾ ಆಸೆ-ಆಕಾಂಕ್ಷೆಗಳಿಗೆ ತಣ್ಣೀರೆರಚಿದ್ದಾರೆ ಅಂದರೆ ನಿಮಗೆ ಸಂತೋಷಕ್ಕಿಂತ ಹೆಚ್ಚಾಗಿ ಅತೃಪ್ತಿಯೇ ಕಾಡುತ್ತಿದೆ ಎಂದರೆ ನಿಮ್ಮ ಸಂಗಾತಿ ನಿಮಗಾಗಿ ಆದ್ಯತೆ ನೀಡುತ್ತಿಲ್ಲ ಎಂದರ್ಥ.
ಪ್ರತಿಯೊಂದು ಸಂಬಂಧದಲ್ಲಿಯೂ ಒಬ್ಬರಿಗೋಸ್ಕರ ಇನ್ನೊಬ್ಬರು ಆದ್ಯತೆ ನೀಡಿಕೊಂಡಾಗ ಮಾತ್ರ ಸಂಬಂಧ ಚೆನ್ನಾಗಿರುತ್ತದೆ. ಇಲ್ಲವಾದರೆ ಇಬ್ಬರಲ್ಲಿ ಒಬ್ಬರು ಪ್ರತಿ ಬಾರಿಯೂ ನೋವನ್ನು ಅನುಭವಿಸಬೇಕಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.