2023ರಲ್ಲಿ ಸಂಭವಿಸಿದ ಪ್ರಮುಖ ಘಟನೆಗಳು ನಮಗೆ ಯಾವ ಪಾಠ ಹೇಳಿಕೊಡಬಲ್ಲವು ಎನ್ನುವುದನ್ನು ತಿಳಿದುಕೊಡುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ಸನ್ನಿವೇಶಗಳನ್ನು ಒಳಗೊಂಡಿರುವ ವೀಡಿಯೋ ಹತ್ತಾರು ಸಂದೇಶ ತಿಳಿಸುವಲ್ಲಿ ಸಫಲವಾಗುತ್ತದೆ.
2023ಕ್ಕೆ ವಿದಾಯ ಹೇಳುವ ಸಮಯ ಬರುತ್ತಿದೆ. ಎಲ್ಲರೂ “ಅದೆಷ್ಟು ಬೇಗ ಒಂದು ವರ್ಷವೇ ಕಳೆದುಹೋಯಿತು, 2023 ಕಳೆದಿದ್ದೇ ಗೊತ್ತಾಗಲಿಲ್ಲ’ ಎಂದು ಅಚ್ಚರಿ ಪಡುತ್ತಿದ್ದೇವೆ. ಎಷ್ಟೋ ಜನರ ಬದುಕಲ್ಲಿ ಈ ವರ್ಷದಲ್ಲಿ ಅನಿರೀಕ್ಷಿತ ತಿರುವು ಉಂಟಾಗಿರಬಹುದು, ಜೀವನವಿಡೀ ನೆನಪಿರುವಂತಹ ಘಟನೆಗಳು ಸಂಭವಿಸಿರಬಹುದು. ಖುಷಿಯಾದದ್ದು, ನೋವಿನದ್ದು, ದುಃಖ ಪಡುವಂಥದ್ದು ಏನೇ ಆಗಿರಬಹುದು. ಆದರೆ, ವರ್ಷವೊಂದು ಕಳೆದೇ ಹೋಗುತ್ತಿದೆ. ಹೊಸ ವರ್ಷಕ್ಕಾಗಿ ಹಲವು ನಿರ್ಧಾರಗಳನ್ನು ಕೈಗೊಂಡಿರಬಹುದು. ಆದರೆ, ಅದಕ್ಕೂ ಮುನ್ನ, 2023ರಿಂದ ಕಲಿತುಕೊಳ್ಳಬೇಕಾದ ಪಾಠಗಳ ಬಗ್ಗೆ ಗಮನ ಹರಿಸಬೇಕು. ಎಲ್ಲರೂ ತಮ್ಮ ತಮ್ಮ ಅನುಭವಗಳಿಂದ ಪಾಠ ಕಲಿಯುತ್ತಲೇ ಇರುತ್ತಾರೆ. ಹಾಗೆಯೇ, ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳಿಂದಲೂ ನಾವು ಕಲಿತುಕೊಳ್ಳುವಂಥದ್ದು ಸಾಕಷ್ಟಿದೆ. 2023ರಿಂದಲೂ ನಾವು ಕಲಿಯುವಂಥದ್ದು ಸಾಕಷ್ಟಿದೆ ಎನ್ನುವ ವೀಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ. 2023ರಲ್ಲಿ ಸಂಭವಿಸಿದ ಕೆಲವೇ ಕೆಲವು ಪ್ರಮುಖ ಸಂದರ್ಭಗಳ ತುಣುಕುಗಳನ್ನು ಇಟ್ಟುಕೊಂಡು ಮಾಡಿರುವ ಈ ವೀಡಿಯೋದಲ್ಲಿ ಹಲವು ಸಂದೇಶಗಳು ಅಡಕವಾಗಿರುವುದು ವಿಶೇಷ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪೋಸ್ಟ್ ಮಾಡಿದ ಕಿರು ಅವಧಿಯಲ್ಲೇ 1 ಕೋಟಿ 80 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು (Video) ವೀಕ್ಷಣೆ ಮಾಡಿದ್ದಾರೆ. ಇದು ಅತ್ಯಂತ ಮನೋಜ್ಞವಾಗಿಯೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ವೀಡಿಯೋ ಆರಂಭವಾಗುವುದು ನಟಿ ಕಿಯಾರಾ (Kiyara) ಅಡ್ವಾಣಿ ಹಾಗೂ ಸಿದ್ಧಾರ್ಥ್ (Sidharth) ಮಲ್ಹೋತ್ರಾ ವಿವಾಹದ ಸನ್ನಿವೇಶದಿಂದ ಎನ್ನುವುದು ವಿಶೇಷ. ಅವರಿಬ್ಬರೂ ಪರಸ್ಪರ ಪ್ರೀತಿಯಿಂದ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ ನಮಸ್ಕಾರ ಮಾಡಿಕೊಳ್ಳುತ್ತಿರುವ ಕ್ಷಣವೊಂದು ಈ ಹಿಂದೆಯೂ ಸಾಕಷ್ಟು ವೈರಲ್ (Viral) ಆಗಿತ್ತು. ಆ ಕ್ಷಣದಿಂದ ವೀಡಿಯೋ ಆರಂಭವಾಗುತ್ತದೆ, ಜತೆಗೆ “ಸ್ಥಿರವಾಗುವವರೆಗೂ (Permanent) ಅದನ್ನು ಖಾಸಗಿಯಾಗಿಡು’ ಎನ್ನುವ ಸಂದೇಶವಿದೆ.
undefined
ಇದ್ದಕ್ಕಿದ್ದಂತೆ ರಕ್ತದಂತೆ ಕೆಂಪಾಯ್ತು ನದಿ..ಘಟನೆಯ ಹಿಂದಿದೆ ನಿಗೂಢ ಕಾರಣ!
ಯಾವುದೇ ವಿಚಾರವಾದರೂ ಅದು ಶಾಶ್ವತ ಎಂದೆನಿಸುವ ತನಕವೂ ಅದನ್ನು ಬಹಿರಂಗಪಡಿಸಬಾರದು ಎನ್ನುವ ಸಂದೇಶ ನೀಡಲಾಗಿದೆ. ಇದು ಅವರ ಮದುವೆಯಿಂದ ಪಡೆಯಬಹುದಾದ ಸಂದೇಶವೂ ಹೌದು. ಏಕೆಂದರೆ, ಕಿಯಾರಾ ಮತ್ತು ಸಿದ್ಧಾರ್ಥ್, ಮದುವೆಯವರೆಗೂ ತಮ್ಮ ಸಂಬಂಧವನ್ನು ಎಲ್ಲಿಯೂ ದೃಢಪಡಿಸಿರಲಿಲ್ಲ.
ಬಳಿಕ, ಚಂದ್ರಯಾನ-3 ಯಶಸ್ಸಿನ (Chandrayaan Success) ಕ್ಷಣಗಳು ಬರುತ್ತವೆ. ಅದರಲ್ಲಿ, “ಸೋಲುವುದು (Failure) ಸಂಗತಿಯೇ ಅಲ್ಲ. ಮತ್ತೆ ಎದ್ದು ನಿಲ್ಲುವುದು ಮುಖ್ಯ’ ಎನ್ನುವ ಸಂದೇಶ (Message) ಹೊತ್ತಿರುವ ಈ ಕ್ಷಣದಲ್ಲಿ ಇಸ್ರೋ ಮುಖ್ಯಸ್ಥ ಸೋಮನಾಥ್ ಹಾಗೂ ಇನ್ನಿತರ ವಿಜ್ಞಾನಿಗಳ ಸಂಭ್ರಮದ ಸಮಯ ದಾಖಲಾಗಿದೆ. ಚಂದ್ರಯಾನ- 2 ಮಿಷನ್ ಸೋಲಿನ 4 ವರ್ಷಗಳ ಬಳಿಕ ಚಂದ್ರಯಾನ-3 ಯಶಸ್ಸು ಪಡೆದು ಮೈಲಿಗಲ್ಲು ಸಾಧಿಸಿತ್ತು.
ಬಾಲಿವುಡ್ ಬಾದ್ ಶಾ ಎಂದೇ ಕರೆಸಿಕೊಳ್ಳುವ ಶಾರುಖ್ ಖಾನ್ ಚಿತ್ರಗಳು (Films) ಇತ್ತೀಚೆಗೆ ಸತತವಾಗಿ ಸೋಲು ಕಾಣುತ್ತಿದ್ದವು. ಆದರೆ, ಪಠಾಣ್ ಚಿತ್ರ ಇದಕ್ಕೆ ಬ್ರೇಕ್ ಹಾಕಿದ್ದಲ್ಲದೆ, ಅಭೂತಪೂರ್ವ ಸಕ್ಸಸ್ ಕಂಡಿತು. ಇದರಿಂದ ಕಲಿತುಕೊಳ್ಳಬೇಕಾದದ್ದು ಏನೆಂದರೆ, “ಹಿನ್ನಡೆಯಾಗುವುದಕ್ಕಿಂತಲೂ ಮರಳಿ ಬರುವುದು ಹೆಚ್ಚು ದೃಢವಾಗಿರುತ್ತದೆ’ ಎಂದು. ಜತೆಗೆ, ವಿರಾಟ್ ಕೊಹ್ಲಿ ದಾಖಲೆಯ 49ನೇ ಶತಕ ಸಿಡಿಸಿದ್ದ ಕ್ಷಣವೂ ಇದರಲ್ಲಿದೆ.
ಹೆಣ್ಣು ಹೆತ್ತವಳಿಗೆ ನಡುರಸ್ತೆಯಲ್ಲೇ ಕಾಲಿನಿಂದ ಒದ್ದು ಚಿತ್ರಹಿಂಸೆ! ವಿಡಿಯೋ ವೈರಲ್
ಶ್ರಮಪಟ್ಟರೂ ಪ್ರತಿಫಲ ಇಲ್ಲ: ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ಸೋಲನ್ನು ಅನುಭವಿಸಿದ ನೋವಿನ ಕ್ಷಣವೂ ಮಹತ್ವದ ಕತೆ ಹೇಳುತ್ತದೆ. ವಿಶ್ವಕಪ್ ನ ಆರಂಭದಿಂದಲೂ ಪ್ರತಿ ಮ್ಯಾಚ್ ಗೆಲ್ಲುತ್ತ ಬಂದ ಭಾರತ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋತಿತಲ್ಲ, ಅದು ನಮಗೊಂದು ಉತ್ತಮ ಸಂದೇಶ ನೀಡಬಲ್ಲದು. “ಕೆಲವು ಬಾರಿ ನೀವು ಎಷ್ಟು ಶ್ರಮ (Hard) ಹಾಕಿ ಪ್ರಯತ್ನಿಸಿದರೂ ಅದಕ್ಕೆ ಯಾವುದೇ ಬೆಲೆ (Value) ಇರುವುದಿಲ್ಲ’ ಎನ್ನುವ ನುಡಿ ಹಾಕಲಾಗಿದೆ. ಕೊನೆಯಲ್ಲಿ ರೋಹಿತ್ ಶರ್ಮ ಕಣ್ಣೀರು ಹಾಕುತ್ತ ಪೆವಿಲಿಯನ್ ಗೆ ನಡೆದುದನ್ನು ಇದು ಒಳಗೊಂಡಿದೆ. ಹೀಗೆ, ಕೆಲವೇ ಸನ್ನಿವೇಶಗಳನ್ನು ಒಳಗೊಂಡ ಈ ವೀಡಿಯೋ ಎಲ್ಲರ ಮನಸೂರೆಗೊಂಡಿದೆ