ಸಾಮಾಜಿಕ ಜಾಲತಾಣದಲ್ಲಿ ಖಾತೆ ಇದೆ ಅಂದ್ರೆ ಟ್ರೋಲ್ ಆಗೋಕೆ ಸಿದ್ದ ಇರ್ಬೇಕು. ಟ್ರೋಲರ್ ಮಾತನ್ನು ಸಹಿಸಿಕೊಳ್ಳುವ ಶಕ್ತಿ ಇರ್ಬೇಕು. ನಾನಾ ರೀತಿ ಟ್ರೋಲ್ ಮಾಡುವ ಜನರಿಂದ ಬೇಸತ್ತ ಈ ವ್ಯಕ್ತಿಯೊಬ್ಬ ಅಚ್ಚರಿ ಕೆಲಸ ಮಾಡಿದ್ದಾನೆ.
ಸಮಾಜದಲ್ಲಿ ಪ್ರತಿಯೊಬ್ಬರೂ ನಮ್ಮನ್ನು ಪ್ರೀತಿಸಬೇಕು ಎಂದೇನಿಲ್ಲ. ಎಲ್ಲರಿಗೆ ಇಷ್ಟವಾಗುವಂತೆ ಬದುಕಲು ನಮ್ಮಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರ ಆಲೋಚನೆ, ಆಸಕ್ತಿ ಭಿನ್ನವಾಗಿರುತ್ತದೆ. ನಮಗೆ ಇಷ್ಟವಾಗುವ ವಿಷ್ಯಗಳು ಬೇರೆಯವರಿಗೆ ಕಷ್ಟವಾಗಬಹುದು. ತಮ್ಮ ಸುತ್ತಲಿನ ಜನರು ಖುಷಿಯಾಗಿರೋದನ್ನು ಇನ್ನೊಬ್ಬರು ಸಹಿಸೋದಿಲ್ಲ. ನಮ್ಮ ಖುಷಿಯನ್ನು ಅವರು ದ್ವೇಷಿಸುತ್ತಾರೆ. ಇದೇ ಕಾರಣಕ್ಕೆ ವೈಯಕ್ತಿಕ ಜೀವನದ ಸಂತೋಷವನ್ನು ಎಲ್ಲೆಡೆ ಹಂಚಿಕೊಳ್ಳಬಾರದು ಎಂದು ದೊಡ್ಡವರು ಹೇಳ್ತಾರೆ. ಆದ್ರೆ ಇದು ಸಾಮಾಜಿಕ ಜಾಲತಾಣದ ಯುಗ. ಕುಳಿತುಕೊಳ್ಳೋದು, ನಿಲ್ಲೋದ್ರಿಂದ ಹಿಡಿದು ಪ್ರತಿಯೊಂದು ವಿಷ್ಯವನ್ನೂ ಆಪ್ತರ ಬದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋದನ್ನು ಜನರು ಇಷ್ಟಪಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ನಮ್ಮ ಹಿತೈಶಿಗಳಲ್ಲ. ನಾವು ಹಾಕುವ ಫೋಟೋ, ವಿಡಿಯೋಗಳಿಗೆ ಎಲ್ಲರೂ ಲೈಕ್ ನೀಡದಿರಲು ಇದೇ ಕಾರಣವಾಗಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಸಕಾರಾತ್ಮಕ ಕಮೆಂಟ್ ಗಿಂತ ನಕಾರಾತ್ಮಕ ಕಮೆಂಟ್ ಗಳೇ ಹೆಚ್ಚು. ಪ್ರಸಿದ್ಧಿ ಪಡೆದಿರುವ ವ್ಯಕ್ತಿಗಳು, ಸೆಲೆಬ್ರಿಟಿಗಳಿಗೆ ಇದು ಕಾಮನ್. ಅವರು ಏನು ಮಾಡಿದ್ರೂ ಟ್ರೋಲ್ ಆಗ್ತಾರೆ. ಆದ್ರೂ ಅನೇಕ ಬಾರಿ ಈ ಟ್ರೋಲ್ ಅವರನ್ನು ಖಿನ್ನತೆಗೆ ನೂಕುತ್ತದೆ. ಇನ್ನು ಸಾಮಾನ್ಯ ವ್ಯಕ್ತಿಗಳು ಇಂಥ ಕಮೆಂಟ್ ಗಳನ್ನು ಎದುರಿಸಲು ಹೆಚ್ಚು ಧೈರ್ಯ ಮಾಡ್ಬೇಕು. ಕಮೆಂಟ್ ಗಳಿಗೆ ಉತ್ತರಿಸುವ ಶಕ್ತಿ ಇರಬೇಕು. ಇಪ್ಪತ್ತೆರಡು ಮಕ್ಕಳನ್ನು ಹೊಂದಿರುವ ಈ ವ್ಯಕ್ತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಕಮೆಂಟ್ ಗೆ ಬೇಸತ್ತು ಒಂದು ಪುಸ್ತಕವನ್ನೇ ಬರೆದಿದ್ದಾನೆ. ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಿದ್ದ ವ್ಯಕ್ತಿಗೆ ಅದು ಬೇಸರತರಿಸಿದ್ರೆಯಾದ್ರೂ ಉತ್ತಮ ಅನುಭವ ನೀಡಿದೆ.
ಬ್ರಿಟನ್ (Britain) ನ ಸ್ಯೂ ಮತ್ತು ನೋಯೆಲ್ ರಾಡ್‌ಫೋರ್ಡ್ ಟ್ರೋಲರ್ ದಂಪತಿ ಬಾಯಿಗೆ ಆಹಾರ (Food) ವಾದ ವ್ಯಕ್ತಿಗಳು. ಅವರಿಗೆ ಇಪ್ಪತ್ತೆರಡು ಮಕ್ಕಳಿದ್ದಾರೆ. ದೊಡ್ಡ ಮಗ ಕ್ರಿಸ್ ವಯಸ್ಸು 34 ವರ್ಷ. ಕಿರಿಯ ಮಗ ಹೈಡಿ ವಯಸ್ಸು ಮೂರು ವರ್ಷ. ಅವರೆಲ್ಲರೂ ಐಷಾರಾಮಿ (Luxury) ಜೀವನ ನಡೆಸುತ್ತಿದ್ದಾರೆ. ಹಾಗಂತ ಅವರು ಶ್ರೀಮಂತರಲ್ಲ. ನೋಯೆಲ್ ರಾಡ್‌ಫೋರ್ಡ್ ಅಂಗಡಿಯಲ್ಲಿ ವ್ಯಾಪಾರ ನಡೆಸ್ತಾರೆ. ಇಪ್ಪತ್ತೆರಡು ಮಕ್ಕಳಿದ್ರೂ ಕುಟುಂಬಸ್ಥರ ಮೋಜು – ಮಸ್ತಿಗೆ ಕೊರತೆ ಇಲ್ಲ. ಆಗಾಗ ಪ್ರವಾಸಕ್ಕೆ ಹೋಗುವ ಅವರು, ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಈ ದಂಪತಿ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ನಲ್ಲಿ ತಮ್ಮ ಸುಂದರ ಕ್ಷಣಗಳನ್ನು ಹಂಚಿಕೊಳ್ತಾರೆ.
undefined
ಈ ರಾಶಿಯ ಜನರು ಸುಳ್ಳುಗಾರರು, ಮೋಸ ಮಾಡುವುದರಲ್ಲಿ ಎಕ್ಸ್‌ಪರ್ಟ್
ಸಾಮಾಜಿಕ ಜಾಲತಾಣದಲ್ಲಿ ಇವರ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆ. ಆದ್ರೆ ದ್ವೇಷ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ಅನೇಕರು ಇವರ ಐಷಾರಾಮಿ ಜೀವನದ (Luxurious Life) ಬಗ್ಗೆ ಕಮೆಂಟ್ ಮಾಡ್ತಾರೆ. ಟ್ರೋಲರ್ (Troller) ಕಮೆಂಟ್ ನೋಡಿ ನೋಡಿ ಈ ದಂಪತಿ ಬೇಸತ್ತಿದ್ದಾರೆ. ಟ್ರೋಲರ್ ಗೆ ಸರಿಯಾಗಿ ಉತ್ತರ ನೀಡುವ ಅವರು ಅದ್ರಲ್ಲಿ ಸಾಕಷ್ಟು ಅನುಭವಪಡೆದಿದ್ದಾರೆ. ಟ್ರೋಲರ್ ದ್ವೇಷ, ಅವರ ಅಸೂಯೆ ಬಗ್ಗೆ ಸ್ಯೂ ಮತ್ತು ನೋಯೆಲ್ ರಾಡ್‌ಫೋರ್ಡ್, ಪುಸ್ತಕ ಬರೆದಿದ್ದಾರೆ. ಆನ್ಲೈನ್ ಟ್ರೋಲಿಂಗ್ ಬಗ್ಗೆ ಅವರು ದಿ ರಾಡ್‌ಫೋರ್ಡ್ಸ್: ಮೇಕಿಂಗ್ ಲೈಫ್ ಕೌಂಟ್ ಎಂಬ ಪುಸ್ತಕ ಬರೆದಿದ್ದಾರೆ. ಆನ್ಲೈನ್ ದ್ವೇಷದ ಬಗ್ಗೆ ಪುಸ್ತಕದಲ್ಲಿ ಅವರು ವಿವರವಾಗಿ ಬರೆದಿದ್ದಾರೆ.
ನಿದ್ದೆ ಕಡಿಮೆಯಾದ್ರೆ ಹಾರ್ಟ್ ಅಟ್ಯಾಕ್ ಆಗುತ್ತಾ? ನಿಮ್ಮ ವಯಸ್ಸಿಗೆ ನೀವೆಷ್ಟು ಸಮಯ ನಿದ್ರಿಸಬೇಕು?
ಈ ದಂಪತಿ ಇನ್ಸ್ಟಾ (Instagram) ಮತ್ತು ಫೇಸ್ಬುಕ್ (Facebook) ನಲ್ಲಿ ಮಾತ್ರ ಖಾತೆ ಹೊಂದಿದ್ದಾರೆ. ಎಕ್ಸ್ ನಲ್ಲಿ ಅವರು ಖಾತೆ ಹೊಂದಿಲ್ಲ. ತುಂಬಾ ವರ್ಷಗಳ ಹಿಂದೆ ಎಕ್ಸ್ ನಲ್ಲಿದ್ದ ಖಾತೆಯನ್ನು ಡಿಲಿಟ್ ಮಾಡಲಾಗಿದೆ. ಎಕ್ಸ್ ತುಂಬಾ ವಿಷಕಾರಿ ವೇದಿಕೆ ಎಂದು ನೋಯೆಲ್ ರಾಡ್‌ಫೋರ್ಡ್ ಹೇಳಿದ್ದಾರೆ. ಟ್ರೋಲ್ ಮಾಡಿದ ಯಾವುದೇ ವ್ಯಕ್ತಿಯನ್ನು ನಾನು ಭೇಟಿಯಾಗಿಲ್ಲ. ಅವರು ನಕಲಿ ಖಾತೆ ಹೊಂದಿರುತ್ತಾರೆ. ತಮ್ಮ ಸಾಮಾಜಿಕ ಖಾತೆ ಒಳ್ಳೆಯದು, ಉಳಿದದ್ದೆಲ್ಲ ಕೆಟ್ಟದ್ದು ಎಂದು ಭಾವಿಸ್ತಾರೆ ಎಂದು ನೋಯೆಲ್ ರಾಡ್‌ಫೋರ್ಡ್ ಹೇಳಿದ್ದಾರೆ.