ಹತ್ತಕ್ಕೂ ಹೆಚ್ಚು ಪುರುಷರು ನನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ರು. ಇದ್ಯಾಕಪ್ಪಾ ಹೀಗೆ ಅಂತ ಪರಿಶೀಲನೆ ಮಾಡಿದ ಪೊಲೀಸರೇ ಬೇಸ್ತುಬಿದ್ರು. 27 ಮಂದಿಗೂ ಇದ್ದಿದ್ದು ಒಬ್ಬಳೇ ಹೆಂಡ್ತಿ.
ನೀವು ಮದುವೆಯ ಕುರಿತಾಗಿರುವ 'ಡಾಲಿ ಕಿ ಡೋಲಿ' ಹಿಂದಿ ಸಿನಿಮಾ ನೋಡಿದ್ದೀರಾ. ಇಲ್ಲಾಂದ್ರೆ ಬಿಡಿ. ಕಥೆಯೇನೂಂತ ಸಿಂಪಲ್ ಆಗಿ ನಾವ್ ಹೇಳ್ತೀವಿ. ಇದರಲ್ಲಿ ಕಥಾ ನಾಯಕಿ ಕಡಿಮೆ ಸಮಯದಲ್ಲಿ ಹೆಚ್ಚು ದುಡ್ಡು ಮಾಡುವ ದುರಾಸೆಗೆ ಬಿದ್ದಿರುತ್ತಾಳೆ. ಅದಕ್ಕಾಗಿ ಆಕೆ ಕಂಡುಕೊಳ್ಳೋ ದಾರಿ ಮದುವೆ. ಮದುವೆಯಾಗದ ಹುಡುಗರನ್ನು ನೋಡಿ, ಪ್ರೀತಿಯಲ್ಲಿ ಬೀಳಿಸಿ ಸಾಂಪ್ರದಾಯಿಕವಾಗಿ ಮದುವೆಯಾಗುತ್ತಾಳೆ. ಕೊನೆಗೆ ಮದುವೆಯಾದ ನಂತರ ಮನೆಯಲ್ಲಿದ್ದ ಹಣ, ಚಿನ್ನಾಭರಣ ಎಲ್ಲವನ್ನೂ ದೋಚಿಕೊಂಡು ಪರಾರಿಯಾಗುತ್ತಾಳೆ. ಹೀಗೆ ಹಲವಾರು ಪುರುಷರಿಗೆ ಈಕೆ ಮೋಸ ಮಾಡುತ್ತಾ ದುಡ್ಡು ಸಂಪಾದಿಸುತ್ತಿರುತ್ತಾಳೆ. ಸೋನಂ ಕಪೂರ್ ಅಭಿನಯದ ಈ ಸಿನಿಮಾ ಮದುವೆಯ ಹೆಸರಲ್ಲಿ ಪುರುಷರಗೆ ಯುವತಿ ಮೋಸ ಮಾಡುವುದನ್ನು ತೋರಿಸುತ್ತದೆ.
ಸದ್ಯ ಅಂಥಹದ್ದೇ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಆದರೆ ಇಲ್ಲಿ ಯುವತಿ (Girl) ಮೋಸ ಮಾಡಿರೋದು ಒಬ್ಬಿಬ್ಬರಿಗಲ್ಲ. ಭರ್ತಿ 27 ಮಂದಿಗೆ. ಹೌದು, ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ವರದಿಯೊಂದರ ಪ್ರಕಾರ, ಹತ್ತಕ್ಕೂ ಹೆಚ್ಚು ಪುರುಷರು (Men) ನನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು (Complaint) ನೀಡಲು ಬಂದಾಗ ಪ್ರಕರಣ ಬೆಳಕಿಗೆ ಬಂತು. ಪೊಲೀಸರು ಎಲ್ಲರ ಬಳಿಕ ಪತ್ನಿಯ ಫೋಟೋ ತೆಗೆದುಕೊಂಡು ಪರಿಶೀಲಿಸಿದಾಗ ಎಲ್ಲರ ಪತ್ನಿಯೂ ಒಬ್ಬಳೇ ಆಗಿದ್ದಳು.
ಗಂಡನೂ ಬೇಡ, ಈ ಮದ್ವೆನೂ ಬೇಡ; ವಜ್ರದ ನೆಕ್ಲೇಸ್ ಕದ್ದು ಪ್ರೇಮಿಯೊಂದಿಗೆ ನವವಧು ಪರಾರಿ!
ಮದ್ವೆಯಾಗಿ ಹಣ, ಒಡವೆ ದೋಚಿ ಪರಾರಿಯಾಗೋದೆ ಈಕೆಯ ಫುಲ್ ಟೈಂ ಜಾಬ್
ಎಲ್ಲಾ ಪುರುಷರು ತಮಗೆ ಪತ್ನಿ ಮೋಸ ಮಾಡಿದ್ದಾಳೆ ಎಂದು ತಿಳಿದು ಶಾಕ್‌ಗೆ ಒಳಗಾದರು. ಯಾರೂ ಸಹ ಇಂಥಾ ವಂಚನೆಯನ್ನು ನಿರೀಕ್ಷಿಸಿರಲ್ಲಿಲ್ಲ. ಬುದ್ಗಾಮ್‌ನ ಖಾನ್ ಸಾಹಿಬ್‌ನ ಅಬ್ದುಲ್ ಅಹದ್ ಮಿರ್ ಅವರು ಮಾತನಾಡಿ, 'ಕೆಲವು ತಿಂಗಳ ಹಿಂದೆ ಮದುವೆ ದಲ್ಲಾಳಿಯೊಬ್ಬರು ನನ್ನನ್ನು ಸಂಪರ್ಕಿಸಿ ಮಗನಿಗೆ ಹುಡುಗಿಯನ್ನು ಹೇಳಿದರು. ರಾಜೌರಿ ಮಹಿಳೆಯ ಫೋಟೋಗಳನ್ನು ತೋರಿಸಿ ಈಕೆಗೆ ಹುಡುಗನನ್ನು ಹುಡುಕುತ್ತಿರುವುದಾಗಿ ಹೇಳಿದರು. ನಾನು ಅವರ ಮನೆಯ ಮಾಹಿತಿ ಕೇಳಿ, ಮದುವೆ ಮಾಡಿಸಿದೆ' ಎಂದಿದ್ದಾರೆ.
ಅಬ್ದುಲ್ ಅಹದ್ ಮಿರ್ ಘಟನೆಯ ಬಗ್ಗೆ ವಿವರಿಸಿದ್ದಾರೆ. 'ನನ್ನ ಮಗನಿಗೆ ಕೆಲವು ದೈಹಿಕ ಸಮಸ್ಯೆಗಳಿವೆ. ಸ್ಥಳೀಯ ಮಧ್ಯವರ್ತಿಯೊಬ್ಬರು ನನ್ನ ಮಗನಿಗೆ ಮದುವೆ ಮಾಡಿಸುವುದಾಗಿ ಮತ್ತು ನಾನು ಅವನಿಗೆ ಎರಡು ಲಕ್ಷ ಕೊಡಬೇಕು ಎಂದು ಹೇಳಿ ನನ್ನನ್ನು ಸಂಪರ್ಕಿಸಿದರು. ಅದರಂತೆ ನಾನು ಮತ್ತು ಮಗ ರಾಜೌರಿಗೆ ತಲುಪಿದೆವು. ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಿದೆವು. ಆದರೆ, ಮಧ್ಯವರ್ತಿ ಮದುವೆಗೆ ಅಡ್ಡಗಾಲು ಹಾಕುತ್ತಲೇ ಇದ್ದ. ಸ್ಪಲ್ಪ ದಿನಗಳ ನಂತರ ಬಂದು ಹುಡುಗಿ ಅಪಘಾತಕ್ಕೀಡಾಗಿದ್ದಾಳೆ ಮತ್ತು ಅರ್ಧದಷ್ಟು ಹಣವನ್ನು ನನಗೆ ಹಿಂದಿರುಗಿಸಿದ್ದಾಳೆ ಎಂದು ಹೇಳಿದ. ನಂತರ ಇನ್ನೊಬ್ಬ ಹುಡುಗಿಯ ಫೋಟೋಗಳನ್ನು ತೋರಿಸಿದ. ನಾವು ಸಹ ಮದುವೆಯಾಗಲು ಒಪ್ಪಿಕೊಂಡೆವು. ಮದುವೆಯ ನಂತರ ಅದೇ ರಾತ್ರಿ ನಾವೆಲ್ಲರೂ ಕಾಶ್ಮೀರಕ್ಕೆ ತೆರಳಿದೆವು. ಕೆಲವು ದಿನಗಳ ನಂತರ, ಅವಳು ತನ್ನ ಗಂಡನಿಗೆ ಆರೀಗ್ಯ ತಪಾಸಣೆ ಮಾಡಲು ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿದಳು. ಆ ನಂತರ ಆಕೆ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಮದ್ವೆಯಾಗೋದಾಗಿ ನಂಬಿಸಿ ಹಣ ದೋಚ್ತಿದ್ಲು, 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆಯಾಗಿದ್ದ ಚಾಲಾಕಿ!
ಮಹಿಳೆ ಚದೂರ ಬುದ್ಗಾಮ್‌ನಲ್ಲಿ ಹತ್ತು ದಿನ ಮಾತ್ರ ಮನೆಯಲ್ಲಿದ್ದಳು ಎಂದು ಇನ್ನೊಬ್ಬ ಸಂತ್ರಸ್ತೆಯ ಸಹೋದರ ಅಬ್ದುಲ್ ರಶೀದ್ ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಮಹಿಳೆ ಕತ್ತಲಾದ ನಂತರ ಮನೆಯಿಂದ ನಾಪತ್ತೆಯಾಗಿದ್ದಾಗಿ ತಿಳಿಸಿದ್ದಾರೆ. ಹೀಗೆ ಪುರುಷರನ್ನು ಯಾಮಾರಿಸುವ ಮಹಿಳೆಯ ಗ್ಯಾಂಗ್ ಬಹಳ ದೊಡ್ಡದಿದೆ. ಇದರಲ್ಲಿ ಹಲವರು ಶಾಮೀಲಾಗಿದ್ದಾರೆ ಎಂದು ಪುರುಷರ ಪರ ವಕೀಲರು ವಾದಿಸಿದರು. ವಧುವಿನ ನಿಜವಾದ ಹೆಸರು ಯಾರಿಗೂ ತಿಳಿದಿಲ್ಲ ಮತ್ತು ಬದ್ಗಾಮ್‌ನಲ್ಲಿ ಮಾತ್ರ, ಅವರು ದಲ್ಲಾಳಿಗಳ ಸಹಾಯದಿಂದ ಕನಿಷ್ಠ 27 ಪುರುಷರನ್ನು ವಿವಾಹವಾಗಿದ್ದಾರೆ ಎಂದು ಅವರು ಹೇಳಿದರು. ಅದೇನೆ ಇರ್ಲಿ, ಮದ್ವೆ ಹೆಸರಲ್ಲೂ ವಂಚನೆ ನಡೀತಿರೋ ಈ ದಿನಗಳಲ್ಲಿ ಎಚ್ಚರದಿಂದ ಇರೋದು ಒಳಿತು.