'ನನ್ನ ಅತ್ತೆ ಇದನ್ನೇ ಹೇಳ್ತಿರ್ತಾರೆ' ಮಾಳವಿಕಾ ಸಿದ್ಧಾರ್ಥ್ ಬಗ್ಗೆ ಮಾತನಾಡಿದ ಐಶ್ವರ್ಯಾ ಡಿಕೆಶಿ

Published : Sep 03, 2026, 04:10 PM IST
aisshwarya dks hegde

ಸಾರಾಂಶ

ಸಿಎಂ ಡಿಕೆ ಶಿವಕುಮಾರ್‌ ಪುತ್ರಿ ಐಶ್ವರ್ಯಾ ಡಿಕೆಶಿ ಹೆಗ್ಡೆ, ಸೋಮಾರಿತನದಿಂದಲೇ ತಮಗೆ ದೊಡ್ಡ ಆಲೋಚನೆಗಳು ಬರುತ್ತವೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ, ತಮ್ಮ ಅತ್ತೆ ಮಾಳವಿಕಾ ಸಿದ್ಧಾರ್ಥ್‌ ಅವರ ಸಲಹೆಯನ್ನು ಉಲ್ಲೇಖಿಸಿದ್ದಾರೆ.

ಬೆಂಗಳೂರು (ಸೆ.3): ಮಗುವಿನ ಆರೈಕೆಯಲ್ಲೇ ದಿನದ ಹೆಚ್ಚಿನ ಸಮಯ ಕಳೆಯುತ್ತಿರುವ ಸಿಎಂ ಡಿಕೆ ಶಿವಕುಮಾರ್‌ ಪುತ್ರಿ ಐಶ್ವರ್ಯಾ ಡಿಕೆಶಿ ಹೆಗ್ಡೆ ಕೆಲ ದಿನಗಳ ಹಿಂದೆ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ನೀವು ತುಂಬಾ ಲೇಜಿ ಅಂತಾ ನಿಮಗೆ ಅನಿಸೋದಿಲ್ವಾ? ಹಾಗಿದ್ರೂ ಎಲ್ಲಾ ಕೆಲಸಗಳಿಗೆ ನೀವು ಸಮಯವನ್ನು ಹೇಗೆ ಮಾಡಿಕೊಳ್ಳುತ್ತೀರಿ ಎಂದು ಒಬ್ಬರು ಕೇಳಿದ್ದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಇದೇ ವೇಳೆ ನನಗೆ ಬಿಗ್ ಐಡಿಯಾಗಳು ಬರೋದೇ ಲೇಜಿ ಆಗಿರುವ ಟೈಮ್‌ನಲ್ಲಿ ಎಂದು ಹೇಳಿದ್ದಾರೆ. ಅಲ್ಲದೆ, ಮೊದಲ ಬಾರಿಗೆ ಅತ್ತೆ ಮಾಳವಿಕಾ ಸಿದ್ಧಾರ್ಥ್‌ ಬಗ್ಗೆಯೂ ಅವರು ವಿಡಿಯೋದಲ್ಲಿ ಮಾತನಾಡಿದ್ದಾರೆ.

ಕಾಮೆಂಟ್‌ಗೆ ಉತ್ತರ ನೀಡಿ ವಿಡಿಯೋ ಮಾಡಿರುವ ಐಶ್ವರ್ಯಾ ಡಿಕೆಶಿ, ಹೌದು ಕೆಲವೊಮ್ಮೆ ನಾನು ತುಂಬಾ ಆಲಸ್ಯ ಮಾಡ್ತೇನೆ. ನನ್ನ ಅತ್ತೆ ಪ್ರತಿ ಬಾರಿ ಕೂಡ ಇದನ್ನ ಹೇಳ್ತಾ ಇರ್ತಾರೆ. ನೀನು ಕೆಲಸದ ಎಲ್ಲಾ ಒತ್ತಡಗಳಿಂದ ಸ್ವಿಚ್‌ ಆಫ್‌ ಆದಾಗ, ನಿನಗೆ ದೊಡ್ಡ ದೊಡ್ಡ ಐಡಿಯಾಗಳು ಬರಲು ಆರಂಭಿಸುತ್ತವೆ ಅಂತಾ. ಅವರು ನನ್ನ ವಿಚಾರದಲ್ಲಿ ಇದನ್ನು ಹೇಳ್ತಾ ಇರ್ತಾರೆ. ಕಳೆದ ಕೆಲವು ವರ್ಷಗಳನ್ನೇ ನೋಡಿದಾಗ ನನಗೆ ಅವರು ಹೇಳಿದ್ದು ನಿಜ ಅಂತಾ ಅನಿಸುತ್ತೆ.

ನನಗೆ ಯಾವಾಗಲಾದರೂ ಹುಷಾರಿಲ್ಲ ಅಂದಾಗ ಮನೆಯಲ್ಲೇ ಸುಮ್ಮನೆ ಮಲಗಿಕೊಂಡು ಇರೋಕೆ ಇಷ್ಟಪಡುತ್ತೇನೆ. ಇವತ್ತು ಕೆಲಸಕ್ಕೆ ಹೋಗೋಕೆ ಇಷ್ಟವಿಲ್ಲ ಅಂದಾಗಲೂ ಸುಮ್ಮನೆ ಮನೆಯಲ್ಲೇ ಇರುತ್ತೇನೆ. ಸುಮ್ಮನೆ ಏನಾದರೂ ಮಾಡ್ತಾ ಇರ್ಬೇಕಾದರೆ, ನನಗೆ ತುಂಬಾ ಇನೋವೇಟಿವ್‌ ಅನ್ನೋ ಐಡಿಯಾಗಳು ಬರಲು ಆರಂಭಿಸುತ್ತದೆ. ಇಂಥ ಆಲಸ್ಯದ ದಿನಗಳಲ್ಲಿ ಒಂದ ಕೆಲವೊಂದು ಐಡಿಯಾಗಳನ್ನು ನಾನು ನನ್ನ ಜೀವದಲ್ಲಿ ಸೂಕ್ತವಾಗಿ ಬಳಸಿಕೊಂಡಿದ್ದೇನೆ. ನನ್ನ ಎಂದಿನ ದಿನನಿತ್ಯದ ಕೆಲಸದಿಂದ ಸ್ವಿಚ್‌ ಆಫ್‌ ಮಾಡಲು ಇದು ಸಹಾಯ ಮಾಡುತ್ತದೆ. ಸುಮ್ಮನೆ ಏಕಾಗ್ರತೆಯಿಂದ ಕುಳಿತುಕೊಂಡು ಕನಸಿನ ಲೋಕವನ್ನು ತೆರೆದಿಡುತ್ತೇನೆ. ಇದಕ್ಕೆ ಲೇಜಿನೆಸ್‌ ಅನ್ನೋದಕ್ಕಿಂತ ಸ್ವಿಚಿಂಗ್‌ ಆಫ್‌ ಅಥವಾ ನಾನಾಗಿಯೇ ಇರೋವಂಥ ಪ್ರಕ್ರಿಯೆ ಅನ್ನಬಹುದು.

ಏನೂ ಕೆಲಸ ಮಾಡದೆ ಸುಮ್ಮನೆ ಮನೆಯಲ್ಲಿ ಬಿದ್ದುಕೊಂಡಿದ್ದಾಗಲೂ ನಿಮ್ಮ ಗುಡ್‌ ವರ್ಷನ್‌ ಹೊರಬರಲು ಸಹಾಯ ಮಾಡುತ್ತದೆ ಅಂತಾ ನನಗೆ ಯಾವಾಗಲೂ ಅನಿಸುತ್ತದೆ.ಒಳ್ಳೆಯ ಸಮತೋಲಿತ ಜೀವನ ಎಂದರೆ ನೀವು ಏನನ್ನಾದರೂ ಮಾಡುತ್ತಿರುವ ಮೂರನೇ ಒಂದು ಭಾಗದಷ್ಟು ಸಮಯ ನೀವು ತುಂಬಾ ಸಂತೋಷವಾಗಿರುತ್ತೀರಿ, ಈ ಸಮಯದ ಬಗ್ಗೆ ಒಳ್ಳೆಯ ಭಾವನೆ ಇರುವುದಿಲ್ಲ ಮತ್ತುಈ ಸಮಯದಲ್ಲಿ ನೀವು ಏನು ಮಾಡುತ್ತೀರಿ ಎಂಬುದರ ಬಗ್ಗೆ ನೀವು ಸರಿಯಾಗಿರುತ್ತೀರಿ. ಆದ್ದರಿಂದ, ಈ ಮೂರು ಸಮತೋಲನ ಇದ್ರೇನೇ ನಾವು ಏನನ್ನಾದರೂ ಮೋಜಿನಿಂದ ಮಾಡಬಹುದು ಮತ್ತು ಅದು ಸುಸ್ಥಿರವಾಗಿರುತ್ತದೆ. ಏಕೆಂದರೆ ನೀವು ಮಾಡುವ ಕೆಲಸವನ್ನು ನೀವು ಯಾವಾಗಲೂ ಸಂತೋಷದಿಂದ ಮಾಡಲು ಸಾಧ್ಯವಿಲ್ಲ. ನೀವು ಮಾಡುವ ಕೆಲಸದಿಂದ ನೀವು ಯಾವಾಗಲೂ ದುಃಖಿತರಾಗಿರಲು ಸಾಧ್ಯವಿಲ್ಲ. ನಿಮಗೆ ಎರಡರ ಸಂಯೋಜನೆಯೂ ಬೇಕು ಎಂದು ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದುನಿಯಾ ವಿಜಯ್ ಡಿವೋರ್ಸ್: ಮಾನಸಿಕ ಕ್ರೌರ್ಯ ಪರಿಗಣಿಸಿದ ಕೋರ್ಟ್‌ಗೆ ಶಿರಸಾಷ್ಟಾಂಗ ನಮನ' ಭಾವುಕ ಪೋಸ್ಟ್!
ಟೆಕ್ಕಿ ಹೆಂಡತಿಯಿಂದಲೇ ತಾಳಿ ಕಟ್ಟಿಸಿಕೊಂಡು ಗೃಹಲಕ್ಷ್ಮಣನಾದ ಉದ್ಯಮಿ ಗಂಡ