ಸೆಕ್ಸ್ ನಂತರ ಹೆಣ್ಮಕ್ಕಳ ತಲೆಯಲ್ಲಿ ಏನೇನೆಲ್ಲ ವಿಚಾರ ಓಡಿದ್ರೆ, ಗಂಡಸರು ಯೋಚನೆ ಮಾಡೋ ರೀತಿನೇ ಬೇರೆ ಇರುತ್ತೆ. ಅದನ್ನವರು ಬಾಯಿಬಿಟ್ಟು ಹೇಳೋದಿಲ್ಲ. ಅಂಥಾ ವಿಚಾರಗಳ್ಯಾವುವು?
ಸೆಕ್ಸ್ ನಂತರದ ಹೆಚ್ಚಿನ ಹೆಣ್ಮಕ್ಕಳ ತಲೆಗೆ ಬರುವ ವಿಚಾರ ಮೊದಲು ಬೆಡ್ ಶೀಟ್ ಚೇಂಜ್ ಮಾಡೋಣ ಅನ್ನೋದಂತೆ. ಇದು ಫನ್ನಿ ಆದ್ರೂ ನಿಜ. ಅಂಥಾ ಒಂದು ಯೋಚನೆ ಮನಸ್ಸಿಗೆ ಬಂದರೂ ಎದ್ದೇಳೋದಕ್ಕೆ ಮನಸ್ಸು ಬರಲ್ವಂತೆ. ಆ ಸೈಲೆನ್ಸ್ ಅನ್ನು, ಆ ಫೀಲ್‌ಅನ್ನು ಇನ್ನಷ್ಟು ಹೊತ್ತು ಎನ್‌ಜಾಯ್ ಮಾಡೋಣ ಅಂತ ಅಂದ್ಕೊಂಡು ಬಿದ್ದುಕೊಳ್ತಾರಂತೆ. ಇನ್ನೂ ಕೆಲವು ಹೆಣ್ಮಕ್ಕಳಿಗೆ ಇನ್ನಷ್ಟು ಟೈಮ್ ಇದು ಇರ್ಬೇಕಿತ್ತು, ನಾಳೆನೂ ಮಾಡಿದ್ರೆ ಹೆಚ್ಚು ತೃಪ್ತಿ ಸಿಗಬಹುದು ಅನಿಸುತ್ತಂತೆ. ಇನ್ನೂ ಕೆಲವರಿಗೆ ಸೆಕ್ಸ್‌ನಲ್ಲಿ ಇಷ್ಟೊಂದು ಖುಷಿ ಇದೆಯಲ್ಲಾ ಕೆಲಸ, ಅದೂ ಇದೂ ಅಂತ ಇದನ್ಯಾಕೆ ಎನ್‌ಜಾಯ್ ಮಾಡ್ತಿಲ್ಲ ಅಂತೆಲ್ಲ ವಿಚಾರಗಳು ಹರಿದಾಡುತ್ತವೆ ಅಂತ ಇತ್ತೀಚಿನ ಸ್ಟಡಿಯೊಂದು ತಿಳಿಸಿದೆ. ಹೆಣ್ಣುಮಕ್ಕಳು ಕೆಲವೊಮ್ಮೆ ಇಂಥಾ ವಿಚಾರಗಳನ್ನು ಹೊರ ಹಾಕ್ತಾರೆ. ಆದರೆ ಗಂಡಸರು ಸೆಕ್ಸ್ ನಂತರದ ವಿಚಾರಗಳನ್ನು ಬಾಯ್ಬಿಡೋದು ಬಹಳ ಕಡಿಮೆ. ಆದರೆ ಸೆಕ್ಸ್ ನಂತರ ಅವರ ತಲೆಯಲ್ಲಿ ಓಡೋ ವಿಚಾರಗಳು ಬಹಳ ಇಂಟರೆಸ್ಟಿಂಗ್ ಆಗಿರುತ್ತವೆಯಂತೆ. ಈ ವಿಚಾರ ಮಹಿಳೆಯರಿಗೆ ಇನ್ನೂ ಇಂಟರೆಸ್ಟಿಂಗ್ ಅನಿಸಬಹುದು. ಕೆಲವೊಮ್ಮೆ ಅವರ ಬಾಡಿ ಲಾಂಗ್ವೇಜ್ ಸಹ ಅವರ ಮನಸ್ಸಲ್ಲಿ ಈಗ ಏನು ವಿಚಾರ ಓಡುತ್ತಿರಬಹುದು ಅನ್ನೋದನ್ನು ಪ್ರಕಟಪಡಿಸುತ್ತದೆ.
ಸಂಗಾತಿಯು ಲೈಂಗಿಕಕ್ರಿಯೆಯ ನಂತರ ನಿಮ್ಮನ್ನು ಅಪ್ಪಿಕೊಂಡರೆ, ನಿಮ್ಮಲ್ಲಿ ಮನಸ್ಸು ಬಿಚ್ಚಿ ಮಾತನಾಡಲು ಬಯಸಿದರೆ ಲೈಂಗಿಕತೆಯ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಅನ್ಯೋನ್ಯತೆ ಇದೆ ಅಂತ ಭಾವಿಸಬಹುದು. ಸೆಕ್ಸ್ ನಂತರ ಆಕೆಯೂ ನನ್ನಷ್ಟೇ ಎಂಜಾಯ್ ಮಾಡಿದ್ದಾಳಾ ಅನ್ನೋದು ಪುರುಷರ ಮನಸ್ಸಿಗೆ ಮೊದಲು ಬರುತ್ತದೆಯಂತೆ. ಲೈಂಗಿಕತೆಯ ನಂತರ ತನ್ನ ಸಂಗಾತಿಯು ತನ್ನಷ್ಟೇ ಆನಂದಿಸಿದ್ದಾಳೆಯೇ ಇಲ್ಲವೋ ಎನ್ನುವುದು ಅವರಿಗೆ ಮುಖ್ಯವಾಗುತ್ತಂತೆ. ಅನೇಕ ಪುರುಷರು ತಮ್ಮ ಸಂಗಾತಿಯು ಅವರೊಂದಿಗೆ ಲೈಂಗಿಕತೆಯನ್ನು ಆನಂದಿಸುತ್ತಾರೆಯೇ ಅಥವಾ ನಿರಾಶೆಗೊಂಡಿದ್ದಾರೆಯೇ ಎಂದು ಚಿಂತಿಸುತ್ತಾರೆ. ಕೆಲವು ಪುರುಷರು ಇದನ್ನು ನೇರವಾಗಿ ತನ್ನ ಸಂಗಾತಿಯಲ್ಲಿ ಕೇಳುತ್ತಾರೆ.
ಇದನ್ನೂ ಓದಿ: ಪುರುಷರು ಸಂಗಾತಿಯನ್ನು ಹೊಗಳೋದು ಸುಮ್ನೆ ಏನಲ್ಲ,ಕಾರಣ ತಿಳ್ಕೊಳ್ಳಿ
ಸೆಕ್ಸ್ ಆದ ಕೂಡಲೇ ಎದ್ದು ಸ್ನಾನ ಮಾಡದಿರುವುದನ್ನು ಚೆನ್ನಾಗಿರಲ್ಲ ಎಂದು ಕೆಲವರು ಭಾವಿಸುತ್ತಾರೆ. ಅಷ್ಟೇ ಅಲ್ಲ, ಸಂಭೋಗದ ನಂತರ, ಇಬ್ಬರೂ ತುಂಬಾ ಬಿಸಿಯಾಗಿರಬಹುದು ಮತ್ತು ಬೆವರಿನಿಂದ ಒದ್ದೆಯಾಗಿರಬಹುದು. ಹಾಗಾಗಿ ಲೈಂಗಿಕತೆಯ ನಂತರ ಸ್ನಾನ ಮಾಡುವುದು ಕೆಲವರಿಗೆ ಅನಿವಾರ್ಯವಾಗಿರುತ್ತದೆ. ಕೆಲವೊಮ್ಮೆ, ಸಂಗಾತಿಯು ಇನ್ನೊಬ್ಬರ ಜೊತೆಗೆ ಸ್ನಾನ ಮಾಡಲು ಬಯಸಬಹುದು. ಇದೂ ಒಂದು ರೀತಿ ರೊಮ್ಯಾಂಟಿಕ್ ಆಗಿರುತ್ತದೆ.
ಆಕೆಯನ್ನು ತಬ್ಬಿಕೊಂಡು ಕಾಲಕಳೆಯಬೇಕೆ ಅಥವಾ ಮಲಗಬೇಕೇ? ಅನ್ನೋ ವಿಚಾರವೂ ಪುರುಷರ ಮನಸ್ಸಿಗೆ ಬರುತ್ತಂತೆ. ಸಂಭೋಗದ ನಂತರ ತಬ್ಬಿಕೊಂಡು ಕಾಲಕಳೆಯಬೇಕೆ ಅಥವ ತಕ್ಷಣವೇ ನಿದ್ರಿಸಬೇಕೆ ಎಂಬ ಬಗ್ಗೆ ಆತ ಸಂಪೂರ್ಣವಾಗಿ ಗೊಂದಲಕ್ಕೊಳಗಾಗಬಹುದು. ಕೆಲವರು ಲೈಂಗಿಕತೆಯ ನಂತರ ಮಲಗಲು ಮತ್ತು ತಮ್ಮದೇ ಆದ ಜಾಗವನ್ನು ಹೊಂದಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರು ಲೈಂಗಿಕತೆಯ ನಂತರ ಎಚ್ಚರಗೊಳ್ಳಲು ಇಷ್ಟಪಡುತ್ತಾರೆ ತನ್ನ ಸಂಗಾತಿಯನ್ನು ತಬ್ಬಿಕೊಳ್ಳಲು ಬಯಸುತ್ತಾರೆ.
ಇದನ್ನೂ ಓದಿ: ಲೈಂಗಿಕ ಕ್ರಿಯೆ ವೇಳೆ ಗಾತ್ರಕ್ಕಿಂತ ಮುಖ್ಯವಾದುದು ಬೇರೆಯೇ ಇದೆ
ಲೈಂಗಿಕ ಕ್ರಿಯೆಯ ಬಳಿಕ ಸಂಗಾತಿ ಸಂಪೂರ್ಣವಾಗಿ ತೃಪ್ತನಾಗಿದ್ದರೆ ವಾಹ್ ಎಂತಹಾ ಅದ್ಭುತ ಸೆಕ್ಸ್ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾನೆ. ಪುರುಷ ಸಂಗಾತಿ ಲೈಂಗಿಕತೆಯ ನಂತರ ಶಾಂತವಾಗಿದ್ದರೆ, ಆತ ಹೆಣ್ಣು ಹಾಸಿಗೆಯಲ್ಲಿ ಮಾಡಿದ ಎಲ್ಲಾ ಅದ್ಭುತ ವಿಷಯಗಳನ್ನು ನೆನಪಿಸಿಕೊಳ್ಳುತ್ತಾನೆ ಅಂತರ್ಥ. ಲೈಂಗಿಕತೆಯ ಸಮಯದಲ್ಲಿ ಹೆಣ್ಣಿನ ಪ್ರತಿಕ್ರಿಯೆ, ಹಾವ ಭಾವಗಳನ್ನು ಅವನು ರಹಸ್ಯವಾಗಿ ಪ್ರಶಂಸಿಸುತ್ತಿರಬಹುದು ಅಥವಾ ಇಬ್ಬರೂ ಪ್ರಯತ್ನಿಸಿದ ಲೈಂಗಿಕ ಪೊಸಿಶನ್ ಹಾಗೂ ಮುಂದಿನ ಬಾರಿ ಪ್ರಯತ್ನಿಸಬಹುದಾದ ಲೈಂಗಿಕ ಪೋಸಿಶನ್ ಬಗ್ಗೆ ಯೋಚಿಸುತ್ತಿರಬಹುದು. ಮಹಿಳೆಯನ್ನುಲೈಂಗಿಕ ಪರಾಕಾಷ್ಠೆಯನ್ನು ತಲುಪುವಂತೆ ಮಾಡುವುದು ಯಾವುದೇ ಪುರುಷನಿಗೆ ದೊಡ್ಡ ಸಾಧನೆಯೇ ಸರಿ. ಯಾಕೆಂದರೆ ಮಹಿಳೆಯರು ಪುರುಷರಷ್ಟು ಬೇಗ ಪರಾಕಷ್ಠೆಯನ್ನು ಹೊಂದುವುದಿಲ್ಲ. ಹೀಗಾಗಿ ಅವಳ ತೃಪ್ತಿಯ ಬಗೆಯೂ ಹೆಚ್ಚು ಯೋಚಿಸಬಹುದು.