Real Story : ನಿಶ್ಚಿತಾರ್ಥದ ನಂತರ `ನೀ ದಪ್ಪಗಿದ್ದೀಯಾ’ ಎನ್ನುತ್ತಿದ್ದಾನೆ ಭಾವಿ ಪತಿ

By Suvarna News  |  First Published Jul 9, 2022, 3:14 PM IST

ಮಂಟಪದಲ್ಲಿ ಅನೇಕ ಮದುವೆ ಮುರಿದು ಬಿದ್ದಿದೆ. ನಿಶ್ಚಿತಾರ್ಥವಾದ್ಮೇಲೆ ದೂರವಾದವರಿದ್ದಾರೆ. ಮದುವೆ ನಂತ್ರ ಪಶ್ಚಾತ್ತಾಪ ಪಡುವ ಬದಲು ಮದುವೆ ಮೊದಲೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ್ರೆ ಒಳ್ಳೆಯದು.
 


ಮದುವೆ (Marriage) ಇಬ್ಬರ ಒಪ್ಪಿಗೆ ಮೇಲೆ ನಡೆಯಬೇಕು. ಪರಸ್ಪರ ಪ್ರೀತಿ (Love), ಗೌರವ (Respect) ಇಲ್ಲವೆಂದ್ರೆ ಆ ಮದುವೆಗೆ ಅರ್ಥವಿಲ್ಲ. ಮದುವೆಗೆ ಮೊದಲೇ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುವ ವ್ಯಕ್ತಿ ಜೊತೆ ಸಂಸಾರ ಶುರು ಮಾಡಿದ್ರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಸೌಂದರ್ಯ ನೋಡಿ ತಾಳಿ ಕಟ್ಟುವ ವ್ಯಕ್ತಿ ಪ್ರಾಮಾಣಿಕವಾಗಿ ಪ್ರೀತಿಸಲು ಸಾಧ್ಯವೇ ಇಲ್ಲ. ಹಾಗೆ ಮದುವೆ ಸಂಬಂಧ ದೀರ್ಘಕಾಲದವರೆಗೆ ಇರಲು ಸಾಧ್ಯವಿಲ್ಲ. ಮಹಿಳೆಯೊಬ್ಬಳು ಮದುವೆಗೂ ಮುನ್ನವೇ ಸಂಗಾತಿ ಪ್ರೀತಿ ಕಳೆದುಕೊಂಡಿದ್ದು ಈಗ ಗೊಂದಲದಲ್ಲಿದ್ದಾಳೆ. ಎಂಗೇಜ್ಮೆಂಟ್ ಆದ್ಮೇಲೆ ಭಾವಿ ಪತಿ ಹೇಗೆ ಬದಲಾಗಿದ್ದಾನೆ ಎಂಬುದನ್ನು ಹೇಳಿರುವ ಆಕೆ ಮುಂದೇನು ಮಾಡ್ಬೇಕೆಂಬ ಗೊಂದಲದಲ್ಲಿದ್ದಾಳೆ. 

ಮೂರನೇ ಭೇಟಿ ನಂತ್ರವೇ ನಿಶ್ಚಿತಾರ್ಥ : ಆಕೆ ಅವಿವಾಹಿತ ಮಹಿಳೆ. ಆಕೆಗೆ ಮದುವೆ ನಿಶ್ಚಯವಾಗಿದೆ. ಆಕೆ ವೈದ್ಯನೊಬ್ಬನನ್ನು ಮದುವೆಯಾಗ್ತಿದ್ದಾಳೆ. ನಿಶ್ಚಿತಾರ್ಥಕ್ಕಿಂತ ಮೊದಲು ಮೂರು ಬಾರಿ ಮಾತ್ರ ಇಬ್ಬರು ಭೇಟಿಯಾಗಿದ್ದರಂತೆ. ಆರಂಭದಲ್ಲಿ ಹೆಚ್ಚು ಕೇರ್ ತೆಗೆದುಕೊಳ್ತಿದ್ದ ಹುಡುಗ ನಿಶ್ಚಿತಾರ್ಥವಾದ್ಮೇಲೆ ಬದಲಾಗಿದ್ದಾನೆ ಎನ್ನುತ್ತಾಳೆ ಆಕೆ.

Tap to resize

Latest Videos

ಇದನ್ನೂ ಓದಿ: ಈ ತಪ್ಪು ಮಾಡದಿದ್ರೆ, ನೀವು ನಿಮ್ಮ ಫಸ್ಟ್ ಲವ್ವಲ್ಲಿ ಫೇಲ್ ಆಗೋಲ್ಲ!

ನಿಶ್ಚಿತಾರ್ಥದ ನಂತ್ರ ಏನಾಯ್ತು ಗೊತ್ತಾ? : ನಿಶ್ಚಿತಾರ್ಥದ ನಂತ್ರ ಡಾಕ್ಟರ್ ವರ್ತನೆ ಬದಲಾಗಿದೆಯಂತೆ. ಮೊದಲು ಆತ್ಮೀಯವಾಗಿ ಮಾತನಾಡ್ತಿದ್ದವನು ಈಗ ಮಾತು ನಿಲ್ಲಿಸಿದ್ದಾನಂತೆ. ಈಕೆ ಕರೆ ಮಾಡಿದ್ರೆ ಮಾತ್ರ ಮಾತನಾಡ್ತಾನಂತೆ. ಆತನ ವರ್ತನೆ ವಿಚಿತ್ರೆವೆನಿಸಿದ ಕಾರಣ ವಿಷ್ಯವನ್ನು ತಂದೆಗೆ ಹೇಳ್ದೆ ಎನ್ನುತ್ತಾಳೆ ಯುವತಿ. ತಂದೆ ಭಾವಿ ಅಳಿಯನನ್ನು ಭೇಟಿಯಾಗಿ ಬಂದಿದ್ದಾನಂತೆ. ಆ ವೇಳೆ ಭರವಸೆ ನೀಡಿದ ವ್ಯಕ್ತಿ, ಮಗಳನ್ನೇ ಮದುವೆಯಾಗ್ತೇನೆ ಎಂದಿದ್ದಾನಂತೆ.

ದಪ್ಪಗಿದ್ದಿದ್ದೇ ತಪ್ಪಾಯ್ತು : ತಂದೆ ಭೇಟಿ ನಂತ್ರವೂ ಭಾವಿ ಪತಿ ಬದಲಾಗಿಲ್ಲ ಎನ್ನುತ್ತಾಳೆ ಯುವತಿ. ಕುಳಿತು ಮಾತನಾಡಿದಾಗ ವಿಷ್ಯ ಹೊರ ಬಂದಿದೆಯಂತೆ. ಹುಡುಗಿ ದಪ್ಪಗಿದ್ದಾಳೆ ಹಾಗೂ ಆಕೆ ಹತಾಶೆಯ ಮುಖ ನನಗೆ ಇಷ್ಟವಾಗ್ತಿಲ್ಲವೆಂದು ಹುಡುಗ ಹೇಳಿದ್ದಾನಂತೆ. ಮದುವೆ ವಿಷ್ಯದಲ್ಲಿ ಈಗ ಗೊಂದಲಾಗ್ತಿದೆ. ಏನು ಮಾಡ್ಬೇಕೆಂದು ಅರ್ಥವಾಗ್ತಿಲ್ಲವೆಂದು ಹೇಳಿದ್ದಾನಂತೆ. ಆತನ ಮಾತು ಕೇಳಿ ನನಗೆ ಬೇಸರವಾಯ್ತು. ದಪ್ಪವಾಗಿರುವುದೇ ತಪ್ಪಾ ಎಂದು ಆಕೆ ಕೇಳಿದ್ದಾಳೆ. 

ಇದನ್ನೂ ಓದಿ: ಗೆಳತಿ ಇನ್ನೊಬ್ಬನನ್ನು ಮದ್ವೆಯಾಗ್ತಿದ್ದಾಳೆ, ಮೂವ್ ಆನ್ ಆಗೋಕಾಗ್ತಿಲ್ಲ ಏನ್ಮಾಡ್ಲಿ ?

ತಜ್ಞರ ಉತ್ತರ : ದೇಹವನ್ನು ಅಗೌರವಿಸಲು ಯಾರಿಗೂ ಅವಕಾಶವಿಲ್ಲ ಎನ್ನುತ್ತಾರೆ ತಜ್ಞರು. ಈಗ್ಲೇ ನಿಮಗೆ ಗೌರವ ನೀಡದ ವ್ಯಕ್ತಿ ಜೊತೆ ಜೀವನ ನಡೆಸುವ ನಿರ್ಧಾರ ತೆಗೆದುಕೊಳ್ಳುವುದು ಮೂರ್ಖತನ ಎನ್ನುತ್ತಾರೆ ತಜ್ಞರು. ತೂಕ ಯಾವುದೇ ಸಮಯದಲ್ಲಿ ಇಳಿಯಬಹುದು. ಆದರೆ ನಿಮ್ಮ ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಅದನ್ನು ಸಹಿಸುವುದು ಕಷ್ಟ. ನೀವು ಸ್ವಲ್ಪ ದಪ್ಪಗಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಸಂಗಾತಿ ನಿಮ್ಮೊಂದಿಗೆ ಮಾತನಾಡುತ್ತಿಲ್ಲ ಎಂದಾದಲ್ಲಿ ನೀವು ಈ ಸಂಬಂಧದ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಮುಖ್ಯ ಎನ್ನುತ್ತಾರೆ ತಜ್ಞರು.  

ಭಾವಿ ಪತಿಯೊಂದಿಗೆ ಒಮ್ಮೆ ಮಾತನಾಡಿ : ನಿಶ್ಚಿತಾರ್ಥವಾಇದೆ, ಇಂತಹ ಪರಿಸ್ಥಿತಿಯಲ್ಲಿ  ಒಮ್ಮೆ ನೀವು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದು ಸೂಕ್ತವೆನ್ನುತ್ತಾರೆ ತಜ್ಞರು. ಅವರ ಮಾತುಗಳನ್ನು ಕೇಳಿದ ನಂತರ ನಿಮ್ಮ ಅಭಿಪ್ರಾಯವನ್ನೂ ಅವರಿಗೆ ಹೇಳಿ. ನಿಮ್ಮ ತೂಕದ ಕಾರಣದಿಂದ ಯಾರಾದರೂ ನಿಮ್ಮನ್ನು ದೂರ ಮಾಡ್ತಿದ್ದರೆ ನೀವು ಅವರ ಹತ್ತಿರಕ್ಕೆ ಹೋಗಿ ಪ್ರಯೋಜನವಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇದು ಒಂದು – ಎರಡು ದಿನದ ವಿಷ್ಯವಲ್ಲ. ಜೀವನ ಪೂರ್ತಿ ಒಟ್ಟಿಗೆ ಬಾಳ್ವೆ ಮಾಡಬೇಕಾಗುತ್ತದೆ. ಹಾಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ ತಜ್ಞರು. 

ನಿಮ್ಮ ಪೋಷಕರೊಂದಿಗೆ ಮಾತನಾಡಿ : ಈ ಸಂಬಂಧದಲ್ಲಿ ಮುಂದುವರಿಯುವ ಮೊದಲು ಆಲೋಚನೆ ಮಾಡಿ. ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗ್ತಿದೆ ಎಂದಾದ್ರೆ ಪಾಲಕರ ಜೊತೆ ಮಾತನಾಡಿ. ನಿಮ್ಮ ಗೊಂದಲಗಳನ್ನು ಅವರಿಗೆ ಹೇಳಿ. ಭಾವಿ ಪತಿಯ ವಿಷ್ಯವನ್ನು ಹೇಳಿ. ಅವರು ನಿಮಗೆ ಸಹಾಯ ಮಾಡಬಹುದು ಎನ್ನುತ್ತಾರೆ ತಜ್ಞರು. 

click me!