ಮೋಸ ಯಾವುದೇ ರೀತಿ ಇರಲಿ, ಮೋಸ ಮೋಸವೆ. ಅದನ್ನು ಯಾರೇ ಮಾಡಿದ್ರೂ ಸಹಿಸೋದು ಕಷ್ಟ. ಈ ಮಹಿಳೆ ಕೂಡ ತನ್ನ ಬಾಯ್ ಫ್ರೆಂಡ್ ಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ಜೊತೆಗೆ ತನ್ನ ಬ್ಯಾಂಕ್ ಖಾತೆ ತುಂಬಿಸಿಕೊಂಡಿದ್ದಾಳೆ.
ಪ್ರೀತಿ – ಮದುವೆ ಸಂಬಂಧದಲ್ಲಿ ಮೋಸಗಳಾಗೋದು ಸಾಮಾನ್ಯ. ಮೋಸ ಹೋದ ಕೆಲವರು ಅಳ್ತಾ ಕೂರುತ್ತಾರೆ. ಮತ್ತೆ ಕೆಲವರು ಸೇಡು ತೀರಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು ಹಂಚಿಕೊಂಡು ಜನರಿಂದ ಸಲಹೆ ಕೇಳ್ತಾರೆ. ಆದ್ರೆ ಈ ಮಹಿಳೆ ಸ್ವಲ್ಪ ಭಿನ್ನವಾಗಿದ್ದಾಳೆ. ಬಾಯ್ ಫ್ರೆಂಡ್ ಮೋಸಕ್ಕೆ ಸೇಡು ತೀರಿಸಿಕೊಂಡಿದ್ದಲ್ಲದೆ ಇದ್ರಿಂದ ಹಣ ಸಂಪಾದನೆ ಮಾಡಿದ್ದಾಳೆ.
ಆಕೆ ಹೆಸರು ಅವಾ ಲೂಯಿಸ್ (Ava Louise.) ತನ್ನ ಕಥೆಯನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾಳೆ ಮಹಿಳೆ. ಮೋಸ (Cheating) ನಮಗೇ ಆಗ್ಬೇಕು ಅಂದೇನಿಲ್ಲ. ನಾವು ನಂಬಿದವರು ಇನ್ನೊಬ್ಬರಿಗೆ ಅಥವಾ ಸರ್ಕಾರಕ್ಕೆ ಮೋಸ ಮಾಡಿದ್ರೂ ನಮಗೆ ಸಹಿಸೋಕೆ ಸಾಧ್ಯವಾಗೋದಿಲ್ಲ. ಕೆಲ ದಿನಗಳ ಹಿಂದೆ ಪತ್ನಿ ವಿಕಲಾಂಗೆಗೆ ಮೋಸ ಮಾಡ್ತಿದ್ದಾಳೆ ಎಂಬುದು ಗೊತ್ತಾಗಿ ಪತಿಯೊಬ್ಬ ಆಕೆಯನ್ನು ಜೈಲಿಗೆ ಕಳುಹಿಸಿದ್ದ. ಈಗ ಅವಾ ಲೂಯಿಸ್ ಕೂಡ ಅದನ್ನೇ ಮಾಡಿದ್ದಾಳೆ. ಆಕೆ ಬಾಯ್ ಫ್ರೆಂಡ್ ಆಕೆಯನ್ನು ನಂಬಿ ಜೀವನದ ಸತ್ಯವನ್ನು ಹೇಳಿದ್ದಾನೆ. ತೆರಿಗೆ ವಂಚನೆ ಮಾಡಿರೋದಾಗಿ ಅವಾ ಲೂಯಿಸ್ ಮುಂದೆ ಆತ ಬಾಯ್ಬಿಟ್ಟಿದ್ದಾನೆ. ಇದ್ರಿಂದ ಅವಾ ಲೂಯಿಸ್ ಶಾಕ್ ಆಗಿದ್ದಳು. ಬಾಯ್ ಫ್ರೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದಳು.
undefined
ಗಟ್ಟಿಮೇಳದ ವೇದಾಂತ್-ಅಮೂಲ್ಯರ ರೊಮ್ಯಾನ್ಸ್ ಪಯಣ ಹೀಗಿತ್ತು ನೋಡಿ... ವಿಡಿಯೋ ವೈರಲ್...
ಬಾಯ್ ಫ್ರೆಂಡ್ ವಿರುದ್ಧ ಸೇಡು ತೀರಿಸಿಕೊಂಡಿದ್ದು ಹೇಗೆ? : ಅವಾ ಲೂಯಿಸ್, ತೆರಿಗೆ ವಂಚನೆ ಮಾಡ್ತಿದ್ದ ಬಾಯ್ ಫ್ರೆಂಡ್ ವಿರುದ್ಧ ಯುಎಸ್ ಆಂತರಿಕ ಕಂದಾಯ ಸೇವೆಗೆ ದೂರು ನೀಡಿದ್ದಾಳೆ. ಇದರ ಪರಿಣಾಮ ಪೊಲೀಸರು ದಾಳಿ ನಡೆಸಿ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಸದ್ಯ ಅಧಿಕಾರಿಗಳು ತೆರಿಗೆ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಬಾಯ್ ಫ್ರೆಂಡ್ ಜೈಲು ಪಾಲಾಗುವ ಸಾಧ್ಯತೆ ಇದೆ.
ಸರ್ಕಾರದಿಂದ ಅವಾ ಲೂಯಿಸ್ ಗೆ ಸಿಕ್ತು ಇಷ್ಟು ಹಣ : ಬಾಯ್ ಫ್ರೆಂಡ್ ಸತ್ಯವನ್ನು ಬಯಲುಮಾಡಿದ ಅವಾ ಲೂಯಿಸ್ ಗೆ ಭರ್ಜರಿ ಬಹುಮಾನ ಸಿಕ್ಕಿದೆ. ಯುಎಸ್ ಸರ್ಕಾರ ವಿಸ್ಲ್‌ಬ್ಲೋವರ್ ಪ್ರಶಸ್ತಿ ನೀಡಿದೆ. ಅಲ್ಲದೆ 100,000 ಡಾಲರ್ ಅಂದ್ರೆ ಸುಮಾರು 83 ಲಕ್ಷ ರೂಪಾಯಿ ಬಹುಮಾನದ ಹಣ ನೀಡಿದೆ. ಟಿಕ್ ಟಾಕ್ ನಲ್ಲಿ ಅವಾ ಲೂಯಿಸ್ ಈ ಬಗ್ಗೆ ವಿವರವಾಗಿ ಹೇಳಿದ್ದು, ಈ ಹಣವನ್ನು ಎಲ್ಲಿ ಖರ್ಚು ಮಾಡ್ತಿದ್ದೇನೆ ಎಂಬುದನ್ನೂ ಹೇಳಿದ್ದಾಳೆ.
ತಾನು ಇಷ್ಟಪಟ್ಟಿದ್ದ ಸಹಪಾಠಿಗೆ 12 ಲಕ್ಷದ ಉಡುಗೊರೆ ಕೊಟ್ಟ ನರ್ಸರಿ ಬಾಲಕ!
ವಿಸ್ಲ್‌ಬ್ಲೋವರ್ ಪ್ರಶಸ್ತಿ ಅಂದ್ರೇನು? : ಯುಎಸ್ ನಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಐಆರ್ ಎಸ್ ವಿಸ್ಲ್‌ಬ್ಲೋವರ್ ಕಚೇರಿಯು, ತೆರಿಗೆ ವಂಚಕರ ಬಗ್ಗೆ ಅಥವಾ ಇದಕ್ಕೆ ಸಂಬಂಧಿಸಿದವರ ಬಗ್ಗೆ ಮಾಹಿತಿ ನೀಡಿದ ಜನರಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ. ಇದಕ್ಕೆ ಕೆಲ ಷರತ್ತಿದೆ. ತೆರಿಗೆ ವಂಚನೆಯು 2 ಮಿಲಿಯನ್ ಡಾಲರ್ಗಿಂತಲೂ ಹೆಚ್ಚಿದ್ದರೆ ಮಾತ್ರ ಈ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ ಆರೋಪಿಯ ವಾರ್ಷಿಕ ಆದಾಯವು ಕನಿಷ್ಠ ಒಂದು ತೆರಿಗೆ ವರ್ಷಕ್ಕೆ 200,000 ಡಾಲರ್ ಮೀರಿರಬೇಕು. ವಂಚಕರಿಂದ ವಸೂಲಿ ಮಾಡಿದ ಹಣದಲ್ಲಿ ಶೇಕಡಾ 15 ರಿಂದ 30ರಷ್ಟು ಹಣವನ್ನು ವಂಚನೆ ಬಗ್ಗೆ ಮಾಹಿತಿ ನೀಡಿದ ಜನರಿಗೆ ನೀಡಲಾಗುತ್ತದೆ.
ಇಂಥ ಘಟನೆ ನಡೆದಿದ್ದು ಇದೇ ಮೊದಲಲ್ಲ : ಇಂಥ ಘಟನೆ ನಡೆದಿರೋರು ಇದೇ ಮೊದಲಲ್ಲ. ಜೂನ್ 2023 ರಲ್ಲಿ, ಚೀನಾದಲ್ಲಿ ಮೂವರು ಮಹಿಳೆಯರು ಒಟ್ಟಾಗಿ 100,000 ಯುವಾನ್ ಅಂದ್ರೆ ಸುಮಾರು 11,67,982 ರೂಪಾಯಿ ವಂಚಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಆ ವ್ಯಕ್ತಿಗೆ ಎರಡೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.