ಮಾತಾಡೋದಕ್ಕೂ, ಸೆಕ್ಸ್‌ಗೂ ಹಣ ಕೇಳ್ತಿದ್ದ ಪತ್ನಿಗೆ ಪತಿ ವಿಚ್ಛೇದನ

By Kannadaprabha News  |  First Published Aug 9, 2024, 11:34 AM IST

ಮಾತನಾಡುವುದಕ್ಕೆ ಮತ್ತು ಸೆಕ್ಸ್‌ ಮಾಡುವುದಕ್ಕೂ ಎಂದು ಪತ್ನಿ ಹಣ ಕೇಳುತ್ತಾಳೆ ಎಂಬ ಪತಿ ನೋವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆತನಿಗೆ ಪತ್ನಿಯಿಂದ ಡೈವೋರ್ಸ್‌ ನೀಡಿದ ಘಟನೆ ತೈವಾನ್‌ನಲ್ಲಿ ನಡೆದಿದೆ.


ನವದೆಹಲಿ (ಆ.9): ಮಾತನಾಡುವುದಕ್ಕೆ ಮತ್ತು ಸೆಕ್ಸ್‌ ಮಾಡುವುದಕ್ಕೂ ಎಂದು ಪತ್ನಿ ಹಣ ಕೇಳುತ್ತಾಳೆ ಎಂಬ ಪತಿ ನೋವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆತನಿಗೆ ಪತ್ನಿಯಿಂದ ಡೈವೋರ್ಸ್‌ ನೀಡಿದ ಘಟನೆ ತೈವಾನ್‌ನಲ್ಲಿ ನಡೆದಿದೆ.

ತನ್ನ ಪತ್ನಿ ಬಳಿ ಒಂದು ಬಾರಿ ಮಾತನಾಡಲು ಅಥವಾ ಸೆಕ್ಸ್‌ ಮಾಡಲು ಇಂತಿಷ್ಟು ಎಂದು ಹಣ ನಿಗದಿ ಮಾಡಿದ್ದಾಳೆ. ಹೀಗಾಗಿ ನನಗೆ ನೋವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದ. ಆತನ ಮನವಿ ಆಲಿಸಿದ ನ್ಯಾಯಾಲಯ ಆತನಿಗೆ ಡೈವೋರ್ಸ್‌ ನೀಡಿದೆ.

Tap to resize

Latest Videos

undefined

ಹುಡುಗೀರು 'ನೋ' ಎಂದರೆ 'ಎಸ್' ಅಂತ ಅರ್ಥವಾ? ಹುಡುಗರೇ ಇದನ್ನು ತಿಳಿದುಕೊಳ್ಳಿ!

2014 ರಲ್ಲಿ ಮದುವೆಯಾದ ಇವರಿಗೆ ಮಕ್ಕಳಿದ್ದಾರೆ. ಆರಂಭದಲ್ಲಿ ಚೆನ್ನಾಗಿದ್ದ ಇವರ ದಾಂಪತ್ಯ ಜೀವನ ಕಾಲ ಕಳೆದಂತೆ ಪತ್ನಿ ಪತಿಯೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದಳು. ಲೈಂಗಿಕ ಕ್ರಿಯೆಯನ್ನು ತಿರಸ್ಕರಿಸುತ್ತಿದ್ದಳು. ಇವರಿಬ್ಬರ ನಡುವೆ ನೇರ ಸಂಭಾಷಣೆಗಿಂದ ಸಂದೇಶ ಕಳುಹಿಸುವ ಅಪ್ಲಿಕೇಷನ್‌ಗಳಲ್ಲೇ ಹೆಚ್ಚು ಸಂಭಾಷಣೆ ನಡೆಯುತ್ತಿತ್ತು.

click me!