
ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಲು ಸೂಚಿಸಿದರೆ L&T ಮುಖ್ಯಸ್ಥ ಅದೇ ಹೆಂಡ್ತಿ ಮುಖ ಎಷ್ಟು ಅಂತ ನೋಡ್ತೀರಾ, ಭಾನುವಾರವೂ ಕೆಲಸ ಮಾಡಿ ಎಂದು ಸೂಚಿಸಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. 70 ಸಾಕಾಗಲ್ಲ ವಾರದಲ್ಲಿ 90 ಗಂಟೆ ಕೆಲಸ ಮಾಡಲು ಸೂಚಿಸಿ ಎಂದು ಅವರು ಸೂಚಿಸಿದ್ದರು. ಈ ವಿವಾದದ ನಡುವೆಯೇ ಇದೀಗ ದಿನಕ್ಕೆ 14 ಗಂಟೆ ಕೆಲಸ ಮಾಡಿದ್ದೂ ಅಲ್ಲದೇ, ಅದಕ್ಕೆ ಪ್ರತಿಫಲವಾಗಿ 7.8 ಕೋಟಿ ರೂಪಾಯಿಗಳ ಅವಾರ್ಡ್ ಪಡೆದ ವ್ಯಕ್ತಿಯೊಬ್ಬ ಮನೆಗೆ ಬರುತ್ತಿದ್ದಂತೆಯೇ ಪತ್ನಿ ಡಿವೋರ್ಸ್ ಕೊಟ್ಟಿರುವ ಘಟನೆ ನಡೆದಿದೆ.
ವಿಶ್ವದ ಪ್ರತಿಷ್ಠಿತ ಇ- ಕಾಮರ್ಸ್ ಕಂಪೆನಿ ಅಮೇಜಾನ್‌ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಈಗ ಇತ್ತ ಏಳು ಕೋಟಿ ರೂಪಾಯಿಗಳ ಪ್ರಮೋಷನ್ ಸಿಕ್ಕರೆ, ಅತ್ತ ಪತ್ನಿಯಿಂದ ಡಿವೋರ್ಸ್ ಅರ್ಜಿ ಸಿಕ್ಕಿದೆ. ಅಷ್ಟಕ್ಕೂ ಇದಕ್ಕೆ ಕಾರಣ, ತನಗೆ ಟೈಮ್ ಕೊಡದೇ ಬರೀ ಕೆಲಸ ಕೆಲಸ ಎಂದು ಕಚೇರಿಯಲ್ಲಿಯೇ ಇರುವ ಪತಿಯಿಂದ ಆಕೆ ಬೇಸತ್ತು ಹೋಗಿ ಖಿನ್ನತೆಗೂ ಜಾರಿದ್ದಳಂತೆ!
ಈ ವ್ಯಕ್ತಿ, ಕಷ್ಟಪಟ್ಟು ಕೆಲಸ ಮಾಡಿ ಸೀನಿಯರ್ ಮ್ಯಾನೇಜರ್ ಪೋಸ್ಟ್ ಪಡೆದಿದ್ದರು. ಏಳು ಕೋಟಿ ರೂಪಾಯಿಗಳ ಪ್ರಮೋಷನ್ ಕೂಡ ಸಿಕ್ಕಿತ್ತು. ಆದರೆ ತನಗೆ ಟೈಮೇ ಕೊಡದ ಪತಿಯಿಂದ ಏನು ಪ್ರಯೋಜನ ಎನ್ನುವುದು ಪತ್ನಿಯ ಮಾತು. ಸದಾ ಗಂಡ ಕೆಲಸದಲ್ಲಿ ನಿರತರಾಗಿರುತ್ತಾರೆ. ಕುಟುಂಬದವರ ಜತೆ ಸಮಯ ಕಳೆಯುವುದಿಲ್ಲ. ಆದ್ದರಿಂದ ಇಂಥ ಪತಿಯ ಜೊತೆ ಬಾಳಲು ಸಾಧ್ಯವಿಲ್ಲ ಎಂದು ಪತ್ನಿ ಹೇಳಿದ್ದಾಳೆ. ದಿನವಿಡೀ ಮೀಟಿಂಗ್‌ನಲ್ಲಿ ಬಿಜಿ ಇರುತ್ತಾರೆ. ಮಗಳು ಹುಟ್ಟಿದಾಗಲೂ ನನ್ನ ಜೊತೆ ಅವರು ಇರಲಿಲ್ಲ. ಇದರಿಂದ ಮಗಳಿಗೂ ಅಪ್ಪನ ಪ್ರೀತಿ ಸಿಗುತ್ತಿಲ್ಲ. ಅವರ ಕೆಲಸದಿಂದಾಗಿ ನಾನೂ ಖಿನ್ನತೆಗೆ ಜಾರಿದ್ದೇನೆ. ಹೆರಿಗೆಯ ಬಳಿಕ ಖಿನ್ನತೆ ಹೆಚ್ಚಾಗಿತ್ತು. ಮಾನಸಿಕವಾಗಿ ಕುಗ್ಗಿದಾಗಲೂ ಪತಿ ತಮ್ಮ ಜೊತೆ ಇಲ್ಲ. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪತ್ನಿ ಹೇಳಿದ್ದಾರೆ.
ಹೆಂಡ್ತಿ ಮುಖ ಎಷ್ಟು ಹೊತ್ತು ನೋಡ್ತಿರಾ, 90 ಗಂಟೆ ಕೆಲಸ ಮಾಡಲು ಸೂಚಿಸಿದ L&T ಮುಖ್ಯಸ್ಥ
ಇದಕ್ಕೆ ಪರ-ವಿರೋಧದ ನಿಲುವು ವ್ಯಕ್ತವಾಗಿದೆ. ತಮ್ಮ ಕುಟುಂಬಕ್ಕಾಗಿ ಪತಿ ಅಷ್ಟೆಲ್ಲಾ ದುಡಿಯುತ್ತಿರುವುದು ಕುಟುಂಬಕ್ಕಾಗಿ, ಪತ್ನಿ ಈ ರೀತಿಮಾಡುವುದು ಸರಿಯಲ್ಲ ಎಂದು ಕೆಲವರು ಹೇಳಿದ್ದಾರೆ. ಪತಿ ದುಡಿಯದಿದ್ದರೂ ಪತ್ನಿಯರಿಗೆ ಸಮಸ್ಯೆ, ಹೆಚ್ಚು ದುಡಿದರೂ ಸಮಸ್ಯೆ, ಒಂದು ವೇಳೆ ಡಿವೋರ್ಸ್ ಪಡೆದರೆ, ಆತನ ಏಳು ಕೋಟಿಯಲ್ಲಿಯೂ ಪಾಲು ಬೇಕಾದರೆ ಕೇಳುತ್ತಾರೆ, ಅದಕ್ಕೆ ಹಿಂಜರಿಯುವುದಿಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಕುಟುಂಬಕ್ಕಿಂತ ದೊಡ್ಡದು ಯಾವುದೂ ಇಲ್ಲ ಎನ್ನುವುದು ಮತ್ತೆ ಕೆಲವರ ಮಾತು. ಆದರೂ ಈ ರೀತಿ ಡಿವೋರ್ಸ್ ಪಡೆದುಕೊಳ್ಳುವುದು ಸರಿಯಲ್ಲ, ಇಬ್ಬರೂ ಕುಳಿತು ಮಗಳ ಹಿತದೃಷ್ಟಿಯಿಂದಲಾದರೂ ಮಾತುಕತೆ ನಡೆಸಬೇಕು ಎಂದು ಸಲಹೆ ಕೊಡುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.