ಕಚೇರಿಯಲ್ಲಿ ನೀಲಿ ಚಿತ್ರ ನೋಡುವುದು ನಾಚಿಕೆಗೇಡಿನ ಕೆಲಸ ಎನ್ನುವುದು ಸಾಮಾನ್ಯ ಅನಿಸಿಕೆ. ಆದರೆ, ಕಚೇರಿಯ ಬಿಡುವಿನ ಮಧ್ಯದಲ್ಲೇ ನೀಲಿ ಚಿತ್ರ ನೋಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಒಂದು ಅಧ್ಯಯನದ ಪ್ರಕಾರ, ಶೇ.೬೦ಕ್ಕೂ ಅಧಿಕ ಜನ ಕಚೇರಿ ಸಮಯದಲ್ಲೇ ಪೋರ್ನೊಗ್ರಫಿ ವೀಕ್ಷಿಸುತ್ತಾರೆ.
ಕಚೇರಿಯಲ್ಲಿ ಒಂದೇ ಸಮನೆ ಕೆಲಸ ಮಾಡುವುದು ಅನೇಕರಿಂದ ಸಾಧ್ಯವಿಲ್ಲ. ಸಾಮಾನ್ಯವಾಗಿ ಮಹಿಳೆಯರು ಊಟದ ಸಮಯದಲ್ಲಿ ಬ್ರೇಕ್ ತೆಗೆದುಕೊಂಡು ಉಳಿದಂತೆ ಪಟ್ಟಾಗಿ ಕೂತು ಕೆಲಸ ಮುಗಿಸಿ ಸರಿಯಾದ ಸಮಯಕ್ಕೆ ಕಚೇರಿ ಬಿಡಲು ಕಾತುರರಾಗಿರುತ್ತಾರೆ. ಆದರೆ, ಪುರುಷರು ಹಾಗಲ್ಲ. ಅವರಿಗೆ ಕಚೇರಿಯನ್ನು ಸರಿಯಾದ ಸಮಯಕ್ಕೆ ಬಿಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಇಡೀ ದಿನ ಒಂದೇ ಕಡೆ ಕೂತು ಕೆಲಸ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಳ್ಳುತ್ತಾರೆ. ಒಮ್ಮೆ ಕಾಫಿ, ಇನ್ನೊಮ್ಮೆ ಸ್ಮೋಕ್ ಹೀಗೆ ಏನಾದರೊಂದು ಕಾರಣದಿಂದ ಮಧ್ಯೆ ಐದು-ಹತ್ತು ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಳ್ಳುವವರಿದ್ದಾರೆ. ಆ ಸಮಯದಲ್ಲಿ ಅವರು ಸೋಷಿಯಲ್ ಮೀಡಿಯಾ ಕಡೆಗೆ ಗಮನ ಕೊಡುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರು ವಾಕ್ ಮಾಡುತ್ತಾರೆ. ಹಾಗೆಯೇ, ಬಹಳಷ್ಟು ಮಂದಿ ತಮ್ಮ ಖಾಸಗಿ ಲ್ಯಾಪ್ ಟಾಪ್ ಅಥವಾ ಮೊಬೈಲ್ ವೀಕ್ಷಣೆಯಲ್ಲಿ ಮುಳುಗುವುದು ಸಾಮಾನ್ಯ. ಕಚೇರಿಯ ಸಮಯದಲ್ಲಿ ಲ್ಯಾಪ್ ಟಾಪ್ ನಲ್ಲಿ ಅವರೇನು ನೋಡುತ್ತಾರೆ ಎನ್ನುವುದು ಇದೀಗ ಭಾರೀ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಏಕೆಂದರೆ, ಅವರು ಪೋರ್ನ್, ವಯಸ್ಕ ಅಥವಾ ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡುತ್ತಾರೆ ಎನ್ನುವುದು ಒಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಕಚೇರಿಯಲ್ಲಿ ಪೋರ್ನ್ (Porn) ವೀಕ್ಷಣೆ ಮಾಡುವುದು ಭಾರೀ ನಾಚಿಕೆಗೇಡಿನ ಸಂಗತಿ ಎನ್ನುವುದು ಸಾಮಾನ್ಯ ಭಾವನೆ. ಆದರೆ, ಹಲವು ಪುರುಷರಿಗೆ ಇದು ನಾಚಿಕೆಯ (Shame) ಸಂಗತಿ ಅಲ್ಲವೇ ಅಲ್ಲ, ಇದೊಂಥರ ಕೆಲಸಕ್ಕೆ ಚೈತನ್ಯ ನೀಡುವ ಮಾರ್ಗ! ಇದಕ್ಕೆ ಅಡಲ್ಟ್ ಕಂಟೆಂಟ್ ಫ್ಲಾಟ್ ಫಾರ್ಮ್ (Adult Content Flatform) ದಾಖಲೆಗಳು ಪುಷ್ಟಿ ನೀಡುತ್ತವೆ. ಇದರ ಪ್ರಕಾರ, ಕಚೇರಿಯಲ್ಲಿ ಕೆಲಸದ ನಡುವೆ ಪೋರ್ನ್ ನೋಡುವುದು ಅತ್ಯಂತ ಸಾಮಾನ್ಯ. ಇದರ ಮೇಲೆ ಡಿಜಿಟಲ್ ಲೈಫ್ ಸ್ಟೈಲ್ ಮ್ಯಾಗಜೀನ್ “ಶುಗರ್ ಕುಕೀʼ ನಡೆಸಿದ್ದ ಅಧ್ಯಯನದಲ್ಲೂ ಇದು ಸಾಬೀತಾಗಿದೆ. ಕಚೇರಿಯಲ್ಲಿ ಪೋರ್ನ್ ನೋಡುವ ಪ್ರಮಾಣ ಎಷ್ಟಿದೆ ಎಂದರೆ ಅಚ್ಚರಿಯಾಗಬಹುದು. ಈ ಅಧ್ಯಯನದ ಪ್ರಕಾರ, ಬರೋಬ್ಬರಿ ಶೇ.60ಕ್ಕೂ ಅಧಿಕ ಜನ ನೀಲಿ ಚಿತ್ರ ವೀಕ್ಷಿಸುತ್ತಾರೆ. ಅಂದ ಹಾಗೆ, ಮಹಿಳೆಯರೂ ಈ ಗುಂಪಿನಲ್ಲಿದ್ದಾರೆ. ಪ್ರತಿದಿನ ಸಾಧ್ಯವಿಲ್ಲವಾದರೆ, ಎಂದಾದರೊಮ್ಮೆಯಾದರೂ ನೋಡುವ ಅಭ್ಯಾಸ ಹೊಂದಿದ್ದಾರೆ.
ಪೋರ್ನೋಗ್ರಫಿಗೂ ಇದೆ ಕೋರ್ಸ್
ಸೆಕ್ಯೂರಿಟಿ ಸಂಸ್ಥೆಯಾಗಿರುವ ಕಾಸ್ಪರ್ಸಕಿ 2020ರಲ್ಲಿ ನಡೆಸಿದ್ದ ಅಧ್ಯಯನದ ಪ್ರಕಾರ, ಮನೆಯಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಗಳ ಪೈಕಿ ಶೇಕಡ 50ಕ್ಕೂ ಅಧಿಕ ಜನ ಕೆಲಸದ ನಡುವೆ ನೀಲಿ ಚಿತ್ರ ವೀಕ್ಷಿಸಿದ್ದರು. ಹೀಗೆ, ಕೆಲಸದ ಮಧ್ಯೆ ಪೋರ್ನ್ ವೀಕ್ಷಣೆ ಮಾಡಲು ಅವರಿಗೆ ಯಾವುದೇ ಸಂಕೋಚ ಉಂಟಾಗುವುದಿಲ್ಲ. ವಿಶ್ವದ ಅತಿ ದೊಡ್ಡ ಪೋರ್ನ್ ವೆಬ್ ಸೈಟ್ ಪೋರ್ನ್ ಹಬ್ (Porn Hub) 2021ರಲ್ಲಿ ಈ ಕುರಿತು ಜಾಗತಿಕ ಸಮೀಕ್ಷೆ (Survey) ನಡೆಸಿತ್ತು. ಕಾರ್ಯಾವಧಿಯ ಮಧ್ಯದಲ್ಲೇ ಜನರು ಪೋರ್ನೋಗ್ರಫಿ ವೀಕ್ಷಣೆ ಮಾಡುತ್ತಾರೆ ಎನ್ನುವುದನ್ನು ಬಹಿರಂಗಪಡಿಸಿತ್ತು. ಅದಕ್ಕಿಂತ ಹೆಚ್ಚಾಗಿ, ರಾತ್ರಿ 10 ಗಂಟೆಯಿಂದ 1ರವರೆಗೆ ನೀಲಿ ಚಿತ್ರ ನೋಡುವವರ ಸಂಖ್ಯೆ ಅಧಿಕ. ಹಾಗೆಯೇ, ಸಂಜೆ 4 ಗಂಟೆಯ ವೇಳೆಯಲ್ಲೂ ಹೆಚ್ಚು ಜನ ನೋಡುತ್ತಾರೆ.
ಪೋರ್ನ್ ವೀಕ್ಷಣೆ ಏಕೆ?
ಮನೋವಿಜ್ಞಾನ (Psychology) ಹಲವು ಕಾರಣಗಳನ್ನು ಗುರುತಿಸಿದೆ. ನೀಲಿ ಚಿತ್ರ ನೋಡುವ ಮೂಲಕ ಕೆಲಸದಿಂದ (Work) ಆಗುವ ಬೇಸರ (Boredom) ಕಳೆಯಲು ಜನ ಯತ್ನಿಸುತ್ತಾರೆ. ಹೊಸ ಅನುಭವವನ್ನು ತಮ್ಮದಾಗಿಸಿಕೊಳ್ಳಲು ಕಚೇರಿಯಲ್ಲಿ ಪೋರ್ನ್ ನೋಡುವವರಿದ್ದಾರೆ. ತಮ್ಮ ಸೆಕ್ಸ್ ಲೈಫ್ (Sex Life) ನಲ್ಲಿ ನಿಜವಾಗಿ ಸಿಗದೇ ಇರುವುದನ್ನು ನೋಡಿ ಖುಷಿಪಟ್ಟುಕೊಳ್ಳುವವರಿದ್ದಾರೆ. ಒತ್ತಡ ಕಡೆಯಲು ಪೋರ್ನ್ ನೋಡುವವರ ಸಂಖ್ಯೆ ಹೆಚ್ಚು.
ವಾಟ್ಸ್ ಆ್ಯಪ್‌ನಲ್ಲಿ ಈ ಐದು ವಿಷಯ ಶೇರ್ ಮಾಡಿದರೆ ಜೈಲು
ಅಚ್ಚರಿಯ ವಿಚಾರವೆಂದರೆ, ಯಾರಿಗೆ ಕಚೇರಿಯಲ್ಲಿ ಹೆಚ್ಚು ಕೋಪ ಬರುತ್ತದೆಯೋ ಅವರು ಪೋರ್ನ್ ನೋಡುವುದು ಹೆಚ್ಚು. ಬಾಸ್ ಅವರನ್ನು ನಿರ್ಲಕ್ಷ್ಯ ಮಾಡಿದಾಗಲೂ ನೋಡುತ್ತಾರೆ. ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ಅಧ್ಯಯನ ಇದನ್ನು ಹೇಳಿದೆ. ಅನೇಕ ನಕಾರಾತ್ಮ ಸಂಗತಿಗಳನ್ನು ಅರಗಿಸಿಕೊಳ್ಳಲು ಸಹ ಪೋರ್ನ್ ನೋಡುತ್ತಾರೆ.