
ಇದು ಅಮೆರಿಕದ 10 ವರ್ಷದ ಬಾಲಕಿಯೊಬ್ಬಳ ನೋವಿನ ಕಥೆ. ಈ ಪುಟಾಣಿಯ ಹೆಸರು ಎಮ್ಮಾ ಎಡ್ವರ್ಡ್ಸ್. ಎಲ್ಲ ಪುಟಾಣಿಗಳಂತೆ ನೂರೆಂಟು ಕನಸು ಕಂಡಾಕೆ ಈಕೆ. ಆದರೆ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಎಂಬ ಮಾರಣಾಂತಿಕ ಕಾಯಿಲೆಗೆ ಈಕೆ ತುತ್ತಾದಳು. ಇನ್ನು ಬದುಕುವುದು ಕೆಲವೇ ದಿನ ಎಂದು ವೈದ್ಯರು ಹೇಳಿದಾಗ, ಈಕೆಯ ಪೋಷಕರಾದ ಅಲೀನಾ ಮತ್ತು ಆರನ್ ಎಡ್ವರ್ಡ್ಸ್ ಅವರಿಗೆ ಆಘಾತ. ಆದರೂ ತಮ್ಮ ಪುತ್ರಿಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಿದರು. ಆದರೆ ನಿಮ್ಮ ಮಗಳು ಇನ್ನು ಕೆಲವೇ ದಿನದ ಅತಿಥಿ ಎಂದು ವೈದ್ಯರು ಸ್ಪಷ್ಟವಾಗಿ ಹೇಳಿಬಿಟ್ಟರು.
ಕೊನೆಯುಸಿರು ಎಳೆಯುತ್ತಿದ್ದ ತಮ್ಮ ಮಗಳ ಕೊನೆಯಾಸೆಯನ್ನು ಕೇಳುವ ಬಯಕೆಯಾಯಿತು ಅಪ್ಪ-ಅಮ್ಮನಿಗೆ. ಸಾವಿನ ಬಗ್ಗೆ ಆಕೆಗೆ ತಿಳಿಸದಿದ್ದರೂ, ಏನಾದರೂ ಆಸೆಯಿದ್ದರೆ ಹೇಳು ಎಂದಾಗ, ಆಕೆ ಹೇಳಿದ್ದು ಕೇಳಿ ಶಾಕ್ ಆಯಿತು. ಏಕೆಂದರೆ ಬಾಲಕಿ ಹೇಳಿದ್ದು, ತನ್ನ ಬಾಲ್ಯದ ಸ್ನೇಹಿತ ಡಿಜೆ ಎಂದೂ ಕರೆಯಲ್ಪಡುವ ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ ವಿಲಿಯಮ್ಸ್ ಜೂನಿಯರ್ನನ್ನ ಮದುವೆಯಾಗುವುದು ಎಂದಳು. ಆತ ಪುಟ್ಟ ಪುಟ್ಟ ಬಾಲಕನೇ. ಇಬ್ಬರೂ ಜೊತೆಯಾಗಿ ಶಾಲೆಗೆ ಹೋಗುತ್ತಿದ್ದವರು. ಈಕೆ ಒಮ್ಮೆ ಶಾಲೆಯಲ್ಲಿಯೇ ಅವನನ್ನು ಮದುವೆಯಾಗಲು ಹೋಗಿದ್ದ ವಿಷಯವೂ ಪಾಲಕರಿಗೆ ತಿಳಿಯಿತು. ಕೊನೆಗೆ ಆಕೆಯ ಅಂತಿಮ ಆಸೆಯಂತೆಯೇ ಮದುವೆಯನ್ನೂ ನೆರವೇರಿಸಿದರು. ಕೆಲವೇ ದಿನಗಳಲ್ಲಿ ಬಾಲಕಿ ಕೊನೆಯುಸಿರು ಎಳೆದಳು.
ಪರೀಕ್ಷೆ ಇದೆ ಅನ್ನೋದೇ ಮರೆತ ಯುವಕ ಲೇಟಾಗಿದ್ದಕ್ಕೆ ಮಾಡಿದ್ದೇನು ನೋಡಿ! ಭೇಷ್ ಭೇಷ್ ಎಂದ ನೆಟ್ಟಿಗರು
ಇದು ನಡೆದಿರುವುದು 2022-23ರ ಅವಧಿಯಲ್ಲಿ. ಎಮ್ಮಾ ಎಡ್ವರ್ಡ್ಸ್ ಬಾಲಕಿಗೆ ಏಪ್ರಿಲ್ 2022 ರಲ್ಲಿ ಈ ಕಾಯಿಲೆ ಇರುವುದು ಪತ್ತೆಯಾಯಿತು. ಆಕೆಯ ಪಾಲಕರು ಮಗಳ ಚೇತರಿಕೆಯ ಭರವಸೆಯಲ್ಲಿದ್ದರು. ಆದಾಗ್ಯೂ, ಜೂನ್ 2023 ರಲ್ಲಿ, ಎಮ್ಮಾ ಅವರ ಅನಾರೋಗ್ಯವು ಗುಣಪಡಿಸಲಾಗದ ಹಂತವನ್ನು ತಲುಪಿದೆ ಎಂದು ವೈದ್ಯರು ಹೇಳಿದರು. ಆಗಲೇ ಆಕೆಯ ಕೊನೆಯ ಆಸೆಯನ್ನು ಕೇಳಿ ನೆರವೇರಿಸಲಾಯಿತು. ಜೂನ್ 29 ರಂದು ಯುವ ದಂಪತಿಗಳಿಗಾಗಿ ಒಂದು ಸಮಾರಂಭವನ್ನು ನಡೆಸಲಾಯಿತು, 100 ಅತಿಥಿಗಳು ಹಾಜರಿದ್ದರು. ಬಾಲಕಿ ಜುಲೈ 11, 2023 ರಂದು ನಿಧನಳಾದಳು.
ಮದುವೆಯನ್ನೂ ವಿಜೃಂಭಣೆಯಿಂದ ನೆರವೇರಿಸಲಾಗಿತ್ತು. ಎಮ್ಮಾಳ ತಂದೆ ಅವಳನ್ನು ಅವಳ ಅಜ್ಜಿಯ ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಯ ಶಿಕ್ಷಕರೂ ಬಂದಿದ್ದರು. ಎರಡು ದಿನಗಳ ಮದುವೆ ಶಾಸ್ತ್ರ ಮುಗಿಸಿದರು. ಮದುವೆಯ ಸಂದರ್ಭದಲ್ಲಿ ದಾನಧರ್ಮ ಮಾಡಲಾಯಿತು. ಒಬ್ಬ ಸ್ನೇಹಿತ ಕಾರ್ಯಕ್ರಮವನ್ನು ನಿರ್ವಹಿಸಿದರೆ, ಇನ್ನೊಬ್ಬರು ಬೈಬಲ್‌ನಿಂದ ಒಂದು ಪದ್ಯವನ್ನು ಓದಿದರು. ಹೀಗೆ ಮಕ್ಕಳೇ ಮುಂದಾಗಿ ಮದುವೆಯನ್ನು ನೆರವೇರಿಸಿದರು.
ಕಣ್ಣಿನ ದೃಷ್ಟಿ ಕಳಕೊಂಡಿರೋ ರಾಣಾ ದಗ್ಗುಬಾಟಿ: ಕಿಡ್ನಿಯೂ ಅಮ್ಮನಿಂದ ದಾನ- ಬಾಹುಬಲಿ ನಟರ ಸ್ಟೋರಿ ಕೇಳಿ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.