ಈಗ ಶುರು ಆಗ್ತೀರೋ ಸಂಬಂಧ ನಿಮ್ದಾದ್ರೆ ಈ ವಿಷ್ಯಾನಾ ಮಿಸ್‌ ಮಾಡೊ ಹಂಗೆ ಇಲ್ಲ!

Suvarna News   | Asianet News
Published : Dec 28, 2019, 01:14 PM IST
ಈಗ ಶುರು ಆಗ್ತೀರೋ ಸಂಬಂಧ ನಿಮ್ದಾದ್ರೆ ಈ ವಿಷ್ಯಾನಾ ಮಿಸ್‌ ಮಾಡೊ ಹಂಗೆ ಇಲ್ಲ!

ಸಾರಾಂಶ

ಸಂಬಂಧ ಶುರುವಾಗುವಾಗ ಅದಕ್ಕೆ ಸರಿಯಾದ ಪೋಷಣೆ ಸಿಕ್ಕರೆ ಅದು ಬಹಳ ಸಿಹಿಯಾದ ಹಣ್ಣು ಕೊಡುವ ಮಾವಿನ ಮರವಾಗಬಹುದು. ಪೋಷಣೆ ಸರಿಯಾಗಿಲ್ಲವಾದರೆ ಸೊರಗಿದ ಬೋಳುಮರವಾಗಿ ಬದುಕಿನ ಬೇಸರಕ್ಕೆ ಕಾರಣವಾಗುತ್ತದೆ.   

ಪರ್ಫೆಕ್ಟ್ ರಿಲೇಶನ್‌ಶಿಪ್ ಎಂಬುದು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸುಖೀ ಸಂಬಂಧವೊಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆಗುವುದು ಸಾಧ್ಯವಿಲ್ಲ. ಇದಕ್ಕೆ ಸರಿಯಾದ ಮಟ್ಟದಲ್ಲಿ ತಾಳ್ಮೆ, ಪ್ರೀತಿ, ಕಾಳಜಿ, ಹೊಂದಾಣಿಕೆ ಎಲ್ಲವೂ ಬೇಕಾಗುತ್ತದೆ. ಇಬ್ಬರ ನಡುವೆ ಅಂಡರ್‌ಸ್ಟ್ಯಾಂಡಿಂಗ್ ಚೆನ್ನಾಗಿದ್ದರೆ ಅಲ್ಲಿ ಯಾವ ಟು ಡು ಲಿಸ್ಟ್ ಕೂಡಾ ಬೇಕಾಗುವುದಿಲ್ಲ.

ಕೆಲವೊಮ್ಮೆ ಡೇಟ್‌ಗಾಗಿ ಬಟ್ಟೆ ಖರೀದಿಸುವುದು, ಮೇಕಪ್ ಏನು ಹಾಕಿಕೊಳ್ಳಲಿ ಎಂಬ ಯೋಚನೆ ಒಬ್ಬರನ್ನು ಎಷ್ಟು ಒಳಗೊಂಡುಬಿಡುತ್ತದೆ ಎಂದರೆ ಯಾವುದರ ಬಗ್ಗೆ ಫೋಕಸ್ ಮಾಡಬೇಕಿರುತ್ತದೋ ಅದೇ ಬದಿಗೆ ಸರಿಯುತ್ತದೆ. ಜೋಡಿಯು ಸಂಬಂಧದಲ್ಲಿ ಏನು ಮಾಡಬಾರದು ಎಂಬ ಕುರಿತು ನಾವು ಈಗಾಗಲೇ ಸಾಕಷ್ಟು ಓದಿದ್ದೇವೆ. ಆದರೆ ಏನು ಮಾಡಬೇಕೆಂದು ಹೇಳುವವರು ಕಡಿಮೆ. ಹಾಗಿದ್ದರೆ ಸಂಬಂಧವೊಂದು ಈಗ ಮೊಳಕೆಯೊಡೆಯುತ್ತಿದ್ದರೆ ಅದನ್ನು ಪೋಷಿಸುವುದು ಹೇಗೆಂದು ನಾವು ಹೇಳುತ್ತೇವೆ. 

ಈ ರಾಶಿಯವರು ಈ ಒಂದು ಕೆಟ್ಟ ಚಟ ಬಿಟ್ರೆ ಒಳ್ಳೇದು!

ಡಿಟಾಕ್ಸ್ ಮಾಡಿಕೊಳ್ಳಿ

ಯಾವುದೇ ಹೊಸ ಸಂಬಂಧ ಶುರು ಮಾಡುವ ಮೊದಲು ನಿಮ್ಮ ಭಾವನೆಗಳನ್ನು ನೀವು ಡಿಟಾಕ್ಸ್ ಮಾಡಿಕೊಳ್ಳಿ. ನಿಮ್ಮ ಹಳೆಯ ಸಂಬಂಧದಲ್ಲಾಗಲೀ, ಬದುಕಲ್ಲಾಗಲೀ ಆದ ಕೆಟ್ಟ ಘಟನೆಗಳು, ಕೆಟ್ಟ ಯೋಚನೆಗಳನ್ನೆಲ್ಲ ಕಳಚಿಕೊಳ್ಳಿ. ಮನಸ್ಸಿಗೆ ಭಾರವಾಗಿರುವ ಭಾವನೆಗಳನ್ನು ಹೊತ್ತು ನೀವು ಸಂತೋಷದಿಂದ ಮುಂದೆ ಸಾಗಲು ಸಾಧ್ಯವಿಲ್ಲ. ಹೊಸ ಸಂಬಂಧದಲ್ಲಿ ಸಂಗಾತಿಗೂ ಸಂತೋಷ ಕೊಡಲು ಸಾಧ್ಯವಿಲ್ಲ. ಹಾಗಾಗಿ ಮೊದಲು ಮನಸ್ಸನ್ನು ಸ್ವಚ್ಛಗೊಳಿಸಿ ಹಗುರ ಮಾಡಿಕೊಳ್ಳಿ. ಸ್ವಚ್ಛ ಸ್ಲೇಟ್‌ನಂತಿದ್ದಾಗ ಮಾತ್ರ ಹೊಸ ಸಂಬಂಧವನ್ನು ಬೇಕೆಂದಂತೆ ಬರೆಯಲು ಸಾಧ್ಯವಾಗುತ್ತದೆ. ಮೊದಲೇ ಗಿಜಿಬಿಜಿ ತುಂಬಿದ್ದರೆ ಸಾಧ್ಯವಿಲ್ಲ. 

ಸ್ನೇಹಿತರನ್ನು ಪರಿಚಯಿಸಿ

ಸ್ನೇಹಿತರೆಂದರೆ ನಾವು ಆಯ್ಕೆ ಮಾಡಿಕೊಂಡ ಕುಟುಂಬ. ಹಾಗಾಗಿ ನಿಮ್ಮ ಸ್ನೇಹಿತರನ್ನು ಪಾರ್ಟ್ನರ್‌ಗೆ ಪರಿಚಯ ಮಾಡಿಕೊಡುವುದು, ಅವರ ಸ್ನೇಹಿತರನ್ನು ಭೇಟಿಯಾಗುವುದು ಮುಖ್ಯ. ಹೀಗೆ ಒಬ್ಬರು ಮತ್ತೊಬ್ಬರ ಸ್ನೇಹಿತರನ್ನು ಚೆನ್ನಾಗಿ ಪರಿಚಯ ಮಾಡಿಕೊಳ್ಳುವುದರಿಂದ ಎರಡು ಜಗತ್ತುಗಳು ಒಂದಾಗುತ್ತವೆ. ನಿಮ್ಮಿಬ್ಬರಿಗೂ ಇಷ್ಟವಾದ ಜನರು ನಿಮ್ಮೊಂದಿಗೆಯೇ ಇರುತ್ತಾರೆ. ಅಲ್ಲದೆ, ನಿಮ್ಮ ಸೋಷ್ಯಲ್ ಲೈಫ್ ಚೆನ್ನಾಗಿರುತ್ತದೆ. ಇದರಿಂದ ನಿಮ್ಮಿಬ್ಬರ ಬಾಂಡಿಂಗ್ ಚೆನ್ನಾಗಿರುತ್ತದೆ. ಅಧ್ಯಯನಗಳ ಪ್ರಕಾರ, ಕಾಮನ್ ಫ್ರೆಂಡ್ಸ್ ಇರುವವರ ಸಂಬಂಧ ಹೆಚ್ಚು ಗಟ್ಟಿಯಾಗಿರುತ್ತದೆ. 

ಡೇಟಿಂಗ್ ಹೋದಾಗಲೂ ಮಾತನಾಡದಿದ್ದರೆ ಹೇಗೆ?

ಸಾಧಿಸಬಲ್ಲ ಗುರಿ ಸೆಟ್ ಮಾಡಿ

ಎಲ್ಲರಿಗೂ ಅವರವರ ಪಾರ್ಟ್ನರ್‌ಗಳು ಹಾಗೂ ಅರೊಂದಿಗಿನ ಸಂಬಂಧದಿಂದ ಒಂದಿಷ್ಟು ನಿರೀಕ್ಷೆಗಳಿರುತ್ತವೆ. ಆದರೆ, ತಪ್ಪು ನಿರೀಕ್ಷೆಗಳು ಹಾಗೂ ಅತಿಯಾದ ನಿರೀಕ್ಷೆಗಳು ಸಂಬಂಧವನ್ನು ಹದಗೆಡಿಸುತ್ತವೆ. ಹಾಗಾಗಿ ನಿಮ್ಮ ಜೋಡಿಯನ್ನು ಸೀಮೆಗಿಲ್ಲದ ಜೋಡಿ ಎಂಬಂತೆ ಚಿತ್ರಿಸಿಕೊಳ್ಳುವುದನ್ನು ಬಿಡಿ. ಆದರ್ಶ ಸಂಬಂಧದ ಕನಸು ಬಿಟ್ಟು ಬದುಕಿನ ರಿಯಾಲಿಟಿಗೆ ತೆರೆದುಕೊಳ್ಳಿ. ಐಡಿಯಲ್ ಸಂಬಂಧದಲ್ಲಿ ವಾದ, ರೊಮ್ಯಾನ್ಸ್, ತ್ಯಾಗ, ಜಗಳ ಎಲ್ಲವೂ ಇರುತ್ತದೆ. ಇಂಥವೆಲ್ಲದರ ನಡುವೆಯೂ ಪ್ರೀತಿ ಉಳಿಸಿಕೊಳ್ಳುವುದೇ ನಿಜವಾದ ಸಂಬಂಧ. 

ನಿಮ್ಮ ಎಕ್ಸ್‌ನ್ನು ಅವರ ಪಾಡಿಗೆ ಬಿಡಿ

ಈ ಬಗ್ಗೆ ನಿಮಗೆ ತಜ್ಞರು ಸಲಹೆ ನೀಡಬೇಕಿಲ್ಲ. ಆದರೆ, ನಿಮ್ಮ ಈಗಿನ ಸಂಗಾತಿಯೊಂದಿಗಿರುವ ಸಮಯವನ್ನು ಎಕ್ಸ್ ಬಗ್ಗೆ ಯೋಚಿಸುತ್ತಾ, ಅವರ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಕಳೆಯುವುದು ಬಹಳ ಕೆಟ್ಟ ಅಭ್ಯಾಸ. ಹಳೆಯದಂತೂ ಮುಗಿದಿದೆ. ಹೊಸತು ಕೂಡಾ ಮುಗಿಯುವಂತೆ ಮಾಡಿಕೊಳ್ಳುತ್ತೀರಿ ಅಷ್ಟೇ. ಈ ಸಂಬಂಧ ಲಾಂಗ್ ಲಾಸ್ಟಿಂಗ್ ಆಗಿರಬೇಕೆಂದರೆ ಎಕ್ಸ್ ಲವರ್ ಯೋಚನೆ ಬಿಟ್ಟುಬಿಡಿ. ಬಿಟ್ಟುಹೋದವರ ಬಗ್ಗೆ ಕೋಪವೂ ಬೇಡ, ಪ್ರೇಮವೂ ಬೇಡ. ಅವರ ಬಗ್ಗೆ ಯಾವುದೇ ಫೀಲಿಂಗ್ಸ್ ಇಟ್ಟುಕೊಳ್ಳದೇ, ಒಂದು ನಿಮಿಷವೂ ಅವರ ಬಗ್ಗೆ ಯೋಚಿಸದಿರುವುದಕ್ಕಿಂತ ಬೆಸ್ಟ್ ರಿವೇಂಜ್ ಇನ್ನೇನಿದೆ? 

ನಿಮ್ಮದು ಒನ್ ಸೈಡ್ ಲವ್ವಾ? ಅದರಿಂದ ಈಚೆ ಬರಲು ಹೀಗ್ಮಾಡಿ!

ಪಾರ್ಟ್ನರ್ ಹೇಗಿದ್ದಾರೋ ಹಾಗೆ ಒಪ್ಪಿಕೊಳ್ಳಿ

ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕುವಾಗ ಮಾತ್ರ ಟರ್ಮ್ಸ್ ಆ್ಯಂಡ್ ಕಂಡಿಶನ್ಸ್ ಅಪ್ಲೈ ಆಗೋದು. ಸಂಬಂಧದ ವಿಷಯದಲ್ಲಿ ಕಂಡೀಶನ್ಸ್ ಅಲ್ಲ, ಅಂಡರ್‌ಸ್ಟ್ಯಾಂಡಿಂಗ್ ಮುಖ್ಯ. ನಿಮಗೆ ಬೇಕಾದಂತೆ ಸಂಗಾತಿಯನ್ನು ಬದಲಿಸಿಕೊಳ್ಳುವುದಕ್ಕೂ ಬಟ್ಟೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Kannada Celebrity Lovers: ಪ್ರೀತಿಯಲ್ಲಿ ಬಿದ್ದಿರುವ 7 ಕನ್ನಡ ಕಿರುತೆರೆಯ ಜೋಡಿಗಳೂ 2026ರಲ್ಲಿ ಮದುವೆ ಆಗ್ತಾರಾ?
ಅಳಿಯನಿಗೆ ರಾಜ ಮರ್ಯಾದೆ: 158 ಬಗೆಯ ಭಕ್ಷ್ಯ ಸಿದ್ಧಪಡಿಸಿ ಬಡಿಸಿದ ಆಂಧ್ರದ ಕುಟುಂಬ