ಹುಡುಗಿಯರು ಇಷ್ಟ ಪಡುವ ಹುಡುಗರ 'ಆ' ಸ್ವಭಾವ ಯಾವ್ದು ಗೊತ್ತಾ?

By Suvarna NewsFirst Published Dec 30, 2019, 2:33 PM IST
Highlights

ಹುಡುಗೀರ ಬಗ್ಗೆ ಹುಡುಗ್ರು ಏನೇನೆಲ್ಲ ಕಂಪ್ಲೇಂಟ್‌ ಮಾಡುತ್ತಾರೆ. ಆದರೆ ಅವಳ ಆ ವರ್ತನೆಗೆ ಹುಡುಗನ ಸ್ವಭಾವವೇ ಕಾರಣ ಆಗಿರುತ್ತೆ. ಸುಮ್‌ ಸುಮ್ನೇ ಕಂಪ್ಲೇಂಟ್‌ ಮಾಡೋ ಬದಲು ಅವಳಿಗಿಷ್ಟವಾಗೋ ಹಾಗೆ ಸ್ವಭಾವ ಬದಲಾಯಿಸಿಕೊಂಡರೆ..
 

ಹುಡುಗ ಹುಡುಗೀರಲ್ಲಿ ಬ್ರೇಕ್‌ಅಪ್‌ ಆಗೋದು, ಜಗಳ ಆಗೋದು ಕಾಮನ್‌. ಆದರೆ ಹೆಚ್ಚಿನ ಸಲ ಇದಕ್ಕೆ ಕಮ್ಯೂನಿಕೇಶನ್‌ ಗ್ಯಾಪ್‌ ಕಾರಣ ಆಗಿರುತ್ತೆ. ಕೆಲವೊಮ್ಮೆ ಹುಡುಗೀರ ಕೆಲವೊಂದು ಸ್ವಭಾವದ ಪರಿಚಯವಿಲ್ಲದೇ ಹುಡುಗ ಆಡಿದ ಮಾತು ಜಗಳಕ್ಕೆ ಗುರಿಯಾಗುತ್ತೆ. ಕೆಲವರನ್ನು ನೀವು ಗಮನಿಸಿ, ಅವರ ಸ್ವಭಾವಕ್ಕೆ ಹೆಚ್ಚೆಚ್ಚು ಹೆಣ್ಮಕ್ಕಳು ಅವರಿಗೆ ಹತ್ತಿರವಾಗುತ್ತಾರೆ. ಆದರೆ ಅದನ್ನು ಸಹಿಸದ ಉಳಿದ ಹುಡುಗರು ಹುಡುಗಿಯರ ಕ್ಯಾರೆಕ್ಟರ್‌ ಮೇಲೆ ಗುಲ್ಲು ಹಬ್ಬಿಸುತ್ತಾರೆ.

ಆ ಹುಡುಗನನ್ನು ವೈರಿಯಂತೆ ನೋಡುತ್ತಾರೆ. ಅಷ್ಟಕ್ಕೂ ಹುಡುಗೀರಿಗೆ ಇಷ್ಟವಾಗುವ ಹಾಗೂ ಇಷ್ಟವಾಗದ ಕೆಲವೊಂದು ಸ್ವಭಾವಗಳಿವೆ. ಅದ್ಯಾವುದು ಅನ್ನೋದನ್ನು ತಿಳಿದುಕೊಂಡು ಮುಂದುವರಿದರೆ ಜಗಳ, ಬ್ರೇಕ್‌ಗಳಿಂದ ದೂರ ಇರಬಹುದು.

ಬ್ರೇಕಪ್ ಬಳಿಕ ಸೇಡು ಸಾಧಿಸುವ ರಾಶಿಯವರಿವರು!

1. ಕೇರಿಂಗ್‌ ಸ್ವಭಾವ

ಹೆಣ್ಮಕ್ಕಳು ಎಷ್ಟೇ ದೊಡ್ಡವರಾದ್ರೂ ಅವರನ್ನು ಚಿಕ್ಕ ಹುಡುಗಿಯಂತೆ ಮಾತಾಡಿಸೋದನ್ನು ಹೆಚ್ಚು ಇಷ್ಟ ಪಡುತ್ತಾರೆ. ಅದರಲ್ಲೂ ಹೆಚ್ಚು ಕೇರಿಂಗ್‌ ಸ್ವಭಾವದ ಹುಡುಗರು ಹೆಣ್ಮಕ್ಕಳಿಗೆ ಬೇಗ ಆಪ್ತರಾಗ್ತಾರೆ. ಸಂಶೋಧನೆಯ ಹೆಣ್ಮಕ್ಕಳು ದೀರ್ಘಕಾಲ ಅವರ ಜೊತೆಗಿರಬಹುದಾದಂಥಾ ಸಂಗಾತಿಯ ನಿರೀಕ್ಷೆಯಲ್ಲಿರುತ್ತಾರೆ. ಇಂಥಾ ಕೇರಿಂಗ್‌ ಸ್ವಭಾವದ ಗಂಡು ತಾನು ಕಷ್ಟದಲ್ಲಿರುವಾಗಲೂ ಸಹಾಯ ಮಾಡುತ್ತಾನೆ ಅನ್ನೋ ನಂಬಿಕೆ ಮೂಡಿಸುತ್ತಾನೆ.

2. ಅವಳ ನಿಲುವನ್ನು ಗೌರವಿಸುವವರು

ಅವಳು ಏನೇ ಮಾಡಿದರೂ ಹೊಗಳಿ ಅಟ್ಟಕ್ಕೇರಿಸುತ್ತಾ, ಅವಳಂಥಾ ಹುಡುಗಿ ಜಗತ್ತಿನಲ್ಲೇ ಇಲ್ಲ ಅಂತ ಬಿಂಬಿಸೋ ಹುಡುಗರ ಪೊಳ್ಳುತನ ಹುಡುಗೀರಿಗೆ ಬಹಳ ಬೇಗ ಗೊತ್ತಾಗಿಬಿಡುತ್ತೆ. ಅಂಥಾ ಹುಡುಗರನ್ನು ಅವರು ಜೋಕರ್‌ಗಳಂತೆ ನೋಡುತ್ತಾರೆ. ಬದಲಾಗಿ ಅವಳ ನಿಲುವು, ನಿರ್ಧಾರಗಳ ಬಗ್ಗ್ಗೆ ಗೌರವ ಪ್ರದರ್ಶಿಸೋ ಹುಡುಗ ನಿಜಕ್ಕೂ ಇಷ್ಟ ಆಗ್ತಾನೆ. ಅವರನ್ನು ಆಕೆಯೂ ಗೌರವಿಸುತ್ತಾಳೆ. ಅವಳ ನಿಲುವನ್ನು ವಿಮರ್ಶಿಸುವುದಕ್ಕೂ ಹೆಚ್ಚಿನ ಹುಡುಗಿಯರಿಗೆ ತಕರಾರು ಇರೋದಿಲ್ಲ. ಆದರೆ ಅವಳನ್ನು ಹೀನ ಮಾಡಿ ನೋಡುವ ಹುಡುಗರನ್ನು ಅವಳು ಕಾಲ ಕಸಕ್ಕಿಂತ ಕಡೆಯಾಗಿ ನೋಡ್ತಾಳೆ ಅನ್ನೋದು ಗೊತ್ತಿರಲಿ.

ಮಂಚದಲ್ಲಿ ಸ್ಮಾರ್ಟ್‌ಪೋನ್‌ ಬಳಸುತ್ತೀರಾ? ನಿಮ್ಮ ಸೆಕ್ಸ್‌ ಲೈಫ್‌ ಹಾಳಾಗಬಹುದು ಹುಷಾರ್‌!

3. ಹಾಸ್ಯ ಸ್ವಭಾವ, ತುಂಟತನ

ಸದಾ ಮುಖದ ಮೇಲೆ ತುಂಟ ನಗುವನ್ನು ತುಳುಕಿಸುತ್ತಾ, ಅವಳನ್ನು ಹಿತವಾಗಿ ರೇಗಿಸುವ ಹುಡುಗ ಬಹಳ ಬೇಗ ಹುಡುಗಿಗೆ ಹತ್ತಿರವಾಗ್ತಾನೆ. ಹಾಗಂತ ಅಪಹಾಸ್ಯ ಅವಳಿಗೆ ಸೇರದು. ಇನ್ನೊಬ್ಬರನ್ನು ಆಡಿಕೊಂಡು ನಗುವ ಹುಡುಗರ ಎದುರಲ್ಲಿ ಆಕೆ ನಕ್ಕಂತೆ ಮಾಡಿದರೂ ಮನಸ್ಸಲ್ಲಿ ಆತನ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುವುದಿಲ್ಲ. ಹುಡುಗೀರು ಬಹಳ ಸೆನ್ಸಿಟಿವ್‌ ಆಗಿರ್ತಾರೆ, ಹಾಸ್ಯ ಒಂಚೂರು ಅಶ್ಲೀಲದ ಹಾದಿ ಹಿಡಿದರೂ ಅವರು ಅಸಹ್ಯ ಪಡೋ ಸಾಧ್ಯತೆ ಇದೆ. ನಿರುಪದ್ರಪಿ ತುಂಟತನ, ಹಾಸ್ಯಗಳನ್ನು ಆಕೆ ಬಹಳ ಇಷ್ಟಪಡುತ್ತಾಳೆ.

4. ಅಹಂ ಇಲ್ಲದ ನಿಸ್ವಾರ್ಥಿ ಹುಡುಗ ಫೇವರೆಟ್‌ ಆಗ್ತಾನೆ

ಕೆಲವು ಹುಡುಗರು ಸ್ವಭಾವತಃ ಅಹಂ ಹೊಂದಿರುತ್ತಾರೆ. ಸದಾ ತನ್ನ ಬಗ್ಗೆಯೇ ಕೊಚ್ಚಿಕೊಂಡಿರುತ್ತಾರೆ. ಇತರರನ್ನು ಕೇವಲವಾಗಿ ನೋಡುತ್ತಾರೆ. ಇಂಥಾ ಹುಡುಗರು ಎಷ್ಟೇ ಸುಂದರವಾಗಿದ್ದರೂ ಹುಡುಗಿಯರ ಲೀಸ್ಟ್‌ನಿಂದ ಬಹಳ ಬೇಗ ಔಟ್‌ ಆಗಿ ಬಿಡ್ತಾರೆ. ಸದಾ ತನ್ನ ಬಗ್ಗೆಯೇ ಯೋಚಿಸುವ, ಸ್ವಾರ್ಥಿ ಹುಡುಗ ಅವಳಿಗೆ ಯಾವತ್ತೂ ಇಷ್ಟ ಆಗಲ್ಲ. ಎಲ್ಲರನ್ನು ಆತ್ಮೀಯವಾಗಿ ಕಾಣುವ ಹುಡುಗನೇ ಅವಳ ಪೇವರೆಟ್‌ ಮ್ಯಾನ್‌.

5. ಮೆಚ್ಯೂರಿಟಿ, ಜಾಣತನ

ಪರಿಸ್ಥಿತಿಯನ್ನು ಸ್ಮಾರ್ಟ್‌ ಆಗಿ ನಿಭಾಯಿಸೋ ಹುಡುಗ ಯಾವತ್ತೂ ಹೀರೋ ಅನಿಸಿಕೊಳ್ತಾನೆ. ಅವನೇ ಅವಳ ಹೀರೋನೂ ಆಗ್ತಾನೆ. ಒಂದು ಮಟ್ಟಿನ ಮೆಚ್ಯೂರಿಟಿ ಇರುವ ಹುಡುಗನೇ ಆಕೆಗಿಷ್ಟವಾಗ್ತಾನೆ. ಬೇಜವಾಬ್ದಾರಿಯ ಹುಡುಗ ಕೆಲವೊಮ್ಮೆ ಇಷ್ಟವಾದರೂ ಹೆಚ್ಚಿನ ಸಲ ಕಷ್ಟವಾಗುತ್ತಾನೆ.

ಒಬ್ಬೊಬ್ಬ ಹುಡುಗಿಯ ಸ್ವಭಾವ ಒಂದೊಂಥರ. ಆದರೂ ಒಂದು ಮಟ್ಟಿನ ಸಿಮಿಲಾರಿಟಿ ಇದ್ದೇ ಇರುತ್ತೆ. ಅಂಥಾ ಗಡಿರೇಖೆಯೊಳಗೆ ಬರೋ 90 ಪರ್ಸೆಂಟ್‌ ಹುಡುಗೀರು ಇಂಥಾ ಹುಡುಗರನ್ನೇ ತನ್ನ ಜತೆಗಾರರನ್ನಾಗಿಸಲು ಬಯಸುತ್ತಾರೆ.

click me!