Police Helpline: ಅಮ್ಮ ಐಸ್‌ಕ್ರೀಮ್ ತಿಂದಿದ್ದಕ್ಕೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಬಾಲಕ!

4 ವರ್ಷದ ಬಾಲಕನೊಬ್ಬ ತಾನು ತಿನ್ನಲು ಇಟ್ಟಿದ್ದ ಐಸ್‌ಕ್ರೀಮ್ ಅನ್ನು ತಾಯಿ ತಿಂದಿದ್ದಕ್ಕೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಅಮ್ಮನನ್ನು ಬಂಧಿಸಿ ಜೈಲಿಗೆ ಕಳುಹಿಸುವಂತೆ ಒತ್ತಾಯಿಸಿದ್ದಾನೆ. ನಂತರ ಪೊಲೀಸರೇ ಮಗುವಿಗೆ ಐಸ್‌ಕ್ರೀಂ ಉಡುಗೊರೆ ನೀಡಿದ್ದಾರೆ.

4 year old boy emergency call to police helpline and complained against mom for ice cream sat

ನಾನು ತಿನ್ನಬೇಕು ಎಂದು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಐಸ್‌ಕ್ರೀಮ್ ಅನ್ನು ನನ್ನ ಅಮ್ಮ ನನಗೆ ಕೊಡದೇ ಕದ್ದು ತಿಂದಿದ್ದಾಳೆ. ನೀವು ಕೂಡಲೇ ಬಂದು ನನ್ನ ಅಮ್ಮನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಹಿಸಿ ಎಂದು ಪೊಲೀಸ್ ಸಹಾಯವಾಣಿಗೆ 4 ವರ್ಷದ ಬಾಲಕ ಕರೆ ಮಾಡಿದ ಘಟನೆ ನಡೆದಿದೆ.

ಈ ಘಟನೆ ಅಮೆರಿಕದ ವಿಸ್ಕಾನ್ಸಿನ್‌ನಲ್ಲಿ ನಡೆದಿದೆ. ತಾನು ತಿನ್ನಲು ಇಟ್ಟಿದ್ದ ಐಸ್‌ಕ್ರೀಂ ಅನ್ನು ಅಮ್ಮ ತಿಂದಿದ್ದಾಳೆ ಎಂದು ತಿಳಿದ ನಂತರ ನಾಲ್ಕು ವರ್ಷದ ಹುಡುಗ ಪೊಲೀಸರಿಗೆ ಕರೆ ಮಾಡಿದ್ದಾನೆಂದು ಸಿಎನ್‌ಎನ್ ವರದಿ ಮಾಡಿದೆ. ಅಮೇರಿಕಾದ ಪೊಲೀಸ್ ಎಮರ್ಜೆನ್ಸಿ ನಂಬರ್ 911ಗೆ ಕರೆ ಮಾಡಿ, ಅಮ್ಮ ತನ್ನ ಐಸ್‌ಕ್ರೀಂ ಕದ್ದು ತಿಂದಿದ್ದಾಳೆ ಎಂದು ಬಾಲಕ ದೂರು ನೀಡಿದ್ದಾನೆ. ತನ್ನ ಅನುಮತಿ ಇಲ್ಲದೆ ಅಮ್ಮ ಐಸ್‌ಕ್ರೀಂ ತಿಂದಿದ್ದಾಳೆ. ಆದ್ದರಿಂದ ಅಮ್ಮನನ್ನು ಅರೆಸ್ಟ್ ಮಾಡಬೇಕು ಎಂದು ಮುಗ್ಧ ಬಾಲಕ ಕೇಳಿಕೊಂಡಿದ್ದಾನೆ. ಪೊಲೀಸರೊಂದಿಗೆ ನಾಲ್ಕು ವರ್ಷದ ಬಾಲಕ ನಡೆಸಿದ ಸಂಭಾಷಣೆಯ ಆಡಿಯೋವನ್ನು ಸಿಎನ್‌ಎನ್ ಬಿಡುಗಡೆ ಮಾಡಿದೆ.

Latest Videos

ಪೊಲೀಸ್: ಹಲೋ, ಇದು ರೇಸಿನ್ ಕೌಂಟಿ 911. ನಿಮ್ಮ ವಿಳಾಸ ಯಾವುದು?
ಮಗು: ನನ್ನ ಮಮ್ಮಿ ಕೆಟ್ಟವಳು.
ಪೊಲೀಸ್: ಸರಿ, ಏನಾಯಿತು?
ಮಗು: ಬಂದು ನನ್ನ ಮಮ್ಮಿಯನ್ನು ಕರೆದುಕೊಂಡು ಹೋಗಿ.
ಪೊಲೀಸ್: ಸರಿ, ಏನಾಯಿತು ಎಂದು ಹೇಳು?
ಮಗು: ಬಂದು ನನ್ನ ಮಮ್ಮಿಯನ್ನು ಕರೆದುಕೊಂಡು ಹೋಗಿ.
ಪೊಲೀಸ್: ಅಲ್ಲಿ ಏನು ನಡೆಯುತ್ತಿದೆ ಎಂದು ಹೇಳಬಲ್ಲೆಯಾ?
ಮಹಿಳೆ: ಇದು ನನ್ನ ಮಗ. ಅವನಿಗೆ 4 ವರ್ಷ. ಅವನು ಫೋನ್ ತೆಗೆದು ಕರೆ ಮಾಡಿದ್ದಾನೆ.

ಇದನ್ನೂ ಓದಿ: ನಾಚಿಕೆ ಬಿಟ್ಟು ಮಹಿಳೆಯರು ಗಂಡನ ಕಿವಿಯಲ್ಲಿ ಪಿಸುಗುಡಬೇಕಾದ ರೊಮ್ಯಾಂಟಿಕ್ ಮಾತುಗಳು!

ಪೊಲೀಸ್: ಸರಿ.
ಮಹಿಳೆ: ಅವನು 911ಕ್ಕೆ ಕರೆ ಮಾಡುತ್ತಾನೆ ಎಂದು ನಾವು ತಡೆಯಲು ಪ್ರಯತ್ನಿಸುತ್ತಿದ್ದೆವು.
ಮಗು: ಇಲ್ಲ - ನಾನು ಪೊಲೀಸರಿಗೆ ಕರೆ ಮಾಡಿದೆ, ನಾನು ಅವರಿಗೆ ಬಂದು ಮಮ್ಮಿಯನ್ನು ಕರೆದುಕೊಂಡು ಹೋಗಿ ಜೈಲಿಗೆ ಹಾಕಲು ಹೇಳಿದೆ.
ಮಹಿಳೆ: ನಾನು ಅವನ ಐಸ್‌ಕ್ರೀಮ್ ತೆಗೆದು ತಿಂದೆ. ಬಹುಶಃ ಅದಕ್ಕಾಗಿ ಅವನು ಕರೆ ಮಾಡಿರಬಹುದು.

Wisconsin 4-year-old Dez’Riel Lowery called 911 and told police to arrest his mom for eating his ice cream. After a visit to Dez’Riel's house to teach him 911 is only for emergencies, officers returned the next day with ice cream. pic.twitter.com/4E9qbBkjCr

— Newsweek (@Newsweek)

ಹೀಗೆ ಪೊಲೀಸರೊಂದಿಗೆ ಮಗು ಮತ್ತು ತಾಯಿ ನಡೆಸಿದ ಸಂಭಾಷಣೆಯ ಆಡಿಯೋ ರೆಕಾರ್ಡ್ ಇದು. ಮಗು ಪೊಲೀಸರೊಂದಿಗೆ ಮಾತನಾಡುತ್ತಿರುವಾಗ ತಾಯಿ ಮಧ್ಯದಲ್ಲಿ ಬಂದು ಫೋನ್ ತೆಗೆದುಕೊಂಡು ಪೊಲೀಸರಿಗೆ ವಿಷಯಗಳನ್ನು ವಿವರಿಸಿದರು. ಕೊನೆಗೆ ವಿಷಯಗಳನ್ನು ಖಚಿತಪಡಿಸಲು ಪೊಲೀಸರು ನೇರವಾಗಿ ಮನೆಗೆ ಬಂದರು. ಐಸ್‌ಕ್ರೀಂ ತಿಂದಿದ್ದಕ್ಕೆ ಅಮ್ಮನನ್ನು ಅರೆಸ್ಟ್ ಮಾಡಬೇಕಾ ಎಂದು ಕೇಳಿದಾಗ, ಬೇಡ ನನ್ನ ಅಮ್ಮನನ್ನು ಕರೆದುಕೊಂಡು ಹೋಗಬೇಡಿ ಎಂದು ಮಗು ಹೇಳಿತು. ಕೊನೆಗೆ ಮಗುವನ್ನು ಸಮಾಧಾನಪಡಿಸಿ ಪೊಲೀಸರು ವಾಪಸ್ ಹೋದರು. ಪುನಃ ಪೊಲೀಸರು ಮರುದಿನ ಆ ಮಗುವಿಗೆ ಉಡುಗೊರೆಯಾಗಿ ಐಸ್‌ಕ್ರೀಂ ತಂದುಕೊಟ್ಟರು ಎಂದು ವರದಿಯಾಗಿದೆ.

ಇದನ್ನೂ ಓದಿ: ತಾಯಿಯಾದ್ಮೇಲೆ ಅಂದ ಹೆಚ್ಚಾಯ್ತಾ? ಪ್ಯಾರೀಸ್‌ ರಸ್ತೆಯಲ್ಲಿ ಪ್ರಣೀತಾ ಸುಭಾಷ್

click me!