ನಾಲ್ಕನೇ ಮದುವೆಗೆ ಸಿದ್ಧವಾದ ಮಹಾಪುರುಷ, ಹೆಂಡತಿಯರೇ ಹೆಲ್ಪ್ ಮಾಡ್ತಾರಂತೆ!

By Suvarna News  |  First Published Nov 18, 2020, 7:17 PM IST

ಈಗಾಗಲೇ ಮೂರು ಮದುವೆ ಆಗಿದೆ/ ನಾಲ್ಕನೇ ಪತ್ನಿಗಾಗಿ ಹುಡುಕಾಟ/ ಹೆಂಡತಿಯರ ಸಹಾಯ ಪಡೆದುಕೊಂಡೆ ನಾಲ್ಕನೇ ಮದುವೆಗೆ ಸಿದ್ಧ/ ಪ್ರತಿ ಮದುವೆಯಾದಾಗಲೂ ಆರ್ಥಿಕ ಸ್ಥಿತಿ ಸುಧಾರಿಸಿದೆ


ಇಸ್ಲಾಮಾಬಾದ್( ನ. 18) ಈಗಾಗಲೇ ಮೂರು ಹೆಂಡತಿಯರನ್ನು ಹೊಂದಿರುವ 20 ವರ್ಷದ ಗೃಹಸ್ಥ ನಾಲ್ಕನೆಯ  ಪತ್ನಿಯ ಹುಡುಕಾಟದಲ್ಲಿ ಇದ್ದಾನೆ. ನಾಲ್ಕನೇ ಪತ್ನಿ ಹುಡುಕಿಕೊಡಲು ತನ್ನ ಮೂವರು ಪತ್ನಿಯರ ನೆರವನ್ನೇ ಪಡೆದುಕೊಳ್ಳುತ್ತಿದ್ದಾನೆ!

ಮದುವೆ ಗಂಡು ಅದ್ನಾನ್  16 ನೇ ವಯಸ್ಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಮೊದಲ ಬಾರಿಗೆ ವಿವಾಹವಾದರು. ಮೂರು ವರ್ಷಗಳ ನಂತರ, ಅವರು ಎರಡನೇ ವಿವಾಹವಾದರು. ಕಳೆದ ವರ್ಷ್ ಮೂರನೇ ವಿವಾಹವಾದರು. 

Tap to resize

Latest Videos

undefined

'ಮದುವೆಯಾಗಿ ವರ್ಷವಾದರೂ ಆಕೆ ಬೆತ್ತಲಾಗಿಲ್ಲ'

ಪಾಕಿಸ್ತಾನದ ಮಾಧ್ಯಮವೊಂದಕ್ಕೆ ದಂಪತಿಗಳೆಲ್ಲ ಜತೆಯಾಗಿಯೇ ಸಂದರ್ಶನ ನೀಡಿದ್ದಾರೆ. ಮಕ್ಕಳು ಕೂಡ ಜತೆಯಲ್ಲೇ ಇವೆ. ಮೂವರು ಹೆಂಡತಿಯರ ಹೆಸರು ಎಸ್‌ ಅಕ್ಷರದಿಂದ ಆರಂಭವಾಗುತ್ತಿದ್ದು ನಾಲ್ಕನೆಯವಳು ಎಸ್ ಎನ್ನುವಳೆ ಆಗಿರಲಿ ಎಂಬ ಆಸೆ ಅವರಿಗಿದೆ.

ನನ್ನ ತಿಂಗಳ ವೆಚ್ಚ ಒಂದರಿಂದ ಒಂದೂಕಾಲು ಲಕ್ಷ ರೂ. ಆಗುತ್ತದೆ. ಪ್ರತಿ ಮದುವೆಯಾದ ನಂತರವೂ ನನ್ನ ಆರ್ಥಿಕತೆ ಸುಧಾರಿಸಿಕೊಂಡಿತು. ಶಂಭಾಲ್, ಶಣಾನಾ, ಶಹೀದಾ ಮೂವರು ಪತ್ನಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ.  ಮೂವರು ಪತ್ನಿಯರು ಜಗಳ ಮಾಡಿಕೊಳ್ಳುತ್ತಿದ್ದಾರೆ ಎಂದು ಭಾವಿಸಿದರೆ ಅದು ನಿಮ್ಮ ತಪ್ಪು. ನನಗೆ ಅದ್ನಾನ್ ಹೆಚ್ಚು ಸಮಯ ನೀಡಬೇಕು ಎಂದು ಪ್ರತಿಯೊಬ್ಬರು ಅಪೇಕ್ಷೆ ಪಡುತ್ತಾರಂತೆ. 

 

click me!