Adventurous Sexನಿಂದ ದಾಂಪತ್ಯ ರೊಮ್ಯಾಂಟಿಕ್ ಆಗಿರುತ್ತೆ!
ದಾಂಪತ್ಯ ಬೋರಾಗದಿರಲು ಏನು ಮಾಡಬೇಕು ಎನ್ನುವುದು ಎಂದಿನಿಂದಲೂ ಇರುವ ಪ್ರಶ್ನೆ. ದಂಪತಿ ಪರಸ್ಪರ ಹತ್ತಿರವಾಗಲು, ಆಕರ್ಷಣೆ ಉಳಿಸಿಕೊಳ್ಳಲು, ಲೈಂಗಿಕವಾಗಿ ಹೆಚ್ಚು ಆಪ್ತರಾಗಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮುಖ್ಯ. ಅಂತಹ ಹವ್ಯಾಸಗಳು ಯಾವುವು ನೋಡಿಕೊಳ್ಳಿ.
ಬದುಕು (Life) ರೋಮಾಂಚಕವಾಗಿರಬೇಕು ಎಂದು ಏನೇನೋ ಸಾಹಸಗಳನ್ನು ಮಾಡುವವರಿದ್ದಾರೆ. ಯುವಕ-ಯುವತಿಯರು ಏಕಾಂಗಿಯಾಗಿಯೇ ಪ್ರಪಂಚ ಪರ್ಯಟನೆಯನ್ನೂ ಮಾಡುತ್ತಾರೆ. ಈಗೀಗ ದಂಪತಿಗಳೂ (Couples) ಯಾವ್ಯಾವುದೋ ಉದ್ದೇಶಕ್ಕೆ ಪ್ರವಾಸವನ್ನೋ, ಅರಣ್ಯವಾಸವನ್ನೋ, ಪ್ರಾಣಿಸಾಕಣೆಯನ್ನೋ, ಆದಿವಾಸಿ ಜನರ ನಡುವೆ ಸೇವೆಯನ್ನೋ ಮಾಡಿಕೊಂಡಿರುತ್ತಾರೆ. ಆದರೆ, ಸಾಮಾನ್ಯರಿಗೆ ಅದೆಲ್ಲ ಸಾಧ್ಯವಾಗದು. ಮದುವೆಯಾದ ಬಳಿಕ ಸೆಕ್ಯೂರ್ಡ್ ವಲಯದಲ್ಲಿ ಇರಲು ಯತ್ನಿಸುವವರೇ ಹೆಚ್ಚು. ಎಲ್ಲವನ್ನೂ ಬಿಟ್ಟು ಪ್ರಪಂಚ ಸುತ್ತುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆದರೆ, ಇರುವ ಕಡೆಯಲ್ಲೇ ಕೆಲವು ವಿಶಿಷ್ಟ ಹವ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಆಸಕ್ತಿದಾಯಕವನ್ನಾಗಿಸಿಕೊಳ್ಳಬಹುದು. ಹಾಗೂ ದಾಂಪತ್ಯದಲ್ಲಿ ಬೇಸರವಾಗದಂತೆ ನೋಡಿಕೊಳ್ಳಬಹುದು.
ಹೌದು, ಯಾವುದೇ ಸಂಬಂಧ (Relation) ಆರಂಭದಲ್ಲಿ ಕೊಂಚ ವಿಭಿನ್ನವಾಗಿ ಭಾಸವಾಗುತ್ತದೆ. ಕೊನೆಗೆ ಎಲ್ಲವೂ ಏಕತಾನತೆಯಿಂದ ಕೂಡಿ ಬೇಸರವಾಗಬಹುದು. ಹೀಗಾಗದೆ ಇರಲು ದಂಪತಿಗಳು ಕೆಲವೊಂದು ಹವ್ಯಾಸಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆಗ ಬದುಕು ಸುಂದರವಾಗಿರುತ್ತದೆ. ಸಂಬಂಧದಲ್ಲಿ ರೋಮ್ಯಾನ್ಸ್ (Romance) ಹೆಚ್ಚುತ್ತದೆ. ಅಂತಹ ಕೆಲವು ಅಭ್ಯಾಸಗಳು ಯಾವುವು ಎಂದು ನೋಡಿಕೊಳ್ಳಿ.
ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯನೊಟ್ಟಿಗೆ ಪತ್ನಿಗೆ ಅಫೇರ್
• ಸಾಕುಪ್ರಾಣಿಯ (Pet) ಸಹವಾಸ
ಸಾಕುಪ್ರಾಣಿಗಳು ನಿಜಕ್ಕೂ ಸಂಬಂಧವನ್ನು ಹತ್ತಿರ ಬೆಸೆಯುತ್ತವೆ. ದಾಂಪತ್ಯವನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆಯಲ್ಲಿ ಸಂತಸ, ಪ್ರೀತಿ, ಉತ್ಸಾಹ (Enthusiasm) ತುಂಬುತ್ತವೆ. ಸಾಕುಪ್ರಾಣಿಗೆ ಪ್ರೀತಿ, ಉಲ್ಲಾಸ ತೋರಿಸುತ್ತ ನೀವೂ ಪರಸ್ಪರ ಇನ್ನಷ್ಟು ಹತ್ತಿರವಾಗುತ್ತೀರಿ. ಬದುಕಿನಲ್ಲಿ ಜೋಶ್ (Josh) ತುಂಬಲು ಈ ಹವ್ಯಾಸ ಸಹಕಾರಿ.
• ಆಗಾಗ ಸ್ಪಾ (Spa) ಭೇಟಿ
ಅನೇಕ ದಂಪತಿಗಳು ಅಂದುಕೊಂಡಿರುತ್ತಾರೆ, ಯಾವಾಗಲಾದರೂ ಜಂಟಿಯಾಗಿ ಸ್ಪಾ ಹೋಗಬೇಕು ಎಂದು. ಆದರೆ, ಆ ಮುಹೂರ್ತ ಕೂಡಿ ಬರದೆ ಇರಬಹುದು. ನೀವು ಹಾಗೆ ಮಾಡಬೇಡಿ. ಆಗಾಗ ಸ್ಪಾಕ್ಕೆ ಭೇಟಿ ನೀಡಿ. ಇದರಿಂದ ಜತೆಯಾಗಿ ಒತ್ತಡ ಕಡೆದುಕೊಳ್ಳಲು ಅನುಕೂಲವಾಗುತ್ತದೆ. ಪರಸ್ಪರ ಹಗುರವಾಗಿ, ಖುಷಿಯಾಗಿ ಒಂದೇ ಕಡೆ ಇರುವುದು ಅಪರೂಪವಾಗಿರುವುದರಿಂದ ಇದು ಹೊಸ ಅನುಭವ ನೀಡುತ್ತದೆ. ಅಲ್ಲದೆ, ಸ್ವಿಮ್ಮಿಂಗ್ ಪೂಲ್ (Swimming Pool) ನಲ್ಲೂ ಇಳಿದು ಆಟವಾಡಬಹುದು.
• ಮೊದಲ ಭೇಟಿಯ ಸ್ಥಳಕ್ಕೆ ಮತ್ತೆ ಭೇಟಿ! (Revisit the place where you first met)
ಸಂಬಂಧ ಬೋರೆನಿಸಿದಾಗ ಮೊದಲು ಭೇಟಿಯಾದ ಸ್ಥಳಕ್ಕೆ ಮತ್ತೊಮ್ಮೆ ಭೇಟಿ ನೀಡಿ. ಸಂಗಾತಿಯನ್ನು ಭೇಟಿಯಾದ ಕ್ಷಣ, ನೀವು ಉತ್ಸುಕರಾಗಿದ್ದುದು, ನಿಮ್ಮ-ಅವರ ಮೊದಲ ಮಾತುಕತೆ, ಮೊದಲ ರೋಮ್ಯಾನ್ಸ್ ಇಂತಹ ನೆನಪುಗಳು ಸಂಬಂಧಕ್ಕೆ ಹೊಸ ಚೇತರಿಕೆ ನೀಡುವಂಥವು. ಹಳೆಯ ನೆನಪುಗಳಿಂದ ಮನಸ್ಸು ಸಂಗಾತಿಯ ಬಗ್ಗೆ ಮೃದುವಾದ ಧೋರಣೆ ಹೊಂದುತ್ತದೆ ಹಾಗೂ ಹಿಂದಿನ ಭಾವನೆಗಳ ನೆನಪಾಗಿ ಮತ್ತೆ ರೋಮ್ಯಾನ್ಸ್ ಮೂಡಲು ಸಹಕಾರಿಯಾಗುತ್ತದೆ. ಜತೆಗೆ, ಪ್ರತಿವರ್ಷವೂ ನಿಗದಿತ ಸಮಯಕ್ಕೆ ಹನಿಮೂನ್ ತೆರಳುವ ಪರಿಪಾಠ ಇಟ್ಟುಕೊಳ್ಳಿ.
ದುಡ್ಡಿಗಾಗಿ ವಂಶಿಕಾಳ ಬಾಲ್ಯವೇ ಹಾಳಾಗುತ್ತಿದೆಯಾ?
• ವಿನೋದಮಯ (Fun) ಹಾಗೂ ಸಾಹಸಕಾರಿ (Adventurous) ಲೈಂಗಿಕ (Sex) ಕ್ರಿಯೆ
ಸಂಬಂಧದಲ್ಲಿ ಲೈಂಗಿಕ ಕ್ರಿಯೆಗೆ ಬಹಳ ಮಹತ್ವವಿದೆ. ದಂಪತಿಗಳನ್ನು ಬೆಸೆಯುವಂತೆ ಮಾಡುವ ಕ್ರಿಯೆ ಇದು. ಆದರೆ, ಇದೂ ಸಹ ಕ್ರಮೇಣ ಯಾಂತ್ರಿಕವಾಗಬಹುದು. ಸಂಬಂಧದಲ್ಲಿ ಆಕರ್ಷಣೆ ಕಳೆದುಕೊಳ್ಳದಿರಲು ಲೈಂಗಿಕ ಕ್ರಿಯೆಯನ್ನು ಪ್ರಮುಖ ಸಾಧನವನ್ನಾಗಿ ಬಳಕೆ ಮಾಡಿಕೊಳ್ಳಿ. ವಿನೋದಮಯ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿ. ಎಂದಿನಂತೆ ಬೆಡ್ ರೂಮಿನ ಹಾಸಿಗೆಯಲ್ಲೇ ರೋಮ್ಯಾನ್ಸ್ ಮಾಡುವ ಬದಲು ಸ್ಥಳವನ್ನು ಬದಲಿಸಿ. ಅಡುಗೆಮನೆಯೋ, ಬಾತ್ ರೂಮೋ, ಬಾಲ್ಕನಿಯೋ... ಹೀಗೆ ಸಾಹಸಮಯವಾಗಿರಲಿ. ಬೆಡ್ ರೂಮಿನ ಆಚೆಗೆ ಲೈಂಗಿಕವಾಗಿ ಇಬ್ಬರೂ ತೃಪ್ತಿ ಹೊಂದುವುದು ಸಂಬಂಧವನ್ನು ಇನ್ನಷ್ಟು ಬೆಸೆಯಲು ಸಹಕಾರಿ. ಇದರಿಂದ ಸಂಬಂಧದಲ್ಲಿ ಆಪ್ತತೆ ಮೂಡುತ್ತದೆ. ಲೈಂಗಿಕವಾಗಿ ಸದೃಢವಾಗಿರುವ ವಿಶ್ವಾಸವೂ ಮೂಡಿ ಪರಸ್ಪರ ಆಕರ್ಷಣೆ (Attraction) ಹೆಚ್ಚುತ್ತದೆ. ಇಂತಹ ಹಲವು ಚಟುವಟಿಕೆಗಳ ಮೂಲಕ ಖಂಡಿತವಾಗಿ ದಂಪತಿಗಳ ಬದುಕು ಸರಸಮಯವಾಗಿರುವ ಜತೆಗೆ ಆಕರ್ಷಣೀಯವೂ ಆಗಿರುತ್ತದೆ.