ಇನ್ಫೋಸಿಸ್ ಕಂಪೆನಿಯಿಂದ ಲೇಆಫ್ ಶುರುವಾಗಿದೆ. ಈಗ ಮತ್ತೆ ಯಾಕೆ ಈ ನಡೆ? ನಿಜಕ್ಕೂ ಏನಾಗ್ತಿದೆ?
ಇನ್ಫೋಸಿಸ್ ಕಂಪೆನಿಯು ಮೈಸೂರಿನಲ್ಲಿಯೇ 30-45 ಟ್ರೇನರ್ಸ್‌ನ್ನು ತೆಗೆದು ಹಾಕಿದೆ ಎಂದು ಹೇಳಲಾಗಿದೆ. ಅಸೈನ್‌ಮೆಂಟ್, ಮನಿ ಕಂಟ್ರೋಲ್ ವಿಚಾರಗಳಲ್ಲಿ ಅವರು ಫೇಲ್ ಆಗಿದ್ದಕ್ಕೆ ಈ ರೀತಿ ಮಾಡಲಾಗಿದೆಯಂತೆ.
350 ಟ್ರೇನರ್ಸ್ ಹೊರಗಡೆ ಬಂದಿದ್ರು!
ಆ ಟ್ರೇನರ್ಸ್ ಈ ಹಿಂದೆ ಕಂಪೆನಿಯ ಫೌಂಡೇಶನ್ ಸ್ಕಿಲ್ಸ್ ಟ್ರೇನಿಂಗ್ ಪ್ರೋಗ್ರಾಮ್‌ಗಳಲ್ಲಿ ಭಾಗಿಯಾಗಿದ್ದರು. ಆದರೂ ಕೂಡ ಪಾಸಿಂಗ್ ಅಂಕ ಗಳಿಸಲು ವಿಫಲರಾಗಿದದಾರೆ. ಈ ಹಿಂದೆ ಇದೇ ಕ್ಯಾಂಪಸ್‌ನಿಂದ 350 ಟ್ರೇನರ್ಸ್‌ನ್ನು ಹೊರಗಡೆ ಕಳಿಸಲಾಗಿತ್ತು. ಈ ತರಬೇತಿದಾರರು 2.5 ವರ್ಷಗಳಿಗೂ ಹೆಚ್ಚು ಕಾಲ ನೇಮಕಾತಿಗೋಸ್ಕರ ಕಾಯುತ್ತಿದ್ದರು. ಇದಾದ ಬಳಿಕ ಅವರು ಈ ರೀತಿ ವಿಳಂಬವನ್ನು ಎದುರಿಸಬೇಕಾಯಿತು ಎಂದು ವರದಿಯಾಗಿದೆ.
ಏಕಕಾಲಕ್ಕೆ 300ಕ್ಕೂ ಅಧಿಕ ಸಿಬ್ಬಂದಿ ವಜಾ ಪ್ರಕರಣ; ಇನ್ಫೋಸಿಸ್ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ
ಇನ್ನೊಂದು ಚಾನ್ಸ್ ಸಿಗತ್ತೆ!
ಇನ್ನು ಕಂಪೆನಿಯು ಟ್ರೇನರ್ಸ್‌ಗೆ ಇನ್ನೊಂದು ಚಾನ್ಸ್ ನೀಡಲಿದೆಯಂತೆ. ʼಬ್ಯುಸಿನೆಸ್ ಪ್ರೊಸೆಸ್ ಮ್ಯಾನೇಜ್‌ಮೆಂಟ್ ಮೂಲಕ ಹನ್ನೆರಡು ವಾರಗಳ ಕಾಲ ಟ್ರೇನಿಂಗ್ ನೀಡಲಾಗುವುದು. ಮೊದಲ ರೌಂಡ್‌ನಲ್ಲಿ ಫೇಲ್ ಆದವರಿಗೆ ಕಂಪೆನಿಯೊಳಗಡೆಯೇ ಈ ಚಾನ್ಸ್ ಸಿಗುವುದು. ಈ ತರಬೇತಿ ಪಡೆದುಕೊಳ್ಳುವವರಿಗೆ ಕಂಪೆನಿಯು ಸ್ಪಾನ್ಸರ್ ಕೂಡ ಮಾಡುತ್ತಿದೆ. ಈ ಮೂಲಕ ಟ್ರೇನರ್ಸ್‌ಗೆ ಒಳ್ಳೆಯ ಅವಕಾಶ ಕೊಡುತ್ತಿದೆ. ಈ ಬಗ್ಗೆ ಇನ್ಫೋಸಿಸ್ ಕಡೆಯಿಂದ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಇನ್ನು ಕಂಪೆನಿಯು ಟ್ರೇನರ್ಸ್‌ಗೆ ರಿಲೀವಿಂಗ್ ಲೆಟರ್ ಜೊತೆಯಲ್ಲಿ ಒಂದು ತಿಂಗಳು ಎಕ್ಸ್ಟ್ರಾ ಹಣ ನೀಡುವುದಂತೆ.
ಎಚ್ಚರಿಕೆ ಪತ್ರ ಸಿಕ್ಕಿತ್ತು!
ಕಂಪನಿಯ ಪ್ರಕಾರ, ಆಂತರಿಕ ಮೌಲ್ಯಮಾಪನಗಳನ್ನು ನಿರ್ಣಯಿಸುವಲ್ಲಿ ಹಲವು ಬಾರಿ ವಿಫಲವಾದ ಕಾರಣ ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ. ಮೂರು ಪರೀಕ್ಷಾ ಪ್ರಯತ್ನಗಳಲ್ಲಿ ಕನಿಷ್ಠ ಮಾನದಂಡಗಳನ್ನು ಪೂರೈಸಲು ವಿಫಲವಾದ ನಂತರ, ಸುಮಾರು 350 ಉದ್ಯೋಗಿಗಳನ್ನು ಬ್ಯಾಚ್‌ಗಳಾಗಿ ಕರೆಯಲಾಗಿದ್ದು, ಅಂತಿಮ ಎಚ್ಚರಿಕೆ ಪತ್ರಗಳನ್ನು ನೀಡಲಾಗಿದೆ ಎಂದು ವರದಿಯಾಗಿತ್ತು.
ಇನ್ಫೋಸಿಸ್ ಕ್ಯಾಂಪಸ್‌ಗೆ ನುಗ್ಗಿದ ಚಿರತೆ: ಉದ್ಯೋಗಿಗಳಿಗೆ ವರ್ಕ್‌ಫ್ರಮ್ ಹೋಮ್ ಕೊಟ್ಟ ಕಂಪನಿ
ಇನ್ಫೋಸಿಸ್ ಹೇಳಿದ್ದೇನು?
ಈ ಬಗ್ಗೆ ಇನ್ಫೋಸಿಸ್ ರಿಲೀಸ್ ಮಾಡಿದ ಹೇಳಿಕೆಯಲ್ಲಿ, "ಎಲ್ಲ ಹೊಸಬರಿಗೆ ಮೂರು ಪ್ರಯತ್ನ ಇರುವುದು, ಅದರಲ್ಲಿ ವಿಫಲವಾದರೆ ಅವರು ಕಂಪನಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ಇದನ್ನು ಅವರ ಒಪ್ಪಂದದಲ್ಲಿಯೂ ಉಲ್ಲೇಖಿಸಲಾಗಿದೆ. ಈ ಪ್ರಕ್ರಿಯೆಯು ಎರಡು ದಶಕಗಳಿಂದ ನಡೆಯುತ್ತಿದೆ." ಎಂದು ತಿಳಿಸಿತ್ತು.
ಈ ಹಿಂದೆ ಬಲಿಪಶುಗಳಾದ ಅನೇಕ ಉದ್ಯೋಗಿಗಳು 2022 ರ ಇಂಜಿನಿಯರಿಂಗ್ ಬ್ಯಾಚ್‌ಗೆ ಸೇರಿದವರಾಗಿದ್ದು, ಅವರು 2023 ರ ಅಕ್ಟೋಬರ್‌ನಲ್ಲಿ ಕೆಲಸಕ್ಕೆ ಸೇರುವ ಮೊದಲು ಎರಡು ವರ್ಷಗಳ ಕಾಯುವ ಅವಧಿಯನ್ನು ಸಹಿಸಿಕೊಂಡರು. ಆರಂಭದಲ್ಲಿ ಅವರಿಗೆ ಸಿಸ್ಟಮ್ ಇಂಜಿನಿಯರ್ ಹುದ್ದೆಗಳಿಗೆ ವಾರ್ಷಿಕವಾಗಿ ರೂ. 3.2-3.7 ಲಕ್ಷ ರೂಪಾಯಿ ಸಂಬಳ ನೀಡಲಾಯಿತು ಎಂದು ವರದಿಯಾಗಿತ್ತು.