ವಿದೇಶದ ಉದ್ಯೋಗದ ಆಸೆಗೆ ಬೀಳ್ಬೇಡಿ... ಬ್ರೇನ್​ವಾಷ್​​ ಮಾಡಿ ಕರೆಸಿಕೊಳ್ತಾರೆ... ಕೆನಡಾದಿಂದ ದೆಹಲಿ ಯುವಕನ ಸಂದೇಶ

ಭಾರತೀಯ ಯುವಕರು ವಿದೇಶದಲ್ಲಿ ಉದ್ಯೋಗ ಪಡೆಯುವ ಹಂಬಲದಲ್ಲಿದ್ದಾರೆ, ಆದರೆ ಕೆನಡಾದಲ್ಲಿನ ಯುವಕನೊಬ್ಬ ವಿದೇಶದ ಉದ್ಯೋಗದ ಬಗ್ಗೆ ಎಚ್ಚರಿಕೆ ನೀಡಿದ್ದಾನೆ. ವಿದೇಶದಲ್ಲಿನ ಕಷ್ಟಗಳು ಮತ್ತು ಭಾರತದಲ್ಲಿನ ಅವಕಾಶಗಳ ಬಗ್ಗೆ ಆತ ಮಾತನಾಡಿದ್ದಾನೆ.

Indian Student Regrets Moving To Canada Outdated Curriculum High Living Costs And No Value For Degree suc

ಭಾರತದಲ್ಲಿ ನೂರೆಂಟು ಉದ್ಯೋಗಕ್ಕೆ ಅವಕಾಶಗಳು ಇದ್ದರೂ, ಒಳ್ಳೊಳ್ಳೆ ಶಿಕ್ಷಣ ಪಡೆದು ಭಾರತದಲ್ಲಿ ಸುಲಭದಲ್ಲಿ ಕೆಲಸ ಸಿಗುವ ಸಂಭವ ಇದ್ದರೂ, ವಿದೇಶದ ನೆಲಕ್ಕೆ ಹೋಗುವ ಹಂಬಲದಲ್ಲಿ ಹಲವು ಯುವಕ- ಯುವತಿಯರು ಇದ್ದಾರೆ. ಇಲ್ಲಿಯದ್ದೇ ಹಣದಿಂದ ಉನ್ನತ ವಿದ್ಯಾಭ್ಯಾಸ ಮಾಡಿ ಡಾಲರ್​ ಆಸೆಗೆ ವಿದೇಶದ ಉದ್ಯೋಗ ಅರಸಿ ಹೋಗುವುದು ಹೊಸ ವಿಷಯವೇನಲ್ಲ. ಆದರೆ ಇದಾಗಲೇ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಅಂತೆಲ್ಲಾ ಹೋಗಿ ಅಲ್ಲಿ ಮೋಸದ ಸುಳಿಯಲ್ಲಿ ಸಿಲುಕಿಯೋ ಇಲ್ಲವೇ ಉದ್ಯೋಗ ಕಡಿತದಿಂದಾಗಿ ವಾಪಸಾಗುತ್ತಿರುವವರ ಸಂಖ್ಯೆಯೂ ಅಷ್ಟೇ ಹೆಚ್ಚುತ್ತಿದೆ. ವಿದೇಶದಲ್ಲಿ ಕೆಲಸ ಮಾಡಿದರೆ, ಅಥವಾ ಅಲ್ಲಿ ಮಾಡಿ ವಾಪಸದಾದರೆ ತಮಗೆ ಭಾರಿ ಡಿಮಾಂಡ್​ ಎನ್ನುವ ಕಲ್ಪನೆ ಕೆಲವರದ್ದಾದರೆ, ತಮ್ಮ ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗುವುದು ವಿದೇಶದಲ್ಲಿ ಮಾತ್ರ ಎನ್ನುವ ಕಲ್ಪನೆ ಮತ್ತೆ ಕೆಲವರದ್ದು. ಇನ್ನು ಡಾಲರ್​ಗಳಲ್ಲಿ ಸಂಬಳ ಪಡೆಯುವ ಆಸೆ ಇನ್ನಷ್ಟು ಮಂದಿಯರದ್ದಾದರೆ,  ಫಾರಿನ್​ ರಿಟರ್ನ್​ ಆದರೆ  ಮಾತ್ರ ಒಳ್ಳೆಯ ಹೆಣ್ಣು ಸಿಕ್ತಾಳೆ ಎನ್ನುವ ಕಲ್ಪನೆ ಮತ್ತಷ್ಟು ಮಂದಿಯದ್ದು. ಒಟ್ಟಿನಲ್ಲಿ ವಿದೇಶದ ಉದ್ಯೋಗ ಬೇಕು ಅಷ್ಟೇ.

ಆದರೆ, ಕೆನಡಾದಲ್ಲಿ ಉದ್ಯೋಗದಲ್ಲಿರುವ ಭಾರತೀಯ ಮೂಲದ ಯುವಕನೊಬ್ಬನ ಸಂದೇಶ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ದೆಹಲಿಯ ಯುವಕನೊಬ್ಬ ಕೆನಡಾದಿಂದ ಈ ಸಂದೇಶವನ್ನು ವಿದೇಶದ ಕನಸು ಕಾಣುತ್ತಿರುವ ಯುವಪೀಳಿಗೆಗಾಗಿ ಕಳುಹಿಸಿದ್ದಾನೆ.  ನಾನು  ಕೆನಡಾಕ್ಕೆ ಸ್ಥಳಾಂತರಗೊಳ್ಳಲು ಬಯಸಿದ್ದೆ. ಇದು ನನ್ನ ಬಾಲ್ಯದ ಕನಸಾಗಿತ್ತು. ಆದರೆ, ಈಗ ಇಲ್ಲಿ ಹಿಂಸೆ ಅನುಭವಿಸುತ್ತಿದ್ದೇನೆ. ಇಲ್ಲಿ ನಿಮ್ಮ ಪದವಿಗಳು ನಿಷ್ಪ್ರಯೋಜಕ. ಭಾರತದ ಯುವಕರ ಬ್ರೇನ್​ವಾಷ್​ ಮಾಡಿ ಕರೆಸಿಕೊಳ್ಳಲಾಗುತ್ತದೆ. ಇಲ್ಲಿ ನಿಮ್ಮ ಕನಸಿನಂತೆ ಉದ್ಯೋಗ ಇರುವುದಿಲ್ಲ. ವಿದೇಶಕ್ಕೆ ಬಂದು ವಾಪಸಾಗಲು ಅಂಜಿಕೆಯಾಗುವ ಕಾರಣ ಇಲ್ಲವೇ ಮರ್ಯಾದೆಗೆ ಅಂಜಿ ಇಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಪ್ರಮೇಯ ಎದುರಾಗುತ್ತದೆ. 

Latest Videos

ಫಾರಿನ್​ ಕೆಲಸದ ಕನಸಿದ್ಯಾ? ಹಾಗಿದ್ರೆ ವಿದೇಶದ ನೆಲದಲ್ಲಿ ಮೋಸದ ಸುಳಿಗೆ ಸಿಕ್ಕ ಸಹಸ್ರಾರು ಈ ಯುವಕರ ಕಥೆ ಕೇಳಿ...

ದಯವಿಟ್ಟು ಯುವಕರೇ, ಫಾರಿನ್​ ಉದ್ಯೋಗದ ಆಸೆಗೆ ಬೀಳಬೇಡಿ, ನನ್ನಂಥ ಹಲವರು ಅನುಭವಿಸುತ್ತಿರುವ ನೋವಿನಿಂದ ನಾನು ಇದನ್ನು ಬರೆಯುತ್ತಿದ್ದೇನೆ. ಒಮ್ಮೆ ಭಾರತ ಬಿಟ್ಟು ಬಂದ ಮೇಲೆ, ನೀವು ಕಟ್ಟುಬೀಳುತ್ತೀರಿ. ವಾಪಸ್​ ಹೋಗಲೂ ಆಗದೇ, ಇಲ್ಲಿ ಇರಲೂ ಆಗದೇ ನೀವು ಅನುಭವಿಸುವ ನೋವು ಯಾರಿಗೂ ಬೇಡ ಎಂದಿದ್ದಾನೆ. ಇಲ್ಲಿಯ ಜೀವನ ಮಟ್ಟ ಸಿಕ್ಕಾಪಟ್ಟೆ ದುಬಾರಿ. ಶಿಕ್ಷಣಕ್ಕೂ ಬೆಲೆ ಇಲ್ಲ, ಡಿಗ್ರಿಗೂಬೆಲೆ ಇಲ್ಲ. ಆದರೆ ಬರುವಾಗ ಮಾತ್ರ ಚೆನ್ನಾಗಿ ಬ್ರೇನ್​ವಾಷ್​ ಮಾಡುತ್ತಾರೆ. ಆಮೇಲೆ ಅನುಭವಿಸುವ ನೋವು ಅಷ್ಟಿಷ್ಟಲ್ಲ ಎಂದಿದ್ದಾನೆ. 

ಭಾರತ ಈಗ ಬೆಳೆಯುತ್ತಿದೆ. ಅಲ್ಲಿ ನಿಮಗೆ ವಿಪುಲ ಅವಕಾಶಗಳೂ ಇವೆ. ಅಲ್ಲಿಯೇ ಇದ್ದು, ಉದ್ಯೋಗ ಕಂಡುಕೊಳ್ಳಿ. ಯಾರೋ ಬ್ರೇನ್​ವಾಷ್​ ಮಾಡಿದರು ಎಂದು ಹಿಂದೆ ಮುಂದೆ ಯೋಚಿಸದೇ ಫಾರಿನ್​ಗೆ ಬರಬೇಡಿ ಎಂದಿದ್ದಾನೆ ಯುವಕ. ಆದರೆ ಇದಕ್ಕೆ ಪರ- ವಿರೋಧ ನಿಲುವು ವ್ಯಕ್ತವಾಗುತ್ತಿದೆ. ಹಲವರು ತಾವು ವಿದೇಶದಲ್ಲಿ ಇದ್ದು ಅನುಭವಿಸಿದ ನೋವು ಹೇಳಿಕೊಂಡಿದ್ದರೆ, ಮತ್ತೆ ಕೆಲವರು ಇದನ್ನು ವಿರೋಧಿಸಿದ್ದಾರೆ. ನಮ್ಮ ಆಸೆಗೆ ಹೀಗೆಲ್ಲಾ ತಣ್ಣೀರು ಎರೆಚಬೇಡಿ. ಒಂದಷ್ಟು ಮಂದಿಗೆ ವಿದೇಶದಲ್ಲಿ ಸರಿಹೋಗಿಲ್ಲ ಎಂದ ಮಾತ್ರಕ್ಕೆ ಎಲ್ಲರಿಗೂ ಹಾಗೆಯೇ ಆಗುತ್ತದೆ ಎಂದೇನಲ್ಲ. ಹಲವರು ವಿದೇಶದಲ್ಲಿ ಸುಖ ಜೀವನ ನಡೆಸುತ್ತಿದ್ದಾರೆ ಎಂದಿದ್ದಾರೆ. 

ಫೇಸ್​ಬುಕ್​ ಸ್ನೇಹ, ರಾತ್ರಿ ತಂಗಿದ್ದ ಆರೋಪಿ... ಅಂದು ನಡೆದದ್ದೇನು? ಕಾಂಗ್ರೆಸ್​ ಕಾರ್ಯಕರ್ತೆ ಹಿಮಾನಿ ಸಾವಿನ ರಹಸ್ಯ ತಿಳಿಸಿದ ಪೊಲೀಸರು

 

vuukle one pixel image
click me!