ಕುರಿಕಾಯುತ್ತಿದ್ದ ಹುಡುಗ ಕರುನಾಡಿನ ಪಟ್ಟವೇರಿದ: ಅಸಹಾಯ ಶೂರ ಸಿದ್ದರಾಮಯ್ಯ.. ರೋಚಕ ಅಧ್ಯಾಯ!

ಕುರಿಕಾಯುತ್ತಿದ್ದ ಹುಡುಗ ಕರುನಾಡಿನ ಪಟ್ಟವೇರಿದ: ಅಸಹಾಯ ಶೂರ ಸಿದ್ದರಾಮಯ್ಯ.. ರೋಚಕ ಅಧ್ಯಾಯ!

Published : Jun 01, 2026, 04:15 PM IST

ಅವರು, ಹಳ್ಳಿಯ ಮುಗ್ಧ ವಾತಾವರಣದಿಂದ ಬಂದವರು.. ಕರ್ನಾಟಕದ ರಾಜಕೀಯದಲ್ಲಿ ಸಿಂಹಸ್ವಪ್ನದಂತೆ ಬೆಳೆದವರು.. ಮಾಸ್ ಲೀಡರ್ ಅಂದ್ರೆ ಯಾರು ಅಂತ ಕೇಳೊ ಪ್ರಶ್ನೆಗೆ, ಉತ್ತರವಾಗಿ ನಿಂತವರು.. ಹೆಸರು ಸಿದ್ದರಾಮಯ್ಯ.

ಅವರು, ಹಳ್ಳಿಯ ಮುಗ್ಧ ವಾತಾವರಣದಿಂದ ಬಂದವರು.. ಕರ್ನಾಟಕದ ರಾಜಕೀಯದಲ್ಲಿ ಸಿಂಹಸ್ವಪ್ನದಂತೆ ಬೆಳೆದವರು..  ಮಾಸ್ ಲೀಡರ್ ಅಂದ್ರೆ ಯಾರು ಅಂತ ಕೇಳೊ ಪ್ರಶ್ನೆಗೆ, ಉತ್ತರವಾಗಿ ನಿಂತವರು.. ಹೆಸರು ಸಿದ್ದರಾಮಯ್ಯ.. ಮೈಸೂರಿನ ಸಿದ್ದರಾಮನಹುಂಡಿ ಅನ್ನೋ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಕುರಿ ಕಾಯ್ತಾ, ಕಡು ಬಡತನದಲ್ಲೇ ಬೆಳೆದ ಈ ಸಾಧಾರಣ ಹುಡುಗ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಗಾದಿಗೆ ಏರ್ತಾರೆ ಅಂತ ಯಾರೂ ಊಹಿಸಿರಲಿಲ್ಲ.. ವಕೀಲಿ ವೃತ್ತಿಯಿಂದ ಬುದುಕು ಆರಂಭಿಸಿ,  ರೈತ ಚಳವಳಿ, ಪ್ರಗತಿಪರ ಹೋರಾಟಗಳ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯ ಇವತ್ತು ರಾಜ್ಯಕಂಡ ಅಸಮಾನ್ಯ ಮುಖ್ಯಮಂತ್ರಿ ಅನ್ನಿಸಿಕೊಂಡಿದಾರೆ.

ಆದ್ರೆ ಈ ಜರ್ನಿ, ಅಷ್ಟು ಸಾಮಾನ್ಯವಾದ್ದಲ್ಲ.. ಅದು ಕಲ್ಲು ಮುಳ್ಳಿನ ಬೆಂಕಿಯದಾರಿ.. ಅದು ದಾಟಿ ಬಂದಿದ್ದು ಹೇಗೆ, ಸವಾಲುಗಳನ್ನು ಮೆಟ್ಟಿ ನಿಂತಿದ್ದು ಹೇಗೆ? ಇಲ್ಲಿದೆ ನೋಡಿ, ಆ ರೋಚಕ ಅಧ್ಯಾಯ. ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿಗೆ, ಅದ್ಭುತ ಶಕ್ತಿಯಾಗಿ ಸಿಕ್ಕಿದ್ರು.. ಅಹಿಂದ ಅನ್ನೋ ಬ್ರಹ್ಮಾಸ್ತ್ರ ಹಿಡಿದ ಬಂದ ಈ ಮಾಸ್ ಲೀಡರ್, ದೇಶದ ಯಾವ ಭಾಗದಲ್ಲೂ ಇಲ್ಲದಷ್ಟು  ಬಲಿಷ್ಠವಾಗಿ, ಕರ್ನಾಟಕದಲ್ಲಿ ಕಾಂಗ್ರೆಸ್  ಕೋಟೆ ಕಟ್ಟಿದ್ರು.. ಅಲ್ಲಿಂದ ಇಲ್ಲೀ ತನಕ ಆಗಿದ್ದೇನೇನು. ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ ಮೇಲೆ ಪಾರ್ಟಿಯ ಅದೃಷ್ಟವೇ ಬದಲಾಗಿಹೋಯ್ತು.

2013 ಮತ್ತು 2023ರಲ್ಲಿ ಕಾಂಗ್ರೆಸ್ ಭರ್ಹರಿಯಾಗಿ ಅಧಿಕಾರಕ್ಕೆ ಬರೋಕೆ ಇವರ ಮಾಸ್ಟರ್ ಪ್ಲಾನ್‌ಗಳೇ ಕಾರಣ. ಆ ರೋಚಕ ರಾಜಕೀಯ ಗೇಮ್ ಪ್ಲಾನ್ ಹೇಗಿತ್ತು ಗೊತ್ತಾ? ಕಾಂಗ್ರೆಸ್ನಲ್ಲಿ ಅಧಿಕಾರ ಹಸ್ತಾಂತರ ಅನ್ನೋದು ಅತಿ ದೊಡ್ಡ ಗಂಡಾಂತರ ಅಂತಲೇ ನೋಡ್ತಾ ಇದ್ವು ಪ್ರತಿಪಕ್ಷಗಳು.. ಆದ್ರೆ ಅದನ್ನೂ ಸಿದ್ದರಾಮಯ್ಯ ಹೇಗೆ ನಿಭಾಯಿಸಿದ್ರು ಗೊತ್ತಾ? ಸಾಮಾನ್ಯವಾಗಿ ಯಾವುದೇ ಪಕ್ಷದಲ್ಲಿ  ಸಿಎಂ ಕುರ್ಚಿ ಬದಲಾವಣೆ ಅಂದ್ರೆ ಅದು ಬಂಡಾಯಕ್ಕೋ, ಒಳ ಸಂಘರ್ಷಕ್ಕೋ,  ರಂಪಾಟಕ್ಕೋ ಕಾರಣವಾಗೋದು ಸಹಜ.. ಆದ್ರೆ ಈ ಬಾರಿ ಇಡೀ ದೇಶವೇ ಆಶ್ಚರ್ಯ ಪಡುವ ಹಾಗೆ ಯಾವೊಂದು ಅಡೆತಡೆ ಇಲ್ಲದೆ, ಆತಂಕವಿಲ್ಲದೆ ಆಗಿ ಪವರ್ ಶಿಫ್ಟ್ ನಡೀತು.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more