
ಮಹಾಭಾರತ ಸಂಗ್ರಾಮ: ಕೋಲಾರ ಕ್ಷೇತ್ರ
ಕೋಲಾರ[ಫೆ.23]: ವಾಸ್ತು ಪ್ರಕಾರ ಕರ್ನಾಟಕದ ‘ದೇವ ಮೂಲೆ’ ಎಂದೇ ಬಿಂಬಿಸಲಾಗುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ಅಕ್ಷರಶಃ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಒಮ್ಮೆ ಜನತಾ ಪಕ್ಷದಿಂದ ವೆಂಕಟೇಶ್ ಗೆದ್ದಿದ್ದು ಬಿಟ್ಟರೆ ಕಾಂಗ್ರೆಸ್ ಪತಾಕೆಯ ಹಾರಾಟಕ್ಕೆ ಭಂಗ ಬಂದಿದ್ದೇ ಇಲ್ಲ.
ಅಷ್ಟೇ ಅಲ್ಲ, ಕಾಂಗ್ರೆಸ್‌ನ ಇಬ್ಬರು ಸಂಸದರು ಇಲ್ಲಿ ಸುದೀರ್ಘ ಕಾಲ ಸಂಸದರಾಗಿ ಆಯ್ಕೆಯಾಗಿದ್ದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಲೋಕಸಭೆಯಲ್ಲಿ ಈವರೆಗೆ ಕಾಂಗ್ರೆಸ್‌ನ ಜಿ.ವೈ.ಕೃಷ್ಣನ್, ವೈ.ರಾಮಕೃಷ್ಣ, ಡಾ.ವಿ.ವೆಂಕಟೇಶ್ ಹಾಗೂ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಗೆದ್ದು ಬಂದಿದ್ದಾರೆ. ಇದಕ್ಕೂ ಮೊದಲು ದೊಡ್ಡ ತಿಮ್ಮಯ್ಯ ಹಾಗೂ ಎಂ.ಕೃಷ್ಣಪ್ಪ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಮಧ್ಯೆ, ಜನತಾ ಪಕ್ಷದಿಂದ ಡಾ.ವಿ.ವೆಂಕಟೇಶ್ ಆಯ್ಕೆ ಆಗಿದ್ದರು. ಕಾಂಗ್ರೆಸ್‌ನಲ್ಲಿ ಸಂಸದರಾದವರ ಪೈಕಿ 1967ರಿಂದ 1984ರವರೆಗೆ ಸುಮಾರು 17 ವರ್ಷ ಕಾಲ ಜಿ.ವೈ.ಕೃಷ್ಣನ್ ಕಾಂಗ್ರೆಸ್ನಿಂದ ಸಂಸದರಾಗಿದ್ದರೆ, ಹಾಲಿ ಸಂಸದ ಕೆ.ಎಚ್.ಮುನಿಯಪ್ಪ 1991ರಿಂದ ಈವರೆಗೆ ಸತತವಾಗಿ ಏಳು ಬಾರಿ ಗೆದ್ದು ಬಂದಿದ್ದಾರೆ. ಹೀಗೆ ಪ್ರಭಾವಿಯೊಬ್ಬರು ಏಕಸ್ವಾಮ್ಯ ಸಾಧಿಸುವ ಸಾಧ್ಯತೆ ಹೊಂದಿರುವ ಕ್ಷೇತ್ರ ಎಂದೇ ಕೋಲಾರ ಖ್ಯಾತಿ.
ಟಿಕೆಟ್ ಫೈಟ್: ಉಡುಪಿಯಲ್ಲಿ ಕರಂದ್ಲಾಜೆ ನಿರಾಕರಿಸಿದ್ರೆ ಹೆಗ್ಡೆಗೆ ಟಿಕೆಟ್?
ಕೆ.ಎಚ್.ಮುನಿಯಪ್ಪ ಅವರು ಆರಂಭದ ವರ್ಷದಲ್ಲಿ ಹೋರಾಟ ಮಾಡಿ ಗೆಲ್ಲುತ್ತಿದ್ದರೆ, ಕ್ರಮೇಣ ಅವರು ರಾಜಕೀಯ ಚಾಣಾಕ್ಷ್ಯತನದಿಂದ ತಮ್ಮ ಗೆಲುವಿನ ಹಾದಿ ಸುಲಭ ಮಾಡಿಕೊಂಡರು ಎಂದೇ ಹೇಳಲಾಗುತ್ತದೆ. ಪ್ರತಿಪಕ್ಷದ ಎಂಎಲ್ಎಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗೆಲ್ಲುವುದು ಅವರ ತಂತ್ರ. ಅವರ ಈ ಗೆಲುವಿಗೆ ಜೆಡಿಎಸ್, ಬಿಜೆಪಿ ನಾಯಕರೂ ಕೈಜೋಡಿಸಿದ್ದರು ಎಂದು ಹೇಳಲಾಗುತ್ತದೆ. ತಮ್ಮ ರಾಜಕೀಯ ತಂತ್ರ ಮತ್ತು ಬುದ್ಧಿವಂತಿಕೆಯಿಂದ ವಿರೋಧಿಗಳನ್ನು ಸತತವಾಗಿ ಮಣಿಸುತ್ತಾ ಬಂದಿರುವ ಮುನಿಯಪ್ಪ ಅವರಿಗೆ ನಿಜ ಶತ್ರುಗಳು ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ.
ಟಿಕೆಟ್ ಫೈಟ್: ಕಾಂಗ್ರೆಸ್ ಭದ್ರಕೋಟೆ ಚಾಮರಾಜನಗರದಲ್ಲಿ ಅರಳುತ್ತಾ ಕಮಲ?
ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಈಗ ಎರಡು ಗುಂಪುಗಳಾಗಿವೆ. ಜಿಲ್ಲೆಯ ಆಡಳಿತ ಮತ್ತು ಪಕ್ಷದ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಪೈಪೋಟಿಗೆ ಬಿದ್ದಿರುವ ಗುಂಪುಗಳಲ್ಲಿ ರಾಜಕೀಯ ಕೆಸರೆರಚಾಟ ದಿನೇದಿನೆ ಹೆಚ್ಚಾಗಿದೆ. ಮುನಿಯಪ್ಪರ ರಾಜಕೀಯ ವಿರೋಧಿಗಳೆಲ್ಲ ಒಂದಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರೂ ಕೇಳಿ ಬರುತ್ತಿದೆ.
ಟಿಕೆಟ್ ಫೈಟ್: ದಾವಣಗೆರೆಯಲ್ಲಿ ಕೈ-ಕಮಲ ನಡುವೆ ಪ್ರಬಲ ಪೈಪೋಟಿ
ರಮೇಶ್ ಕುಮಾರ್ ಆದಿಯಾಗಿ ಶಿಡ್ಲಘಟ್ಟಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ ಚಿಂತಾಮಣಿಯ ಸುಧಾಕರ್, ಮುಳಬಾಗಲು ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೋಲಾರದ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ನಝೀರ್ ಅಹಮದ್ ಎಲ್ಲರೂ ಒಂದಾಗಿದ್ದಾರೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಸದ್ಯ ಇರುವ ವಿರೋಧವನ್ನು ಹೈಕಮಾಂಡ್‌ಗೆ ತಿಳಿಸಿ ಮುನಿಯಪ್ಪರಿಗೆ ಟಿಕೆಟ್ ತಪ್ಪಿಸುವ ತಂತ್ರವನ್ನು ಸದ್ದುಗದ್ದಲವಿಲ್ಲದೆ ಮಾಡುತ್ತಿದ್ದಾರೆ. ಮುನಿಯಪ್ಪರಿಗೆ ಟಿಕೆಟ್ ತಪ್ಪಿಸಿ ಬೇರೆಯವರಿಗೆ ಟಿಕೆಟ್ ಕೊಡಿ, ಅವರನ್ನು ಗೆಲ್ಲಿಸಿ ತರುವುದು ನಮ್ಮ ಜವಾಬ್ದಾರಿ, ಇಲ್ಲ ಬೇರೆ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ಕೊಡಿ ಕೋಲಾರಕ್ಕೆ ಮಾತ್ರ ಬೇಡ. ಇಲ್ಲವಾದರೆ ನಾವೇ ಅವರನ್ನು ಸೋಲಿಸಿ ಮನೆಗೆ ಕಳಿಸುತ್ತೇವೆ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಹೈಕಮಾಂಡ್‌ಗೆ ಈಗಾಗಲೇ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲೇ ಕಳೆದ ಐದಾರು ತಿಂಗಳಿನಿಂದ ಮುನಿಯಪ್ಪರನ್ನು ಬದಿಗಿಟ್ಟು ಅನೇಕ ಕಾರ್ಯಕ್ರಮಗಳನ್ನೂ ಕೋಲಾರದಲ್ಲಿ ನಡೆಸಲಾಗುತ್ತಿದೆ. ಕೆ.ಸಿ.ವ್ಯಾಲಿ ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಹೋದವರಿಗೆ ಹಣದ ಸಹಾಯ ಮಾಡಿದವರೂ ಮುನಿಯಪ್ಪ ಅವರೇ ಎಂದು ಆರೋಪಿಸಲಾಗುತ್ತಿದೆ.
ಟಿಕೆಟ್ ಫೈಟ್: ಡಿಕೆ+ಎಚ್‌ಡಿಕೆ ವರ್ಸಸ್ ಯೋಗಿ?
ಲೋಕಸಭೆ ಟಿಕೆಟನ್ನು ಜೆಡಿಎಸ್‌ನೊಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಬೇಕಾದರೆ ಅವರಿಗೇ ಬಿಟ್ಟುಕೊಡಿ ನಮ್ಮದೇನೂ ತಕರಾರು ಇಲ್ಲ. ಆದರೆ ಮುನಿಯಪ್ಪ ಅವರಿಗೆ ಮಾತ್ರ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬೇಡಿ ಎಂದು ಈ ಗುಂಪು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದೆ ಎನ್ನಲಾಗುತ್ತಿದೆ. ಇಷ್ಟಾದರೂ ಹೈಕಮಾಂಡ್ನಲ್ಲಿ ಪ್ರಭಾವಿಯಾಗಿರುವ ಕೆ.ಎಚ್. ಮುನಿಯಪ್ಪ ಮತ್ತೆ ಟಿಕೆಟ್ ಗಿಟ್ಟಿಸುವ ಸಾಧ್ಯತೆಯೇ ಹೆಚ್ಚು. ಆದರೆ, ಪಕ್ಷದೊಳಗಿನ ವಿರೋಧಿಗಳ ಒಳಏಟು ಚುನಾವಣೆಯಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬ ಕುತೂಹಲವಿದೆ. ಎಂದಿನಂತೆ ಮುನಿಯಪ್ಪ ಅವರಿಗೆ ಪ್ರತಿಪಕ್ಷಗಳ ಪಾಳಯದ ಘಟಾನುಘಟಿಗಳ ನಂಟು ಉತ್ತಮವಾಗಿಯೇ ಇದೆ. ಕಾಂಗ್ರೆಸ್‌ನ ಒಳಏಟನ್ನು ನಿವಾರಿಸಿಕೊಂಡರೆ ಮುನಿಯಪ್ಪ ಅವರ ನಾಗಾಲೋಟಕ್ಕೆ ತಡೆ ಬೀಳುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು.
ಟಿಕೆಟ್ ಫೈಟ್: ವಿಜಯಪುರದಲ್ಲಿ ಜಿಗಜಿಣಗಿ V/S ಅಲಗೂರ?
ಕ್ಷೇತ್ರಕ್ಕೆ ಜೆಡಿಎಸ್ ಬೇಡಿಕೆ:
ಜೆಡಿಎಸ್ ಮತ್ತು ಕಾಂಗ್ರೆಸ್‌ನ ಹೊಂದಾಣಿಕೆ ರಾಜಕಾರಣದಿಂದಾಗಿ ಕೋಲಾರ ಮೀಸಲು ಕ್ಷೇತ್ರವನ್ನು ತಮಗೆ ಬಿಟ್ಟು ಕೊಡಬೇಕೆಂಬ ಬೇಡಿಕೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟಿದ್ದಾರೆ. ಮೊದಲಿನಿಂದಲೂ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಚುನಾವಣಾ ವ್ಯವಹಾರ ಕುದುರಿಸಿಕೊಂಡು ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಂಡು ಬಂದಿರುವ ಜೆಡಿಎಸ್‌ನವರು ಈ ಬಾರಿ ಮುನಿಯಪ್ಪ ಅವರಿಗೆ ಟಿಕೆಟ್ ಕೊಡುವ ಸಂದರ್ಭದಲೇ ಅಡ್ಡಿಮಾಡುವ ನಾಟಕವಾಗಿ ಅದರ ಲಾಭ ಪಡೆಯುವ ಲೆಕ್ಕಾಚಾರ ಹಾಕಿಕೊಂಡಿರುವಂತೆ ಕಾಣುತ್ತಿದೆ. ಯಾಕೆಂದರೆ ಹಾಲಿ ಸಂಸದರನ್ನು ಹೊಂದಿರುವ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟು ಕೊಡುವುದಿಲ್ಲ ಎಂಬುದು ಗೌಡರಿಗೂ ಗೊತ್ತಿದೆ. ಕ್ಷೇತ್ರವನ್ನು ಬಿಟ್ಟು ಕೊಡದಂತೆ ಮುನಿಯಪ್ಪ ಅವರೂ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಮಧ್ಯೆ, ಜೆಡಿಎಸ್ ಆಕಾಂಕ್ಷಿಯಾಗಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಟಿಕೆಟ್ ಆಸೆಯಿಂದ ಬಿಜೆಪಿ ಬಿಟ್ಟುಬಂದ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಸಿಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಟಿಕೆಟ್ ಫೈಟ್: ಬಿಜೆಪಿ ಟಿಕೆಟ್‌ಗೆ ಸವದಿ, ಕತ್ತಿ, ಕೋರೆ ಫೈಟ್
ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ:
ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುತ್ತಾ ಬಂದಿರುವುದು ಬಿಜೆಪಿ. ಕ್ಷೇತ್ರದ ಮಟ್ಟಿಗೆ ಹೇಳುವುದಾದರೆ ಇಡೀ ಕ್ಷೇತ್ರದಲ್ಲಿ ಒಂದೇ ಒಂದು ಗ್ರಾಪಂ ಸೀಟೂ ಇಲ್ಲದ ಕಾಲದಲ್ಲೂ ಬಿಜೆಪಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುತ್ತಾ ತೀರಾ ಹತ್ತಿರದಲ್ಲಿ ಸೋತಿರುವ ಉದಾರಣೆಗಳಿವೆ. ಸದ್ಯ ಪಕ್ಷದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಡಿ.ಎಸ್.ವೀರಯ್ಯ, ಮಾಜಿ ಶಾಸಕ ವೈ.ಸಂಪಂಗಿ, ವೇಣುಗೋಪಾಲ್ ಹಾಗೂ ಮುನಿಸ್ವಾಮಿ ಹೆಸರುಗಳು ಕೇಳಿ ಬರುತ್ತಿವೆ. ಎರಡು ಬಾರಿ ಕಾಂಗ್ರೆಸ್ ವಿರುದ್ಧ ಕಡಿಮೆ ಅಂತರದಲ್ಲಿ ಸೋತಿರುವ ವೀರಯ್ಯ ಮತ್ತೊಮ್ಮೆ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಟಿಕೆಟ್ ಫೈಟ್: ಕಾಂಗ್ರೆಸ್ ಸಂಸದ ಜೆಡಿಎಸ್ ಅಭ್ಯರ್ಥಿ ಆಗ್ತಾರಾ?
ಕ್ಷೇತ್ರ ಸ್ವಾರಸ್ಯ:
ಕಾಂಗ್ರೆಸ್ ಭದ್ರಕೋಟೆ, ಪ್ರಭಾವಿ ರಾಜಕಾರಣಿ ಏಕಸ್ವಾಮ್ಯ ಸಾಧಿಸುವ ಸಾಧ್ಯತೆ ಹೊಂದಿರುವ ಕ್ಷೇತ್ರವಾದರೂ ಕೋಲಾರದ ಜನತೆ ಕೆಲವೊಮ್ಮೆ ಭಿನ್ನ ನಿರ್ಧಾರಗಳನ್ನು ಕೊಂಡಿದ್ದೂ ಇದೆ. ವೈ.ಕೃಷ್ಣನ್, ವೈ.ರಾಮಕೃಷ್ಣ, ಡಾ.ವಿ.ವೆಂಕಟೇಶ್ ಹಾಗೂ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಹೀಗೆ ಸತತವಾಗಿ ಕಾಂಗ್ರೆಸ್ಸಿಗರೇ ಈ ಕ್ಷೇತ್ರವನ್ನು ಆಳಿಕೊಂಡು ಬಂದಿದ್ದರೂ ಇಂದಿರಾ ಗಾಂಧಿ ಅವರ ದುರ್ಮರಣದ ವೇಳೆ ಈ ಕ್ಷೇತ್ರ ಜನರ ಆಯ್ಕೆ ಬಹಳ ಭಿನ್ನವಾಗಿತ್ತು. ಇಂದಿರಾರ ದುರ್ಮರಣ ನಂತರ ಅಂದರೆ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಅನುಕಂಪದ ಅಲೆ ಬೀಸಿ ಕಾಂಗ್ರೆಸ್ 430 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಆ ಬಾರಿ ಕೋಲಾರ ಕ್ಷೇತ್ರದಲ್ಲಿ ಮಾತ್ರ ಜನತಾ ಪಕ್ಷದ ಡಾ.ವಿ.ವೆಂಕಟೇಶ್ ಗೆದ್ದಿದ್ದರು.
ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ
ಎಂಟು ವಿಧಾನಸಭಾ ಕ್ಷೇತ್ರ ಮೂರು ಮೀಸಲು ಕ್ಷೇತ್ರ
ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಮೂರು ಮೀಸಲು ವಿಧಾನಸಭಾ ಕ್ಷೇತ್ರಗಳು ಇವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳೂ ಇಲ್ಲಿಗೆ ಸೇರಿಕೊಂಡಿವೆ. ಈ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐದು, ಜೆಡಿಎಸ್ ಎರಡು ಹಾಗೂ ಒಂದು ಸ್ಥಾನವನ್ನು ಪಕ್ಷೇತರ ಗೆದ್ದುಕೊಂಡಿದ್ದಾರೆ.
-ಸತ್ಯರಾಜ್ ಕೆ.
ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!
ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?
ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್ ಕಸರತ್ತು!
ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.