ಮೋದಿ ಆಯ್ತು ಈಗ ಕರ್ನಾಟಕದಿಂದಲೇ ‘ಲೋಕ’ ಪ್ರಚಾರ ಆರಂಭಿಸಲಿರುವ ರಾಹುಲ್

By Web DeskFirst Published Feb 22, 2019, 8:01 PM IST
Highlights

ಈಗಾಗಲೇ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಿಂದ ಲೋಕಸಮರ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದಾರೆ. ಇದೀಗ ಕಾಂಗ್ರೆಸ್ ಸರದಿ.  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಮುಹೂರ್ತ ಫಿಕ್ಸ್ ಆಗಿದೆ. 

ಬೆಂಗಳೂರು, [ಫೆ.22]: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಿಂದ ರಾಜ್ಯದಿಂದಲೇ ಲೋಕಸಬಾ ಚುನಾವಣೆ ಪ್ರಚಾರ ಆರಂಭಿಸಿದ್ದರು. ಇದೀಗ ರಾಹುಲ್ ಗಾಂಧಿ ಸಹ ರಾಜ್ಯದಿಂದಲೇ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. 

ಮೋದಿ ಹುಬ್ಬಳ್ಳಿಯಿಂದ ಚಾಲನೆ ಕೊಟ್ಟಿದ್ರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೇ ಮಾರ್ಚ್ 9 ರಂದು ಹಾವೇರಿಯಲ್ಲಿ ಲೋಕಸಭಾ ಚುನಾವಣೆ  ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. 

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​, 'ಬಿಜೆಪಿ ಶಕ್ತಿ ಕೇಂದ್ರ ಎಂಬ ಕಾರಣಕ್ಕೆ ಹಾವೇರಿ ಭಾಗದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಮೂಲಕ ರಾಹುಲ್​ ಗಾಂಧಿ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಹಾವೇರಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ನಂತರವೇ ಇತರ ರಾಜ್ಯಗಳಲ್ಲಿ ರಾಹುಲ್​ ಗಾಂಧಿ ಪ್ರಚಾರ ನಡೆಸಲಿದ್ದಾರೆ' ಎಂದು ಹೇಳಿದರು.

ಈಗಾಗಲೇ ರಾಜ್ಯ ನಾಯಕರಿಗೆ ಒಪ್ಪಿಗೆ ನೀಡಿರುವ ರಾಹುಲ್, ಸಮಾವೇಶಕ್ಕೆ ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಲಕ್ಷಾಂತರ ಜನ ಆ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದರು. 

ಅಲ್ಲದೇ, ರಾಯಚೂರಿನಲ್ಲಿ ನಾಳೆ ಸಮಾವೇಶ ನಡೆಸುತ್ತಿದ್ದೇವೆ. ನಂತರ ವಿಜಯಪುರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಹೇಳಿದರು.

click me!