ಗುಪ್ತಚರ ವರದಿಗೆ ಬೆಚ್ಚಿಬಿದ್ದ ಶಾಸಕರು, ಮುಷ್ಕರಕ್ಕೆ ಮುಂದಾದ ಬ್ಯಾಂಕ್ ನೌಕರರು; ಮಾ.06ರ ಟಾಪ್ ಸುದ್ದಿ!

By Suvarna News  |  First Published Mar 6, 2020, 5:09 PM IST

ಕರ್ನಾಟಕ ಶಾಸಕನ ಹತ್ಯೆಗೆ ಸಂಚು ರೂಪಿಸಲಾಗಿದೆ ಅನ್ನೋ ಸ್ಪೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿದೆ. ಗೋವಾ ಹೋಗುವವರಿಗೆ ಬೆಂಗಳೂರಿನಿಂದ ನೇರ ರೈಲು ವ್ಯವಸ್ಥೆ ಜಾರಿಗೆ ತರಲಾಗಿದೆ. ಯೆಸ್ ಬ್ಯಾಂಕ್ ಸೂಪರ್‌ಸೀಡ್‌ನಿಂದ ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಾಗದ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ರವೀಂದ್ರ ಜಡೇಜಾಗೆ ಅನುಮತಿ ನಿರಾಕರಿಸಿದೆ ಬಿಸಿಸಿಐ, ಸುಮನ್ ರಂಗನಾಥ್ ಬ್ಯೂಟಿ ಸೀಕ್ರೆಟ್ ಸೇರಿದಂತೆ ಮಾರ್ಚ್ 6ರ ಟಾಪ್ 10 ಸುದ್ದಿ ಇಲ್ಲಿವೆ.


ಗೋವಾಗೆ ಹೋಗೋರಿಗೆ ಗುಡ್ ನ್ಯೂಸ್ : ಬೆಂಗಳೂರಿನಿಂದ ಡೈರೆಕ್ಟ್ ಟ್ರೈನ್

Tap to resize

Latest Videos

undefined

ಮಂಗಳೂರಿನ ಪಡೀಲ್‌ ಬೈಪಾಸ್‌ ಮಾರ್ಗ ಮೂಲಕ ಯಶವಂತಪುರ- ವಾಸ್ಕೊ ಹೊಸ ರೈಲು [ಮಾ.7] ನಾಳೆಯಿಂದಲೇ ಸಂಚಾರ ಆರಂಭಿಸಲಿದೆ. ಹೊಸ ರೈಲು ಉಡುಪಿ - ಕುಂದಾಪುರ - ಕಾರವಾರ ಮಾರ್ಗದಲ್ಲಿ ವಾಸ್ಕೋಗೆ ಈ ಹೊಸ ರೈಲು ಸಂಚರಿಸಲಿದೆ. 

ಕರ್ನಾಟಕ ಶಾಸಕನ ಹತ್ಯೆಗೆ ಸಂಚು: ಗುಪ್ತಚರ ಇಲಾಖೆಯಿಂದ ಸ್ಫೋಟ ಮಾಹಿತಿ ಬಹಿರಂಗ

ಮೈಸೂರಿನಲ್ಲಿ ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು  ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿಯನ್ನ ಬಹಿರಂಗಪಡಿಸಿದೆ.

ರವೀಂದ್ರ ಜಡೇಜಾಗೆ ಅನುಮತಿ ನಿರಾರಿಸಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ!

ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾ, ಮುಂಬರುವ ಸೌತ್ ಆಫ್ರಿಕಾ ವಿರುದ್ಧದ ಸರಣಿ ಆಡುವುದು ಬಹುತೇಕ ಖಚಿತ. ಇದರ ನಡುವೆ ರವೀಂದ್ರ ವಿಶೇಷ ಅನುಮತಿಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೊರೆ ಹೋಗಿದ್ದಾರೆ. ಆದರೆ ಜಡೇಜಾಗೆ ಅನುಮತಿ ನೀಡಲು ಗಂಗೂಲಿ ನಿರಾಕರಿಸಿದ್ದಾರೆ. 

ಯೆಸ್ ಬ್ಯಾಂಕ್ ಸೂಪರ್‌ಸೀಡ್; ಹಣ ಸಿಗದೇ ಗ್ರಾಹಕರ ಆಕ್ರೋಶ

ಒಂದು ಕಡೆ ಬ್ಯಾಂಕ್‌ ಗಳ ವಿಲೀನ ಪರ್ವ ನಡೆದಿದ್ದರೆ ಇನ್ನೊಂದು ಕಡೆ ದೊಡ್ಡ ದೊಡ್ಡ ಬ್ಯಾಂಕ್ ಗಳು ಆರ್ಥಿಕ ಹೊಡೆತಕ್ಕೆ ಸಿಲುಕುತ್ತಿವೆ. ಗುರುವಾರ ರಾತ್ರಿ ಅಂಥದ್ದೊಂದು ಶಾಕ್ ಸಿಕ್ಕಿದೆ.

45 ಆದರೂ ಬಿಟ್ಟು ಕೊಟ್ಟಿಲ್ಲ ಬ್ಯೂಟಿ ಸೀಕ್ರೆಟ್‌; ಸುಮನ್‌ ರಂಗನಾಥ್‌ ಈಗ ಹೇಗಿದ್ದಾರೆ ನೋಡಿ!

'CBI ಶಂಕರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಮನ್ ರಂಗನಾಥ್‌ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವರ್ಷ ನಲವತ್ತೈದಾರೂ ಯಂಗ್ ಆಗಿ ಕಾಣುವ ಸುಮನ್‌ ಬ್ಯೂಟಿ ಸೀಕ್ರೆಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ರಾಧಿಕಾ ಪಂಡಿತ್ ಹುಟ್ಟುಹಬ್ಬ; ಫ್ಯಾನ್ಸ್‌‌ಗೆ ಮನವಿ ಮಾಡಿದ ಯಶ್!

ಮಾರ್ಚ್‌ 7ರಂದು 35ನೇ ವಸಂತಕ್ಕೆ ಕಾಲಿಡುತ್ತಿರುವ ರಾಧಿಕಾ ಪಂಡಿತ್ ಹುಟ್ಟುಹಬ್ಬವನ್ನು ಸರಳವಾಗಿ ಕುಟುಂಬಸ್ಥರೊಂದಿಗೆ ಆಚರಿಸಲು ರಾಕಿಂಗ್ ಸ್ಟಾರ್ ಯಶ್ ನಿರ್ಧರಿಸಿದ್ದಾರೆ. ಅಭಿಮಾನಿಗಳು ಈ ವಿಷಯದಲ್ಲಿ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಹರ್ಭಜನ್ ಸಿಂಗ್ To ರವೀಂದ್ರ ಜಡೇಜಾ; IPLನಿಂದ ಬ್ಯಾನ್ ಆಗಿದ್ದ ಐವರು ಕ್ರಿಕೆಟರ್ಸ್!

ಐಪಿಎಲ್ ಕ್ರಿಕೆಟ್ ಹಲವು ಕ್ರಿಕೆಟ್ ಬಹುತೇಕಾ ಎಲ್ಲಾ ಕ್ರಿಕೆಟಿಗರಿಗೆ ಹೊಸ ಬದುಕು ಕಟ್ಟಿಕೊಟ್ಟಿದೆ. ಯುವ ಕ್ರಿಕೆಟಿಗರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾತ್ರವಲ್ಲ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಅವಕಾಶ ಮಾಡಿಕೊಟ್ಟಿದೆ. ಆದರೆ ಇದೇ ಐಪಿಎಲ್ ಟೂರ್ನಿ ಹಲವರಿಗೆ ಮರೆಯಲಾಗದ ಕಹಿ ನೆನಪನ್ನು ಕಟ್ಟಿಕೊಟ್ಟಿದೆ. ಐಪಿಎಲ್‌ನಿಂದ ಐವರು ಕ್ರಿಕೆಟಿಗರು ಬ್ಯಾನ್ ಆಗಿದ್ದಾರೆ. 

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಹಾಕಿ...

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 327+12 (ಬ್ಯಾಕ್‌ಲಾಗ್) ಒಟ್ಟು 339 ಅರಣ್ಯ ರಕ್ಷಕ  ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಏಪ್ರಿಲ್ 15,2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಿಲೀನ ವಿರೋಧಿಸಿ ಮಾ.27ರಂದು ಬ್ಯಾಂಕ್‌ ನೌಕರರ ಮುಷ್ಕರ!

ವಿಲೀನ ವಿರೋಧಿಸಿ ಮಾ.27ರಂದು ಬ್ಯಾಂಕ್‌ ನೌಕರರ ಮುಷ್ಕರ|  ಅತೀ ದೊಡ್ಡ ಬ್ಯಾಂಕ್‌ ನೌಕರರ ಸಂಘಟನೆಗಳಾದ ಅಖಿಲ ಭಾರತ ಬ್ಯಾಂಕ್‌ ನೌಕರರ ಒಕ್ಕೂಟ ಹಾಗೂ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ಬಂದ್‌ಗೆ ನಿರ್ಧಾರ

click me!