ನಿಲುವು ಬಹಿರಂಗ ಪಡಿಸಿದ ನುಸ್ರತ್, ಬಿಡುಗಡೆಯಾಗುತ್ತಿದೆ ಕಪಿಲ್ ಬಯೋಪಿಕ್; ಫೆ.20ರ ಟಾಪ್ 10 ಸುದ್ದಿ!

By Suvarna News  |  First Published Feb 20, 2021, 4:52 PM IST

ತೃಣಮೂಲ ಕಾಂಗ್ರೆಸ್ ನಾಯಕಿ ನುಸ್ರತ್ ಜಹಾನ್ ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಪ್ರೀತಿ ನಿರಾಕರಿಸಿದ ಕಾರಣ ನೀರಿನಲ್ಲಿ ಕೀಟನಾಶಕ ಬೆರೆಸಿ ಕೊಲೆ ಎಂದು ಉನ್ನಾವೋ ಪ್ರಕರಣ ಕುರಿತು ಪೊಲೀಸರು ಹೇಳಿದ್ದಾರೆ. 11 ದಿನವೂ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಕಪಿಲ್ ಬಯೋಪಿಕ್ ಬಿಡುಗಡೆ ದಿನಾಂಕ ಫಿಕ್ಸ್, ಚೀನಾ ಸೇನೆಯ ಮತ್ತೊಂದು ಕುತಂತ್ರ ಸೇರಿದಂತೆ ಫೆಬ್ರವರಿ 20ರ ಟಾಪ್ 10 ಸುದ್ದಿ ಇಲ್ಲಿವೆ.


ನಟ ಯಶ್ ದಾಸ್‌ ಬಿಜೆಪಿ ಸೇರಿದ ಬೆನ್ನಲ್ಲೇ ನಿಲುವು ಬಹಿರಂಗ ಪಡಿಸಿದ MP ನುಸ್ರತ್ !...

Tap to resize

Latest Videos

ನಟ ಯಶ್ ದಾಸ್‌ಗುಪ್ತ ಅಧೀಕೃತವಾಗಿ ಬಿಜೆಪಿ ಸೇರಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ಬೆನಲ್ಲೇ ಟಿಎಂಸಿ ನಾಯಕರು, ಸೆಲೆಬ್ರೆಟಿಗಳು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಈಗಾಗಲೇ ಹಲವು ನಾಯಕರು ದೀದಿ ನೇತೃತ್ವದ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಟಿಎಂಸಿ ಸಂಸದೆ ನುಸ್ರತ್ ಜಹಾನ್ ರುಹಿ ತನ್ನ ನಿಲುವು ಬಹಿರಂಗ ಪಡಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಉನ್ನಾವೋ ಪ್ರಕರಣ: ಪ್ರೀತಿ ನಿರಾಕರಿಸಿದ ಕಾರಣ ನೀರಿನಲ್ಲಿ ಕೀಟನಾಶಕ ಬೆರೆಸಿ ಕೊಲೆ!...

ಫೋನ್ ನಂಬರ್ ನೀಡಲು ನಿರಾಕರಿಸಿದ 18ರ ಯುವತಿ ಕೊಲೆಗೈಯಲು ಪಕ್ಕಾ ಪ್ಲಾನ್ ಮಾಡಿದ ಆರೋಪಿ ವಿನಯ್ ಇದೀಗ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ವಿನಯ್ ಪ್ಲಾನ್‌ಗೆ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು, ಮತ್ತೊರ್ವಳ ಸ್ಥಿತಿ ಗಂಭೀರವಾಗಿದೆ. ಪೊಲೀಸರ ಅತಿಥಿಯಾಗಿರುವ ವಿನಯ್ ಹೇಳಿದ ಪ್ರೀತಿ-ಕೊಲೆ ಕತೆ ಇಲ್ಲಿದೆ.

ಮಂಗಳನ ಮೇಲೆ ನಾಸಾ ರೋವರ್‌ ಇಳಿಸಿದ್ದು ಬೆಂಗಳೂರಿನ ಸ್ವಾತಿ! ಬಿಂದಿ ಫೋಟೊ ವೈರಲ್...

ನಾಸಾ ಕಳುಹಿಸಿದ ‘ಪರ್ಸೀವರೆನ್ಸ್‌’ ರೋವರ್‌ ಯಶಸ್ವಿಯಾಗಿ ಕೆಂಪು ಗ್ರಹದ ಮೇಲೆ ಇಳಿದಿದೆ. ವಿಶೇಷವೆಂದರೆ, ನಾಸಾ ಪರವಾಗಿ ಅತ್ಯಾಧುನಿಕ ರೋವರನ್ನು ಇಳಿಸಿದವರು ಬೆಂಗಳೂರು ಮೂಲದ ವಿಜ್ಞಾನಿ

ಟಾಮ್‌ ಅಂಡ್‌ ಜೆರ್ರಿ ಒಂದೇ ತಂಡದಲ್ಲಿ'; ವಿನೂತನವಾಗಿ ಮ್ಯಾಕ್ಸ್‌ವೆಲ್‌ ಸ್ವಾಗತಿಸಿದ ಚಹಲ್‌...

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಕೂಡಿಕೊಂಡಿರುವ ಮ್ಯಾಕ್ಸ್‌ವೆಲ್‌ರನ್ನು ಯುಜುವೇಂದ್ರ ಚಹಲ್ ವಿನೂತನವಾಗಿ ಸ್ವಾಗತಿಸಿದ್ದಾರೆ. 

ಕ್ರಿಕೆಟ್ ಲೆಜೆಂಡ್‌ ಕಪಿಲ್ ದೇವ್ ಬಯೋಪಿಕ್‌ '83' ಬಿಡುಗಡೆಗೆ ಡೇಟ್ ಫಿಕ್ಸ್!...

ರಣವೀರ್‌ ಸಿಂಗ್ ಬಹು ನಿರೀಕ್ಷಿತ ಚಿತ್ರ 83 ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.  1983ರಲ್ಲಿ ಭಾರತ ವಿಶ್ವ ಕಪ್ ಗೆದ್ದ ಸಂಭ್ರಮವನ್ನು ಬೆಳ್ಳಿತೆರೆಯ ಮೇಲೆ ನೋಡಿ....

11ನೇ ದಿನವೂ ಏರಿಕೆ: ಬೆಂಗಳೂರಲ್ಲಿ ಪೆಟ್ರೋಲ್‌ ದರ ಎಷ್ಟು..?...

ಪೆಟ್ರೋಲ್ ಡೀಸೆಲ್ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೀಗ ಪೆಟ್ರೋಲ್ ದರ ಬೆಂಗಳೂರಲ್ಲಿ ಗಗನಮುಖಿಯಾಗಿ ಸಾಗಿದೆ.. 11 ನೇ ದಿನ ದರ ಏರಿಕೆ ಮಾಡಲಾಗಿದೆ

ಬೆದರಿದ ಚೀನಾದಿಂದ ಕುತಂತ್ರ; ಗಲ್ವಾನ್ ಘರ್ಷಣೆ ವಿಡಿಯೋ ಬಿಡುಗಡೆ ಮಾಡಿ ಪೇಚಿಗೆ ಸಿಲುಕಿದ PLA!...

 ಚೀನಾ ಮತ್ತೊಂದು ಕುತಂತ್ರ ಮಾಡಿದೆ. ಗಲ್ವಾನ್ ಘರ್ಷಣೆ ವಿಡಿಯೋ ಬಹಿರಂಗ ಮಾಡಿ, ಭಾರತವೇ ಚೀನಾ ನೆಲಕ್ಕೆ ಕಾಲಿಟ್ಟಿದೆ ಎಂದು ಬಿಂಬಿಸಲು ಬಿಡುಗಡೆ ಮಾಡಿದ ವಿಡಿಯೋದಿಂದ ಚೀನಾ ಸೇನೆ ಪೇಚಿಗೆ ಸಿಲುಕಿದೆ. ಈ ಕುರಿತ ವಿವರ ಇಲ್ಲಿದೆ.

'ಮುತ್ತಿ'ನಂಥ ಅವಕಾಶ ಮಿಸ್... ಆನಂದ್ ಮಹೀಂದ್ರಾ ರಿಯಾಕ್ಷನ್ ಸೂಪರ್!...

ಮದುವೆಯಾಗಿ ಅದೆಷ್ಟೋ ವರ್ಷ ಕಳೆದರೂ ಕಡಿಮೆಯಾಗದ ಪ್ರೀತಿ/ ಜೂಮ್ ಕಾಲ್ ನಲ್ಲಿ ಗಂಡನಿಗೆ ಮುತ್ತಿಡಲು ಮುಂದಾದ ಮಹಿಳೆ/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್/ ವಿವಿಧ ಗಣ್ಯರಿಂದರಲೂ ಪ್ರತಿಕ್ರಿಯೆ

ರೈತರ ದಿಲ್ಲಿ ಹೋರಾಟ ಬೆಂಬಲಿಸಿ ರಾಜ್ಯದಲ್ಲಿ 3 ಸಮಾವೇಶ...

ಮಾ.20ಕ್ಕೆ ಶಿವಮೊಗ್ಗ, 21ಕ್ಕೆ ಹಾವೇರಿ, 22ಕ್ಕೆ ಬೆಳಗಾವಿಯಲ್ಲಿ ರ‍್ಯಾಲಿ| ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಹಸಿರು ಶಾಲನ್ನು ದೆಹಲಿಯ ಪ್ರತಿಯೊಬ್ಬ ರೈತನಿಗೂ ಅಂಚೆ ಮೂಲಕ ರವಾನೆ| 

ರಾಮನಗರದಲ್ಲಿ ನಿಷೇಧಾಜ್ಞೆ ಜಾರಿ : ಎಲ್ಲಿಂದ ಎಲ್ಲಿವರೆಗೆ?...

ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮಂಡಳಿ ಆದೇಶಿಸಿದೆ. 

click me!