ಕೊರೋನಾಗೆ ನಟಿಯಿಂದ ಸೆಕ್ಸ್ ಮೆಡಿಸಿನ್, ಕರ್ನಾಟಕದ 9 ಜಿಲ್ಲೆ ಲಾಕ್‌ಡೌನ್; ಮಾ.22ರ ಟಾಪ್ 10 ಸುದ್ದಿ!

Suvarna News   | Asianet News
Published : Mar 22, 2020, 04:49 PM ISTUpdated : Mar 23, 2020, 07:03 PM IST
ಕೊರೋನಾಗೆ ನಟಿಯಿಂದ ಸೆಕ್ಸ್ ಮೆಡಿಸಿನ್, ಕರ್ನಾಟಕದ 9 ಜಿಲ್ಲೆ ಲಾಕ್‌ಡೌನ್; ಮಾ.22ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ವೈರಸ್ ವಿರುದ್ದ ಹೋರಾಡಲು ಪ್ರಧಾನಿ ಮೋದಿ ಕರೆ ನೀಡಿದ ಜನತಾ ಕರ್ಫ್ಯೂ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಮೋದಿ ಮತ್ತೊಂದು ಕರೆ ನೀಡಿದ್ದಾರೆ. ರಾಜ್ಯದಲ್ಲೂ ಕೊರೋನಾ ಭೀತಿ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕದ 9 ಜಿಲ್ಲೆಗಳು ಲಾಕ್‌ಡೌನ್ ಆಗಿದೆ. ಔಷದಿ ಸಿಂಪಡಿಸಲಾಗುತ್ತಿದೆ ಅನ್ನೋ ಸುದ್ದಿಗೆ ಗೃಹ ಸಚಿವ ಸ್ಪಷ್ಟನೆ ನೀಡಿದ್ದಾರೆ. ಇತ್ತ ಸೆಕ್ಸ್ ಮಾಡಿ ಕೊರೋನಾ ತಡೆಗಟ್ಟಬಹುದು ಅನ್ನೋ ವಿವಾದಾತ್ಮಕ ಹೇಳಿಕೆಗೆ ಆಕ್ರೋಷ ಹೆಚ್ಚಾಗಿದೆ. ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಕೊರೋನಾ ವೈರಸ್‌ನಿಂದ ಸಾವು ಸೇರಿದಂತೆ ಮಾರ್ಚ್ 22ರ 10 ಸುದ್ದಿ ಇಲ್ಲಿವೆ.  

ಕೊರೋನಾ ವಿರುದ್ಧ ಮೋದಿ ಸಮರ: ದೇಶದ ಜನತೆಗೆ ಮತ್ತೊಂದು ಕರೆ ಕೊಟ್ಟ ಪ್ರಧಾನಿ...

ಜಗತ್ತಿನಾದ್ಯಂತ ಕಿಲ್ಲರ್ ಕೊರೊನಾ ಸಾವಿನ ರಣಕೇಕೆ ಹಾಕ್ತಿದೆ.. ಭಾರತಕ್ಕೂ ಎಂಟ್ರಿಕೊಟ್ಟಿರೋ ಡೆಡ್ಲಿ ವೈರಸ್,  ಕಾಡ್ಗಿಚ್ಚಿನಂತೆ ಹಬ್ಬುತ್ತಿರೋ ಮಾರಕ ಮಹಾಮಾರಿ ವಿರುದ್ಧ ಪ್ರಧಾನಿ ಮೋದಿ ಸಮರ ಸಾರಿದ್ದಾರೆ. 

ರಸ್ತೆ ಬದಿ ಗುಂಡಿಯಲ್ಲಿ ಕೊರೋನಾಗೆ ಬಲಿಯಾದವರ ಸಮಾಧಿ: ಶಾಕಿಂಗ್ ದೃಶ್ಯ ರಿವೀಲ್...

ಕೊರೋನಾ ವೈರಸ್ ನಿಂದಾಗಿ ಹಲವಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.  ಜನರಿಗೆ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರ ಸೂಚಿಸಿದರೂ, ಅನೇಕರು ಇದನ್ನು ಮಾಮೂಲಿಯಾಗಿ ತೆಗೆದುಕೊಂಡಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ಕೊರೋನಾ ವೈರಸ್‌ನಿಂದ ಮೃತಪಟ್ಟವವರ ಮೃತದೇಹ ಸಮಾಧಿ ಮಾಡುವ ಫೋಟೋಗಳು ವೈರಲ್ ಆಗಿವೆ.

ಮೊದಲ ಬಾರಿ ತಮಗೇ ತಾವು ಕರ್ಫ್ಯೂ ಹಾಕಿಕೊಂಡ ಜನ, ಫೋಟೋಗಳಲ್ಲಿ ನೋಡಿ ಬಂದ್ ಸ್ಥಿತಿ!...

ಕೊರೋನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮೇರೆಗೆ ಇಂದು ಅಂದರೆ ಮಾರ್ಚ್ 22 ರಂದು ಬೆಳಗ್ಗೆ ಏಳು ಗಂಟೆಯಿಂದ ಜನತಾ ಕರ್ಫ್ಯೂ ಹೇರಲಾಗಿದೆ. ಈ ನಿಟ್ಟಿನಲ್ಲಿ ರಾತ್ರಿ 9 ಗಂಟೆವರೆಗೆ ಜನರು ತಮ್ಮ ಮನೆಗಳಲ್ಲೇ ಉಳಿದುಕೊಳ್ಳಲಿದ್ದಾರೆ. ಮನವಿ ಯಶಸ್ವಿಯಾಗಿಸಲು ಅನೆಕ ರಾಜ್ಯಗಳು ಅಡ್ವಯ್ಸರಿ ಜಾರಿಗೊಳಿಸಿದ್ದರೆ, ಇನ್ನು ಕೆಲವೆಡೆ ಜನರೇ ಖುದ್ದು ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಕೊರೋನಾ ವೈರಸ್‌ಗೆ ಬಲಿಯಾದ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೊರೆಂಝೋ!


 
ಇತ್ತೀಚೆಗಷ್ಟೇ 21 ವರ್ಷದ ಫುಟ್ಬಾಲ್ ಕೋಚ್ ಕೊರೋನಾ ವೈರಸ್‌‌ನಿಂದ ಮೃತಪಟ್ಟ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಕೊರೋನಾ ವೈರಸ್‌ಗೆ ಫುಟ್ಬಾಲ್ ಕ್ಷೇತ್ರದಲ್ಲಿ 2ನೇ ಬಲಿಯಾಗಿದೆ. ಈ ಮೂಲಕ ಕೊರೋನಾ ಭೀತಿ ಹೆಚ್ಚಾಗಿದೆ. 

ಜನತಾ ಕರ್ಫ್ಯೂ: ಗಾಳಿ ಸುದ್ದಿಗೆ ತೆರೆ ಎಳೆದ ಗೃಹ ಸಚಿವ ಬೊಮ್ಮಾಯಿ

ಜನತಾ ಕರ್ಫ್ಯೂದಿನದಂದು ಔಷಧಿ ಸಿಂಪಡಿಸಲಾಗುತ್ತಿದೆ ಎನ್ನವ ಸುಳ್ಳು ಸುದ್ದಿ ಸಾಕಷ್ಟು ವೈರಲ್ ಆಗಿತ್ತಿದೆ. ಈ ಕುರಿತಂತೆ ರಾಜ್ಯ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಇದೊಂದು ಸುಳ್ಳು ಸುದ್ದಿ, ಈ ಕುರಿತಂತೆ ಯಾರೂ ಹೆದರಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಬೀಚಲ್ಲಿ ಪತಿಯೊಂದಿಗೆ ಕನ್ನಡ ನಟಿಯ ಟಪ್ಪಾಂಗುಚಿ ಸ್ಟೆಪ್‌; ವಿಡಿಯೋ ವೈರಲ್!

28 ವಾರಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ  ಬಹುಭಾಷಾ ನಟಿ ಅಪ್ಲೋಡ್‌ ಮಾಡಿದ ವಿಡಿಯೋ ಈಗ ಫುಲ್‌ ವೈರಲ್‌, ಇದಕ್ಕೆ ನೆಟ್ಟಿಗರು ಕೊಟ್ಟ ರಿಯಾಕ್ಷನ್‌ ಹೇಗಿದೆ ಗೊತ್ತಾ? ಕೊರೋನಾ ಭೀತಿಯಿಂದ ಮನೆಯಲ್ಲಿರುವ ಜನರಿಗೆ ಇದೀಗ ಟಪ್ಪಾಂಗುಚಿ ಸ್ಟೆಪ್ ವಿಡಿಯೋ ಮನರಂಜನೆ ನೀಡಿದೆ.

ಸೆಕ್ಸ್‌ನಿಂದ ಕೊರೋನಾ ಗೆಲ್ಲಬಹುದು; ನಟಿಯ ಅಸಭ್ಯ ಹೇಳಿಕೆ!

ಕೊರೋನಾ ವೈರಸ್ ಭೀತಿಯಲ್ಲಿ ಶುರುವಾಯ್ತು ಕಾಂಟ್ರೋವರ್ಸಿ ಕ್ವೀನ್‌ ಶ್ರೀ ರೆಡ್ಡಿ ಹುಚ್ಚಾಟ. ಕೋವಿಡ್ 19 ತಡೆಯಲು  ಉಪಾಯ ಕೊಟ್ಟ ನಟಿ ವಿರುದ್ಧ ಪೊಲೀಸರ ದೂರು, ನೆಟ್ಟಿಗರು ಫುಲ್ ಗರಂ. 

ಕರ್ನಾಟಕದ ಈ 9 ಜಿಲ್ಲೆಗಳು ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ಆದೇಶ...

ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗೊಳ್ಳುತ್ತಿದ್ದು, ಒಂದರ ಮೇಲೊಂದು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳುತ್ತಿದೆ.

ಕೊರೋನಾ ವಿರುದ್ಧ ಸಮರ: ಕೇಂದ್ರದಿಂದ ವಾಟ್ಸಪ್ ಹೆಲ್ಪ್‌ಡೆಸ್ಕ್, ಕೈ ಜೋಡಿಸಿದ ರಿಲಯನ್ಸ್...

ಕೋವಿಡ್ -19 ಕುರಿತ ಸಾರ್ವಜನಿಕರ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು,  ಅವರ ಅಗತ್ಯ ಸಂದರ್ಭದಲ್ಲಿ ಸಹಾಯ ಮಾಡಲು ಭಾರತ ಸರ್ಕಾರವು 'ಮೈಗೋವ್ ಕೊರೋನಾ ಹೆಲ್ಪ್‌ಡೆಸ್ಕ್' ಎಂಬ ವಾಟ್ಸಾಪ್ ಚಾಟ್‌ಬಾಟ್ ಅನ್ನು ಆರಂಭಿಸಿದೆ. 

ಈ ಜೋಡಿಗೆ ಪ್ರಾಕೃತಿಕ ವಿಕೋಪಗಳೇ ಅಡ್ಡಿ, 3ನೇ ಬಾರಿ ವಿವಾಹ ರದ್ದು!

ಕೇರಳದ ಜೋಡಿಯೊಂದಕ್ಕೆ ಪ್ರಾಕೃತಿಕ ವಿಕೋಪಗಳು ಪದೇ ಪದೇ ವಿಘ್ನ ತರುತ್ತಿದ್ದು, ಮೂರನೇ ಬಾರಿಗೆ ಮದುವೆ ಮುಂದೆ ಹೋಗುವಂತೆ ಮಾಡಿದೆ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ