ಈಸ್ಟರ್ ದಾಳಿ ಪರಿಣಾಮ: ಶ್ರೀಲಂಕಾದಲ್ಲಿ ಮುಖ ಪರದೆ ನಿಷೇಧ!

By Web DeskFirst Published Apr 29, 2019, 5:59 PM IST
Highlights

ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಪರಿಣಾಮ| ಶ್ರೀಲಂಕಾದಲ್ಲಿ ಮುಖ ಪರದೆ ನಿಷೇಧ| ಶ್ರೀಲಂಕಾದಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಮುಖ ಪರದೆ ತೊಡುವಂತಿಲ್ಲ| ಶ್ರೀಲಂಕಾದ ಮುಸ್ಲಿಮ್ ಮಹಿಳೆಯರು ಬೂರ್ಖಾ ಧರಿಸಲು ನಿರ್ಬಂಧ| ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಮಹತ್ವದ ಆದೇಶ|

ಕೋಲಂಬೋ(ಏ.29): ಮಹತ್ವದ ಬೆಳವಣಿಗೆಯೊಂದರಲ್ಲಿ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಬಳಿಕ, ಶ್ರೀಲಂಕಾದಲ್ಲಿ ಸಾರ್ವಜನಿಕವಾಗಿ ಮುಖ ಪರದೆ ತೊಡುವುದನ್ನು ನಿಷೇಧಿಸಲಾಗಿದೆ.

ಈ ಕುರಿತು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಆದೇಶ ಹೊರಡಿಸಿದ್ದು, ಸಾರ್ವಜನಿಕವಾಗಿ ಬೂರ್ಖಾ ಸೇರಿದಂತೆ ಯಾವುದೇ ಮುಖ ಪರದೆ ತೊಡುವುದನ್ನು ನಿಷೇಧಿಸಲಾಗಿದೆ.

ರಾಷ್ಟ್ರೀಯ ಭದ್ರತೆ ಹಿತದೃಷ್ಟಿಯಿಂದ ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಮುಖ ಪರದೆ ತೊಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23ರಂದು ಎರಡನೇ ಹಂತದ ಮತದಾನ ಮುಕ್ತಾಯ ಕಂಡಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

 

 

click me!