ಭಾನುವಾರ ಕಂಕಣ ಸೂರ್ಯಗ್ರಹಣ, ಅವಧಿ ಮುಗಿದ ಬಿಯರ್‌ನಿಂದ ಹೋಗಲಿದೆ ಪ್ರಾಣ; ಜೂ.20ರ ಟಾಪ್ 10 ಸುದ್ದಿ!

Suvarna News   | Asianet News
Published : Jun 20, 2020, 04:50 PM ISTUpdated : Jun 20, 2020, 04:57 PM IST
ಭಾನುವಾರ ಕಂಕಣ ಸೂರ್ಯಗ್ರಹಣ, ಅವಧಿ ಮುಗಿದ ಬಿಯರ್‌ನಿಂದ ಹೋಗಲಿದೆ ಪ್ರಾಣ; ಜೂ.20ರ ಟಾಪ್ 10 ಸುದ್ದಿ!

ಸಾರಾಂಶ

ಭಾರತ-ಚೀನಾ ಗಡಿ ಬಿಕ್ಕಟ್ಟಿನಲ್ಲಿ ರಾಜಕೀಯ ಮಾಡಬೇಡಿ ಎಂದು ರಾಹುಲ್ ಗಾಂಧಿ ವಿರುದ್ಧ ಯೋಧನ ತಂದೆ ಕಿಡಿ ಕಾರಿದ್ದಾರೆ. ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ಯಶಸ್ವಿಯಾದರೆ ಭಾರತ ಭರ್ಜರಿ ಮೇಲುಗೈ ಸಾಧಿಸಲಿದೆ. ಇತ್ತ ಸೆಲೆಬ್ರೆಟಿಗಳಿಗೂ ಚೀನಾ ವಸ್ತುಗಳ ಪ್ರಚಾರ ಮಾಡದಂತೆ ಸೂಚನೆ ನೀಡಲಾಗಿದೆ. ಇನ್ನು ಜೂನ್‌ 21ರ ಭಾನುವಾರ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಅವಧಿ ಮುಗಿದ ಬಿಯರ್‌ ಕುಡಿದ್ರೆ ಮುಗೀತು ಕಥೆ, ಅಂಬಾನಿ ಈಗ ವಿಶ್ವದ 11ನೇ ಶ್ರೀಮಂತ ಸೇರಿದಂತೆ ಜೂನ್ 20ರ ಟಾಪ್ 10 ಸುದ್ದಿ ಇಲ್ಲಿವೆ.  

ಚೀನಾ ದಾಳಿ ವಿಚಾರ ರಾಜಕೀಯ ಬೇಡ: ರಾಹುಲ್‌ ಗಾಂಧಿ ಬಗ್ಗೆ ಯೋಧನ ತಂದೆ ಕಿಡಿ

ಯೋಧರೊಬ್ಬರ ತಂದೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೂನ್ 15ರಂದು ಭಾರತೀಯ ಯೋಧರ ಮೇಲೆ ಚೀನಾ ನಡೆಸಿದ ದಾಳಿಯಲ್ಲಿ ಗಾಯಗೊಂಡ ಸುರೇಂದ್ರ ಸಿಂಗ್ ಎಂಬರ ತಂದೆಯ ಮಾತುಗಳು ಎಲ್ಲೆಡೆ ಸದ್ದು ಮಾಡುತ್ತಿದೆ.

‘ಬಾಯ್ಕಾಟ್‌’ ಅಭಿಯಾನ ಯಶಸ್ವಿಯಾದ್ರೆ 5.6 ಲಕ್ಷ ಕೋಟಿ ನಷ್ಟ, ಚೀನಾಕ್ಕೆ ಬಹಿಷ್ಕಾರ ಭೀತಿ!

ಯೋಧರ ಸಾವಿಗೆ ಕಾರಣವಾದ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ದೇಶದಲ್ಲಿ ಜೋರಾಗಿದ್ದು, ಹಲವು ಸಂಘಟನೆಗಳು ಅಭಿಯಾನವನ್ನೇ ಆರಂಭಿಸಿವೆ. ಒಂದು ವೇಳೆ, ಈ ಅಭಿಯಾನ ಯಶಸ್ವಿಯಾದರೆ ‘ಡ್ರ್ಯಾಗನ್‌’ ದೇಶ ವಾರ್ಷಿಕ ಬರೋಬ್ಬರಿ 6.8 ಲಕ್ಷ ಕೋಟಿ ರು. ನಷ್ಟಅನುಭವಿಸುವ ಅಂದಾಜಿದೆ.

ಕೊರೋನಾ ನಿಗ್ರಹ: ರಾಜ್ಯಕ್ಕೆ ಮತ್ತೆ ಕೇಂದ್ರ ಮೆಚ್ಚುಗೆ, ಕರ್ನಾಟಕ ಮಾದರಿ ಅನುಸರಿಸಲು ಸಲಹೆ!

ಕೊರೋನಾ ಹರಡುವುದನ್ನು ತಡೆಯಲು ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಕೇಂದ್ರ ಆರೋಗ್ಯ ಇಲಾಖೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲಾ ರಾಜ್ಯಗಳು ಇದೇ ಮಾದರಿ ಅನುಸರಿಸುವಂತೆ ಸಲಹೆ ನೀಡಿದೆ. ಮುಖ್ಯವಾಗಿ, ಕೊರೋನಾ ಸಂಪರ್ಕಿತರ ಪತ್ತೆಗೆ ಕರ್ನಾಟಕ ಕೈಗೊಂಡಿರುವ ಕ್ರಮಗಳು ಹಾಗೂ ಸಂಭವನೀಯ ಸೋಂಕಿತರ ಪತ್ತೆಗೆ ತಂತ್ರಜ್ಞಾನ ಬಳಸಿ ಮನೆಮನೆ ಸಮೀಕ್ಷೆ ನಡೆಸುತ್ತಿರುವುದನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ.

ಭಾನುವಾರ ಸೂರ್ಯಗ್ರಹಣ: ಕರ್ನಾಟಕದಲ್ಲಿ ಖಂಡಗ್ರಾಸ!

ಇದೇ ಜೂನ್‌ 21ರ ಭಾನುವಾರ ಅಪರೂಪದ ‘ಕಂಕಣ ಸೂರ್ಯಗ್ರಹಣ’ ಹಾಗೂ ‘ಪಾಶ್ರ್ವ ಸೂರ್ಯಗ್ರಹಣ’ ಸುಮಾರು ಮೂರೂವರೆ ತಾಸು ಸಂಭವಿಸಲಿದೆ.

ಕೊಹ್ಲಿ, ರೋಹಿತ್‌ ಹೆಣ್ಣಿನ ಮುಖದ ಫೋಟೋ ವೈರಲ್‌...

ಪುರುಷರು ಮಹಿಳೆಯಾಗಿದ್ದರೆ ಯಾವ ರೀತಿ ಕಾಣುತ್ತಿದ್ದರು, ಮಹಿಳೆಯರು ಪುರುಷರಾಗಿದ್ದರೆ ಹೇಗೆ ಗೋಚರಿಸುತ್ತಿದ್ದರು ಎಂದು ತೋರಿಸುವ ಆ್ಯಪ್‌ ಫಿಲ್ಟರ್‌ನಲ್ಲಿ ಭಾರತೀಯ ಕ್ರಿಕೆಟಿಗರ ಫೋಟೋಗಳು ವೈರಲ್ ಆಗುತ್ತಿವೆ. ಈ ಪೈಕಿ ರೋಹಿತ್ ಫೋಟೋ ನೋಡಿ ಚಹಲ್ ಕಾಲೆಳೆದಿದ್ದಾರೆ.

ಚೈನೀಸ್ ಪ್ರಾಡಕ್ಟ್ ಆ್ಯಡ್‌ ನೀಡದಂತೆ ಸಾರಾ, ದೀಪಿಕಾ ಸೇರಿ ಸೆಲೆಬ್ರಿಟಿಗಳಿಗೆ ಸೂಚನೆ...

ಚೀನಾ ಪ್ರಾಡಕ್ಟ್ ಬಾಯ್ಕಾಟ್ ಅಭಿಯಾನ ಆರಂಭವಾದ ಬೆನ್ನಲ್ಲೇ ಇದೀಗ ಚೀನಾ ವಸ್ತುಗಳಿಗೆ ಜಾಹೀರಾತು ನೀಡಬಾರದು ಎಂದು ಸಿಐಎಟಿ ಸಲೆಬ್ರಿಟಿಗಳಿಗೆ ಪತ್ರದ ಮೂಲಕ ತಿಳಿಸಿದೆ.

ಕುಡುಕರೇ ಎಚ್ಚರ: ಎಣ್ಣೆ ಗುಂಗಲ್ಲಿ ಅವಧಿ ಮುಗಿದ ಬಿಯರ್‌ ಕುಡಿದ್ರೆ ಮುಗೀತು ಕಥೆ..!

ನಗರ ಸೇರಿದಂತೆ ಜಿಲ್ಲೆಯಲ್ಲಿ ಬಾರ್‌ಗಳಲ್ಲಿ ಲಾಕ್‌ಡೌನ್‌ನಲ್ಲಿ ಸ್ಟಾಕ್‌ ಉಳಿದು ಅವಧಿ ಮುಗಿದ ಬೀಯರ್‌ ಮಾರಾಟ ಮಾಡಲಾಗುತ್ತಿದೆ. ಅದೂ ಎಂಆರ್‌ಪಿ ದರಕ್ಕಿಂತ ಶೇ.25 ರಷ್ಟು ಹೆಚ್ಚಿನ ಬೆಲೆಗೆ. ಇಂಥ ಬಿಯರ್‌ ಕುಡಿದವರ ಆರೋಗ್ಯ ದೇವರಿಗೇ ಪ್ರೀತಿ ಎನ್ನುವಂತಾಗಿದೆ.


4.5 ಲಕ್ಷ ಕೋಟಿ ಆಸ್ತಿ: ಅಂಬಾನಿ ಈಗ ವಿಶ್ವದ 11ನೇ ಶ್ರೀಮಂತ!

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಇದೀಗ ವಿಶ್ವದ 11ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಂಬಾನಿ ಅವರ ಸಂಪತ್ತಿನ ಮೌಲ್ಯ ಮೊದಲ ಬಾರಿಗೆ 60 ಬಿಲಿಯನ್‌ ಡಾಲರ್‌ ದಾಟಿದೆ

ಬಾಯ್‌ಫ್ರೆಂಡ್ ಸೆಲೆಕ್ಟ್‌ ಮಾಡೋಕೆ ಮಗಳಿಗೆ ಟಿಪ್ಸ್ ಕೊಟ್ಟ ಶಾರೂಖ್..! ಏನೇನಿದೆ ನೀವೇ ನೋಡಿ

ಬಾಲಿವುಡ್‌ನ ನಟ ಶಾರೂಖ್‌ ಖಾನ್ ಮತ್ತು ಗೌರಿ ಖಾನ್ ಪುತ್ರಿ ಬಗ್ಗೆ ಎಲ್ಲರಿಗೂ ಗೊತ್ತು. ಇತ್ತೀಚೆಗೆ ವಿಡಿಯೋ ಒಂದರ ಮೂಲಕ ತಂದೆ ಶಾರೂಖ್ ಖಾನ್ ಯಾರ್ಯರಿಂದ ದೂರವಿರಬೇಕು ಎಂತಹ ಬಾಯ್‌ಫ್ರೆಂಡ್‌ನ್ನು ಚೂಸ್ ಮಾಡಬೇಕು ಎನ್ನೋದರ ಬಗ್ಗೆ ಮಗಳಿಗೆ ತಿಳಿ ಹೇಳಿದ್ದಾರೆ.

ಟ್ರಕ್ ಚಾಲಕರಿಗೆ ಆಹಾರ, ವೈದ್ಯಕೀಯ ನೆರವು ಒದಗಿಸಿದ ಟಾಟಾ ಮೋಟಾರ್ಸ್!...

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿರುವ ಟಾಟಾ ಮೋಟಾರ್ಸ್ ಈಗಾಗಲೇ ಹಲವು ಹಂತದಲ್ಲಿ ನೆರವು ನೀಡಿದೆ. ಟಾಟಾ ಸಮೂಹ ಒಟ್ಟು 1500 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇದೀಗ ಟ್ರಕ್ ಚಾಲಕರಿಗೆ ಟಾಟಾ ಮೋಟಾರ್ಸ್ ನೆರವು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ