ಗಡಿಯಲ್ಲಿ ಹಾರಾಡುತ್ತಿದ್ದ ಪಾಕ್​ ಡ್ರೋನ್ ಹೊಡೆದುರುಳಿಸಿದ BSF​ ಯೋಧರು!

Published : Jun 20, 2020, 03:56 PM ISTUpdated : Jun 20, 2020, 03:57 PM IST
ಗಡಿಯಲ್ಲಿ ಹಾರಾಡುತ್ತಿದ್ದ ಪಾಕ್​ ಡ್ರೋನ್ ಹೊಡೆದುರುಳಿಸಿದ BSF​ ಯೋಧರು!

ಸಾರಾಂಶ

ಗಡಿಯಲ್ಲಿ ಪಾಕಿಸ್ತಾನದ ಡಡ್ರೋನ್ ಹಾರಾಟ| ಅನುಮಾನಾಸ್ಪದ ಹಾರಾಟ ನಡೆಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್‌ ಪಡೆ| ಭಾರತೀಯ ಭೂಪ್ರದೇಶದ ಒಳಗೆ 250 ಮೀ.ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್​

ಶ್ರೀನಗರ(ಜೂ. 20): ಭಾರತ ಹಾಗೂಪಾಕಿಸ್ತಾನದ ಗಡಿ ಭಾಗ ಜಮ್ಮುಕಾಶ್ಮೀರದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನದ ಡ್ರೋನ್​ನ್ನು ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಶನಿವಾರ ಹೊಡೆದುರುಳಿಸಿದ್ದಾರೆ. ಕತುವಾ ಜಿಲ್ಲೆಯಲ್ಲಿ ಹಾರಾಡುತ್ತಿದ್ದ ಡ್ರೋನ್‌ ಮೇಲೆ ಗುಂಡು ಹಾರಿಸಿ ಹೊಡೆದುರುಳಿಸಿದ್ದು, ಇದಕ್ಕೆ ಅಳವಡಿಸಲಾಗಿದ್ದ ಶಸ್ತ್ತಾಸ್ತ್ರಗಳನ್ನು BSF ವಶಪಡಿಸಿಕೊಂಡಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

24 ತಾಸಿನಲ್ಲಿ 8 ಭಯೋತ್ಪಾದಕರ ಹತ್ಯೆ, ಮಸೀದಿಗೆ ಧಕ್ಕೆಯಾದಗದಂತೆ ಕಾರ್ಯಾಚರಣೆ!

ಕತುವಾ ಜಿಲ್ಲೆಯ ಹಿರಾನಗರ ತಾಲ್ಲೂಕಿನ ರಾತುವಾ ಗ್ರಾಮದಲ್ಲಿರುವ ಫಾರ್ವರ್ಡ್ ಪೋಸ್ಟ್‌ನಲ್ಲಿ ಇಂದು ಮುಂಜಾನೆ 5.10ಕ್ಕೆ ಈ ಘಟನೆ ನಡೆದಿದೆ. ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ಡ್ರೋನ್​ನ್ನು ಪಾನ್ಸಾರ್​ ಪೋಸ್ಟ್ ಸಮೀಪ ಗಸ್ತು ತಿರುಗುತ್ತಿದ್ದ ಬಿಎಸ್​ಎಫ್​ ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಶಸ್ತ್ತಾಸ್ತ್ರ ಸಾಗಾಣೆ ಮತ್ತೆ ಪತ್ತೆದಾರಿಕೆಗೆ ಇದನ್ನು ಬಳಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ

ಹಿರಾನಗರ ಸೆಕ್ಟರ್‌ನ ಕತುವಾ ಪ್ರದೇಶದಲ್ಲಿ ಭಾರತೀಯ ಭೂಪ್ರದೇಶದ ಒಳಗೆ 250 ಮೀ.ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್​ನತ್ತ 19 ಬೆಟಾಲಿಯನ್‌ನ BSF​ ಪೆಟ್ರೋಲಿಂಗ್ ತಂಡ 9 ಬಾರಿ ಫೈರಿಂಗ್​ ಮಾಡಿದ ಬಳಿಕ, ಅದು ಕೆಳಗೆ ಬಿದ್ದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ