ಕಿರಿಕ್ ಪಾರ್ಟಿ ತಂಡಕ್ಕೆ ಬಂಧನ ಭೀತಿ, ಪ್ರಕಟಗೊಂಡಿತು ಕರ್ಫ್ಯೂ ನೀತಿ; ಏ.9ರ ಟಾಪ್ 10 ಸುದ್ದಿ!

Published : Apr 09, 2021, 04:41 PM IST
ಕಿರಿಕ್ ಪಾರ್ಟಿ ತಂಡಕ್ಕೆ ಬಂಧನ ಭೀತಿ, ಪ್ರಕಟಗೊಂಡಿತು ಕರ್ಫ್ಯೂ ನೀತಿ; ಏ.9ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ನಿಯಂತ್ರಣಕ್ಕೆ ಹೇರಲಾಗುವ ನೈಟ್ ಕರ್ಫ್ಯೂ ಮಾರ್ಗಸೂಚಿ ಪ್ರಕಟಗೊಂಡಿದೆ.  ಇತ್ತ ಕನ್ನಡದ ಜನಪ್ರಿಯ ಚಲನಚಿತ್ರ ಕಿರಿಕ್ ಪಾರ್ಟಿಗೆ ಸಂಕಷ್ಟ ಎದುರಾಗಿತ್ತು, ತಂಡಕ್ಕೆ ಬಂಧನ ಭೀತಿ ಆವರಿಸಿದೆ. ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕೌಂಟ್‌ಡೌನ್ ಆರಂಭಗೊಂಡಿದೆ. ಬೇಸಗೆಯ ಬಿಸಿ ಏರಿಸಿದ ಜಾಹ್ನವಿ, ಪ್ರಧಾನಿಗೆ ರಾಹುಲ್ ಪತ್ರ ಸೇರಿದಂತೆ ಏಪ್ರಿಲ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಕೊರೋನಾ ನಿಯಮ ಉಲ್ಲಂಘಿಸಿದ ಪ್ರಧಾನಿ; ದುಬಾರಿ ದಂಡ ಹಾಕಿದ ನಾರ್ವೆ ಪೊಲೀಸ್!...

ಕೊರೋನಾ ನಿಯಮ ಉಲ್ಲಂಘನೆ ಹಾಗೂ ದಂಡ ಜಾರಿಗೊಳಿಸುವಲ್ಲಿ ಸಾರ್ವಜನಿಕ ವಲಯದಿಂದ ಟೀಕೆಗಳು ಜೋರಾಗಿದೆ. ಕಾರಣ ಜನಸಾಮಾನ್ಯರಿಗೆ ಒಂದು ನೀತಿ, ರಾಜಕಾರಣಿಗಳು, ಅಧಿಕಾರದಲ್ಲಿರುವವರಿಗೆ ಒಂದು ನೀತಿ ಅನ್ನೋ ಆರೋಪಗಳು ಇವೆ. ಆದರೆ ಈ ಘಟನೆ ಇದಕ್ಕೆ ವಿರುದ್ಧವಾಗಿದೆ. ಇದೀಗ ಕೊರೋನಾ ನಿಯಮ ಉಲ್ಲಂಘಿಸಿದ ಪ್ರಧಾನಿಗೆ ದಂಡ ಹಾಕಲಾಗಿದೆ.

ವಿದೇಶಕ್ಕೆ ಯಾಕೆ? ದೇಶದ ಎಲ್ಲರಿಗೂ ಲಸಿಕೆ ನೀಡಿ: ಪ್ರಧಾನಿ ಮೋದಿಗೆ ರಾಹುಲ್ ಪತ್ರ!...

ಕೊರೋನಾ ವೈರಸ್ ಹೆಚ್ಚಾಗುತ್ತಿದ್ದಂತೆ ಇದೀಗ ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ಆಗ್ರಹ ಹೆಚ್ಚಾಗುತ್ತಿದೆ. ಜೊತೆಗೆ ಎಲ್ಲರಿಗೂ ಲಸಿಕೆ ನೀಡಿ ಅನ್ನೋ ಕೂಗುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ವಿದೇಶಗಳಿಗೆ ಲಸಿಕೆ ರಫ್ತು ಮಾಡುವ ಬದಲು ದೇಶದ ಎಲ್ಲರಿಗೂ ನೀಡಿ ಎಂದಿದ್ದಾರೆ. ರಾಹುಲ್ ಗಾಂಧಿ ಪತ್ರದ ಸಾರಾಂಶ ಇಲ್ಲಿದೆ.

ವಿಮಾನದಲ್ಲೇ ಬೆತ್ತಲಾಗಿ ಇಟಾಲಿಯನ್ ಸ್ಮೂಚ್ ಬೇಕೆಂದ..! ಗಗನಸಖಿಯರು ಸುಸ್ತು...

ಗಗನ ಸಖಿಯನ್ನು ಚುಂಬಿಸಲು ಎರಡು ಬಾರಿ ಬೆತ್ತಲೆಯಾಗಿ ಪ್ರಯಾಣಿಕನೊಬ್ಬ ಡ್ರಾಮಾ ಮಾಡಿದ ವಿಲಕ್ಷಣ ಘಟನೆ ಏರ್‌ಏಷ್ಯಾ ಫ್ಲೈಟ್‌ನಲ್ಲಿ ನಡೆದಿದೆ. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ಬಂಧನ ಭೀತಿ, ಕಿರಿಕ್ ಪಾರ್ಟಿ ತಂಡಕ್ಕೆ ದೊಡ್ಡ ಸಂಕಷ್ಟ!...

ಹಿಟ್ ಚಿತ್ರ ಕಿರಿಕ್ ಪಾರ್ಟಿ ಚಿತ್ರ ತಂಡಕ್ಕೆ ಶುರುವಾಯ್ತು ಸಂಕಷ್ಟ/ ಸಂಪೂರ್ಣ ಚಿತ್ರ ತಂಡದ ವಿರುದ್ದ ನಾನ್ ಬೆಲಬಲ್ ವಾರೆಂಟ್ ಜಾರಿ/ 9 ನೇ ಎಸಿಎಂಎಂ ಕೋರ್ಟ್ ನಿಂದ ನಾನ್ ಬೆಲಬಲ್ ವಾರೆಂಟ್/ ಪ್ರತಿವಾದಿಗಳ ಬಂಧಿಸಿ ಕರೆ ತರಲು ಕೋರ್ಟ್ ನಿಂದ ಸೂಚನೆ/ ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ  ಅಜನೀಶ್ ಲೋಕನಾಥ್ & ಪರಮ್ವಾ ಸ್ಟುಡೀಯೋಸ್ ಆರೋಪಿಗಳು

ಐಪಿಎಲ್‌ 2021: ಉದ್ಘಾಟನಾ ಪಂದ್ಯಕ್ಕೂ ಮುನ್ನ ಮುಂಬೈಗೆ ವಾರ್ನ್‌ ಮಾಡಿದ ಎಬಿಡಿ..!...

 ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಇನ್ನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಬಲಿಷ್ಠ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ.

ಬೇಸಗೆಯ ಬಿಸಿ ಮತ್ತಷ್ಟು ಏರಿಸುತ್ತಿದ್ದಾರೆ ಜಾಹ್ನವಿ..! ಮಾಲ್ಡೀವ್ಸ್‌ನಲ್ಲಿ ಹಾಟೆಸ್ಟ್ ಲುಕ್...

ರೂಹಿ ಸಿನಿಮಾದ ಸಕ್ಸಸ್ ನಂತರ ವೆಕೇಷನ್‌ನಲ್ಲಿದ್ದಾರೆ ನಟಿ | ಶ್ರೀದೇವಿ ಪುತ್ರಿಯ ಹಾಟ್ ಮಾಲ್ಡೀವ್ಸ್ ಫೋಟೋ ವೈರಲ್

ಫ್ರಾನ್ಸ್ ಮೂಲದ ಸಿಟ್ರೊಯೆನ್ SUV ಕಾರು ಭಾರತದಲ್ಲಿ ಬಿಡುಗಡೆ!...

ಫ್ರಾನ್ಸ್ ಮೂಲದ ಸಿಟ್ರೊಯೆನ್ ಕಂಪನಿ ಇದೀಗ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಒಳಗೊಂಡ ಸಿ5 ಏರ್‌ಕ್ರಾಸ್ SUV ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. 

ಶಾಸಕ ಯತ್ನಾಳ್‌ ಹೈಕಮಾಂಡ್ ಬಿಜೆಪಿ ಬಿಗ್ ಶಾಕ್: ಪಕ್ಷದಿಂದ ಗೇಟ್ ಪಾಸ್ ಫಿಕ್ಸ್!...

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸದಾ ಒಂದಿಲ್ಲೊಂದು ಹೇಳಿಕೆ ನೀಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ನೈಟ್ ಕರ್ಫ್ಯೂ: ಏನಿರುತ್ತೆ? ಏನಿಲ್ಲ? ಸರ್ಕಾರದಿಂದ ಮಾರ್ಗಸೂಚಿ ಪ್ರಕಟ...

ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕಂಗನಾ, ಆಲಿಯಾ, ದೀಪಿಕಾ - 2021ರಲ್ಲಿ ಯಾರು ಹೆಚ್ಚು ಬ್ಯುಸಿ?...

ಬಾಲಿವುಡ್ ಕೆಲವು ಟಾಪ್‌ ನಟಿಯರ ಪಾಲಿಗೆ 2021 ಸಖತ್‌ ಲಕ್ಕಿ ಎಂದು ಸಾಬೀತಾಗಿದೆ. ಕಂಗನಾ ರಣಾವತ್‌ನಿಂದ ಹಿಡಿದು ದೀಪಿಕಾ ಪಡುಕೋಣೆ, ಆಲಿಯಾ ಭಟ್‌ವರೆಗೆ ಕೆಲವು ನಟಿಯರ ಕೆರಿಯರ್‌ ಗ್ರಾಫ್‌ ಮೇಲೆರುತ್ತಿದೆ. ಈ ನಟಿಯರು ಎರಡಕ್ಕಿಂತ ಹೆಚ್ಚು ಸಿನಿಮಾಗಳನ್ನು ಹೊಂದಿದ್ದು ಬ್ಯುಸಿಯಾಗಿದ್ದಾರೆ. ಯಾವ ಯಾವ ನಟಿಯರು ಎಷ್ಷು ಸಿನಿಮಾವನ್ನು ಹೊಂದಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Kogilu shed demolition controversy ಕೋಗಿಲು ಶೆಡ್ ತೆರವು ವಿವಾದ; ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಕರಿಗೌಡ
India Latest News Live: ಯೂನಸ್‌ ಮನೆ ಮುಂದೆ ಹಿಂಸಾಚಾರ: 15 ಉದ್ಯೋಗಿಗಳಿಗೆ ಗಾಯ