ವಾಯುಸೇನೆ ಮುಖ್ಯಸ್ಥರಾಗಿ ಬದೌರಿಯಾ, ಅನರ್ಹರಿಗೆ ಮಣೆ ಎಂದ BSY: ಸೆ.30ರ ಟಾಪ್ ಸುದ್ದಿ!

By Web Desk  |  First Published Sep 30, 2019, 5:43 PM IST

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಸೆ.28ರಂದು ನಡೆದ ಸೆ.30ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|


ಬೆಂಗಳೂರು(ಸೆ.30): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. 

ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ

Latest Videos

undefined


ವಾಯುಸೇನೆ ಮುಖ್ಯಸ್ಥರಾಗಿ RKS ಬದೌರಿಯಾ ಅಧಿಕಾರ ಸ್ವೀಕಾರ!

ನವದೆಹಲಿ(ಸೆ.30): ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥರಾಗಿ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ಅಧಿಕಾರ ಸ್ವೀಕರಿಸಿದ್ದಾರೆ. ವಾಯುಸೇನೆ ಮುಖ್ಯಸ್ಥ ಬಿಎಸ್.ಧನೋವಾ ನಿವೃತ್ತಿ ಬಳಿಕ ತೆರವಾದ ಮುಖ್ಯಸ್ಥರ ಸ್ಥಾನಕ್ಕೆ, RKS ಬದೌರಿಯಾ ಅವರನ್ನು ನೇಮಿಸಿ ಕಳೆದ ಸೆ.19 ರಂದು ಕೇಂದ್ರ ರಕ್ಷಣಾ ಇಲಾಖೆ ಆದೇಶ ಹೊರಡಿಸಿತ್ತು. ಅದರಂತೆ ಬಿಎಸ್ ಧನೋವಾ ಅವರಿಂದ ಅಧಿಕಾರ ಸ್ವೀಕರಿಸಿದ ಬದೌರಿಯಾ, ವಾಯುಸೇನೆಯ ಬಲವರ್ಧನೆ ತಮ್ಮ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ.

ಏಷ್ಯಾಕಪ್ 2020: ಬಿಸಿಸಿಐಗೆ ಪಾಕ್‌ ಗಡು​ವು

ಕರಾಚಿ(ಸೆ.30): 2020ರ ಸೆಪ್ಟೆಂಬರ್‌ನಲ್ಲಿ ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿಗೆ ಪಾಕಿ​ಸ್ತಾನ ಆತಿಥ್ಯ ವಹಿ​ಸ​ಲಿದ್ದು, ಭಾರ​ತ ತಂಡವನ್ನು ಕಳು​ಹಿ​ಸಲು ಬಿಸಿ​ಸಿಐ ಒಪ್ಪಲಿದೆಯೇ ಎನ್ನುವ ಪ್ರಶ್ನೆ ಪಾಕಿ​ಸ್ತಾನ ಕ್ರಿಕೆಟ್‌ ಮಂಡ​ಳಿ(ಪಿಸಿ​ಬಿ)ಯನ್ನು ಕಾಡು​ತ್ತಿದೆ. ಟೂರ್ನಿ​ಯಲ್ಲಿ ಭಾರತ ತಂಡದ ಪಾಲ್ಗೊ​ಳ್ಳು​ವಿಕೆಯನ್ನು ಖಚಿತ ಪಡಿ​ಸಿಲು ಬಿಸಿ​ಸಿಐಗೆ ಮುಂದಿನ ವರ್ಷ ಜೂನ್‌ ವರೆಗೂ ಸಮಯ ನೀಡು​ವು​ದಾಗಿ ಪಿಸಿಬಿ ಹೇಳಿದೆ. ಒಂದೊಮ್ಮೆ ಭಾರತ, ಪಾಕಿ​ಸ್ತಾ​ನಕ್ಕೆ ತೆರ​ಳ​ಲು ನಿರಾ​ಕ​ರಿ​ಸಿ​ದರೆ ತಟಸ್ಥ ಸ್ಥಳ​ದಲ್ಲಿ ಟೂರ್ನಿ ಆಯೋ​ಜಿ​ಸ​ಬೇ​ಕಾ​ಗುತ್ತದೆ. ಪಂದ್ಯಾ​ವ​ಳಿ​ಯನ್ನು ಸ್ಥಳಾಂತರ ಮಾಡುವ ನಿರ್ಧಾರ ಏಷ್ಯನ್‌ ಕ್ರಿಕೆಟ್‌ ಸಮಿತಿ (ಎ​ಸಿ​ಸಿ​)ಗೆ ಬಿಟ್ಟವಿಚಾರವಾಗಿದೆ. 

ಬೈ ಎಲೆಕ್ಷನ್‌: ಅನರ್ಹ ಶಾಸಕರಿಗೆ ಮಣೆ, ಟಿಕೆಟ್ ಆಕಾಂಕ್ಷಿಗಳಿಗೆ ಬೇರೆ ಆಫರ್ ಕೊಟ್ಟ BSY

ಶಿವಮೊಗ್ಗ(ಸೆ.30): ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾಗಿರುವ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಬಗ್ಗೆ ಪಕ್ಷದಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ.

ಕೆಲವರು ಅನರ್ಹರಿಗೆ ಬೈ ಎಲೆಕ್ಷನ್ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ರೆ, ಮತ್ತೊಂದೆಡೆ ಅನರ್ಹ ಶಾಸಕರು ನಮಗೆ ಅತಿಥಿಗಳಿದ್ದಂತೆ. ಹೀಗಾಗಿ ಅವರಿಗೆ ಟಿಕೆಟ್ ನೀಡಬೇಕೆಂದು ಕೆಲವರ ಅಭಿಪ್ರಾಯ. ಇದರಿಂದ ಬಿಜೆಪಿಯಲ್ಲಿ ಬೈ ಎಲೆಕ್ಷನ್ ಟಿಕೆಟ್ ಹಗ್ಗಾಜಗ್ಗಾಟ ಮುಂದುವರಿದಿದೆ. ಇದರ ಮಧ್ಯೆ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ರಚಿತಾ ರಾಮ್ ಸ್ಯಾಂಡಲ್‌ವುಡ್ ಶ್ರೀದೇವಿ ಅಂದ್ರು ಖ್ಯಾತ ನಿರ್ದೇಶಕ!

ಬೆಂಗಳೂರು(ಸೆ.30): ಸ್ಟಾರ್ ನಟರೊಂದಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡುತ್ತಿರುವ ರಚಿತಾ ರಾಮ್ ಮೊಟ್ಟ ಮೊದಲ ಬಾರಿಗೆ ಖ್ಯಾತ ನಿರ್ದೇಶಕ ದ್ವಾರಕೀಶ್ ಅವರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 'ಆಯುಷ್ಮಾನ್ ಭವ' ಚಿತ್ರದಲ್ಲಿ ಶಿವರಾಜ್‌ ಕುಮಾರ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದ ಪ್ರಮೋಶನ್ ಗಾಗಿ ಟೀಂ ಪ್ರೆಸ್ ಮೀಟ್ ಆಯೋಜಿಸಿದ್ದು ದ್ವಾರಕೀಶ್ ಡಿಂಪಲ್ ಹುಡುಗಿಗೆ ಹೊಸದೊಂದು ಬಿರುದು ನೀಡಿದ್ದಾರೆ. ‘ಆಯುಷ್ಮಾನ್ ಭವ’ ಪಾತ್ರಧಾರಿಗಳ ಬಗ್ಗೆ ಮಾತನಾಡಿದ ದ್ವಾರಕೀಶ್ ರಚಿತಾ ರಾಮ್ ನೋಡಿದರೆ ಶ್ರೀದೇವಿಯನ್ನು ನೋಡಿದ ಹಾಗೆ ಆಗುತ್ತೆ ಎಂದು ಹೇಳಿದ್ದಾರೆ. ಇದರಿಂದು ಡಿಂಪಲ್‌ ಕ್ವೀನ್ ಪಟ್ಟಿಯಲ್ಲಿ ಹೊಸ ಬಿರುದು ಸೇರಿಕೊಂಡಂತಾಗಿದೆ.

ಏನೇ ಆಗ್ಲಿ, ಮೈತ್ರಿ ಇರಲಿ! ಕಾಂಗ್ರೆಸ್- ಜೆಡಿಎಸ್ ಮಹತ್ವದ ನಿರ್ಧಾರ

ಬೆಂಗಳೂರು (ಸೆ.30):  ರಾಜಕೀಯವೇ ಹಾಗೇ, ಯಾವಾಗ, ಯಾರು, ಏನು ಮಾಡ್ತಾರೆ ಎಂದು ಹೇಳೋದೆ ಕಷ್ಟ. ವಿಧಾನಸೌಧದ ಮಟ್ಟಿಗೆ ದೋಸ್ತಿ ಮಾಡಿಕೊಂಡು, ಬೇರೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮತ್ತೆ ಮೈತ್ರಿ ಮುಂದುವರಿಸಲು ನಿರ್ಧರಿಸಿವೆ. 

ಕಳೆದ ವಿಧಾನಸಭೆ ಚುನಾವಣೆ (2018) ಬಳಿಕ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್, ಸರ್ಕಾರ ಪತನವಾದ ಬಳಿಕ ಮೈತ್ರಿ ಮುರಿದುಕೊಂಡಿವೆ.

ಅಕ್ಟೋಬರ್ ಕೊನೆ ವಾರದಲ್ಲಿ ಶುಭ ಸುದ್ದಿ : ಚುನಾವಣೆ ನಡೆಯೋದೆ ಡೌಟ್ ಎಂದ ಮುಖಂಡ

ಬೆಂಗಳೂರು(ಸೆ.30): ರಾಜ್ಯದಲ್ಲಿ ಘೋಷಣೆಯಾಗಿದ್ದ ಉಪ ಚುನಾವಣೆ ಡಿಸೆಂಬರ್ 5ಕ್ಕೆ ಮುಂದೂಡಿಕೆಯಾಗಿದೆ. ಆದರೆ ಉಪ ಚುನಾವಣೆ ಬರುವುದೇ ಅನುಮಾನ ಎಂದು ಅನರ್ಹ ಶಾಸಕ ಸುಧಾಕರ್ ಹೇಳೀದರು. ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಮಾತನಾಡಿದ ಸುಧಾಕರ್ ಸುಪ್ರೀಂಕೋರ್ಟಲ್ಲಿ ರಮೇಶ್ ಕುಮಾರ್ ಅವರ ಆದೇಶ ಬಿದ್ದು ಹೋಗುತ್ತದೆ. ಅನರ್ಹತೆ ಅರ್ಹತೆಯಾಗುತ್ತದೆ ಎಂದರು.

ನಕ್ಷತ್ರ ತೇಗಿದ ಕಪ್ಪುರಂಧ್ರ: ನುಂಗುಬಾಕನಿಗೆ ಯಾವ ಲೆಕ್ಕ ಭೂಮಿ, ಚಂದ್ರ?

ವಾಷಿಂಗ್ಟನ್(ಸೆ.30): ವಿಶ್ವಕ್ಕೆ ವಿನಾಶದ ಸಂದೇಶ ಕಳುಹಿಸುವ ಕಪ್ಪುರಂಧ್ರಗಳ ಅಬ್ಬರ ಜೋರಾಗಿದೆ. ಇತ್ತೀಚಿಗಷ್ಟೇ ಕಪ್ಪುರಂಧ್ರಗಳ ಇರುವಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದ್ದ ಖಗೋಳ ವಿಜ್ಞಾನಿಗಳು, ಇದೀಗ ನಕ್ಷತ್ರವೊಂದನ್ನು ಮುಲಾಜಿಲ್ಲದೇ ನುಂಗಿದ ಕಪ್ಪುರಂಧ್ರದ ವಿಡಿಯೋ ಸೆರೆ ಹಿಡಿದಿದ್ದಾರೆ. ನಾಸಾದ ಟ್ರಾನ್ಸಿಟ್ಟಿಂಗ್ ಎಕ್ಸೋಪ್ಲ್ಯಾನೆಟ್ ಸರ್ವೆ ಸ್ಯಾಟಲೈಟ್(TESS) ಕಪ್ಪುರಂಧ್ರದ ರುದ್ರ ಭಯಂಕರ ವರ್ತನೆಯನ್ನು ಸೆರೆ ಹಿಡಿದಿದ್ದು, ನಮ್ಮ ಸೂರ್ಯನಷ್ಟು ಗಾತ್ರದ ನಕ್ಷತ್ರವೊಂದನ್ನು ಇಡೀಯಾಗಿ ನುಂಗುತ್ತಿರುವ ದೃಶ್ಯ ಸೆರೆ ಹಿಡಿಯಲಾಗಿದೆ.


ಅಮೆಜಾನ್‌: 36 ಗಂಟೇಲಿ 750 ಕೋಟಿ ಮೌಲ್ಯದ ಮೊಬೈಲ್‌ ಸೇಲ್!

ನವದೆಹಲಿ(ಸೆ.30): ಆರ್ಥಿಕ ಹಿಂಜರಿತದಿಂದಾಗಿ ಕಳೆದ ನಾಲ್ಕೈದು ತಿಂಗಳಿನಲ್ಲಿ ವಹಿವಾಟು ಕುಸಿತಗೊಂಡಿದ್ದ ಅಮೇಜಾನ್‌ಗೆ ‘ಗ್ರೇಟ್‌ ಇಂಡಿಯನ್‌ ಸೇಲ್‌’ ಹಬ್ಬದ ವ್ಯಾಪಾರ ಭರ್ಜರಿ ಚೇತರಿಕೆ ನೀಡಿದೆ. ಕೇವಲ 36 ಗಂಟೆಯಲ್ಲಿ 750 ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ಕಂತುಗಳಲ್ಲಿ ಮಾರಾಟ ಮಾಡುವ ಮೂಲಕ ಅಮೇಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ದಾಖಲೆಯ ಆರಂಭ ಪಡೆದಿದೆ.

ಭಯವೇ ನಮ್ಮನ್ನು ಬದುಕಿಸುವ ಸಂಜೀವಿನಿ ನೋಡೋಣ, ದೇವರಿದ್ದಾನೆ!

ಮಹಾಭಾರತದಲ್ಲಿ ಅತ್ಯಂತ ನಿರ್ಭಯನಾದ ವ್ಯಕ್ತಿ ಯಾರು ಎಂದು ಕೇಳಿದಾಗ ಕೃಷ್ಣ ಹೇಳುವ ಹೆಸರು ಭೀಮನದೂ ಅಲ್ಲ, ಅರ್ಜುನನದೂ ಅಲ್ಲ. ಸಹದೇವನದು. ಅವನು ಯಾಕೆ ನಿರ್ಭಯ ಅಂದರೆ ಅವರಿಗೆ ಮುಂದಾಗುವುದೆಲ್ಲ ಗೊತ್ತಿರುತ್ತದೆ. ನಾಳೆ ಹೀಗೆಯೇ ಎಂದು ಗೊತ್ತಾದವನಿಗೆ ಭಯ ಇಲ್ಲ. ನಾಳೆ ಏನು ಎಂಬುದು ಗೊತ್ತೇ ಇಲ್ಲದವನಿಗೂ ಭಯವಿಲ್ಲ. ಭಯವಿರುವುದು ನಾಳೆಯನ್ನು ಊಹಿಸಿಕೊಳ್ಳಬಲ್ಲವನಿಗೆ. ಹಾಗೆ ಊಹಿಸಿಕೊಳ್ಳುವವರು ನಾವು.

ಕಣಿವೆಯಲ್ಲಿ ನಡೆಯುತ್ತಿರುವುದು ಧರ್ಮಯುದ್ಧ: ಇಮ್ರಾನ್ ಇವಾಗ ತೆಪ್ಪಗಿದ್ದರೆ ಚೆಂದ!

ಇಸ್ಲಾಮಾಬಾದ್‌[ಸೆ.30]: ಪದೇ ಪದೇ ಕಾಶ್ಮೀರ ವಿಚಾರದಲ್ಲಿ ಉದ್ಧಟತದನದ ಹೇಳಿಕೆ ನೀಡುತ್ತಿರುವ ಪಾಕ್‌ ಪ್ರಧಾನಿ ಇಮ್ರಾನ್‌ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಪಾಕಿಸ್ತಾನಕ್ಕೆ ಮರಳಿದ ಇಮ್ರಾನ್‌, ಕಾಶ್ಮೀರದ ವಿರುದ್ಧ ಇಡೀ ಜಗತ್ತು ಪಾಕಿಸ್ತಾನ ಕಾಶ್ಮೀರಿಗಳ ಪರ ನಿಲ್ಲಲಿದೆ. ಅವರ ಪರ ನಿಲ್ಲುವುದು ಜಿಹಾದ್‌ಗೆ ಸಮವಾಗಿದ್ದು, ನಮ್ಮ ಮೇಲೆ ಅಲ್ಲಾಹು ತೃಪ್ತಿಯಾಗಬೇಕಿರುವುದರಿಂದ ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

click me!