ರಫೇಲ್ ಆಗಮನ, ಸಂಪುಟ ಸರ್ಜರಿಗೆ ರೆಡಿಯಾದ ಯಡಿಯೂರಪ್ಪ: ಇಲ್ಲಿದೆ ಜುಲೈ 29ರ ಟಾಪ್ 10 ನ್ಯೂಸ್!

By Suvarna NewsFirst Published Jul 29, 2020, 6:09 PM IST
Highlights

ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನವಾದ ರಫೇಲ್‌ ಹೊಂದುವ ಭಾರತೀಯ ವಾಯುಪಡೆಯ ಕನಸು ಕೊನೆಗೂ ನನಸಾಗಿದೆ. ಐದು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ ಭಾರತಕ್ಕೆ ಆಗಮಿಸಿವೆ. ಅತ್ತ ಕೊರೋನಾತಂಕ ನಡುವೆ ರಷ್ಯಾ ಲಸಿಕೆ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಜನರಿಗೆ ಖುಷಿ ಕೊಟ್ಟಿದೆ. ಇನ್ನು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಸಿಎಂ ಬಿಎಸ್‌ ವೈ ಸಂಪುಟ ಸರ್ಜರಿ ಮಾಡೋದು ಖಚಿತವಾಗಿದೆ. ಇವೆಲ್ಲದರ ನಡುವೆ ನಟಿ ದೀಪಿಕಾ ಪಡುಕೋಣೆ ಜೆಎನ್‌ಯು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಐದು ಕೋಟಿ ಪಡೆದಿದ್ದಾರೆಂಬ ಆರೋಪ ಹೊಸ ವಿವಾದ ಸೃಷ್ಟಿಸಿದೆ. ಇಲ್ಲಿದೆ ನೋಡಿ ಜುಲೈ 29ರ ಟಾಪ್ ಹತ್ತು ಸುದ್ದಿಗಳು

ಭಾರತಕ್ಕೆ ಬಂದಿಳಿದ 'ರಫೇಲ್' ಲೋಹದ ಹಕ್ಕಿಗಳು: ಸೇನಾ ಇತಿಹಾಸದಲ್ಲಿ ಹೊಸ ಶಕೆ ಆರಂಭ!

ತನ್ನ ಬತ್ತಳಿಕೆಗೆ ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನವಾದ ರಫೇಲ್‌ ಹೊಂದುವ ಭಾರತೀಯ ವಾಯುಪಡೆಯ ಕನಸು ಕೊನೆಗೂ ನನಸಾಗಿದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ನಿರ್ಮಿತ ಒಂದು ಸೀಟಿನ 3 ಮತ್ತು 2 ಸೀಟಿನ 3 ವಿಮಾನಗಳು ಬುಧವಾರ ಹರ್ಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್‌ಕೆಎಸ್ ಭದೌರಿಯ ಬಹು ನಿರೀಕ್ಷಿತ ರಫೇಲ್ ವಿಮಾನಗಳನ್ನು ಬರಮಾಡಿಕೊಂಡಿದ್ದಾರೆ. 

ಸಿಎಂ ಯಡಿಯೂರಪ್ಪ ಸಂಪುಟಕ್ಕೆ ಸರ್ಜರಿ ಪಕ್ಕಾ: ಯಾರು ಇನ್? ಯಾರು ಔಟ್?

ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಸಿಎಂ ಯಡಿಯೂರಪ್ಪ ಸಂಪುಟ ಪುನಾರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಆಗಸ್ಟ್ ಮೊದಲ ವಾರದಲ್ಲಿ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದಾರೆ. ಅಷ್ಟಕ್ಕೂ ಸಿಎಂ ಯಡಿಯೂರಪ್ಪ ಮಾಡಿರುವ ಸಚಿವರ ಪಟ್ಟಿಯಲ್ಲಿ ಯಾರ ಹೆಸರಿದೆ? ಯಾರು ಈಗಿನ ಸಂಪುಟದಿಂದ ಹೊರ ಹೋಗುತ್ತಾರೆ? ಯಾರಿಗೆ ಮಂತ್ರಿ ಭಾಗ್ಯ ದೊರಕುತ್ತೆ? ಎಂಬುವುದು ಭಾರೀ ಕುತೂಹಲ ಮೂಡಿಸಿದೆ.

ಅತಿ ಹೆಚ್ಚು ಹುಲಿ; 2 ನೇ ಸ್ಥಾನದಲ್ಲಿರುವ ಕರ್ನಾಟಕ ಶೀಘ್ರವೇ ನಂ 1

ಏಷ್ಯಾ ಖಂಡದಲ್ಲಿ ಹೆಚ್ಚು ಕಂಡುಬರುವ ಹುಲಿಗಳ ಸಂಖ್ಯೆ ಒಂದು ಕಾಲದಲ್ಲಿ ಸಾವಿರದಷ್ಟುಇತ್ತು. ಅದರಲ್ಲೂ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು 80 ಸಾವಿರ ಹುಲಿಗಳು ಇದ್ದವು ಎಂದು ಹೇಳಲಾಗಿದೆ. ಆದರೆ ನಾನಾ ಕಾರಣಗಳಿಂದ ಹುಲಿಗಳ ಸಂತತಿ ಇಳಿಕೆಯಾಗುತ್ತಿದ್ದಂತೆ ಇವುಗಳ ರಕ್ಷಣೆಗಾಗಿ ವಿವಿಧ ದೇಶಗಳು ಸೇರಿ 2010ರಿಂದ ಪ್ರತಿವರ್ಷ ಜು.29ರಂದು ‘ಅಂತಾರಾಷ್ಟ್ರೀಯ ಹುಲಿ ದಿನ’ ಆಚರಿಸಲು ನಿರ್ಧರಿಸಿದವು. ‘ಹುಲಿ ದಿನ’ಕ್ಕೆ ಈ ವರ್ಷ ದಶಮಾನದ ಸಂಭ್ರಮ.

'ಮೊದಲು ಇವಳನ್ನು ಕಡಿದು ಕೊಲ್ಲಬೇಕು': ಡಿಸಿ ಸಿಂಧೂ ರೂಪೇಶ್‌ಗೆ ಕೊಲೆ ಬೆದರಿಕೆ ಹಾಕಿದವ ಅಂದರ್

ದಕ್ಷಿಣ ಕನ್ನಡ ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಗೆ ಕೊಲೆ ಬೆದರಿಕೆ ಪ್ರಕರಣ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜೆಎನ್‌ಯುಗೆ ಹೋಗಿದ್ದ ದೀಪಿಕಾ ಖಾತೆಗೆ 5 ಕೋಟಿ ರೂ.?: ನಟಿ ವಿರುದ್ಧ ಭುಗಿಲೆದ್ದ ಆಕ್ರೋಶ!

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆಗಾಗ ವಿವಾದಕ್ಕೊಳಪಡುತ್ತಾರೆ. ಸದ್ಯ ದೀಪಿಕಾಗೆ ಸಂಬಂಧಿಸಿದ ಜೆಎನ್‌ಯು ವಿವಾದ ಮತ್ತೆ ಸೌಂಡ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲೂ ಭಾರೀ ಟ್ರೆಂಡ್ ಸೃಷ್ಟಿಸಿದ್ದು, ನಟಿಯನ್ನು ಬಂಧಿಸುವಂತೆ ಕೂಗೆದ್ದಿದೆ. ದೀಪಿಕಾ ವಿರುದ್ಧ ಟ್ವೀಟ್ ಮಾಡಲಾಗುತ್ತಿದ್ದು, ಅನೇಕ ಮಂದಿ ದೀಪಿಕಾರನ್ನು 'ಭಯೋತ್ಪಾದಕಿ' ಎಂದು ಕರೆದಿದ್ದಾರೆ. ಅಷ್ಟಕ್ಕೂ ಈ ಹೊಸ ವಿವಾದವೇನು? ಟ್ವಿಟರ್‌ನಲ್ಲಿ #Deepika ಟ್ರೆಂಡ್ ಯಾಕಾಗಿದೆ? ಇಲ್ಲಿದೆ ವಿವರ.

ಗುಡ್‌ ನ್ಯೂಸ್: ಆಗಸ್ಟ್‌ನೊಳಗೆ ವಿಶ್ವದ ಮೊಟ್ಟ ಮೊದಲ ಕೊರೋನಾ ಲಸಿಕೆ ಬಿಡುಗಡೆ!

ಚೀನಾದಿಂದ ಹುಟ್ಟಿಕೊಂಡ ಕೊರೋನಾ ಸದ್ಯ ಇಡೀ ವಿಶ್ವದ ನೆಮ್ಮದಿ ಕದಡಿದೆ. ಹೀಗಿರುವಾಗ ಇದನ್ನು ಹೊಡೆದೋಡಿಸಬಲ್ಲ ಲಸಿಕೆ ಆವಿಷ್ಕರಿಸಲು ಎಲ್ಲಾ ರಾಷ್ಟ್ರಗಳು ಯತ್ನಿಸುತ್ತಿವೆ. ಈ ಪೈಪೋಟಿ ನಡುವೆ ಆಗಸ್ಟ್ ತಿಂಗಳ ಒಳಗೆ ಕೊರೋನಾ ವೈರಸ್ ಬಿಡುಗಡೆ ಮಾಡಲು ರಷ್ಯಾ ಮುಂದಾಗಿದೆ. ರಷ್ಯಾ ಕೊರೋನಾ ಲಸಿಕೆ ಬಿಡುಗಡೆ ಮಾಡಿದ ವಿಶ್ವದ ಮೊದಲ ರಾಷ್ಟ್ರವಾಗಲಿದೆ.

ರಾಮಮಂದಿರ ಭೂಮಿ ಪೂಜೆಗೆ ಮುಹೂರ್ತವಿಟ್ಟದ್ದು ನಮ್ಮ ಕನ್ನಡಿಗ..!

ಅಯೋಧ್ಯೆಯಲ್ಲಿ ಆ.5 ರಂದು ನಡೆಯಲಿರುವ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕರ್ನಾಟಕದ ಬೆಳಗಾವಿಯ ವಿದ್ವಾಂಸರೊಬ್ಬರು ರಾಮಜನ್ಮ ಭೂಮಿ ಟ್ರಸ್ಟ್‌ಗೆ ಮುಹೂರ್ತವನ್ನು ನೀಡಿರುವುದು ಹೆಮ್ಮೆಯ ವಿಚಾರ.

ಪವರ್ ಸ್ಟಾರ್ ವರ್ಕೌಟ್‌ ನೋಡಿ ಪರಭಾಷಾ ಸ್ಟಾರ್‌ಗಳು ಫುಲ್ ಥ್ರಿಲ್..!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿಕ್ಕಾಪಟ್ಟೆ ವರ್ಕೌಟ್ ಮಾಡೋದು ನೋಡಿ ಪರಭಾಷಾ ನಟ-ನಟಿಯರು ಶಾಕ್ ಆಗಿದ್ದಾರಂತೆ! ಏನಪ್ಪಾ ಇದು ಹೀಗೆಲ್ಲಾ ವರ್ಕೌಟ್ ಮಾಡ್ತಾರಲ್ಲ ಅಂತ ಮಾತಾಡಿಕೊಳ್ಳುತ್ತಿದ್ದಾರಂತೆ! ಲಾಕ್‌ಡೌನ್, ಕೊರೊನಾ ಅಂತೆಲ್ಲಾ ಮನೆಯಲ್ಲಿರದೇ ವರ್ಕೌಟ್ ಮಾಡೋದು ನೋಡಿ ಖುಷಿಯಾಗಿದ್ದಾರಂತೆ..! 

ಗೂಗಲ್ ಪೇ ಬಳಕೆದಾರರೆ ಎಚ್ಚರ,  ನಿಮಗೂ ಇಂಥ ಕರೆ ಬರಬಹುದು

ಗೂಗಲ್ ಪೇ ಆ್ಯಪ್ ಯೂಸ್ ಮಾಡೋ ಗ್ರಾಹಕರೇ ಹುಷಾರ್. ಈ ಸುದ್ದಿ ನಿಮ್ಮನ್ನು ಒಂದು ಕ್ಷಣ ಬೆಚ್ಚಿ ಬೀಳುಸುತ್ತದೆ. ಸಮಸ್ಯೆ ಆಯ್ತು ಅಂಥ ಕಸ್ಟಮರ್ ಕೇರ್ ಮೊರೆ ಹೋದವನಿಗೆ ಸರಿಯಾದ ಶಾಕ್ ಸಿಕ್ಕಿದೆ.

ಚಿನ್ನ-ಬೆಳ್ಳಿ ದರ ಸಾರ್ವಕಾಲಿಕ ದಾಖಲೆ: ದರ ಏರಿಕೆಗೆ ಕಾರಣವೂ ಬಹಿರಂಗ!

ಜಾಗತಿಕ ವಿದ್ಯಮಾನ, ಹಣದುಬ್ಬರ, ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತ, ಮಾರುಕಟ್ಟೆಯಲ್ಲಿನ ಏರಿಳಿತದ ಪರಿಣಾಮ ಬೇಡಿಕೆ ಹೆಚ್ಚಾಗಿ ಚಿನ್ನ ಸಾರ್ವಕಾಲಿಕ ಬೆಲೆ ದಾಖಲಿಸಿದೆ. ರಾಜ್ಯದಲ್ಲಿ 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 54 ಸಾವಿರಕ್ಕೂ ಹೆಚ್ಚು, ಹಾಗೂ 1 ಕೆ.ಜಿ. ಬೆಳ್ಳಿ ಬೆಲೆ 65000 ರು.ನಷ್ಟಾಗಿದೆ.

click me!