ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಾಕ್ ಹೈಕಮೀಷನ್ ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳನ್ನು ಗಡೀಪಾರಿಗೆ ಭಾರತ ಮುಂದಾಗಿದೆ. ಮತ್ತೊಂದೆಡೆ ಗಡಿಯಲ್ಲಿ ಉಗ್ರರ ಚಟುವಟಿಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಲಾಕ್‌ಡೌನ್ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಆದಾಯ ನಿರೀಕ್ಷಿಸಿದ್ದ ಅಧಿಕಾರಿಗಳ ಲೆಕ್ಕಾಚಾರಾ ಉಲ್ಟಾ ಆಗಿದೆ. ಇದೀಗ ಎಣ್ಣೆಗೆ ಬೇಡಿಕೆ ಕುಸಿತವಾಗಿದೆ. ನಟಿ ರಚಿತಾ ರಾಮ್ ಹೇಳಿದ್ದ ಸರ್ಪ್ರೈಸ್ ಬಯಲಾಗಿದೆ. ವ್ಯಾಟ್ಸಾಪ್ ಬಳಕೆದಾರರೇ ಎಚ್ಚರ, ಟಿಕ್‌ಟಾಕ್‌ನಿಂದ ಬಲೆಬಿದ್ದ ಕಳ್ಳಿ ಸೇರಿದಂತೆ ಜೂನ್ 01ರ ಟಾಪ್ 10 ಸುದ್ದಿ ಇಲ್ಲಿವೆ.
ಗಡಿಯಲ್ಲಿ ಉಗ್ರರ ಶಿಬಿರ ಪೂರ್ಣ ಭರ್ತಿ: ಕನ್ನಡಿಗ ಸೇನಾಧಿಕಾರಿ ರಾಜು!
ಪಾಕ್ ಆಕ್ರಮಿತ ಕಾಶ್ಮೀರದ ಎಲ್ಲ ಭಯೋತ್ಪಾದಕ ಶಿಬಿರಗಳು ಹಾಗೂ 15 ಉಗ್ರರ ಲಾಂಚ್ ಪ್ಯಾಡ್‌ಗಳು ಸಂಪೂರ್ಣ ಭರ್ತಿ| ಪಾಕಿಸ್ತಾನ ಸೇನೆಯ ಸಹಾಯದೊಂದಿಗೆ ಭಾರತಕ್ಕೆ ನುಸುಳಲು ಉಗ್ರರ ತಯಾರಿ| ಸೇನೆಯ ಉನ್ನತ ಕಮಾಂಡರ್ ಆಗಿರುವ ಕನ್ನಡಿಗ ಲೆಫ್ಟಿನಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು
ಇಂದಿನಿಂದ ಅನ್‌ಲಾಕಿಂಗ್ 1.0 ಶುರು; ರೈಲು, ಕೋರ್ಟ್, ಬಸ್ ಸಂಚಾರ ಆರಂಭ
ರಾಜ್ಯದಲ್ಲಿ ಇಂದಿನಿಂದ ಅನ್‌ಲಾಕಿಂಗ್ 1.0 ಶುರುವಾಗಿದೆ. ಇಂದಿನಿಂದ ರೈಲು, ಕೋರ್ಟ್, ಬಸ್ ಸಂಚಾರ ಆರಂಭವಾಗಿದೆ. ದೇಶದಾದ್ಯಂತ 200 ರೈಲುಗಳ ಓಡಾಟ ಶುರುವಾಗಿದೆ. ಕರ್ನಾಟಕದಿಂದಲೇ 16 ರೈಲುಗಳ ಸಂಚಾರ ಆರಂಭವಾಗಿದೆ. 90 ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಬೇಕು. ತಪಾಸಣೆ ನಡೆಸಬೇಕಾಗುತ್ತದೆ.
ಪಾಕ್ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಗಡೀಪಾರು!
ಭಾರತದ ವಿರುದ್ಧ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮೀಷನ್ ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳಿಗೆ 24 ತಾಸಿನೊಳಗೆ ದೇಶ ತೊರೆಯಲು ಕೇಂದ್ರ ಸರ್ಕಾರ ಭಾನುವಾರ ತಾಕೀತು ಮಾಡಿದೆ.
ಹಾರ್ದಿಕ್ ಪಾಂಡ್ಯ ಮದ್ವೆಗೂ ಮೊದಲೇ ಅಪ್ಪ; ಇದು 6G ಸ್ಪೀಡ್ ಎಂದ ಫ್ಯಾನ್ಸ್!
ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟಾಂಕೋವಿಚ್ ದಿಢೀರ್ ಆಗಿ ಪೋಷಕರಾಗುತ್ತಿರುವ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಪಾಂಡ್ಯ ದಂಪತಿಗೆ ಶುಭಹಾರೈಸಿದ್ದರು. ಆದರೆ ಅಭಿಮಾನಿಗಳು ಸೂಪರ್ ಫಾಸ್ಟ್ ಪಾಂಡ್ಯ 6G ಸ್ಪೀಡ್‌ನಲ್ಲಿದ್ದಾರೆ. ಮದ್ವೆಗೂ ಮೊದಲೇ ಅಪ್ಪನಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳ ಅದ್ಭುತ ಪ್ರತಿಕ್ರಿಯೆ ಇಲ್ಲಿದೆ.
ದರ್ಶನ್ ಸಿನಿಮಾಗೆ ರಚಿತಾ ಪ್ರೊಡ್ಯೂಸರ್; ಋಣ ತೀರಿಸಲು ಇದು ಸುಸಮಯವೇ?
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಲಾಕ್‌ಡೌನ್ ನಂತರ ಪ್ರೇಕ್ಷಕರಿಗೆ ಬಿಗ್ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದರು. ಆದರೀಗ ಆ ಸಖತ್ ಸುದ್ದಿ ಏನೆಂದು ಬಹಿರಂಗ ಮಾಡಿದ್ದಾರೆ.
ಕೊರೋನಾಕ್ಕೆ ಬಲಿಯಾದ ವಾಜಿದ್ ಜೀವನವೇ ಒಂದು ದೊಡ್ಡ ಸಾಧನೆ!
ಲಿವುಡ್ ನ ಹೆಸರಾಂತ ಸಂಗೀತ ನಿರ್ದೇಶಕ ಮತ್ತು ಗಾಯಕ ವಾಜಿದ್ ಖಾನ್(42) ಕೊರೋನಾಕ್ಕೆ ಬಲಿಯಾಗಿದ್ದಾರೆ. ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ವಾಜಿದ್ ಖಾನ್ ರನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಭಾನುವಾರ ರಾತ್ರಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಚಿಕಿತ್ಸೆ ಫಲಿಸದೆ ಖಾನ್ ನಿಧನರಾಗಿದ್ದಾರೆ.
ಹುಸಿಯಾದ ಸರ್ಕಾರದ ಲೆಕ್ಕಾಚಾರ: ಮದ್ಯದಂಗಡಿಯತ್ತ ಮುಖಮಾಡದ ಕುಡುಕರು..!
ಕೊರೋನಾ ನಿಯಂತ್ರಿಸಲು ಜಾರಿಗೊಳಿಸಿದ್ದ ಲಾಕ್‌ಡೌನ್ ವೇಳೆ ಬಂದ್ ಮಾಡಿದ್ದ ಮದ್ಯದ ಮಾರಾಟ ಅಂಗಡಿಗಳು ತೆರೆದರೇ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಆಗುತ್ತದೆ ಎಂಬ ಸರ್ಕಾರ ಹಾಗೂ ಅಧಿಕಾರಗಳ ಲೆಕ್ಕಾಚಾರ ಹುಸಿಯಾಗಿದೆ.
ವಾಟ್ಸ್ಆ್ಯಪ್ ಬಳಕೆದಾರರೇ ಹುಷಾರ್, ನಿಮಗಿದು 'ಹ್ಯಾಕ್’ಟಿಕ್!
ನಿಮ್ಮ ವಾಟ್ಸ್ಆ್ಯಪ್ ಖಾತೆಯಲ್ಲಿ ನೀವು ಅತ್ಯಂತ ಖಾಸಗಿ ವಿಚಾರಕ್ಕೋ ಇಲ್ಲವೇ ಕಚೇರಿಯ ಉದ್ದೇಶಕ್ಕೋ ಬಳಸುತ್ತಿರುತ್ತೀರಿ. ಅದನ್ನು ಯಾರೂ ನೋಡಬಾರದು (ಮನೆಯವರೂ ಸಹ) ಎಂಬ ನಿಟ್ಟಿನಲ್ಲಿ ಪಾಸ್ವರ್ಡ್ ಪ್ರೊಟೆಕ್ಷನ್ ಬೇರೆ ಹಾಕಿರುತ್ತೀರಿ. ಆದರೆ, ಒಂದೇ ಒಂದು ಮೆಸೇಜ್ ನಿಮ್ಮ ಇಡೀ ಖಾಸಗಿತನವನ್ನು ಹೊತ್ತೊಯ್ಯುತ್ತದೆ. ಜೊತೆಗೆ ನಿಮ್ಮ ವಾಟ್ಸ್ಆ್ಯಪ್ ಅಕೌಂಟ್ ನಿಮ್ಮ ಹಿಡಿತದಲ್ಲಿರದೆ ಬಳಸಲೂ ಬರದಂತೆ ಹ್ಯಾಕರ್ಸ್ ಮಾಡಿಬಿಟ್ಟಿರುತ್ತಾರೆ.
ಒಡವೆ ಕದ್ದು ಪರಾರಿಯಾಗಿದ್ದ ಮಹಿಳೆ ಟಿಕ್‌ಟಾಕ್‌ನಿಂದ ಬಲೆಗೆ!...
ಮೈತುಂಬಾ ಒಡವೆ, ದುಬಾರಿ ಉಡುಪುಗಳನ್ನು ಧರಿಸಿ ಟಿಕ್‌ಟಾಕ್ ವಿಡಿಯೋವನ್ನು ಅಪ್‌ಲೋಡ್ ಮಾಡುತ್ತಿದ್ದ ಮಹಿಳೆಯ ವಿಡಿಯೋವನ್ನು ನೋಡಿದ ಅಸ್ಸಾಂ ಪೊಲೀಸರು ಆಕೆಯ ಕೈಗೆ ಬೇಡಿ ತೊಡಿಸಿದ ವಿಚಿತ್ರ ಘಟನೆ ನಡೆದಿದೆ.
ತಾಳಿ ಅಡವಿಟ್ಟು ಅಂತ್ಯಸಂಸ್ಕಾರ: ನೆರವಿನ ಭರವಸೆ ನೀಡಿದ ಸಿಎಂ
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಣ್ಣೂರಿನಲ್ಲಿ ಫಕೀರಪ್ಪ 108 ಆಂಬ್ಯಲೆನ್ಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಫಕೀರಪ್ಪ ಕರ್ತವ್ಯಕ್ಕೆ ಹಾಜರಾಗಿ ಒಂದುಯಾಗುವಷ್ಟರಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಮಾಹಿತಿ ತಿಳಿದ ಪತ್ನಿ ಜ್ಯೋತಿ, ಫಕೀರಪ್ಪ ಅವರನ್ನು ರಾಮದುರ್ಗಕ್ಕೆ ಕೊಂಡ್ಯೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಫಕೀರಪ್ಪ ಕೊನೆಯುಸಿರೆಳೆದಿದ್ದರು.