ಡೆಲ್ಲಿಯಲ್ಲಿ ದಿಲ್ಲಿಯವರಿಗೆ ಮಾತ್ರ ಚಿಕಿತ್ಸೆ? ಅನ್ ಲಾಕ್ ಆದ ರಾಜಧಾನಿ ಹೇಗಿದೆ?

By Suvarna NewsFirst Published Jun 1, 2020, 4:24 PM IST
Highlights

ದೆಹಲಿಯ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜನರ ಮುಂದೆ ಬಂದಿದ್ದಾರೆ. ಹಾಗಾದರೆ ಇದಕ್ಕೆಲ್ಲ ಕಾರಣಗಳು ಏನು? ಸದ್ಯ ನವದೆಹಲಿಯ ಪರಿಸ್ಥಿತಿ  ಹೇಗಿದೆ? 

ಡೆಲ್ಲಿ ಮಂಜು

ನವದೆಹಲಿ(ಜೂ. 01)    ಡೆಲ್ಲಿಗೆ ಗಡಿಗಳೇ ಕಂಟಕವಾ.?  ಆಸ್ಪತ್ರೆಗಳಲ್ಲಿ ಡೆಲ್ಲಿ ಜನಕ್ಕೆ ಮೊದಲು ಆದ್ಯತೆ ಎಂದು ಕೇಜ್ರಿವಾಲ್ ಸಾಹೇಬ್ರು ಇವತ್ತು ಅಂದಿದ್ಯಾಕೆ? 

ಇವತ್ತು ಆನ್ ಲಾಕ್ -1 ಸುದ್ದಿಗೋಷ್ಠಿ ನಡೆಸಿದ ಸಿಎಂ ಕೇಜ್ರಿವಾಲ್, ಜನತೆಯ ಮುಖ್ಯಮಂತ್ರಿಯಾಗಿ ದೆಹಲಿಯ ಗಡಿಗಳು ತೆರೆಯುವ ಬಗ್ಗೆ ನನಗೆ ನಿಮ್ಮ ಸಲಹೆಗಳು ಬೇಕು ಅಂಥ ಮತ್ತೆ ಡೆಲ್ಲಿಯ ಜನತೆಯ ಮುಂದೆ ಬಂದಿದ್ದಾರೆ.

ಒಂದು ವಾರದ ಮಟ್ಟಿಗೆ ದೆಹಲಿ-ಉತ್ತರ ಪ್ರದೇಶದ ಗಡಿ ( ಗಾಜಿಯಾಬಾದ್, ನೋಯ್ಡಾ ಗಡಿಗಳು), ಹರಿಯಾಣದ ಗಡಿ( ಗುಡುಗಾಂವ್, ಫರಿದಾಬಾದ್, ಬಹದೂರ್ ಘಡ್) ವಾಹನ ಸಂಚಾರ ಬಂದ್ ಮಾಡಿದ್ದಾರೆ.

ಕೊರೋನಾ ಬಂದೇ ಇಲ್ಲ, ಆದರೆ ಡಬಲ್ ಕ್ವಾರಂಟೈನ್ , ಏನಿದು ಕತೆ?

 ಅಲ್ಲದೇ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಸಾವಿರ ಸಂಖ್ಯೆ ತಲುಪುತ್ತಿದೆ.  ಇದಕ್ಕೆ ತಕ್ಕಂತೆ ಈ ವಾರದಲ್ಲಿ ಹೆಚ್ಚುಕಡಿಮೆ 10 ಸಾವಿರ ಬೆಡ್ ಗಳು ಆಸ್ಪತ್ರೆ ಗಳಲ್ಲಿ ಲಭ್ಯವಾಗಲಿವೆ. ಆದ್ರೆ ಆಸ್ಪತ್ರೆಗಳಲ್ಲಿ ದೆಹಲಿಯ ಪ್ರಜೆಗಳಿಗೆ ಮೊದಲ ಆದ್ಯತೆ ಎಂದಿದ್ದಾರೆ.

ದೆಹಲಿ ರಾಜಧಾನಿ. ಇಲ್ಲಿಗೆ ಎಲ್ಲರೂ ಬರ್ತಾರೆ ಹಾಗಾಗಿ  ಚಿಕಿತ್ಸೆ ಬೇರೆಯವರಿಗೆ ಇಲ್ಲ ಅಂಥ ಹೇಳುವುದು ಹೇಗೆ? ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳು ಕೊಡಿ ಅಂಥ ದೆಹಲಿ ಜನತೆಯ ಮೊರೆ ಹೋಗಿದ್ದಾರೆ. 

ಆನ್ ಲಾಕ್-1 ಮುಖ್ಯಾಂಶಗಳು

* ಸಮಬೆಸ ಸಂಖ್ಯೆಯಲ್ಲಿ  ತೆರೆಯುತ್ತಿದ್ದ ಮಾರುಕಟ್ಟೆ ಗಳು ಈಗ ನಿತ್ಯ ತೆರೆಯಬಹುದು.
* ಬಾರ್ಬರ್ ಅಂಗಡಿಗೆ ತೆರೆಯಬಹುದು. ಆದ್ರೆ ಸ್ಪಾಗೆ ಅನುಮತಿ ಇಲ್ಲ.
* ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯ ತನಕ ಕರ್ಫ್ಯೂ ಮುಂದುವರಿಕೆ
* ದ್ವಿಚಕ್ರ ವಾಹನಗಳಲ್ಲಿ ಹಿಂಬದಿಯ ಸವಾರರಿಗೂ ಅವಕಾಶ
* ಕೈಗಾರಿಕಾಗಳು ತೆರೆಯಲು ಅನುಮತಿ
* ಸಿನಿಮಾ, ಶಾಲೆ-ಕಾಲೇಜು ತೆರೆಯಲು ಅನುಮತಿ ಇಲ್ಲ.


 

click me!