
ಕೊರೋನಾ ನಿರ್ವಹಣೆ: ಪಿಎಂ ಮೋದಿ ಕಾಳಜಿಗೆ ಬಿಲ್‌ಗೇಟ್ಸ್ ಮೆಚ್ಚುಗೆ!
ಕೊರೋನಾ ವೈರಸ್ ನಿರ್ವಹಣೆಯಲ್ಲಿ ಪಧಾನಿ ನರೇಂದ್ರ ಮೋದಿ ತೋರಿರುವ ಕಾಳಜಿಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕೊರೋನಾ ವೈರಸ್ ತಗುಲದಂತೆ ಲಸಿಕೆ, ಶುರುವಾಯ್ತು ಪ್ರಯೋಗ.
ಅಬ್ಬಾ, ಈ ಕೊರೋನಾ ಅಬ್ಬರಿಸುತ್ತಿರುವ ರೀತಿಗೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಎಲ್ಲೀವರೆಗೂ ಈ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದು ಸಾಧ್ಯವಿಲ್ಲವೋ, ಅಲ್ಲೀವರೆಗೂ ಮನುಷ್ಯ ಬಂಧಮುಕ್ತನಾಗುವುದು ಅಸಾಧ್ಯ. ಈ ಸಂಬಂಧ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿ ಲಸಿಕೆ ತಯಾರಿಸಿದ್ದು, ಯಶಸ್ಸು ಕಂಡರೆ ಮಾನವ ಸಂಕುಲಕ್ಕೆ ದೊಡ್ಡ ಉಡುಗರೆ ಸಿಗಲಿದೆ.
ಒಬ್ಬನಿಂದ 350 ಮಂದಿಗೆ ಕೊರೋನಾ ಭಯ: ಆತಂಕದಲ್ಲಿ ಬೆಂಗಳೂರು ಜನತೆ..!.
ಕೊರೋನಾ ಸೋಂಕಿನಿಂದ ಬೆಂಗಳೂರು ಅಕ್ಷರಶಃ ನಲುಗಿ ಹೋಗುತ್ತಿದೆ. ಹೌದು, ಕೇವಲ ಒಬ್ಬನೇ ರೋಗಿಯಿಂದ ಬರೋಬ್ಬರಿ 250 ಜನರಿಗೆ ಸಂಕಷ್ಟ ಎದುರಾಗಿದೆ. ನಗರದ ಬೊಮ್ಮನಹಳ್ಳಿಯ ಸ್ಲಂನಲ್ಲಿ ಬಿಹಾರ ಮೂಲದ 150 ಮಂದಿ ವಾಸಿಸುತ್ತಿದ್ದರು. ಇದರಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ಸೊಂಕು ತಗುಲಿದೆ. ಇದರಿಂದ ಇಲ್ಲಿ ವಾಸಿಸುತ್ತಿದ್ದ ಎಲ್ಲರಿಗೂ ಭಯ ಆರಂಭವಾಗಿದೆ.
ಕೊರೋನಾದ ನಿರ್ವಹಣೆ: ಮೋದಿ ವಿಶ್ವ ನಂ.1!
ಕೊರೋನಾ ಸೋಂಕು ಹಬ್ಬುವ ಅಪಾಯ ಅರಿಯುತ್ತಲೇ 130 ಕೋಟಿಗೂ ಹೆಚ್ಚು ಜನರನ್ನು ಲಾಕ್‌ಡೌನ್‌ಗೆ ಒಳಪಡಿಸುವ ಮೂಲಕ, ಸೋಂಕು ವ್ಯಾಪಕವಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೀಗ ಮತ್ತೊಂದು ಹೆಗ್ಗಳಿಕೆ. ಇಡೀ ವಿಶ್ವದಲ್ಲೇ ಕೊರೋನಾ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ನಾಯಕ ಮೋದಿ ಎಂದು ಸಮೀಕ್ಷೆಯೊಂದು ಹೇಳಿದೆ.
ಗೇಲ್ ಸಿಡಿಲಬ್ಬರದ ಶತಕಕ್ಕೆ 7 ವರ್ಷ ಭರ್ತಿ; ಮರೆಯಲು ಸಾಧ್ಯವೇ RCB ಮಾಜಿ ಕ್ರಿಕೆಟಿಗನ ಆರ್ಭಟ..!
ಬೆಂಗಳೂರು: 2013ರ ಏಪ್ರಿಲ್ 23 ಚುಟುಕು ಕ್ರಿಕೆಟ್‌ನಲ್ಲಿ ಕ್ರಿಸ್ಟೋಪರ್ ಹೆನ್ರಿ ಗೇಲ್ ಅಕ್ಷರಶಃ ಅಬ್ಬರಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ ಅಜೇಯ 175 ರನ್ ಬಾರಿಸಿದ್ದು ಇದುವರೆಗೂ ಮುರಿಯಲಾಗದ ದಾಖಲೆಯಾಗಿಯೇ ಉಳಿದಿದೆ.
ಕೊರೋನಾ ಕಾಲದಲ್ಲಿ ಶಿಲ್ಪಾ ಶೆಟ್ಟಿಯ ಸ್ಟೇರ್‌ಕೇಸ್ ಎಕ್ಸರ್‌ಸೈಸ್ ಹೇಗಿದೆ ನೋಡಿ!
ಸದಾ ಯೋಗಾಸನದ ಭಂಗಿಯಲ್ಲೇ ಕ್ಯಾಮರಾದೆದುರು ಬರೋ ಶಿಲ್ಪಾ ಶೆಟ್ಟಿಈಗ ಮೆಟ್ಟಿಲೇರಿ ಇಳಿಯುತ್ತಿದ್ದಾರೆ. ಕಾರಣ ಇಮ್ಯುನಿಟಿ ಹೆಚ್ಚಿಸಿಕೊಳ್ಳೋ ಎಕ್ಸರ್ ಸೈಸ್. ಮೆಟ್ಟಿಲಲ್ಲಿ ಎಕ್ಸರ್ ಸೈಸ್ ಮಾಡೋದನ್ನು ಶಿಲ್ಪಾ ಹೇಳ್ಕೊಡ್ತಾರೆ.
ಲಾಕ್‌ಡೌನ್ ಎಫೆಕ್ಟ್: 'ಉದ್ಯೋಗವಿಲ್ಲದವರ ಬ್ಯಾಂಕ್ ಖಾತೆಗೆ ದುಡ್ಡು ಹಾಕುತ್ತೇನೆ'
ಇಸ್ತ್ರಿ ಮಾಡುವವರಿಗೆ ಹಾಗೂ ಶೇವಿಂಗ್ ಶಾಪ್‌ಗಳಲ್ಲಿ ಉದ್ಯೋಗ ನಿರ್ವಹಿಸುವ ಕಾರ್ಮಿಕರಿಗೆ ಲಾಕ್‌ಡೌನ್ ಮುಗಿಯುವವರೆಗೂ ಅವರ ಖಾತೆಗಳಿಗೆ 500 ರು. ಜಮೆ ಮಾಡುವುದಾಗಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.
ಜಿಯೋದಲ್ಲಿ ಫೇಸ್‌ಬುಕ್ 43000 ಕೋಟಿ ರು. ಹೂಡಿಕೆ: ಏನಿದರ ಒಳಮರ್ಮ?
ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ನಂ.1 ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿರುವ ರಿಲಯನ್ಸ್ ಜಿಯೋ ಮಾತೃಸಂಸ್ಥೆಯಾದ ಜಿಯೋ ಪ್ಲಾಟ್‌ಫಾಮ್ಸ್‌ರ್‍ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹೆಸರುವಾಸಿಯಾಗಿರುವ ಫೇಸ್‌ಬುಕ್ 43,574 ಕೋಟಿ ರು. (5.7 ಬಿಲಿಯನ್ ಡಾಲರ್) ಹೂಡುವುದಾಗಿ ಗುರುವಾರ ಪ್ರಕಟಿಸಿದೆ. ಇದಕ್ಕೆ ಪ್ರತಿಯಾಗಿ ಫೇಸ್‌ಬುಕ್ ಕಂಪನಿಗೆ ಜಿಯೋ ಪ್ಲಾಟ್‌ಫಾಮ್ಸ್‌ರ್‍ನ ಶೇ.9.9ರಷ್ಟುಷೇರುಗಳು ದೊರೆಯಲಿವೆ.
ಅಕ್ಷಯ ತೃತೀಯ: ಚಿನ್ನ ಆನ್‌ಲೈನಲ್ಲೇ ಮಾರಾಟ!...
ಲಾಕ್‌ಡೌನ್ ನಡುವೆಯೂ ಈ ಬಾರಿಯ ಅಕ್ಷಯ ತೃತೀಯ ಆಚರಣೆಗೆ ಅಡಚಣೆಯಾಗದಂತೆ ಚಿನ್ನದ ಮಾರಾಟಗಾರರು ಮನೆ ಬಾಗಿಲಿಗೇ ಚಿನ್ನ ಮಾರಾಟ ಮಾಡಲು ಯೋಜನೆ ರೂಪಿಸಿದ್ದಾರೆ.
ಶಂಕರಮೂರ್ತಿಗೆ ಮೋದಿ ದೂರವಾಣಿ ಕರೆ, ಸಹಪಾಠಿ ಆರೋಗ್ಯ ವಿಚಾರಿಸಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಹಿರಿಯ ರಾಜಕಾರಣಿ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಹೇಗೆ ಸಮಯ ಕಳೆಯುತ್ತಿದ್ದೀರಿ ಎಂದು ಮೋದಿ ಕೇಳಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದು, ಫೋನ್ ಮೂಲಕವೇ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿಗೆ ಶಂಕರಮೂರ್ತಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.