ಲಾಕ್‌ಡೌನ್ ಹೊಡೆತ ತಪ್ಪಿಸಿಕೊಳ್ಳಲು ಹೊಸ ಹೆಜ್ಜೆ ಇಟ್ಟ ಸ್ಟಾರ್ಟ್ ಅಪ್ ಕಂಪನಿ!

By Suvarna NewsFirst Published Apr 23, 2020, 3:44 PM IST
Highlights

ಕೊರೋನಾ ವೈರಸ್ ದೇಶದೊಳಕ್ಕೆ ಕಾಲಿಟ್ಟು ಆರ್ಭಟ ಶುರು ಮಾಡುತ್ತಿದ್ದಂತೆ ಲಾಕ್‌ಡೌನ್ ಹೇರಲಾಯಿತು. ಇದು ಅನಿವಾರ್ಯವಾಗಿತ್ತು. ಇತ್ತಾ ಬಹುತೇಕ ಕಂಪನಿಗಳು ತಾತ್ಕಾಲಿಕ ಸ್ಥಗಿತಗೊಂಡಿತು. ಲಾಕ್‌ಡೌನ್ ವಿಸ್ತರಣೆಯಾಗಿದೆ. ಇದೀಗ ತೆರವಾದ ಮೇಲೆ ಕೆಲ ಕಂಪನಿಗಳು ಬಾಗಿಲು ತೆರೆಯುವುದೇ ಅನುಮಾನವಾಗಿದೆ. ಅಷ್ಟರ ಮಟ್ಟಿಗೆ ನಷ್ಟ ಅನುಭವಿಸಿದೆ. ಆದರೆ ಲಾಕ್‌ಡೌನ್‌ಗಿಂತ 7 ತಿಂಗಳ ಮೊದಲು ಹುಟ್ಟಿಕೊಂಡ ಸ್ಟಾರ್ಟ್ ಅಪ್ ಕಂಪನಿ ಇದೀಗ ಹೊಸ ಹೆಜ್ಜೆ ಇಟ್ಟಿದೆ.
 

ಬೆಂಗಳೂರು(ಏ.23): ಕೊರೋನಾ  ವೈರಸ್ ಹಾಗೂ ಲಾಕ್‌ಡೌನ್‌ನಿಂದ ಜನರ ಬದುಕು ದುಸ್ತರವಾಗಿದೆ. ಇತ್ತ ಕಂಪನಿಗಳು, ವ್ಯಾಪರ-ವಹಿವಾಟು ಸ್ಥಗಿತಗೊಂಡಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 20,000 ದಾಟಿದೆ. ಇತ್ತ 500 ಮಂದಿಯನ್ನೂ ಬಲಿ ಪಡೆದಿದೆ. ಹೀಗಾಗಿಯೇ ಲಾಕ್‌ಡೌನ್ ವಿಸ್ತರಣೆಯಾಗುತ್ತಲೇ ಇದೆ. ಇದು ಹಲವು ಕಂಪನಿಗಳ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಫಿಟ್ನೆಸ್ ಕುರಿತು 7 ತಿಂಗಳ ಹಿಂದೆ ಆರಂಭವಾದ ಅಪ್ ಯು ಗೋ ಸ್ಟಾರ್ಟ್ ಅಪ್ ಕಂಪನಿ ಇದೀಗ ಹೊಸ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ.

ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಹಿಡಿತಕ್ಕೆ ಸಿಗದ ಕೊರೋನಾ, 2ನೇ ಸ್ಥಾನದಲ್ಲಿ ಗುಜರಾತ್

ಅಪ್ ಯ ಗೋ ಸ್ಟಾರ್ಟ್ ಅಪ್ ಕಂಪನಿ ಮಕ್ಕಳ ಹಾಗೂ ಯುವಕರ ಫಿಟ್ನೆಸ್‌ಗಾಗಿ ಆರಂಭವಾದ ಕಂಪನಿ. ದೈಹಿಕ ಚಟುವಟಿಕೆ, ಆಟೋಟ, ವ್ಯಾಯಾಮ ಸೇರಿದಂತೆ ಹಲವು ಚಟುವಟಿಕೆಗಳಿಂದ ದೂರವಿರುವ ಅಥವಾ ಅಗತ್ಯತೆ ಅರಿವಿಲ್ಲದಿರುವ ಮಕ್ಕಳು ಹಾಗೂ ಯುವಕರಿಗಾಗಿ ಅಪ್ ಯು ಗೋ ಕಂಪನಿ ಆರಂಭಗೊಂಡಿತು. ಸ್ಟಾರ್ಟ್ ಅಪ್ ಕಂಪನಿ ಜೊತೆ ಹೊಸರು ನೋಂದಾಯಿಸಿದವರಿಗೆ ಅವರ ಮನೆಗೆ ತರಬೇತಿ ದಾರರನ್ನು ಕಳುಹಿಸಿ ಮಕ್ಕಳಿಗೆ ಫಿಟ್ನೆಸ್ ಟ್ರೈನಿಂಗ್ ನೀಡಲಾಗುತ್ತಿತ್ತು.

ಕೊರೋನಾದ ನಿರ್ವಹಣೆ: ಮೋದಿ ವಿಶ್ವ ನಂ.1!

ಕೊರೋನಾ ವೈರಸ್  ಹಾೂ ಲಾಕ್‌ಡೌನ್‌ನಿಂದ ಹೊರಗಿನ ವ್ಯಕ್ತಿಗಳು ಇತರ ಮನೆಗೆ ಹೋಗುವಂತಿಲ್ಲ. ಅಗತ್ಯ ಹಾಗೂ ತುರ್ತು ಸೇವೆ ಹೊರತು ಪಡಿಸಿ ಇತರ ಕಾರಣಗಳಿಂದ ಸಂಚರಿಸುವಂತಿಲ್ಲ. ಹೀಗಾಗಿ ಅಪ್ ಯು ಗೋ ಫಿಟ್ನೆಸ್ ಸ್ಟಾರ್ಟ್ ಅಪ್ ಕಂಪನಿಗೆ ಹೊಡೆತ ಬಿದ್ದಿತು. ಆರಂಭವಾದ 7 ತಿಂಗಳಿಗೆ ಕಂಪನಿ ತೀವ್ರ ಅಡೆ ತಡೆ ಎದುರಿಸಿತು. ಆದರೆ ಅಪ್ ಯು ಗೋ ಕಂಪನಿ ಸುಮ್ಮನೆ ಇರಲಿಲ್ಲ. ತಕ್ಷಣವೇ ಡಿಜಿಟಲ್ ಯುಗಕ್ಕೆ ಕಾಲಿಟ್ಟಿತು.

ಲಾಕ್‌ಡೌನ್ ಯಾರೂ ಊಹಿಸಿರಲಿಲ್ಲ. ಕೊರೋನಾ ವಕ್ಕರಿಸುತ್ತೆ ಅನ್ನೋ ಕಲ್ಪೆನೆ ಯಾರಿಗೂ ಇರಲಿಲ್ಲ. ಸದ್ಯ ಕೊರೋನಾ ಶಪಿಸಿ ಸಮಯ ವ್ಯರ್ಥಮಾಡುವುದು ಉಚಿತವಲ್ಲ. ಹೊಸ ದಾರಿ ಹುಡುಕಬೇಕಿದೆ. ಹೀಗಾಗಿ ಅಪ್ ಯು ಗೋ ಡಿಜಿಟಲ್ ಮೂಲಕ ಟ್ರೈನಿಂಗ್ ನಡೆಸುತ್ತಿದೆ. ಈ ಮೂಲಕ ಗ್ರಾಹಕರ ಜೊತೆ ನಿರಂತರ ಸಂಪರ್ಕವಿಡಲು ಸಾಧ್ಯ. ಇಷ್ಟೇ ಅಲ್ಲ ಲಾಕ್‌ಡೌನ್ ವೇಳೆ ದೈಹಿಕ ಜೊತೆಗೆ ಮಾನಸಿಕವಾಗಿ ಸದೃಢವಾಗಿರಲೇಬೇಕು. ಇದಕ್ಕಾಗಿ ಕಂಪನಿ ಇ-ಕ್ಲಾಸ್ ಆರಂಭಿಸಿದೆ ಎಂದು ಕಂಪನಿ ಸಂಸ್ಥಾಪಕ ಅಮಿತ್ ಗುಪ್ತಾ ಹೇಳಿದ್ದಾರೆ.

click me!