DCಗೆ ಲಾಕ್‌ಡೌನ್ ಅಧಿಕಾರ, ಇಸ್ರೇಲ್ ದಾಳಿಗೆ ಉಗ್ರರ ಸಂಹಾರ; ಮೇ.18ರ ಟಾಪ್ 10 ಸುದ್ದಿ!

By Suvarna News  |  First Published May 18, 2021, 5:19 PM IST

ಕೊರೋನಾ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ, ಅಗತ್ಯಬಿದ್ದರೆ ಲಾಕ್‌ಡೌನ್ ಹೇರುವು ಅಧಿಕಾರನ್ನು ನೀಡಿದಿದ್ದಾರೆ. ಇಸ್ರೇಲ್‌ ವಾಯುದಾಳಿಗೆ ಗಾಜಾದಲ್ಲಿನ ಹಮಾಸ್‌ ಉಗ್ರರ ಸುರಂಗ ಧ್ವಂಸಗೊಂಡಿದೆ. ಕುಸ್ತಿಪಟು ಸುಶೀಲ್ ಕುಮಾರ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ ಘೋಷಿಸಲಾಗಿದೆ. ನಿತ್ಯ 500 ಮಂದಿಗೆ ಶಿವಣ್ಣ ನೆರವು, ಊರಿಗೆ ಮರಳಿದವರಿಗೆ ಪರೀಕ್ಷೆ ಕಡ್ಡಾಯ ಸೇರಿದಂತೆ ಮೇ.18ರ ಟಾಪ್ 10 ಸುದ್ದಿ


ಡಿಸಿಗಳಿಗೆ ಶಹಬ್ಬಾಸ್ ಎಂದ ಮೋದಿ : ಜಿಲ್ಲಾಧಿಕಾರಿಗಳಿಗೇ ಲಾಕ್‌ಡೌನ್ ನಿರ್ಧಾರ!...

Latest Videos

undefined

ದೇಶ, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದೆ. ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿವೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ, 10 ರಾಜ್ಯಗಳ 54 ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಹೀಗಿರುವಾಗ ಜಿಲ್ಲೆಯಲ್ಲಿರುವ ಪರಿಸ್ಥಿತಿ, ಅದರ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳ ಕಾರ್ಯವೈಖರಿಗೆ ಶಹಬ್ಬಾಸ್ ಎಂದಿದ್ದಾರೆ.

ಇಸ್ರೇಲ್‌ ವಾಯುದಾಳಿಗೆ ಗಾಜಾದಲ್ಲಿನ ಹಮಾಸ್‌ ಉಗ್ರರ ಸುರಂಗ ಧ್ವಂಸ!...

ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಸಂಘರ್ಷ ಮತ್ತಷ್ಟುತೀವ್ರಗೊಂಡಿದ್ದು, ಇಸ್ರೇಲ್‌ ಸೋಮವಾರ ಮುಂಜಾನೆ ಗಾಜಾಪಟ್ಟಿಪ್ರದೇಶದಲ್ಲಿ ನಡೆಸಿದ ವಾಯುದಾಳಿಯಲ್ಲಿ 15 ಕಿ.ಮೀ ಉಗ್ರ ಸುರಂಗಗಳು ಮತ್ತು 9 ಹಮಾಸ್‌ ಕಮಾಂಡರ್‌ಗಳ ಮನೆ ನಾಶವಾಗಿದೆ.

ಕುಸ್ತಿಪಟು ಸುಶೀಲ್ ಕುಮಾರ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ..!...

ರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು ಒಂದು ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿ ಅಲ್ಲಗಳೆದ ಬೆನ್ನಲ್ಲೇ ಬೆಡ್ ಒದಗಿಸಿದ ಸ್ಕ್ರೀನ್‌ಶಾಟ್ ಹಂಚಿಕೊಂಡ ಸೋನು ಸೂದ್!...

ಸಂಕಷ್ಟದಲ್ಲಿದ್ದ ಸೋಂಕಿತನಿಗೆ ಬೆಡ್ ಒದಗಿಸಿದ ಸೂದ್ ಕಾರ್ಯಯವನ್ನು ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಅಲ್ಲಗೆಳೆಯುವ ಪ್ರಯತ್ನ ಮಾಡಿತ್ತು. ಈ ವೇಳೆ ಸೋನು ಸೂದ್ ಬೆಡ್ ಒದಗಿಸಿದ ಅಂಕಿ ಅಂಶ ಬಿಡುಗಡೆ ಮಾಡಿ ಗೊಂದಲಕ್ಕೆ ತೆರೆಎಳೆದಿದ್ದಾರೆ.

ನಿತ್ಯ 500 ಮಂದಿಗೆ ನಟ ಶಿವಣ್ಣ ಊಟ, ತಿಂಡಿ, ಚಹಾ ‘ಆಸರೆ’!...

ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್, ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಹಸಿದ ಹೊಟ್ಟೆಗೆ ಕೈ ತುತ್ತು ನೀಡಿದ್ದಾರೆ.

ಟ್ವಿಟರ್‌ನಿಂದ ಶೀಘ್ರವೇ ಪಾವತಿ ಸೇವೆ ‘ಟ್ವಿಟರ್ ಬ್ಲೂ’ ಆರಂಭ: ಚಂದಾದಾರಿಗೆ ವಿಶೇಷ ಫೀಚರ್ಸ್!...

ನಮಗೆಲ್ಲ ಗೊತ್ತಿರುವ ಹಾಗೆ ಮೈಕ್ರೊಬ್ಲಾಗಿಂಗ್ ಜಾಲತಾಣ ಟ್ವಿಟರ್ ಸೇವೆ ಉಚಿತವಾಗಿದೆ. ಟ್ವೀಟ್ ಮಾಡಲು ಅಥವಾ ಮಾಹಿತಿ ಹಂಚಿಕೊಳ್ಳಲು ನಾವೇನೂ ಪಾವತಿಸಬೇಕಿಲ್ಲ. ಆದರೆ, ಶೀಘ್ರವೇ ಟ್ವಿಟರ್, ‘ಟ್ವಿಟರ್ ಬ್ಲೂ’ ಎಂಬ ಪಾವತಿಸಿ ಸೇವೆ ಪಡೆಯುವ ಆಯ್ಕೆಯನ್ನು ಒದಗಿಸಲಿದೆ. ಈ ಆಯ್ಕೆಯಡಿ ಚಂದಾದಾರರಾದ ಬಳಕೆದಾರರಿಗೆ ವಿಶಿಷ್ಟವಾದ ಫೀಚರ್‌ಗಳನ್ನು ಟ್ವಿಟರ್ ಒದಗಿಸಲಿದೆ ಎನ್ನಲಾಗುತ್ತಿದೆ.

ಮೈಕ್ರೋಸಾಫ್ಟಿಂದ ‘ಗೇಟ್‌’ಪಾಸ್‌ಗೆ ಬಿಲ್‌ ಅಕ್ರಮ ಸಂಬಂಧ ಕಾರಣ!...

ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು 20 ವರ್ಷದ ಹಿಂದೆ ಅವರ ಸಹೋದ್ಯೋಗಿಯ ಜತೆ ಹೊಂದಿದ್ದರು ಎನ್ನಲಾದ ಅಕ್ರಮ ಸಂಬಂಧದ ಬಗ್ಗೆ 2019ರಲ್ಲಿ ಮೈಕ್ರೋಸಾಫ್ಟ್‌ ಆಡಳಿತ ಮಂಡಳಿಗೆ ದೂರು ಬಂದಿತ್ತು. ಈ ವೇಳೆ ಮಂಡಳಿ ತನಿಖೆ ಆರಂಭಿಸಿದಾಗ, ಆಡಳಿತ ಮಂಡಳಿಗೆ ಗೇಟ್ಸ್‌ ಅವರು ರಾಜೀನಾಮೆ ನೀಡಿದರು ಎಂದು ತಿಳಿದುಬಂದಿದೆ.

ಲೇಟ್ ನೈಟ್..ಎಣ್ಣೆ ಏಟು...ಸಂಜನಾ ಗಲ್ರಾನಿಗೆ ಮತ್ತೊಂದು ಕಂಟಕ...

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಇದೀಗ ಆಚೆ ಬಂದಿದ್ದಾರೆ. ಆದ್ರೆ, ಈಗ ಸಂಜನಾ ಎಲ್ಲಿದ್ದಾರೆ? ಹೇಗಿದ್ದಾರೆ ಎನ್ನುವುದು ನಿಗೂಢವಾಗಿದೆ. ಇದರ ಮಧ್ಯೆ ಸಂಜನಾ ಗಲ್ರಾನಿಗೆ ಹಳೇ ಕೇಸ್ ಸುತ್ತಿಕೊಂಡಿದ್ದು, ಮತ್ತೆ ಅರೆಸ್ಟ್ ಆಗ್ತಾರಾ ಗಂಡ-ಹೆಂಡತಿ ನಟಿ? 

'ತಮ್ಮೂ​ರಿಗೆ ಮರ​ಳಿ​ದ​ವರು ಕಡ್ಡಾಯ​ವಾಗಿ ಪರೀಕ್ಷೆ ಮಾಡಿ​ಸಿ​ಕೊಳ್ಳಿ'...

ಕೋವಿಡ್‌ 2ನೇ ಅಲೆ ಮಾರಕವಾಗಿದೆ. ಕೊರೋನಾ ಸೋಂಕು ಹೇಳಿ-ಕೇಳಿ ತಗುಲುವುದಿಲ್ಲ. ಅದು ಎಲ್ಲ ವಯೋಮಾನದವರನ್ನೂ ಬಾಧಿಸುತ್ತದೆ. ಎಚ್ಚರಿಕೆ ವಹಿಸದೇ ನಿರ್ಲಕ್ಷ್ಯ ತೋರಿದರೆ ತೊಂದರೆ ಅನುಭವಿಸುವುದು ನಿಶ್ಚಿತ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವೈದ್ಯ ಡಾ. ಪ್ರವೀಣ್‌ ಗೌರಿ ಸೂಚಿಸಿದ್ದಾರೆ.

ಮರಣ ಹೊಂದಿದ ಭಿಕ್ಷುಕನ ಮನೆಯಲ್ಲಿತ್ತು 10 ಲಕ್ಷ ರೂ ನಗದು, ಅಧಿಕಾರಿಗಳಿಗೆ ತಲೆನೋವು!...

ಅನಾರೋಗ್ಯ ಕಾರಣದಿಂದ ದೇವಾಲಯ ಪಟ್ಟಣವಾದ ತಿರುಮಲ ಸಮೀಪದಲ್ಲಿ ವಾಸವಿದ್ದ ಭಿಕ್ಷುಕನೋರ್ವ ಮೃತಪಟ್ಟಿದ್ದಾನೆ. ಬಳಿಕ ಭಿಕ್ಷುಕ ವಾಸವಿದ್ದ ಮನೆ ಶೋಧಿಸಿದಾಗ 10 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ. ಕಂತೆ ಕಂತೆ ಹಣ ಶೋಧಿಸಿ ಹೊರತೆಗೆದ ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ.

click me!