ಮೋದಿ ಹುಟ್ಟು ಸಂಭ್ರಮ; DKS ಪತ್ನಿ ಬಳಿ 13 ಕೋಟಿ ರೂ ಚಿನ್ನ; ಇಲ್ಲಿವೆ ಸೆ.17ರ ಟಾಪ್ 10 ಸುದ್ದಿ!

By Web DeskFirst Published Sep 17, 2019, 5:32 PM IST
Highlights

ದೇಶದೆಲ್ಲಡೆ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಸಂಭ್ರಮ ಕಾಣುತ್ತಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿಚಾರಣೆ, ಡಿಕೆಶಿ ಪತ್ನಿ ಖರೀದಿಸಿದ 13 ಕೋಟಿ ರೂಪಾಯಿ ಚಿನ್ನ ಸದ್ದು ಮಾಡಿತು. ಮೊಹಾಲಿಗೆ ಬಂದಿಳಿದ ವಿರಾಟ್ ಸೈನ್ಯಕ್ಕೆ ಭದ್ರತೆ ನಿರಾಕರಿಸಿದ ಪೊಲೀಸ್, ಖ್ಯಾತ ನಟಿಯ ಕಣ್ಣೀರ ಕತೆ  ಸೇರಿದಂತೆ  ಹಲವು ಸುದ್ದಿಗಳು ಸದ್ದು ಮಾಡಿತು. ಹೀಗೆ ಸೆ.17ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

1) ಪ್ರಧಾನಿಗೆ 69ನೇ ಹುಟ್ಟುಹಬ್ಬದ ಸಂಭ್ರಮ: ಟ್ವಿಟರ್‌ನಲ್ಲಿ ಮೋದಿ ಟ್ರೆಂಡ್!

ಪ್ರಧಾನಿ ನರೇಂದ್ರ ಮೋದಿಗಿಂದು 69ನೇ ಹುಟ್ಟುಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಗುಜರಾತ್‌ಗೆ ತೆರಳಿರುವ ಮೋದಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ನರ್ಮದಾ ಜಿಲ್ಲೆಯಲ್ಲಿರುವ ಕೆವಡಿಯಾ ಪ್ರದೇಶಕ್ಕೆ ಭೇಟಿ ನೀಡಿ ಏಕತಾ ಪ್ರತಿಮೆ ಹಾಗೂ ಸರ್ದಾರ ಸರೋವರ್ ಡ್ಯಾಂ ಯೋಜನೆಯನ್ನು ಪರಿಶೀಲಿಸಲಿದ್ದಾರೆ. ಇನ್ನು ಮೋದಿ ಹುಟ್ಟುಹಬ್ಬ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು, ಗಣ್ಯರು ಶುಭ ಕೋರಿದ್ದಾರೆ.

2) 13 ಕೋಟಿ ರು. ಚಿನ್ನ ಖರೀದಿಸಿದ ಡಿ.ಕೆ.ಶಿವಕುಮಾರ್ ಪತ್ನಿ

ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಅವರು 13 ಕೋಟಿ ರು. ಮೌಲ್ಯದ ಚಿನ್ನಾಭರಣ ಖರೀದಿಸಿದ್ದಾರೆ. ಆದರೆ ಈ ಚಿನ್ನಾಭರಣ ಖರೀದಿಗೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ. ಶಿವಕುಮಾರ್‌ ಅವರ ಮನೆ ಮೇಲೆ ದಾಳಿ ನಡೆಸಿದಾಗ ಆಭರಣ ಖರೀದಿ ಗೊತ್ತಾಯಿತು. ಅಲ್ಲದೆ ಮನೆ ನಿರ್ವಹಣೆಗೆ 4.84 ಕೋಟಿ ರು. ವೆಚ್ಚ ಮಾಡಿದ್ದಾಗಿ ಹೇಳಿದ್ದಾರೆ. 


3) 22 ವಯಸ್ಸಲ್ಲೇ ಹವಾಲಾ ದಂಧೆಯಲ್ಲಿ ಡಿಕೆಶಿ ಪುತ್ರಿ: ಸಿಂಗಾಪುರ್ ಪ್ರಜೆಯಿಂದ ಬಹಿರಂಗ

ಡಿಕೆಶಿ ಪುತ್ರಿ ಐಶ್ವರ್ಯಾಗೂ ಹವಾಲಾ ಹಣ ಕಂಟಕ ಎದುರಾಗಿದೆ. 2017ರಲ್ಲಿ ಬ್ಯುಸಿನೆಸ್ ಡೀಲ್ ಹೆಸರಿನಲ್ಲಿ ಐಶ್ವರ್ಯಾ ಸಿಂಗಾಪುರ್ ಟ್ರಿಪ್ ಹೋಗಿರುವುದು ಬೆಳಕಿಗೆ ಬಂದಿದೆ.  ಡಿಕೆ ಶಿವಕುಮಾರ್ ಅವರು ಕೋಟಿ-ಕೋಟಿ ರೂ. ಅಕ್ರಮ ಹಣ ವಹಿವಾಟಿಗೆಯೇ ಮಗಳನ್ನು ಸಿಂಗಾಪುರಕ್ಕೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ. 


4) ಟೀಂ ಇಂಡಿಯಾಗೆ ಭದ್ರತೆ ನೀಡಲು ಚಂಡೀಗಢ ಪೊಲೀಸ್ ನಿರಾಕರಣೆ!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಆಯೋಜನೆ ಬಿಸಿಸಿಐಗೆ ಸವಾಲಾಗಿದೆ. ಧರ್ಮಶಾಲಾದಲ್ಲಿ ಆಯೋಜಿಸಲಾಗಿದ್ದ ಮೊದಲ ಚುಟುಕು ಪಂದ್ಯ ಮಳೆಗೆ ಆಹುತಿಯಾಗಿತ್ತು. ಇದು ಬಿಸಿಸಿಐ ಗೆ ಅಪಾರ ನಷ್ಟ ತಂದೊಡ್ಡಿದೆ. ಇದೀಗ 2ನೇ ಪಂದ್ಯಕ್ಕಾಗಿ ಪಂಜಾಬ್‌ನ ಮೊಹಾಲಿಗೆ ಆಗಮಿಸಿದ ವಿರಾಟ್ ಕೊಹ್ಲಿ ಸೈನ್ಯಕ್ಕೆ ಭದ್ರತೆ ನೀಡಲು ಚಂಡೀಗಢ ಪೊಲೀಸರು ನಿರಾಕರಿಸಿದ್ದಾರೆ.

5) 10 ನೇ ಕ್ಲಾಸ್‌ನಲ್ಲಿ ನಟಿ ಮೇಲೆ ಅತ್ಯಾಚಾರ; ಇದೀಗ ಭವಿಷ್ಯವೂ ಇಲ್ಲ ಸಂಬಂಧವೂ ಇಲ್ಲ!

ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಆಗುವುದನ್ನೆಲ್ಲಾ ಅನುಭವಿಸಲೇಬೇಕು. ಇಲ್ಲಾ ಎದುರಿಸಲು ಸಿದ್ಧರಾಗಬೇಕು. ಹೇಳಿಕೊಳ್ಳಲು ಧೈರ್ಯವಿಲ್ಲ. ಹೇಳಿಕೊಂಡರೆ ಭವಿಷ್ಯವಿಲ್ಲ ಇಂತಹ ಪರಿಸ್ಥಿತಿಯಲ್ಲಿದ್ದ ಓರ್ವ ಖ್ಯಾತ ನಟಿಯ ಜೀವನದಲ್ಲೂ ಹೇಳಿಕೊಳ್ಳಲಾಗದ ಅನಾಹುತ ಸಂಭವಿಸಿದೆ.

6) ಬಿಪಿಎಲ್‌ ಕುಟುಂಬಕ್ಕೆ ಬಂಪರ್ ಆಫರ್

ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆಯಲ್ಲಿ ಬಿಪಿಎಲ್‌ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರು. ಆರೋಗ್ಯ ವಿಮೆ ಸಿಗಲಿದೆ ಎಂದು ಜಿಪಂ ಉಪಾಧ್ಯಕ್ಷ ಕೆ.ಎಸ್‌. ಮಹೇಶ್‌ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಈ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತಿದೆ ಎಂದರು.

7) ‘ವಿಕ್ರಮ್‌’ ಸಂಪರ್ಕಿಸಲು ಇನ್ನು ನಾಲ್ಕೇ ದಿನ!

ಚಂದ್ರನ ಅಂಗಳದಲ್ಲಿ ಇನ್ನೇನು ಇಳಿಯುವ ಹಂತದಲ್ಲಿದ್ದಾಗ ಚಂದ್ರಯಾನ-2 ನೌಕೆಯ ‘ವಿಕ್ರಮ್‌’ ಲ್ಯಾಂಡರ್‌ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸಂಪರ್ಕ ಕಡಿದುಕೊಂಡು ಸೋಮವಾರಕ್ಕೆ 10 ದಿನಗಳು ಉರುಳಿವೆ. ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದರೂ, ಲ್ಯಾಂಡರ್‌ ಸಂಪರ್ಕಕ್ಕೇ ಸಿಗುತ್ತಿಲ್ಲ. ಈ ನೌಕೆಯ ಜೀವಿತಾವಧಿ 14 ದಿನಗಳು ಮಾತ್ರವೇ ಇರುವುದರಿಂದ, ಇನ್ನು 4 ದಿನಗಳಲ್ಲಿ ಪವಾಡ ನಡೆದರಷ್ಟೇ ಸಂಪರ್ಕ ಸಾಧ್ಯವಾಗಲಿದೆ. ಇಲ್ಲದೇ ಹೋದಲ್ಲಿ ‘ವಿಕ್ರಮ್‌’ ಇನ್ನು ಕನಸು ಮಾತ್ರ.

8) 6 ಕೋಟಿ ನೌಕರರ ಭವಿಷ್ಯ ನಿಧಿ ಬಡ್ಡಿದರ ಹೆಚ್ಚಳಕ್ಕೆ ಕೇಂದ್ರದ ಆದೇಶ!

ಇಂದು ಪ್ರಧಾನಿ ನರೇಂದ್ರ ಮೋದಿ 69ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶಾದ್ಯಂತ ವಿಭಿನ್ನ ರೀತಿಯಲ್ಲಿ ಮೋದಿ ಹುಟ್ಟುಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಅದರಂತೆ ಕೇಂದ್ರ ಕಾರ್ಮಿಕ ಇಲಾಖೆ ಕೂಡ ಪ್ರಧಾನಿ ಹುಟ್ಟುಹಬ್ಬವನ್ನು ತುಂಬ ವಿಶಿಷ್ಟ ರೀತಿಯಲ್ಲಿ ಆಚರಿಸಿದಂತಿದೆ.


9) ಹೆಲ್ಮೆಟ್ ಹಾಕಲ್ಲ, ಪೊಲೀಸರು ಹಿಡಿಯಲ್ಲ; ಈತ ಎಲ್ಲೇ ಹೋದ್ರು ದಂಡ ಇಲ್ಲ!

ಮೋಟಾರು ವಾಹನ್ ಕಾಯ್ದೆ ತಿದ್ದುಪಡಿಯಿಂದ ದೇಶದಲ್ಲೆಡೆ ನಿಯಮ ಪಾಲನೆ ಜಾಗೃತಿ ಮೂಡುತ್ತಿದೆ. ದುಬಾರಿ ದಂಡಕ್ಕೆ ಬೆಚ್ಚಿ ಬಿದ್ದಿರುವ ಸವಾರರು ನಿಯಮ ಪಾಲಿಸಲು ಮುಂದಾಗಿದ್ದಾರೆ.  ಇತ್ತ ಪೊಲೀಸರು ಸಿಗ್ನಲ್ ಜಂಪ್ ಮಾತು ಬದಿಗಿರಲಿ, ಝೀಬ್ರಾ ಲೈನ್ ಕ್ರಾಸ್ ಆದರೂ ದುಬಾರಿ ದಂಡ ಹಾಕಿ ಬಿಡುತ್ತಾರೆ. ಆದರೆ ಅಹಮ್ಮದಾಬಾದ್‌ನ ಝಾಕಿರ್ ಮೆಮನ್‌ ಹೆಲ್ಮೆಟ್ ಹಾಕದಿದ್ದರೂ ಯಾವುದೇ ದಂಡ ಹಾಕಲ್ಲ.

10) ದಿಟ್ಟ ಕ್ರಮ, ರಾಜಧಾನಿಯಲ್ಲಿ ಕ್ರಾಸ್ ಮಸಾಜ್ ಬ್ಯಾನ್!

ಮಸಾಜ್ ಪಾರ್ಲರ್ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಾಗರಿಕರಿಂದ ದೂರುಗಳು ಬಂದಿದ್ದು ಕ್ರಾಸ್ ಮಸಾಜ್ ಬ್ಯಾನ್ ಮಾಡಲು ಆಡಳಿತ ಸಿದ್ಧವಾಗಿದೆ. ಪಾರ್ಲರ್ ಹೆಸರಿನಲ್ಲಿ ಮಾನವ ಕಳ್ಳ ಸಾಗಣೆ ಅನುಮಾನಗಳು ಬಂದಿವೆ ಎಂದು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ನಾಯಕಿ ಕಮಲ್ ಜೀತ್ ಸೆಹರಾವತ್ ಆತಂಕ ವ್ಯಕ್ತಪಡಿಸಿದ್ದಾರೆ.
 

click me!