ಚೀನಾ ಜೊತೆಗಿನ ಗಡಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಉದ್ವಿಗ್ನವಾತಾವರಣ ನಿರ್ಮಿಸುತ್ತಿದೆ. ಇದೀಗ ಚೀನಾಗೆ ತಿರುಗೇಟು ನೀಡಲು ಭಾರತ ಕೂಡ ಸಜ್ಜಾಗುತ್ತಿದೆ. ಕೊರೋನಾ ವೈರಸ್‌ಗೆ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಔಷದ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣ ಬರದಿದ್ದರೆ, ದುಬೈನಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ನಟ ಸುಶಾಂತ್ ಸಿಂಗ್ ಸಾವಿನ ಪೋಸ್ಟ್ ಮಾರ್ಟಂ ರಿಪೋರ್ಟ್, ಕರ್ನಾಟಕದಲ್ಲಿ ಮಾಸ್ಕ್ ಡೇ ಅಭಿಯಾನ ಸೇರಿದಂತೆ ಜೂನ್ 15ರ ಟಾಪ್ 10 ಸುದ್ದಿ ಇಲ್ಲಿವೆ.
ಕೊರೋನಾ ವೈರಸ್‌ಗೆ ಲಸಿಕೆ ಹಾಗೂ ಔಷಧ ಕಂಡುಹಿಡಿಯಲು ವಿಶ್ವದಾದ್ಯಂತ ಪ್ರಯತ್ನಗಳು ನಡೆದಿರುವ ನಡುವೆಯೇ, ಈ ವ್ಯಾಧಿಗೆ ಔಷಧ ಕಂಡುಹಿಡಿದಿರುವುದಾಗಿ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಕಂಪನಿ ಹೇಳಿಕೊಂಡಿದೆ.
ಎದೆಯೊಡ್ಡಿ ನಿಲ್ಲಲಾಗದ ಚೀನಾ ಕುತಂತ್ರಕ್ಕೆ ಮೋದಿ ಪ್ರತ್ಯುತ್ತರವಿದು..!...
ಪೂರ್ವ ಲಡಾಕ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಒಂದೆಡೆ ಹೇಳುತ್ತಿರುವ ಚೀನಾ ಮತ್ತೊಂದೆಡೆ ತನ್ನ ಕಪಟ ನಾಟಕವನ್ನು ತೋರಿಸಿದೆ. ಭಾರತ - ಚೀನಾ ನಡುವಿರುವ 4000 ಕಿಮೀ ಉದ್ದದ ಗಡಿ ವಾಸ್ತವಿಕ ರೇಖೆಯುದ್ದಕ್ಕೂ ಯೋಧರನನ್ನು ಜಮಾವಣೆ ಮಾಡುವ ಮೂಲಕ ಯುದ್ಧೋನ್ಮಾದ ತೋರಿದೆ. ಇದಕ್ಕೆ ಭಾರತ ಕೂಡಾ ಪ್ರತ್ಯುತ್ತರ ನೀಡಿದ್ದು ಯೋಧರನ್ನು ಗಡಿಗೆ ರವಾನಿಸಿದೆ.
ಮಾಸ್ಕ್ ಡೇ, ಮತ್ತೆ ಲಾಕ್‌ಡೌನ್ ಬಗ್ಗೆ ಬಿಎಸ್‌ವೈ ಸುದ್ದಿಗೋಷ್ಠಿಯ ಪ್ರಮುಖಾಂಶಗಳು..!
ಇದೇ ಜೂನ್ 16, 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರಾಜ್ಯಗಳ ಸಿಎಂ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಕೋವಿಡ್ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘವಾಗಿ ಸಭೆ ನಡೆದಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಾಂಶಸಗಳು ಈ ಕೆಳಗಿನಂತಿವೆ.
ಸುಶಾಂತ್ ಸಿಂಗ್ ಸಾವಿನ ಸಂದೇಹಕ್ಕೆ ತೆರೆ ಎಳೆದ ಪೋಸ್ಟ್ ಮಾರ್ಟಂ ರಿಪೋರ್ಟ್...
ದೇಶ ಕಂಡ ಅದ್ಭುತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆಗೆ ಬೆಳ್ಳಿ ತೆರೆ ಮೇಲೆ ಜೀವ ತುಂಬಿ ಪ್ರಸಿದ್ಧರಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಪೋಸ್ಟ್ ಮಾರ್ಟಂ ರಿಪೋರ್ಟ್ ಬಹಿರಂಗವಾಗಿದೆ.
ಯುಎಇನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪ್ಲ್ಯಾನ್...
ಒಂದು ವೇಳೆ ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದೇ ಹೋದರೆ ಯುಎಇನಲ್ಲಿ ಐಪಿಎಲ್ ಆಯೋಜಿಸುವ ಕುರಿತಂತೆ ಬಿಸಿಸಿಐ ಪ್ಲಾನ್ ರೂಪಿಸಿದೆ
ಸುಶಾಂತ್ ಸಿಂಗ್ ಆತ್ಮಹತ್ಯೆ: ಗೆಳತಿ ರಿಯಾ ಚಕ್ರವರ್ತಿ ವಿಚಾರಣೆ!
ಪೊಲೀಸರು ಸುಶಾಂತ್ ಗೆಳತಿ, ಹಾಗೂ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ವಿಚಾರಣೆ ನಡೆಸುತ್ತಾರೆಂಬ ವಿಚಾರ ಬಯಲಾಗಿದೆ. ಹೀಗಿದ್ದರೂ ರಿಯಾ ಕಡೆಯಿಂದ ಸುಶಾಂತ್ ಸಾವಿನ ಕುರಿತಾಗಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇಷ್ಟೇ ಅಲ್ಲದೇ, ಸುಶಾಂತ್ ಸಿಂಗ್ ಗೆಳೆಯ ಮಹೇಶ್ ಶೆಟ್ಟಿಯ ವಿಚಾರಣೆಯೂ ನಡೆಯಲಿದೆ.
ಮದುವೆ ಸಂಭ್ರಮದ ನಡುವೆ 'ಆ' ವಿಷಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ಶುಭಾ!
2004ರಲ್ಲಿ ತಮಿಳಿನ 'ಮಚ್ಚಿ' ಸಿನಿಮಾದಲ್ಲಿ ಅಭಿನಯಿಸಿ, 2005ರಲ್ಲಿ 'ಜ್ಯಾಕ್‌ಪಾಟ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಶುಭಾಪೂಂಜಾ ಈಗ ಮದುವೆಯಾಗುವ ಸಂಭ್ರಮದಲ್ಲಿದ್ದಾರೆ.
ಒಂದೇ ವಾಟ್ಸ್‌ಆ್ಯಪ್ ಅಕೌಂಟ್ ಏಕಕಾಲಕ್ಕೆ 4 ಡಿವೈಸ್‌ನಲ್ಲಿ ಬಳಸಿ!
ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿರುವ ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯ ಪರಿಚಯಿಸಲು ಮುಂದಾಗಿದೆ. ಒಂದೇ ವಾಟ್ಸ್‌ಆ್ಯಪ್ ಅಕೌಂಟ್ ಅನ್ನು ಏಕಕಾಲಕ್ಕೆ ನಾಲ್ಕು ಡಿವೈಸ್‌ಗಳಲ್ಲಿ ಬಳಕೆ ಮಾಡಬಹುದಾದ ಆಯ್ಕೆ ನೀಡಲು ಹೊರಟಿದೆ. ಶೀಘ್ರದಲ್ಲೇ ಇದು ಗ್ರಾಹಕರಿಗೆ ಸಿಗುವ ನಿರೀಕ್ಷೆ ಇದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಮಗಳನ್ನು ವರಿಸಿದ DYFI ಅಧ್ಯಕ್ಷ ಮುಹಮ್ಮದ್!
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ಸಾಫ್ಟ್ ವೇರ್ ಎಂಜಿನಿಯರ್ ವೀಣಾ ಥಯಿಕ್ಕಂಡಿಯಿಲ್ ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಸ್ ಅವರನ್ನು ಸೋಮವಾರ ಮದುವೆಯಾಗಿದ್ದಾರೆ.
ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ; ಸತತ 16ನೇ ವರ್ಷ ಪ್ರಶಸ್ತಿ ಗೆದ್ದ ಮಾರುತಿ!
ಭಾರತದಲ್ಲಿ ಹಲವು ಕಾರುಗಳು ಜನಪ್ರಿಯವಾಗಿದೆ. ಈ ವರ್ಷ ಗರಿಷ್ಠ ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದೆ. ಕಳೆದ 15 ವರ್ಷಗಳಿಂದ ಅಗ್ರಸ್ಥಾನ ಪಟ್ಟ ಉಳಿಸಿಕೊಂಡಿರುವ ಈ ಕಾರು ಮತ್ತೆ 16ನೇ ವರ್ಷದಲ್ಲೂ ಅಗ್ರಸ್ಥಾನದಲ್ಲೇ ಮುಂದುವರಿಸಿದೆ.