ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!

By Web Desk  |  First Published Sep 29, 2019, 5:34 PM IST

ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ನಾಡ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಖಾಸಗಿ ದರ್ಬಾರ್ ಕೂಡ ಆರಂಭವಾಗಿದೆ. ಇತ್ತ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮೇಜರ್ ಸರ್ಜರಿ ಮಾಡಲು ಹೈಕಮಾಂಡ್ ಮುಂದಾಗಿದೆ.  ಫೋನ್ ಟ್ಯಾಂಪಿಕ್ ಪ್ರಕರಣ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಟೀಂ ಇಂಡಿಯಾಗೆ ಯುವರಾಜ್ ಎಚ್ಚರಿಕೆ, ನೇಪಾಳ ಎಂದು ಚೀನಾ ತಲುಪಿದ ಭಾರತೀಯ ಬೈಕರ್ಸ್ ಸೇರಿದಂತೆ ಸೆ.29ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ. 


1) 'ಯಡಿಯೂರಪ್ಪ ಮುಗಿಸಲು ಕೇಂದ್ರದಿಂದ ಷಡ್ಯಂತ್ರ'...

Tap to resize

Latest Videos

undefined

ಲಿಂಗಾಯತ ನಾಯಕ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಕಟ್ಟಿಹಾಕುವ ಷಡ್ಯಂತ್ರ ಬಿಜೆಪಿಯ ಕೇಂದ್ರ ನಾಯಕರಿಂದಲೇ ನಡೆಯುತ್ತಿದೆ. ಅದಕ್ಕೆ ಬಿ.ಎಲ್‌.ಸಂತೋಷ್‌ ಹಾಗೂ ನಳೀನ್‌ ಕುಮಾರ್‌ ಕಟೀಲ್‌ ಅವರನ್ನು ಬಳಸಿಕೊಳ್ಳಲಾಗುತ್ತಿದೆ.


2) ಸ್ಮಗ್ಲರ್ ಪಟ್ಟಿಯಲ್ಲಿ ಸುಮಲತಾ, ದರ್ಶನ್, ಯಶ್ ಸಂಖ್ಯೆ?

ಲೋಕಸಭಾ ಚುನಾವಣಾ ಸಮರದಲ್ಲಿ ಸುಮಲತಾ ಬೆನ್ನಿಗೆ ನಿಂತಿದ್ದ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಮಂಡ್ಯ ಕ್ಷೇತ್ರದ ಹಲವರ ಮೊಬೈಲ್ ಕದ್ದಾಲಿಕೆ ಮಾಡಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.


3) ಟಿಪ್ಪು ಜಯಂತಿ ಆಚರಣೆ ರದ್ದು ಬಳಿಕ BSY ಸರ್ಕಾರದಿಂದ ಮತ್ತೊಂದು ಹೆಜ್ಜೆ..!

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ  ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿದೆ. ಇದರ ಬೆನ್ನಲ್ಲೇ ಬಿಎಸ್ ವೈ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ.

4) ಬಿಎಸ್‌ವೈಗೆ ಹೈಕಮಾಂಡ್ ತುರ್ತು ಸೂಚನೆ; ನಾಲ್ವರ ಬದಲಾವಣೆಗೆ ಅಮಿತ್ ಶಾ ಅಪ್ಪಣೆ?...

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಮಹತ್ವದ ಸೂಚನೆಯನ್ನು ನೀಡಿದೆ. ತುರ್ತಾಗಿ ನಾಲ್ವರನ್ನು ಬದಲಾಯಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.


5) ನಾಡಹಬ್ಬ ದಸರಾಗೆ ಚಾಲನೆ: ಭೈರಪ್ಪ ಭಾ಼ಷಣದ ಮಾತುಗಳಿವು!

ನಾಡಹಬ್ಬ ದಸರಾಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಚಾಲನೆ ನೀಡಿದ್ದಾರೆ. ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದ್ದು, ಅರಮನೆ ನಗರಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸ್ತಿದೆ. ದಸರಾಗೆ ಚಾಲನೆ ನೀಡಿ ಮಾತನಾಡಿದ ಭೈರಪ್ಪ, ಹಲವು ಟೀಕೆಗಳಿಗೆ ತಕ್ಕ ತಿರುಗೇಟು ನೀಡಿದರು.


6) ರವಿ ಶಾಸ್ತ್ರಿ, ಕೊಹ್ಲಿಗೆ ಖಡಕ್ ಎಚ್ಚರಿಕೆ ನೀಡಿದ ಯುವರಾಜ್!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿಗೆ ಯುವರಾಜ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ತಂಡದ ಆಯ್ಕೆ ಕುರಿತು ಗರಂ ಆಗಿರುವ ಯುವಿ, ಈ ರೀತಿ ನಿರ್ಧಾರ ತೆಗೆದುಕೊಂಡರೆ 2020ರ ಟಿ20 ಟ್ರೋಫಿ ಗೆಲುವು ಕಷ್ಟ ಎಂದಿದ್ದಾರೆ.

7) ಅಂಬಾನಿ ಕಾರ್ ಡ್ರೈವರ್ ಸಂಬಳ ಎಷ್ಟು ಕೇಳಿದ್ರೆ ಹೌಹಾರ್ತೀರಿ!...

ಶಾರೂಖ್ ಖಾನ್ ಬಾಡಿಗಾರ್ಡ್ ಸಂಬಳ ಕೇಳಿದ್ರೆ ಹೌಹಾರ್ತೀರಿ, ಅಂಬಾನಿ ಕಾರಿನ ಡ್ರೈವರ್ ಸಂಬಳ ಸುಸ್ತಾಗಿಸುತ್ತೆ, ಇನ್ನು ಕರೀನಾ ಕಪೂರ್ ಮಗನನ್ನು ನೋಡಿಕೊಳ್ಳು ನಾನಿ ಕೂಡಾ ಯಾವುದೇ ಸೀನಿಯರ್ ಐಟಿ ಪ್ರೊಫೆಶನಲ್‌ಗಿಂತ ಕಡಿಮೆಯಿಲ್ಲ.

8) 'ಸಿದ್ದರಾಮಯ್ಯರನ್ನ ಹೊರಹಾಕದಿದ್ದರೆ ಕಾಂಗ್ರೆಸ್​​ಗೆ ಉಳಿಗಾಲವಿಲ್ಲ'...

ನಾವು ಕಾಂಗ್ರೆಸ್‌ ಪಕ್ಷದ ಮೂಲ ಕಾರ್ಯಕರ್ತರು. ಪಕ್ಷವನ್ನು ಕಟ್ಟಿ ಬೆಳೆಸಿದವರು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷಕ್ಕೆ ವಲಸೆ ಬಂದವರು. ಅವರನ್ನು ಪಕ್ಷದಿಂದ ತೆಗೆಯದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಎಂದು  ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದ್ದಾರೆ....

9) ಇದು ಸೃಷ್ಟಿಯ ವೈಚಿತ್ರ್ಯ: ಇಲ್ಲಿದೆ ಸೂರ್ಯನಷ್ಟೇ ದೊಡ್ಡ ಗ್ರಹದ ಚಿತ್ರ!

ಬ್ರಹ್ಮಾಂಡದ ಅಚ್ಚರಿಗಳು ಒಂದೇ, ಎರಡೇ? ಬಗೆದಷ್ಟು ರೋಚಕ ರಹಸ್ಯಗಳು ದಿಗಂತದ ಒಡಲಾಳದಿಂದ ಹೊರ ಬರುತ್ತಲೇ ಇರುತ್ತವೆ. ಇರುವ ಒಂದು ಜಗತ್ತನ್ನೇ ಸಂಭಾಳಿಸಲಾಗದ ಮಾನವನಿಂದ ಬೇರೊಂದು ಜಗತ್ತಿನ ಅನ್ವೇಷಣೆ ನಿಜಕ್ಕೂ ಅಚ್ಚರಿಯ ಹಾಗೂ ಅದ್ಭುತ ಸಂಗತಿ.


10) ನೇಪಾಳ ಎಂದು ಚೀನಾ ತಲುಪಿದ್ರು; ಭಾರತೀಯ ಬೈಕರ್ಸ್‌ಗೆ ಗಡಿಯಲ್ಲಿ ಸಂಕಷ್ಟ!

ಹಿಮಾಲಯ ರಸ್ತೆಗಳಲ್ಲಿ ಬೈಕ್ ಓಡಿಸಿದರೆ ಬೈಕರ್ಸ್‌ ಸಿಗೋ ಆನಂದ ಅಷ್ಟಿಷ್ಟಲ್ಲ. ಇದೇ ರೀತಿ ಹಿಮಾಲಯ ಮೂಲಕ ನೇಪಾಳಕ್ಕೆ ರೈಡ್ ಹೋದ ಭಾರತೀಯ ಬೈಕರ್ಸ್ ಕೊನೆಗೆ ಚೀನಾ ಪೊಲೀಸರ ಕೈಗೆ ಸಿಕ್ಕಿ ಸಂಕಷ್ಟ ಅನುಭವಿಸಿದ್ದಾರೆ. 

click me!