ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಭಾಷಣಕ್ಕೆ ಕಾಂಗ್ರೆಸ್ ವಿರೋಧ| ಇಮ್ರಾನ್ ಭಾಷಣ ಉದ್ಘಟತನದಿಂದ ಕೂಡಿತ್ತು ಎಂದ ಕಾಂಗ್ರೆಸ್| ತಿರುಗೇಟು ನೀಡಿದ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ | ಸೂಕ್ತ ತಿರುಗೇಟು ನೀಡಿದ ಮೋದಿ ಸರ್ಕಾರಕ್ಕೆ ಧನ್ಯವಾದ ಎಂದ ಕಾಂಗ್ರೆಸ್| ಇಮ್ರಾನ್ ಭಾಷಣಕ್ಕೆ ಬಿಜೆಪಿ ನಾಯಕರಿಂದ ಪ್ರಚಾರ ಎಂದ ಪ್ರತಿಪಕ್ಷ| ವಿಶ್ವಸಂಸ್ಥೆಯ ಭಾಷಣದಲ್ಲಿ ಭಾರತದ ವಿರುದ್ಧ ಕಿಡಿಕಾರಿದ್ದ ಇಮ್ರಾನ್|
ನವದೆಹಲಿ(ಸೆ.29): ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣದ ವೈಖರಿಯನ್ನು ಕಾಂಗ್ರೆಸ್ ಖಂಡಿಸಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮೋದಿ ಸರ್ಕಾರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಬೆಂಬಲ ನೀಡಿದೆ.
undefined
ಪಾಕ್ ಪ್ರಧಾನಿಯ ಭಾಷಣ ಉದ್ಘಟತನದಿಂದ ಕೂಡಿತ್ತು ಎಂದಿರುವ ಕಾಂಗ್ರೆಸ್, ಇಮ್ರಾನ್ ಭಾಷಣಕ್ಕೆ ಸೂಕ್ತ ತಿರುಗೇಟು ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೊಂಡಾಡಿದೆ.
ಆದರೆ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಭಾಷಣಕ್ಕೆ ಬಿಜೆಪಿ ನಾಯಕರೇ ಅಬ್ಬರ ಪ್ರಚಾರ ನೀಡುತ್ತಿದ್ದು, ಇಡೀ ವಿಶ್ವದಲ್ಲಿ ಯಾರೂ ಕೇಳದ ಇಮ್ರಾನ್ ಭಾಷಣಕ್ಕೆ ಇಷ್ಟೇಕೆ ಮಹತ್ವ ನೀಡಬೇಕು ಎಂದು ಪ್ರಶ್ನಿಸಿದೆ.
ಈ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡುವುದಕ್ಕೂ ಮುನ್ನ, ಪ್ರಧಾನಿ ಅಮೆರಿಕ ಪ್ರವಾಸದ ಕುರಿತು ದೇಶವನ್ನುದ್ದೇಶಿಸಿ ಮಾತನಾಡಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
74ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 50 ನಿಮಿಷಗಳ ಭಾಷಣ ಮಾಡಿದ್ದ ಇಮ್ರಾನ್ ಖಾನ್, ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.